Sunday, 29 November 2020

ಹಣ ಮತ್ತು ಸಾಲ

Admin       Sunday, 29 November 2020

ಹಣ ಮತ್ತು ಸಾಲ


     ಅಧ್ಯಾಯದಲ್ಲಿ ಕೆಳಗಿನ ಅಂಶಗಳನ್ನು ತಿಳಿಯುತ್ತೇವೆ

     * ಹಣದ ವಿಕಾಸ ಮತ್ತು ಕಾರ್ಯಗಳ ಮಹತ್ವ

     * ದೇಶಿಯ ಬ್ಯಾಂಕುಗಳು ಮತ್ತು ಸಾಲದ ವಿಧಗಳು

     * ಬ್ಯಾಂಕುಗಳ ವಿಕಾಸ ಮತ್ತು ಅವುಗಳ ವಿಧಗಳು

     * ಬ್ಯಾಂಕುಗಳ ವಿವಿಧ ಠೇವಣಿಗಳ ಪರಿಚಯ

     * ಭಾರತದ ಕೇಂದ್ರ ಬ್ಯಾಂಕನ ಸ್ಥಾಪನೆ ಮತ್ತು ಅದರ ಕಾರ್ಯಗಳು

         ಹಣವು ಮಾನವನ ಒಂದು ಅದ್ಭುತ ಸಂಶೋಧನೆಯಾಗಿದೆ. ಅದು ದಿನ ನಿತ್ಯದ ವ್ಯವಹಾರಗಳಲ್ಲಿ ವಿನಿಮಯ ಮಾಧ್ಯಮವಾಗಿ ಬಳಕೆಯಾಗುತ್ತಿದೆ.   ಸರಕು ಸೇವೆಗಳ ಮೌಲ್ಯ ನಿರ್ಣಯ , ಸಂಪತ್ತಿನ ಸಂಗ್ರಹ ಹಾಗೂ ಭವಿಷ್ಯದ ವ್ಯಾಪಾರವನ್ನು ಸರಳಗೊಳಿಸಿದೆ. ಹಣದಿಂದಾಗಿ ಮಾನವನ ವಾಣಿಜ್ಯ ವ್ಯವಹಾರಗಳು ಬೆಳವಣಿಗೆ ಹೊಂದಿವೆ. "ಜ್ಞಾನದ ಪ್ರತಿಯೊಂದು ಶಾಖೆಯೂ ತನ್ನದೇ ಆದ ಮೂಲಭೂತ ಸಂಶೋಧನೆಯನ್ನು ಹೊಂದಿದೆ. ಯಂತ್ರಶಾಸ್ತ್ರದಲ್ಲಿ ಚಕ್ರ, ವಿಜ್ಞಾನದಲ್ಲಿ ಬೆಂಕಿ, ರಾಜಕೀಯದಲ್ಲಿ ಮತ, ಅದೇ ರೀತಿ ಅರ್ಥಶಾಸ್ತ್ರದಲ್ಲಿ ಮಾನವನ ಸಾಮಾಜಿಕ ಅಸ್ತಿತ್ವಗಳ ವಾಣಿಜ್ಯ ವ್ಯವಹಾರಕ್ಕೆ ಹಣವು ಅವಶ್ಯಕ ಸಂಶೋಧನೆಯಗಿದ್ದು ,ಅದು ಉಳಿದೆಲ್ಲವುಗಳಿಗೆ ಆಧಾರವಾಗಿದೆ."ಎಂದು ಜಿ.ಕ್ರೌಥರ್ ರವರು ಹೇಳಿದ್ದಾರೆ.

         ಹಣವು ಸರಕುಗಳು ಮತ್ತು ಸೇವೆಗಳನ್ನು ಕೊಳ್ಳುತ್ತದೆ. ಇದನ್ನು ಸಂದಾಯ , ಮಾಪನ ಮತ್ತು ಮೌಲ್ಯ ಸಂಗ್ರಹದ ಮಾಧ್ಯಮವಾಗಿ ಸರ್ವೇಸಾಮಾನ್ಯವಾಗಿ ಸ್ವೀಕರಿಸಲಾಗಿದೆ. ರಾಬರ್ಟಸನ್ ಪ್ರಕಾರ "ಸರಕುಗಳಿಗಾಗಿ ಸಂದಾಯ ಮಾಡುವಲ್ಲಿ ಅಥವಾ ಇತರ ವ್ಯವಹಾರಿ ಸಾಲಗಳನ್ನು ತೀರಿಸುವಲ್ಲಿ ವ್ಯಾಪಕವಾಗಿ ಸ್ವೀಕರಿಸ್ಪಟ್ಟ ಯಾವದೇ ವಸ್ತು ಹಣವಾಗಿದೆ"

         ಹಣಕ್ಕೆ ಸಮಾನಾರ್ಥಕವಾಗಿ ಬಳಸಲಾಗುತ್ತಿರುವ ಇಂಗ್ಲೀಷಿನ "             "ಎಂಬ ಪದವು ರೋಮನ್ ಭಾಷೆಯ "ಮೊನೆಟ ಜುನೊ ಎಂಬ ಪದದಿಂದ ಬಂದಿದೆ. ಮೊನೆಟ ಜುನೊ ರೋಮನರ ದೇವತೆಯಾಗಿದೆ ಮತ್ತು ರೋಮನ್ ಸಾಮ್ರಾಜ್ಯದ ರಿಪಬ್ಲಿಕ ಹಣವನ್ನು ದೇವಾಲಯದ ಪಕ್ಕದಲ್ಲಿ ಟಂಕಿಸಲಾಗುತ್ತಿತ್ತು. ಭಾರತೀಯ ರೂಪಾಯಿಯ ಸಂಸ್ಕøತದ "ರೂಪ್ಯಾ" ಪದದಿಂದ ಬಂದಿದೆ. "ಬೆಳ್ಳಿ ನಾಣ್ಯ" ಎಂಬುದು ಇದರ ಅರ್ಥ.

  ಹಣದ ವಿಕಾಸ; ಇಂದು ನಾವು ಕಾಗದದ ನೋಟುಗಲು ಮತ್ತು ನಾಣ್ಯಗಳನ್ನು ಹಣವನ್ನಾಗಿ ಬಳಸುತ್ತಿದ್ದೇವೆ. ಆದರೆ ಮಟ್ಟದ ವಿಕಾಸವು ಒಂದೇ ರಾತ್ರಿಯಲ್ಲಿ ಸಂಭವಿಸಿದ್ದಲ್ಲ. ಇದು ಹಂತವನ್ನು ತಲುಪಲು ಸಾವಿರಾರು ವರ್ಷಗಳನ್ನು ತೆಗೆದುಕೊಂಡಿದೆ. ಹಣದ ವಿಕಾಸದಲ್ಲಿ ಹಲವಾರು ಹಂತಗಳಿವೆ. "ವಸ್ತು ವಿನಿಮಯ ಪದ್ದತಿಯು " ಪ್ರಾರಂಬದ ಹಾಗೂ ಪುರಾತನ ಹಂತವಾಗಿದೆ. ಹಣದ ವಿಕಾಸದ ವಿವಿಧ ಹಂತಗಳನ್ನು ಈಗ ಚರ್ಚಿಸೋಣ.

  ವಸ್ತು ವಿನಿಮಯ ಪದ್ಧತಿ : ಪುರಾತನ ಕಾಲದಲ್ಲಿ ಜನರು ಹಣವನ್ನು ಬಳಸದೇ ಸರಕುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಿದ್ದರು. ವಸ್ತು ವಿನಿಮಯವು ಅತಿ ಕಷ್ಟದ ವ್ಯಾಪಾರ ವಿಧಾನವಾಗಿತ್ತು. ಇದರಲ್ಲಿ ಸಮಯ ಮತ್ತು ಕಾಲ ವ್ಯಯÀವಾಗುತ್ತಿತ್ತು. ಉದಾ: ವ್ಯಕ್ತಿಯು ಹಸುವನ್ನು ಹೊಂದಿದ್ದು ,ವಿನಿಮಯದಲ್ಲಿ ಕುರಿಯನ್ನು ಬಯಸಿದರೆ, ಆಗ ಯು ಕುರಿ ಹೊಂದಿರುವವನನ್ನು ಹುಡುಕಬೇಕಾಗಿತ್ತು. ಅಷ್ಟಲ್ಲದೇ ವಿನಿಮಯದಲ್ಲಿ ಹಸುವಿನ ಅಗತ್ಯವಿರುವವನನ್ನು ಹುಡುಕಬೇಕಾಗಿತ್ತು. ಯು ಅಂತಹ ವ್ಯಕ್ತಿಯನ್ನು ಹುಡುಕಿದರೆ ಆಗ ಒಂದು ಹಸುವಿಗೆ ಎಷ್ಟು ಕುರಿಗಳು ಸಮ? ಎಂಬ ಪ್ರಶ್ನೆ ಎದುರಾಗುತ್ತಿತ್ತು. ಆದುದರಿಂದ ವಸ್ತು ವಿನಿಮಯ ಪದ್ಧತಿಯು ಪರಸ್ಪರ ಬಯಕೆಗಳ ಹೊಂದಾಣಿಕೆ ಸಾರ್ವತ್ರಿಕ ಮೌಲ್ಯಮಾಪನ ,ಸರಕುಗಳ ಅವಿಭಾಜ್ಯತೆ ,ಸಂಪತ್ತಿನ ಸಂಗ್ರಹದ ಸಮಸ್ಯೆಗಳಂತಹ ಹಲವಾರು ಅನಾನುಕೂಲಗಳನ್ನು ಹೊಂದಿತ್ತು. ವಿಕಾಸದ ಮುಂದಿನ ಹಂತ ವಸ್ತು ರೂಪದ ಹಣವಾಗಿತ್ತು.

   ವಸ್ತು ರೂಪದ ಹಣ: ಒಂದು ನರ್ಧಿಷ್ಟ ಗಾತ್ರ ಮತ್ತು ತೂಕದ ವಸ್ತುವೊಂದನ್ನು ಹಣವೆಂದು ಅಂಗೀಕರಿಸಲಾಗಿತ್ತು. ಮತ್ತು ಪ್ರಮಾಣಿತ ವಸ್ತುವಿನ ಮೂಲಕ ಪ್ರತಿಯೊಂದನ್ನು ಅಳೆಯಲಾಗುತ್ತಿತ್ತು. ವಿವಿಧ ಅರ್ಥವ್ಯವಸ್ಥೆಗಳಲ್ಲಿ ವಿವಿಧ ವಸ್ತುಗಳನ್ನು ಹಣವನ್ನಾಗಿ ಅಳೆಯಲಾಗುತ್ತಿತ್ತು. ಉದಾ: ಗ್ರೀಸನಲ್ಲಿ ಹಸು, ರೋಂನಲ್ಲಿ ಕುರಿ, ಚೀನಾದಲ್ಲಿ ಹಲ್ಲುಗಳು ಇತ್ಯಾದಿ. ಲೆಕ್ಕಾಚಾರದ ಘಟಕವಾಗಿ ಹಣದ ಪರಿಚಯವಾದ ಮೇಲೆ ವಸ್ತು ವಿನಿಮಯ ಪದ್ಧತಿಯ ಎಲ್ಲ ಸಮಸ್ಯೆಗಳು ಪರಿಹಾರವಾಗಲಿಲ್ಲ. ಹಣದ ಅಭಿವೃದ್ಧಿಯ ಮುಂದಿನ ಹಂತ ಲೋಹದ ಹಣ.

   ಲೋಹದ ಹಣ: ಲೋಹದ ಹಣಕ್ಕಾಗಿ ವಿಶೇಷವಾಗಿ ಬೆಲೆ ಬಾಳುವ ಲೋಹಗಳಾದ ಚಿನ್ನ, ಬೆಳ್ಳಿ, ತಾಮ್ರ, ಕಂಚನ್ನು ಬಳಸಲಾಗುತ್ತಿತ್ತು. ಪ್ರಮಾಣಿತ ತೂಕವಿರುವ ಮತ್ತು ವಿಶೇಷವಾಗಿ ಚಿನ್ನಿ ಅಥವಾ ಬೆಳ್ಳಿಯಿಂದ ಮಾಡಿದ ,ಅದರ ಮೇಲೆ ಮುದ್ರೆಯಿರುವ ನಾಜೂಕಾದ ಬಿಲ್ಲೆಗಳನ್ನು ವಿನಿಮಯ ಮಾಧ್ಯಮವಾಗಿ ಬಳಕೆಗೆ ತರಲಾಯಿತು. ಅವು ವಿವಿಧ ಘಟಕಗಳಾಗಿ ಸುಲಭವಾಗಿ ವಿಭಜಿಸಲು, ಸಾಗಿಸಲು ,ಮತ್ತು ಸಂದಾಯ ಮಾಡಲು ಅನುಕೂಲವಾಗಿದ್ದವು. ಹಣದ ಅಭಿವೃದ್ದಿಯ ಮುಂದಿನ ಹಂತ ಕಾಗದ ಹಣ.

  ಕಾಗದ ಹಣ: ಲೋಹದ ಹಣವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುವದು ಸುರಕ್ಷಿತವಾಗಿರಲಿಲ್ಲ. ಆದುದರಿಂದ ವ್ಯಾಪಾರಗಾರರು ,ಪರಿಚಿತ ಪರಿಚಿತ ಲೇವಾದೇವಿಗಾರರು ನೀಡುತ್ತಿದ್ದ ಲಿಖಿತ ದಾಖಲೆಗಳನ್ನು ಅವರ ಆಜ್ಞಾಪಿತ ಹಣದ ಪ್ರಮಾಣಕ್ಕೆ ಸಾಕ್ಷಿಯಾಗಿ ತಮ್ಮ ಜೊತೆ ಕೊಂಡೊಯ್ಯಲು ಪ್ರಾರಂಭಿಸಿದರು. ಲಿಖಿತ ದಾಖಲೆಗಳು ನೈಜ ಹಣವಾಗಿರಲಿಲ್ಲ. ಆದರೆ ಬೇಡಿಕೆಯ ಮೇಲೆ ಹಣಕ್ಕೆ ವಿನಿಮಯ ಮಾಡಿಕೊಳ್ಳಲು ಸಿದ್ದರಿದ್ದುದರಿಂದ ಅವರು ಸ್ವೀಕರಿಸುತ್ತಿದ್ದರು. ಜನರು ಕ್ರಮೇಣ ಬ್ಯಾಂಕ ನೋಟುಗಳಿಗೆ ಹೊಂದಿಕೊಂಡರು. ಮತ್ತು ಅವರು ಅವುಗಳನ್ನು ಹಣದ ಪರ್ಯಾಯವಾಗಿ ಬಳಸದೇ, ನೈಜ ಹಣವನ್ನಾಗಿ ಸ್ವೀಕರಿಸಿದರು. ಸರ್ಕಾರಗಳು ತಮ್ಮ ತಮ್ಮ ಕೇಂದ್ರ ಬ್ಯಾಂಕುಗಳಿಗೆ ನೋಟುಗಳನ್ನು ಚಲಾವಣೆಗೆ ತರುವ ಏಕಸ್ವಾಮ್ಯವನ್ನು ನೀಡಿದ್ದರಿಂದ ಇದು ಸಂಭವಿಸಿತು. ನೋಟು ಶಾಸನಬದ್ಧ ಹಣವಾಯಿತು. ಯಾವದೇ ವ್ಯಕ್ತಿ ಸಂಬಂಧಿತ ದೇಶದಲ್ಲಿನ ವ್ಯವಹಾರದಲ್ಲಿ ಅಲ್ಲಿನ ಶಾಸನಬದ್ಧ ಹಣವನ್ನು ತಿರಸ್ಕರಿಸುವಂತಿಲ್ಲ. ಭಾರತದಲ್ಲಿ ರೂಪಾಯಿ ಶಾಸನಬದ್ಧ ಹಣವಾಗಿದೆ. ಅದರಂತೆ ಯು.ಎಸ್.-ಡಾಲರ, ಯು.ಕೆ-ಪೌಂಡ,ಜರ್ಮನಿ_ಮಾರ್ಕ ,ಜಪಾನ್_ಯನ್,ಚೀನಾ-ಯಾನ್ ಇತ್ಯಾದಿ.

  ಬ್ಯಾಂಕ ಹಣ: ವ್ಯಾಪಾರ ಮತ್ತು ವಾಣಿಜ್ಯ ಅಭಿವೃದ್ಧಿ ಹೊಂದಿದಂತೆ ಬ್ಯಾಂಕ ಹಣ ಅಸ್ತಿತ್ವಕ್ಕೆ ಬಂದಿತು. ಚೆಕ್ಕುಗಳು, ಡ್ರಾಪ್ಟುಗಳು, ಕ್ರೆಡಿಟ ಮತ್ತು ಡೆಬಿಟ ಕಾರ್ಡುಗಳು ಇತ್ಯಾದಿ ಕೆಲವು ಬ್ಯಾಂಕ ಹಣಕ್ಕೆ ಉದಾಹರಣೆಗಳಾಗಿವೆ. ಚೆಕ್ಕುಗಳ ಸಹಾಯದಿಂದ ಹಣವನ್ನು ಠೇವಣಿಯಿಂದ ಠೇವಣಿಗೆ ಅಥವಾ ಠೇವಣಿಯಿಂದ ನಗದಿಗೆ ವರ್ಗಾಯಿಸಬಹುದು. ಚೆಕ್ಕುಗಳನ್ನು ಸರಕುಗಳು ಮತ್ತು ಸೇವೆಗಳ ವ್ಯವಹಾರದಲ್ಲಿ ಬಳಸಬಹುದು. ಇವುಗಳನ್ನು ಸಮೀಪ ಹಣದ ಸ್ವತ್ತುಗಳು ಎನ್ನುತ್ತಾರೆ.

    ಕ್ರೆಡಿಟ ಕಾರ್ಡ ಮತ್ತು ಡೆಬಿಟ್ ಕಾರ್ಡ : ಕ್ರೆಡಿಟ್ ಕಾರ್ಡ ಹೊಂದಿರುವವರು ನಿರ್ಧಿಷ್ಟ ಪೂರೈಕೆದಾರರಲ್ಲಿ ಸಾಲದ ಮೇಲೆ ಸರಕುಗಳು ಮತ್ತು ಸೇವೆಗಳನ್ನು ಕೊಳ್ಳಬಹುದಾಗಿದೆ. ನಂತರ ಕ್ರೆಡಿಟ್ ಕಾರ್ಡನ್ನು ಎಲೆಕ್ಟಾನಿಕ್ ಯಂತ್ರದ ಮೇಲೆ ಒತ್ತಿ ಎಳೆಯಲಾಗುತ್ತದೆ. ಆಗ ಕೊಳ್ಳುವವನ ಸಾಲದ ಖಾತೆಯಿಂದ ಮಾರುವವನ ಖಾತೆಗೆ ಹಣ ಸಂದಾಯವಾಗುತ್ತದೆ. ಡೆಬಿಟ್ ಕಾರ್ಡ ಸಹ ಇದೇ ರೀತಿಯಲ್ಲಿ ಕೆಲಸ ಮಾಡುತ್ತದೆ. ಆದರೆ ಡೆಬಿಟ್ ಕಾರ್ಡನಲ್ಲಿ ಹಣವು ಕೊಳ್ಳುವವನ ಉಳಿತಾಯ ಖಾತೆಯಿಂದ ಸಂದಾಯವಾಗುತ್ತದೆ.

  ಹಣದ ಕಾರ್ಯಗಳು : ಹಣದ ಕಾರ್ಯಗಳನ್ನು ಮುಖ್ಯವಾಗಿ ಮೂರು ಗುಂಪುಗಳನ್ನಾಗಿ ವರ್ಗೀಕರಿಸಲಾಗಿದೆ. ಅವುಗಳೆಂದರೆ

   1) ಪ್ರಾಥಮಿಕ ಅಥವಾ ಮುಖ್ಯ ಕಾರ್ಯಗಳು

   2) ಪೂರಕ ಕಾರ್ಯಗಳು

   3) ಇತರ ಕಾರ್ಯಗಳು

  1) ಪ್ರಾಥಮಿಕ ಅಥವಾ ಮುಖ್ಯ ಕಾರ್ಯಗಳನ್ನು  ಕೆಳಗಿನಂತೆ ವರ್ಗೀಕರಿಸಲಾಗಿದೆ.

      ) ವಿನಿಮಯ ಮಾಧ್ಯಮ ಅಥವಾ ಸಂದಾಯದ ಸಾಧನ: ಸರಕುಗಳು ಮ್ತು ಸೇವೆಗಳನ್ನು ಕೊಳ್ಳಲು ಮತ್ತು ಮಾರಲು ಹಣವನ್ನು ಮಧ್ಯವರ್ತಿ ಸಾಧನವನ್ನಾಗಿ ಉಪಯೋಗಿಸಲಾಗುತ್ತದೆ. ಹಣದ ಬಳೆಯು ವ್ಯವಹಾರವನ್ನು ಎರಡು ಭಾಗವನ್ನಾಗಿ ವಿಂಗಡಿಸಿದೆ. ಮೊದಲನೆಯದಾಗಿ ಮಾರುಕಟ್ಟೆಯಲ್ಲಿ ಸರಕುಗಳು ಮತ್ತು ಸೇವೆಗಳನ್ನು ಮಾರಾಟ ಮಾಡುವದರಿಂದ ಹಣ ಲಭ್ಯವಾಗುತ್ತದೆ. ಎರಡನೆಯದಾಗಿ ಹಣವನ್ನು ಬಳಸಿಕೊಂಡು ಮಾರುಕಟ್ಟೆಯಿಂದ ಸರಕುಗಳು ಮತ್ತು ಸೇವೆಗಳನ್ನು ಕೊಳ್ಳಲಾಗುತ್ತದೆ.

      ) ಮೌಲ್ಯ ಮಾಪನ : ಹಣವು ವಸ್ತು ವಿನಿಮಯ ಪದ್ಧತಿಯ ಅತಿ ದೊಡ್ಡ ಅನಾನುಕೂಲತೆಯನ್ನು ಹೋಗಲಾಡಿಸಿದೆ. ಅದು ಎಲ್ಲ ಸರಕುಗಳು ಮತ್ತು ಸೇವೆಗಳ ಮೌಲ್ಯವನ್ನು ಬೆಲೆಯ ರೂಪದಲ್ಲಿ ವ್ಯಕ್ತಪಡಿಸುತ್ತದೆ. ಇದರಿಂದ ವಿವಿಧ ರೀತಿಯ ಸರಕುಗಳು ಮತ್ತು ಸೇವೆಗಳ ವಿನಿಮಯ ದರವನ್ನು ನಿರ್ಧರಿಸುವದು ಸರಳವಾಗಿದೆ.

   2) ಪೂರಕ ಕಾರ್ಯಗಳು : ಹಣದ ಪೂರಕ ಕಾರ್ಯಗಳು ಮೂರು. ಅವುಗಳೆಂದರೆ,

        ) ವಿಳಂಬಿತ ಸಂದಾಯದ ಪ್ರಮಾಣ : ಹಣವು ಭವಿಷ್ಯದ ಸಂದಾಯಗಳಿಗೂ ಸಹಾಯಕವಾಗಿವೆ. ಸಾಲಗಾರನೊಬ್ಬನು ನಿರ್ಧಷ್ಟ ಪ್ರಮಾಣದ ಹಣವನ್ನು ಭವಿಷ್ಯದ ನಿರ್ಧಿಷ್ಟ ದಿನಾಂಕದಂದು ಸಂದಾಯಮಾಡಲು ಕರಾರಿನ ಮೇಲೆ ಸಾಲವಾಗಿ ಪಡೆಯಬಹುದು. ಅದೇ ರೀತಿಯಲ್ಲಿ ವ್ಯಕ್ತಿಯೊಬ್ಬನು ಸಧ್ಯದಲ್ಲಿ ಸರಕುಗಳನ್ನು ಕೊಂಡು , ಅವುಗಳ ಹಣವನ್ನು ಮುಂದಿನ ನಿರ್ಧಷ್ಟ ದಿನಾಂಕದಂದು ಸಂದಾಯ ಮಾಡಬಹುದು.

        ) ಮೌಲ್ಯ ಸಂಗ್ರಹ ಅಥವಾ ಕೊಳ್ಳು ಶಕ್ತಿಯ ಸಂಗ್ರಹ : ವಸ್ತು ವಿನಿಮಯ  ಪದ್ಧತಿಯಿದ್ದಾಗ ಉಳಿತಾಯ ಮಾಡಲು ಸಾಧ್ಯವಿರಲಿಲ್ಲ. ಏಕೆಂದರೆ ಕೆಲವು ಸರಕುಗಳು ನಾಶ ಹೊಂದುತ್ತಿದ್ದವು. ಹಣ ಬಳಕೆಗೆ ಬಂದ ಮೇಲೆ , ಅದು ನಾಶ ಹೊಂದದಿರುವದರಿಂದ ಅದು ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಸಹಾಯಕವಾಗಿದೆ. ಆದರೆ ಹಣದುಬ್ಬರದ ಪ್ರವೃತ್ತಿಗೆ ಅನುಗುಣವಾಗಿ ಹಣದ ಮೌಲ್ಯವು ಹೆಚ್ಚಬಹುದು. ಅಥವಾ ಕಡಿಮೆಯಾಗಬಹುದು. ಉಳಿತಾಯದ ಹಣವನ್ನು ಬಂಡವಾಳ ಸಂಗ್ರಹಕ್ಕೆ ಬಳಕೆ ಮಾಡಲು ಸಾಧ್ಯವಿದೆ.

        ) ಮೌಲ್ಯ ವರ್ಗಾವಣೆ ಅಥವಾ ಕೊಳ್ಳುವ ಶಕ್ತಿಯ ವರ್ಗಾವಣೆ: ಹಣದ ಮೂಲಕ ಸಂಪತ್ತನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹಾಗೇಯೇ ವಿದೇಶಗಳಿಗೆ ಸಾಗಿಸಲು ಸಾಧ್ಯವಾಗಿದೆ. ಇದರಿಂದ ಕೊಳ್ಳುವ ಶಕ್ತಿಯನ್ನು ಒಂದು ಸ್ಥಳದಿಂದಮತ್ತೊಂದು ಸ್ಥಳಕ್ಕೆ ವರ್ಗಾಯಿಸುವ ಅವಶ್ಯಕತೆ ಉಂಟಾಗಿದೆ. ಹಣದ ರೂಪದಲ್ಲಿ ಸಾಲ ಕೊಡುವ ಮತ್ತು ಸಾಲ ತೆಗೆದುಕೊಳ್ಳುವ ವ್ಯವಹಾರ ನಡೆಯುತ್ತದೆ. ಹಣದ ಕಾರ್ಯದಿಂದಾಗಿ ವ್ಯಕ್ತಿ ತನ್ನಲ್ಲಿರುವ ಹೆಚ್ಚುವರಿ ಹಣವನ್ನು ಉತ್ಪಾದನಾ ಉದ್ದೇಶಗಳಿಗಾಗಿ ಇತರರಿಗೆ ಸಾಲ ನೀಡಿ ,ಬಡ್ಡಿ ಗಳಿಸಬಹುದಾಗಿದೆ.

   3) ಇತರೆ ಕಾರ್ಯಗಳು : ಪ್ರಾಥಮಿಕ ಮತ್ತು ಮಾದ್ಯಮಿಕ ಕಾರ್ಯಗಳಲ್ಲದೇ ,ಹಣವು ಹೆಚ್ಚುವರಿಯಾಗಿ ಕೆಲವು ಸಂಭಾವ್ಯ ಕಾರ್ಯಗಳನ್ನೂ ಸಹ ನಿರ್ವಹಿಸುತ್ತಿದೆ. ಅವುಗಳೆಂದರೆ,

          ) ಸಾಲದ ತಳಹದಿ : ಹಣವು ಸಾಲದ ತಳಹದಿಯನ್ನು ರೂಪಿಸುತ್ತದೆ. ಚೆಕ್ ವ್ಯವಸ್ಥೆಯು ಬ್ಯಾಂಕುಗಳ ಸಾಲ ನಿರ್ಮಾಣಕ್ಕೆ ಅವಕಾಶಮಾಡಿಕೊಟ್ಟಿದೆ.

          ) ಬಂಡವಾಳ ಉತ್ಪಾದಕತೆ ಹೆಚ್ಚಳ : ಬಂಡವಾಳ ರೂಪದಲ್ಲಿರುವ ಹಣವನ್ನು ಹಲವಾರು ಉಪಯೋಗಗಳಲ್ಲಿ ತೊಡಗಿಸಲಾಗುತ್ತದೆ. ಹಣದ ದ್ರವ್ಯತೆಯ ಲಕ್ಷಣವು ಬಂಡವಾಳವನ್ನು ಕಡಿಮೆ ಉತ್ಪಾದಕತೆಯಿಂದ ಹೆಚ್ಚು ಉತ್ಪಾದಕತೆಯ ಬಳಕೆಗೆ ವರ್ಗಾಯಿಸಲು ಸಹಾಯಕವಾಗಿದೆ.

          ಸಾಲದ ವಿಧಗಳು

    ಸಾಲವು , ಸಾಲ ಕೊಡುವವನು ಸಾಲ ಪಡೆಯುವವನಿಗೆ ಹಣ, ಸರಕಗಳು ಅಥವಾ ಸೇವೆಗಳನ್ನು ಭವಿಷ್ಯದ ಸಂದಾಯದ ಮೂಲಕ ಹಿಂಪಡೆಯುವ ಭರವಸೆಯಂತೆ ಪೂರೈಸುವ ಒಂದು ಒಪ್ಪಂದವಾಗಿದೆ. ಭಾರತದಲ್ಲಿ ಎರಡು ಬಗೆಯ ಸಾಲಗಳಿವೆ. ಅವುಗಳೆಂದರೆ ಔಪಚಾರಿಕ ಸಾಲ ಮತ್ತು ಅನೌಪಚಾರಿಕ ಸಾಲ

      1) ಅನೌಪಚಾರಿಕ ಸಾಲ : ಭಾರತದಲ್ಲಿ ಪುರಾತನ ಕಾಲದಿಂದಲೂ ದೇಶಿಯ ಬ್ಯಾಂಕುಗಳ ಮೂಲಕ ಅನೌಪಚಾರಿಕ ಸಾಲ ನೀಡುವ ವ್ಯವಸ್ಥೆಯಿದೆ. ಅನೌಪಚಾರಿಕ ಸಾಲ ವಲಯವು ದೇಶಿಯ ಬ್ಯಾಂಕರುಗಳನ್ನು ಒಳಗೊಂಡಿದೆ. ದೇಶಿಯ ಬ್ಯಾಂಕರರನ್ನು ಶ್ರಾಫರು, ಮಹಾಜನರು, ಶೇಟರು, ಸಾಹುಕಾರರು, ಚೆಟ್ಟಿಯಾರರು ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಅವರು ಮೂಲತ: ಹಣದ ಲೇವಾದೇವಿದಾರರಾಗಿದ್ದಾರೆ. ಅವರ ಜೊತೆಗೆ ವ್ಯಾಪಾರಗಾರರು, ಉದ್ಯೋಗದಾತರು, ಸಂಬಂಧಿಕರು ಮತ್ತು ಸ್ನೇಹಿತರೂ ಸಹ ಸಾಲ ನೀಡುತ್ತಿದ್ದು, ಅವರೂ ವಲಯದ ಭಾಗವಾಗಿದ್ದಾರೆ.

      19 ನೇ ಶತಮಾನದ ಮಧ್ಯಭಾಗದವರೆಗೆ ಭಾರತದಲ್ಲಿ ದೇಶಿಯ ಬ್ಯಾಂಕುಗಳು ಹಣಕಾಸು ವ್ಯವಸ್ಥೆಯ ಕೇದ್ರಭಾಗವಾಗಿದ್ದವು. ಯುರೋಪಿನ ಬ್ಯಾಂಕರರ ಆಗಮನದಿಂದ ದೇಶಿಯ ಬ್ಯಾಂಕರರ ಏಕಸ್ವಾಮ್ಯವು ತೊಂದರೆಗೀಡಾಯಿತು. ಏಕೆಂದರೆ ಯೂರೋಪಿನ ಬ್ಯಾಂಕರರು ಭಾರತದಲ್ಲಿ ಸರ್ಕಾರದ ರಕ್ಷಣೆ ಪಡೆದಿದ್ದರು. ಆದಾಗ್ಯೂ ಹಣದ ಲೇವಾದೇವಿಗಾರರು ಸಾಲ ನೀಡಿಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು. ಸ್ವಾತಂತ್ರ್ಯಾನಂತರ ಭಾರತ ಸರ್ಕಾರವು ಸಾಲ ನೀಡುವ ವ್ಯವಸ್ಥೆಯನ್ನು ಹಣದ ಲೇವಾದೇವಿದಾರರ ಹಿಡಿತದಿಂದ ಮುಕ್ತಗೊಳಿಸಲು ಹಲವಾರು ಪ್ರಯತ್ನಗಳನ್ನು ಮಾಡಿದೆ. ಸರ್ಕಾರವು 1969 ರಲ್ಲಿ 14 ಮತ್ತು 1980 ರಲ್ಲಿ 6 ವಾಣಿಜ್ಯ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿತು. ಗ್ರಾಮೀಣ ಭಾಗದ ಜನರ ಸಾಲದ ಅಗತ್ಯಗಳನ್ನು ಪೂರೈಸುವದಕ್ಕಾಗಿ ಪ್ರತ್ಯೇಕವಾಗಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕು  (         ) ಗಳನ್ನು ಸ್ಥಾಪಿಸಿತು. ಆದರೆ ದುರದೃಷ್ಟವಶಾತ್ ಗ್ರಾಮೀಣ ಲೇವಾದೇವಿದಾರರು ಈಗಲೂ ಗ್ರಾಮೀಣ ಸಾಲ ನೀಡಿಕೆಯಲ್ಲಿ ಗಣನೀಯ ಪಾಲನ್ನು ಪೂರೈಸುತ್ತಿದ್ದಾರೆ.

       ಹಣದ ಲೇವಾದೇವಿಗಾರರು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಣ್ಣ ಮತ್ತು ಬಡ ಸಾಲಗಾರರಿಗೆ ಸುಲಭವಾಗಿ ಲಭ್ಯವಾಗುತ್ತರೆ. ಇದೇ ಅವರು ಯಶಸ್ವಿಯಾಗಿ ತಮ್ಮ ವ್ಯವಹಾರ ಮುಂದುವರಿಸಲು ಕಾರಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇವರ ವ್ಯವಹಾರ ಹೆಚ್ಚಾಗಿಯೇ ಇದೆ. ಅವರು ಅರ್ಜಿಯ ಮೇಲೆ ಸಹಿ ಪಡೆದು ,ತಕ್ಷಣ ಸಾಲ ನೀಡುತ್ತಾರೆ. ಆದರೆ ಲೇವಾದೇವಿಗಾರರು ಅತಿ ಹೆಚ್ಚಿನ ಬಡ್ಡಿದರವನ್ನು ವಿಧಿಸುತ್ತಾರೆ. ಇದೇ ಇವರ ಬಹುದೊಡ್ಡ ನ್ಯೂನತೆ. ಕೆಲವು ವೇಳೆ ಇವರು ದಿನದ ಮತ್ತು ವಾರದ ಆಧಾರದ ಮೇಲೆ ಬಡ್ಡಿ ವಿಧಿಸುತ್ತಾರೆ.ಬಡ್ಡಿ ದರವು ಶೇ. 24 ರಿಂದ ಶೇ.100 ರವರೆಗೆ ಅಥವಾ ಅದಕ್ಕಿಂತಲೂ ಹೆಚ್ಚಿರುತ್ತದೆ. ಇದು ಸಾಲಗಾರನ ಹಣಕಾಸಿನ ತುರ್ತನ್ನು ಅವಲಂಬಿಸಿರುತ್ತದೆ. ಬಹಳಷ್ಟು ಸಾಲಗಾರರು ಸಾಲದ ಬಲೆಗೆ ಸಿಲುಕಿದ್ದಾರೆ. ಅವರಿಂದ ಏರುತ್ತಿರುವ ಬಡ್ಡಿಯನ್ನೂ ಸಹ ಮರುಪಾವತಿಸಲಾಗುತ್ತಿಲ್ಲ.

       2) ಔಪಚಾರಿಕ ಸಾಲ : ಔಪಚಾರಿಕ ಸಾಲ ವಲಯವು ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳನ್ನು ಒಳಗೊಂಡಿದೆ. ಅವು ಅತಿಯಾದ ಬಡ್ಡಿ ದರಗಳನ್ನು ವಿಧಿಸುವದಿಲ್ಲ. ಅವುಗಳ ಉದ್ದೇಶ ಕೇವಲ ಲಾಭ ಗಳಿಸುವದಲ್ಲ. ಆದರೆ ಸಾಮಾಜಿಕ ಜವಾಬ್ದಾರಿ ಹೊಂದಿವೆ. ಅವುಗಳ ಭಾರತೀಯ ರಿಸರ್ವ ಬ್ಯಾಂಕಿನ ನಿಯಂತ್ರಣ ಮತ್ತು ಮೇಲ್ವಿಚಾರಣಗೆ ಒಳಪಟ್ಟಿವೆ.  

        ಬ್ಯಾಂಕುಗಳು ಮತ್ತು ಠೇವಣಿಗಳು  : ಬ್ಯಾಂಕುಗಳು ಆರ್ಥಿಕ ಅಭೀವೃದ್ಧಿಯ ಪ್ರಕ್ರಿಯೆಯಲ್ಲಿ ಅತಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ಬ್ಯಾಂಕ ಪದದ ಮೂಲದ ಬ್ಬೆ ಏಕಾಭಿಪ್ರಾಯವಿಲ್ಲ. ಇಂಗ್ಲೀಷಿನ ಬ್ಯಾಂಕ ಎಂಬ ಪದವು ಇಟಲಿ ಭಾಷೆಯ ಬ್ಯಾಂಕೊ (         ) ಪದದಿಂದ ಬಂದಿದೆ ಎಂದು ಕೆಲವರು ನಂಬುತ್ತಾರೆ. ಬ್ಯಾಂಕೊ ಎಂದರೆ ಬೆಂಚು ಎಂದರ್ಥ .ಮತ್ತೆ ಕೆಲವರು ಇದು ಜರ್ಮನ್ ಭಾಷೆಯ ಬ್ಯಾಂಕ (           ) ಪದದಿಂದ ಬಂದಿದೆ ಎನ್ನುತ್ತಾರೆ.  "ಕೂಡು ಬಂಡವಾಳ ನಿಧಿ" ಅಥವಾ "ಸಾಮಾನ್ಯ ನಿಧಿ" ಎಂದು ಇದರ ಅರ್ಥ.

         1949 ಭಾರತೀಯ ಬ್ಯಾಂಕುಗಳ ನಿಯಂತ್ರಣ ಕಾಯಿದೆಯ ವ್ಯಾಖ್ಯೆಯಂತೆ "ಭಾರತದಲ್ಲಿ ಬ್ಯಾಂಕಿಂಗ ವ್ಯವಹಾರ ನಡೆಸುವ ಯಾವದೇ ಕಂಪನಿ ಬ್ಯಾಂಕಿಂಗ ಕಂಪನಿ ಎನಿಸುತ್ತದೆ." "ಬ್ಯಾಂಕಿಂಗ " ಎಂದರೆ "ಸಾಲ ನೀಡುವ ಅಥವಾ ಬಂಡವಾಳಹೂಡುವ ಉದ್ಧೇಶಕ್ಕಾಗಿ ಸಾರ್ವಜನಿಕರಿಂದ ಹಣವನ್ನು ಠೇವಣಿಯಾಗಿ ಸ್ವೀಕರಿಸುವದು , ಬೇಡಿಕೆ ಅಥವಾ ಇತರೆ ಆಧಾರದ ಮೇಲೆ ಹಣ ಮರುಪಾವತಿಸುವದು ಮತ್ತು ಚೆಕ್ಕುಗಳು, ಡ್ರಾಪ್ಟುಗಳು, ಆದೇಶಗಳು ಮುಂತಾದವುಗಳ ಮೂಲಕ ಹಣ ಹಿಂಪಡೆಯುವದು" ಎಂದರ್ಥ.

        ಬ್ಯಾಂಕುಗಳ ಮಹತ್ವ :  ಬ್ಯಾಂಕುಗಳು ಆರ್ಥಿಕ ಅಭಿವೃದ್ಧಿಯಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸುತ್ತಿವೆ. ಬ್ಯಾಂಕುಗಳು ಆಕರ್ಷಕ ಬಡ್ಡಿ ದರವನ್ನು ನೀಡುವ ಮೂಲಕ ಸಾರ್ವಜನಿಕರ ಉಳಿತಾಯವನ್ನು ಸಂಗ್ರಹಿಸುತ್ತವೆ. ಮತ್ತು ಬಂಡವಾಳ ಸಂಗ್ರಹದ ಪ್ರಕ್ರಿಯೆಗೆ ಸಹಾಯಕವಾಗಿವೆ. ಬ್ಯಾಂಕುಗಳು ಚೆಕ್ ವ್ಯವಸ್ಥೆಯ ಮೂಲಕ ಅನುಕೂಲಕರವಾದ ಹಣಸಂದಾಯದ ಮಾರ್ಗವನ್ನು ಒದಗಿಸಿವೆ. ಇವು ಸದ್ಯದಲ್ಲಿ ಚಾಲ್ತಿಯಲ್ಲಿರುವ ಮಾರುಕಟ್ಟೆ  ಬಡ್ಡಿ ದರದಲ್ಲಿ ಸಾಲಗಳನ್ನು ನೀಡುತ್ತವೆ. ಮೂಲಕ ಅವು ಕೃಷಿ , ಕೈಗಾರಿಕೆ, ಮತ್ತು ಸೇವಾ ವಲಯಗಳ ಅಭಿವೃದ್ಧಿಗೆ ಸಹಾಯಕವಾಗಿದೆ. ಅಲ್ಲದೇ ಬ್ಯಾಂಕುಗಳು ಹುಂಡಿ (                   ) ವರ್ಗಾಯಿಸುತ್ತವೆ. ಅವು ಬೇಡಿಕೆ ಹುಂಡಿ (                  )ಗಳು,ಕ್ರೆಡಿಟ್ ಕಾರ್ಡ ಮತ್ತು ಡೆಬಿಟ್ ಕಾಡ್ಗಳನ್ನು ಸಹ ನೀಡುತ್ತವೆಬ್ಯಾಂಕುಗಳು ಷೇರುಗಳ ಮೇಲೆ ಹಣವನ್ನು ಹೂಡುತ್ತವೆ. ಇವು ಸಾಲ ಸೃಷ್ಠಿಯಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. 

      ಬ್ಯಾಂಕುಗಳ ವಿಧಗಳು  : ಬ್ಯಾಂಕುಗಳಲ್ಲಿ ಹಲವಾರು ವಿಧಗಳಿವೆ. ಪ್ರತಿಯೊಂದು ವಿಧದ ಬ್ಯಾಂಕು ಸಾಮಾನ್ಯವಾಗಿ ಒಂದು ನಿರ್ಧೀಷ್ಟ ವಿಧದ ವ್ಯವಹಾರದಲ್ಲಿ ಪರಿಣಿತಿ ಪಡೆದಿರುತ್ತದೆ.

    1) ಕೈಗಾರಿಕಾ ಬ್ಯಾಂಕುಗಳು : ಕೈಗಾರಿಕಾ ಬ್ಯಾಂಕುಗಳು ಕೈಗಾರಿಕೆಗಳಿಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಹೀಗೆ ಎರಡೂ ರೀತಿಯ ಸಾಲಗಳನ್ನು ನೀಡುತ್ತದೆ. ಇವು ಕೈಗಾರಿಕೆಗಳಿಗೆ ಬೇಕಾದ ಸ್ಥಿರ ಬಂಡವಾಳವನ್ನು ಒದಗಿಸಲು ದೀರ್ಘಾವಧಿ ಸಾಲವನ್ನು ನೀಡುತ್ತವೆ. ಉದಾ : ಕೈಗಾರಿಕಾ ಹಣಕಾಸು ನಿಗಮ, ಕೈಗಾರಿಕಾ ಸಾಲ ಮತ್ತು ಹೂಡಿಕೆ ನಿಗಮ, ಭಾರತೀಯ ಕೈಗಾರಿಕಾಭಿವೃದ್ಧಿ ಬ್ಯಾಂಕ ಮತ್ತು ವಿವಿಧ ರಾಜ್ಯ ಹಣಕಾಸು ನಿಗಮಗಳು.

    2) ವಿನಿಮಯ ಬ್ಯಾಂಕುಗಳು : ವಿನಿಮಯ ಬ್ಯಾಮಕುಗಳು ದೇಶದ ವಿದೇಶಿ ವ್ಯಾಪಾರಕ್ಕೆ ಹಣಕಾಸು ಒದಗಿಸುತ್ತವೆ. ಮತ್ತು ವಿದೇಶಿ ಹಣವನ್ನು ವ್ಯವಹರಿಸುತ್ತವೆ. ಇಲ್ಲಿ ಹುಂಡಿಗಳು ಮುಖ್ಯ ಸಾಲದ ಸಾಧನಗಳಾಗಿವೆ. ಇವು ಸಾಮಾನ್ಯ ಬ್ಯಾಂಕುಗಳ ವ್ಯವಹಾರವನ್ನೂ ಸಹ ನಿರ್ವಹಿಸುತ್ತವೆ. ಆದರೆ ಅದರ ಪಾಲು ಕಡಿಮೆ.

    3) ಉಳಿತಾಯ ಬ್ಯಾಂಕುಗಳು  : ಬ್ಯಾಂಕುಗಳು ಕಡಿಮೆ ಆದಾಯ ಹೊಂದಿರುವವರಲ್ಲಿಯೂ ಉಳಿತಾಯದ ಹವ್ಯಾಸವನ್ನು ಪ್ರೊತ್ಸಾಹಿಸುತ್ತವೆ. ಇವು ವ್ಯಕ್ತಿಗಳ ಸಣ್ಣ ಉಳಿತಾಯದ ಸಂಗ್ರಹಕ್ಕೆ ಸಂಬಂಧಪಟ್ಟಿವೆ. ಇವು ಅಮೇರಿಕಾ ಮತ್ತು ಯುರೋಪಿನ ದೇಶಗಳಲ್ಲಿ ಕಂಡುಬರುತ್ತವೆ. ಭಾರತದಲ್ಲಿ ಉಳಿತಾಯ ಬ್ಯಾಂಕುಗಳು ವ್ಯವಹಾರವನ್ನು ಅಂಚೆ ಕಚೇರಿಗಳು ಮತ್ತು ವಾಣಿಜ್ಯ ಬ್ಯಾಂಕುಗಳು ನಿರ್ವಹಿಸುತ್ತವೆ.

    4) ಸಹಕಾರಿ ಬ್ಯಾಂಕುಗಳು : ಸಹಕಾರಿ ಬ್ಯಾಂಕುಗಳು ಸಹಕಾರಿ ತತ್ವಗಳ ಮೇಲೆ ನಡೆಯುತ್ತಿವೆ. ಅವು ಸಹಕಾರಿ ಸಂಘಗಳ ಕಾಯಿದೆ ಅಡಿಯಲ್ಲಿ ನೊಂದಾಯಿಸಲ್ಪಟ್ಟಿರುತ್ತವೆ. ಅವು ತಮ್ಮ ಚಟುವಟಿಕೆಗಳನ್ನು ಸದಸ್ಯರುಗಳಿಗೆ ಮಾತ್ರ ಮಿತಿಗೊಳಿಸಿರುತ್ತವೆ. ಬ್ಯಾಂಕುಗಳು ಸದಸ್ಯರಿಂದ ಠೇವಣಿಗಳನ್ನು ಸ್ವೀಕರಿಸುತ್ತವೆ. ಮತ್ತು ಅವರಿಗೆ ನ್ಯಾಯೋಚಿತ ದರದಲ್ಲಿ ಸಾಲಗಳನ್ನು ಮುಂಗಡವಾಗಿ ನೀಡುತ್ತವೆ.

     5) ಭೂ ಅಡಮಾನ ಬ್ಯಾಂಕುಗಳು  : ಇವುಗಳೂ ಕೂಡ  ಸಹಕಾರಿ ಬ್ಯಾಂಕುಗಳಾಗಿವೆ. ಇವಿ ಕೃಷಿಕರಿಗೆ ಜಮೀನಿನ ಆಧಾರದ ಮೇಲೆ ಕಾಲುವೆಗಳ ನಿರ್ಮಾಣ , ನೀರಾವರಿ , ತೋಟ ನಿರ್ಮಾಣ ಹಾಗೂ ಇನ್ನಿತರೆ ಶಾಶ್ವತ ಸುಧಾರಣೆಗಳಿಗಾಗಿ ದೀರ್ಘಾವಧಿ ಸಾಲÀವನ್ನು ನೀಡುತ್ತವೆ. ಇವುಗಳನ್ನು ಭೂ ಅಭಿವೃದ್ಧಿ ಬ್ಯಾಂಕುಗಳೆಂತಲೂ ಕರೆಯುತ್ತಾರೆ.

    ವಾಣಿಜ್ಯ ಬ್ಯಾಂಕುಗಳ ಠೇವಣಿಗಳು :  ಸಾರ್ವಜನಿಕರಿಂದ ಠೇವಣಿಗಳನ್ನು ಸಂಗ್ರಹಿಸುವದು ವಾಣಿಜ್ಯ ಬ್ಯಾಂಕುಗಳ ಪ್ರಮುಖ ಹಾಗೂ ಮೂಲ ಕೆಲಸವಾಗಿದೆ. ವಾಣಿಜ್ಯ ಬ್ಯಾಂಕುಗಳು ಸಂಗ್ರಹಿಸುವ ಠೇವಣಿಗಳ ಮುಖ್ಯ ವಿಧಗಳೆಂದರೆ , ಚಾಲ್ತಿ ಖಾತೆ, ಉಳಿತಾಯ ಖಾತೆ, ಮುದ್ದತಿ ಅಥವಾ ವಾಯಿದೆ ಠೇವಣಿಗಳು.

    ಚಾಲ್ತಿ ಖಾತೆ ಠೇವಣಿಗಳು : ಚಾಲ್ತಿ ಖಾತೆ ಠೇವಣಿಗಳನ್ನು ಸಾಮಾನ್ಯವಾಗಿ ವ್ಯವಹಾರಿ ಸಂಸ್ಥೆಗಳು , ವ್ಯಾಪಾರಗಾರರು ಮತ್ತು ಸಾರ್ವಜನಿಕ ಅಧಿಕಾರಸ್ಥರು ತೆರೆದಿರುತ್ತಾರೆ.  ಅವರು ಬಡ್ಡಿ ಗಳಿಸುವದಕ್ಕಿಂತ ಹೆಚ್ಚಾಗಿ ಚೆಕ್ಕುಗಳ ಮೂಲಕ ಹಣ ಸಂದಾಯ ಮಾಡುವ ಅನುಕೂಲತೆಗಾಗಿ ತೆರೆದಿರುತ್ತಾರೆ. ಚಾಲ್ತಿ ಖಾತೆಯು ಪದೇ ಪದೇ ಬ್ಯಾಂಕಿನ ವ್ಯವಹಾರವನ್ನು ನಡೆಸಲು ಸಹಾಯಕವಾಗಿವೆ.

       ಉಳಿತಾಯ ಖಾತೆ ಠೇವಣಿಗಳು  :  ಉಳಿತಾಯ ಠೇವಣಿಗಳನ್ನು ಗ್ರಾಹಕರು ತಮ್ಮ ಚಾಲ್ತಿ ಆದಾಯದ ಒಂದು ಭಾಗವನ್ನು ಉಳಿತಾಯ ಮಾಡುವದಕ್ಕಾಗಿ ತೆರೆಯುತ್ತಾರೆ. ಗ್ರಾಹಕರು ತಮಗೆ ಅಗತ್ಯವಿರುವಾಗ ತಮ್ಮ ಖಾತೆಯಿಂದ ಹಣವನ್ನು ಹಿಂಪಡೆಯಬಹುದು. ಬ್ಯಾಂಕು ಉಳಿತಾಯ ಠೇವಣಿಯಲ್ಲಿರುವ ಹಣಕ್ಕೆ ಸ್ವಲ್ಪ ಪ್ರಮಾಣದ ಬಡ್ಡಿಯನ್ನು ನೀಡುತ್ತದೆ.

       ಮುದ್ದತಿ ಠೇವಣಿಗಳು : ಮುದ್ದತಿ ಠೇವಣಿಗಳು ಹೂಡಿಕೆದಾರರಿಗೆ ಅವರ ಅಸಲಿಗೆ ಸುರಕ್ಷತೆ ಮತ್ತು ಹೆಚ್ಚಿನ ಪ್ರತಿಫಲವನ್ನು ತಂದುಕೊಡುವ ಸಾಧನಗಳಾಗಿವೆ. ಮುದ್ದತಿ ಠೇವಣಿಗಳು ನಿರ್ಧಿಷ್ಟ ಅವಧಿಗಾಗಿ ತೆರೆದ ಠೇವಣಿಗಳಾಗಿರುವದರಿಂದ ಇವುಗಳನ್ನು ವಾಯಿದೆ ಠೇವಣಿಗಳೆಂತಲೂ ಕರೆಯುತ್ತಾರೆ.

     ಭಾರತೀಯ ರಿಸರ್ವ ಬ್ಯಾಂಕು   :  ಭಾರತೀಯ ರಿಸರ್ವ ಬ್ಯಾಂಕು ಭಾರತದ ಕೇಂದ್ರ ಬ್ಯಾಂಕಾಗಿದೆ. ಇದು ಒಂದನೇ ಏಪ್ರಿಲ್ ,1935 ರಂದು ಸ್ಥಾಪನೆಯಾಯಿತು. ಇದು ಮೂಲತ: ಷೇರುದಾರರ ಬ್ಯಾಂಕಾಗಿ ಪ್ರಾರಂಭವಾಯಿತು. ಒಂದನೇ ಜನವರಿ, 1949 ರಲ್ಲಿ ಭಾರತೀಯ ರಿಸರ್ವ ಬ್ಯಾಂಕನ್ನು ರಾಷ್ಟ್ರೀಕರಿಸಲಾಯಿತು. ಅಲ್ಲಿಂದೀಚೆಗೆ ಇದು ಭಾರತ ಸರ್ಕಾರದ ಮಾಲಿಕತ್ವ ಮತ್ತು ನಿಯಂತ್ರಣದಲ್ಲಿದೆ.

         ನಿಮಗಿದು ತಿಳಿದಿರಲಿ

      ಭಾರತೀಯ ರಿಸರ್ವ ಬ್ಯಾಂಕಿನ ಪ್ರಸ್ತಾವನೆಯಲ್ಲಿ ರಿಸರ್ವ ಬ್ಯಾಂಕಿನ ಕಾರ್ಯಗಳನ್ನು ರೀತಿಯಲ್ಲಿ ವರ್ಣಿಸಲಾಗಿದೆ.- "ಬ್ಯಾಂಕ್ ನೋಟುಗಳ ನೀಡಿಕೆಯನ್ನು ನಿಯಂತ್ರಿಸುವದು ಮತ್ತು ಭಾರತದ ಹಣಕಾಸು ಸ್ಥಿರತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ  ಭದ್ರತೆಗಳನ್ನು ಇಡುವದು ಹಾಗೂ ಸಾಮಾನ್ಯವಾಗಿ ದೇಶದ ಹಣ ಮತ್ತು ಸಾಲದ ವ್ಯವಸ್ಥೆಯನ್ನು ನಿರ್ವಹಿಸುವದು"

        ಭಾರತೀಯ ರಿಸರ್ವ ಬ್ಯಾಂಕಿನ ಕಾರ್ಯಗಳು  (ಕೇಂದ್ರ ಬ್ಯಾಂಕ )

      1) ನೋಟು ಚಲಾವಣೆಯ ಏಕಸ್ವಾಮ್ಯ  :  ಭಾರತೀಯ ರಿಸರ್ವ ಬ್ಯಾಂಕ ರೂ. 2 ಮತ್ತು ಅದರ ಮೇಲ್ಪಟ್ಟ ಮೌಲ್ಯದ ನೋಟುಗಳನ್ನು ಮುದ್ರಿಸಿ, ಚಲಾವಣೆಗೆ ತರುವ ಏಕಸ್ವಾಮ್ಯವನ್ನು ಪಡೆದಿದೆ. ಅದು ರೂ. 2, 5, 10 , 20, 50, 100, 500, 1000 ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತರುತ್ತದೆ. ಒಂದು ರೂಪಾಯಿಯ ನೋಟನ್ನು ಸರ್ಕಾರದ ಪರವಾಗಿ        ಮುದ್ರಿಸಿ ಚಲಾಯಿಸುತ್ತದೆ. ಆದಾಗ್ಯೂ ಒಂದು ರೂಪಾಯಿ ನೋಟನ್ನು ಚಲಾವಣೆಗೆ ತರುವ ಹಕ್ಕು ಕೇಂದ್ರ ಸರ್ಕಾರಕ್ಕಿದೆ.

      2) ಸರ್ಕಾರದ ಬ್ಯಾಂಕಾಗಿ ಕಾರ್ಯನಿರ್ವಹಣೆ :     ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಠೇವಣೀಗಳನ್ನು ಸ್ವೀಕರಿಸುತ್ತದೆ. ಇದು ಸರ್ಕಾರದ ಪರವಾಗಿ ತೆರಿಗೆಗಳು ಮತ್ತು ಇತರ ದರಗಳ ಹಣವನ್ನು ಸಂಗ್ರಹಿಸುತ್ತದೆ. ಇದು ನಿರ್ದಿಷ್ಟ ಸೂಚನೆಗಳ ಮೇರೆಗೆ ಸರ್ಕಾರದ ಪರವಾಗಿಸಾರ್ವಜನಿಕರಿಗೆ ಹಣ ಸಂದಾಯ ಮಾಡುತ್ತದೆ.      ಸರ್ಕಾರಿ ಸಾಲ ಪತ್ರಗಳು ಮತ್ತು ಖಜಾನೆ ಹುಂಡಿಗಳನ್ನು ಮಾರಾಟ ಮಾಡುತ್ತದೆ. ಮತ್ತು ಸರ್ಕಾರಕ್ಕೆ ಹಣಕಾಸು ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತದೆ.

        ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ       ಮಾರ್ಗಗಳು ಮತ್ತು ಸಾಧನಗಳ ಮುಂಗಡಗಳನ್ನೂ ವಿಸ್ತರಿಸುತ್ತದೆ. " ಮಾರ್ಗಗಳು ಮತ್ತು ಸಾಧನಗಳ ಮುಂಗಡಗಳು" (     )  ವಾಣಿಜ್ಯ ಬ್ಯಾಂಕಿನ ಸಾಲದಂತಲ್ಲ. ಸೌಲಭ್ಯವನ್ನು ಸರ್ಕಾರಗಳ ಕಂದಾಯ ವೆಚ್ಚಗಳ ನಡುವಿನ ಅಸಮಾನತೆಗಳನ್ನು ತಾತ್ಕಾಲಿಕವಾಗಿ ಭರಿಸಲು ನೀಡಲಾಗುತ್ತದೆ. ರೀತಿಯ ಮುಂಗಡಗಲ ಗರಿಷ್ಟ ಪ್ರಮಾಣ ಮತ್ತು ಅವಧಿಯು      ಮತ್ತು ಸಂಬಂಧಿಸಿದ ಸರ್ಕಾರದ ನಡುವಿನ ಒಪ್ಪಂದಗಳಿಂದ ನಿರ್ಧಾರವಾಗುತ್ತದೆ.

    3) ಬ್ಯಾಂಕುಗಳ ಬ್ಯಾಂಕು  :  ಬ್ಯಾಂಕುಗಳ ಬ್ಯಾಂಕಾಗಿ ಕಾರ್ಯನಿರ್ವಹಿಸುತ್ತದೆ. ದೇಶದಲ್ಲಿರುವ ಎಲ್ಲಾ ಬ್ಯಾಂಕುಗಳನ್ನು ನಿಯಂತ್ರಿಸುತ್ತದೆ. ದೇಶದಲ್ಲಿನ ಎಲ್ಲಾ ಬ್ಯಾಂಕುಗಳು ತಮ್ಮ ಠೇವಣಿ ಹಣದಲ್ಲಿ ಒಂದು ಭಾಗವನ್ನು      ನಲ್ಲಿ ಮೀಸಲು ಇಡಬೇಕು. ಬ್ಯಾಂಕುಗಳಿಗೆ ಹೆಚ್ಚುವರಿ ಹಣದ ಅವಶ್ಯಕತೆ ಇದ್ದಾಗ ಅವುಗಳಿಗೆ     ಸಾಲ ಒದಗಿಸುತ್ತವೆ. ಅದು ಬ್ಯಾಂಕುಗಳ ಹಣಕಾಸು ನಿರ್ವಹಣೆಯ ಬಗ್ಗೆಯ ಮಾರ್ಗದರ್ಶನ ನೀಡುತ್ತದೆ.

     4) ರಾಷ್ಟ್ರೀಯ ಸಂದಾಯ ಕಛೇರಿಯಾಗಿ ಕಾರ್ಯನಿರ್ವಹಣೆ : ಬ್ಯಾಂಕುಗಳ ವ್ಯವಹಾರಗಳನ್ನು ಮಿತವ್ಯಯವಾಗಿ ಬಗೆಹರಿಸುವ ಸಲುವಾಗಿ ಸಂದಾಯ ಕಛೇರಿ ಸೌಲಭ್ಯವನ್ನು ಒದಗಿಸಿದೆ. ಕಾರ್ಯವು ಬ್ಯಾಂಕುಗಳು ತಮ್ಮ ನಡುವಿನ ಪರಸ್ಪರ ಹಕ್ಕು ಬಾಧ್ಯತೆಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಲು ಸಹಾಯಕವಾಗಿವೆ.

     5) ಸಾಲದ ನಿಯಂತ್ರಕನಾಗಿ ಕಾರ್ಯ ನಿರ್ವಹಣೆ : ದೇಶದಲ್ಲಿನ ಅಪೇಕ್ಷಿತ ಹಣಕಾಸು ಪರಿಸ್ಥಿತಿಗೆ ಅನುಗುಣವಾಗಿ ವಾಣೀಜ್ಯ ಬ್ಯಾಂಕುಗಳ ಸಾಲ ಸೃಷ್ಟಿಯನ್ನು ನಿಯಂತ್ರಿಸುತ್ತದೆ. ಅಥವಾ ವಿಸ್ತರಿಸುತ್ತದೆ. ಇದು ಸಾಲದ ನಿಯಂತ್ರಣ ಮತ್ತು ವಿಸ್ತರಣೆಗೆ ಪರಿಮಾಣಾತ್ಮಕ ಮತ್ತು ಗುಣಾತ್ಮಕ ವಿಧಾನಗಳೆರಡನ್ನೂ ಬಳಸುತ್ತದೆ.

      6) ವಿದೇಶಿ ವಿನಿಮಯ  ಸಂಗ್ರಹದ ಮೇಲ್ವಿಚಾರಕ : ವಿದೇಶಿ ವಿನಿಮಯ ಸಂಗ್ರಹದ ಮೇಲ್ವಿಚಾರಕನಾಗಿ ಕಾರ್ಯ ನಿರ್ವಹಿಸುತ್ತದೆ. ಸಾಕಷ್ಟು ವಿನಿಮಯ ಸಂಗ್ರಹವು ವಿದೇಶಿ ವಿನಿಮಯ ದರಗಳನ್ನು ಕಾಪಾಡಲು ಸಹಕರಿಸಲಿದೆ. ವಿದೇಶಿ ವಿನಿಮಯ ದರಗಳಲ್ಲಿನ ನ್ಯಾಯವಲ್ಲದ ಏರಿಳಿತಗಳನ್ನು ಕಡಿಮೆಗೊಳಿಸುವ ಸಲುವಾಗಿ ,ಪರಿಸ್ಥಿತಿಗಳನ್ನು ಅವಲಂಬಿಸಿ ,    ವಿದೇಶಿ ಹಣಗಳನ್ನು ಕೊಳ್ಳಲು ಮತ್ತು ಮಾರಲು ಮುಂದಾಗಬಹುದು.

       7) ಆರ್ಥಿಕ ಅಂಕಿ ಅಂಶಗಳು ಮತ್ತು ಇತರ ಮಾಹಿತಿಗಳನ್ನು ಪ್ರಕಟಿಸುವದು ; ಆರ್ಥಿಕ ಮತ್ತು ಹಣಕಾಸು ವಿಷಯಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಸಂಗ್ರಹಿಸುತ್ತದೆ. ಮತ್ತು ಕಾಲ ಕಾಲಕ್ಕೆ ಪ್ರಕಟಿಸುತ್ತದೆ. ಇದು ಹಣ ಮತ್ತು ಹಣಕಾಸು, ಹಣಕಾಸಿ ಸ್ಥಿತಿಗತಿಗಳು , ರಾಜ್ಯ ಹಣಕಾಸುಗಳು, ಅಂಕಿ ಅಂಶಗಳ ಕಿರು ಹೊತ್ತಿಗೆ ಮುಂತಾದವುಗಳನ್ನು ಸಹ ಪ್ರಕಟಿಸುತ್ತದೆ.

       8) ಬ್ಯಾಂಕಿಂಗ್ ಹವ್ಯಾಸದ ಅಭಿವೃದ್ಧಿ : ಜನರಲ್ಲಿ ಬ್ಯಾಂಕಿನ ವ್ಯವಹಾರದ ಹವ್ಯಾಸವನ್ನು ಅಭಿವೃದ್ಧಿಗೊಳಿಸುವ ಮೂಲಕ ಉಳಿತಾಯವನ್ನು ಸಾಂಸ್ಥೀಕರಣಗೊಳಿಸಿದೆ. ಮತ್ತು ಬ್ಯಾಂಕು ರಹಿತ ಪ್ರದೇಶಗಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ವಿಸ್ತರಿಸಿದೆ.

        9) ಕೃಷಿಗಾಗಿ ಸೌಲಭ್ಯಗಳು : ಕೃಷಿಗೆ ಪರೋಕ್ಷವಾಗಿ ಹಣಕಾಸು ಸೌಲಭ್ಯಗಳನ್ನು ಕ್ರಮಬದ್ಧವಾಗಿ ಒದಗಿಸುವದನ್ನು ಮುಂದುವರಿಸಿದೆ. ಇದು   ಮೂಲಕ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಹಣಕಾಸು ಸೌಲಭ್ಯಗಳನ್ನು ಒದಗಿಸುತ್ತದೆ.

ಭಾರತೀಯ ಅರ್ಥವ್ಯವಸ್ಥೆಯ ಅಭಿವೃದ್ಧಿ ತಂತ್ರದಲ್ಲಿ ಬಹು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದೆ. ಭಾರತೀಯ ರಿಸರ್ವ ಬ್ಯಾಂಕು ಅಂಕಿ ಅಂಶ ಸಂಗ್ರಹ ,ಶಕ್ತಿಶಾಲಿ ಆರ್ಥಿಕ ಸಂಶೋದನೆ ಕೈಗೊಳ್ಳುವದು ಮತ್ತು ಜ್ಞಾನ ಹಂಚಿಕೆಯಲ್ಲಿ ಒಂದು ಶ್ರೀಮಂತ ಪರಂಪರೆಯನ್ನೇ ಹೊಂದಿದೆ. ದೇಶವು ಹಲವಾರು ಹಣಕಾಸಿನ ಬಿಕ್ಕಟ್ಟುಗಳಿಂದ ಹೊರಬರಲು ರಿಸರ್ವ ಬ್ಯಾಂಕಿನ ಕ್ರಮಗಳು ಸಹಾಯಕವಾಗಿವೆ.

logoblog

Thanks for reading ಹಣ ಮತ್ತು ಸಾಲ

Previous
« Prev Post

No comments:

Post a Comment