ಆಧುನಿಕ ಯೂರೋಪ್
ಜ್ಞಾನಾರ್ಜನೆಗೆ ಇರುವ ಅವಕಾಶಗಳು :
- ಯೂರೋಪ್ ಖಂಡದ ಪರಿಕಲ್ಪನೆ
- ಪುನರುಜ್ಜೀವನಕ್ಕೆ ಅರ್ಥ
- ಪುನರಜ್ಜೀವನಕ್ಕೆ ಕಾರಣ ಮತ್ತು ಪರಿಣಾಮಗಳು
- ಪುನರುಜ್ಜೀವನದ ಲಕ್ಷಣಗಳು
- ಪುನರುಜ್ಜೀವನ ಕಾಲದ ಸಾಹಿತ್ಯ, ಕಲೆ, ವಾಸ್ತುಶಿಲ್ಪ, ವಿಜ್ಞಾನ
- ಭೌಗೋಳಿಕ ಅನ್ವೇಷಣೆ ಅರ್ಥ
- ಭೌಗೋಳಿಕ ಅನ್ವೇಷಣೆಗೆ ಕಾರಣಗಳು.
- ಭೌಗೋಳಿಕ ಅನ್ವೇಷಣೆಗಳು ಪರಿಣಾಮಗಳು
- ಮತ ಸುಧಾರಣೆ ಅರ್ಥ ಮತ್ತು ಮಾರ್ಟಿನ್ ಲೂಥರ್ಕಿಂಗ್
- ಮತ ಸುಧಾರಣೆಯ ಪರಿಣಾಮಗಳು
- ಪ್ರತಿ ಸುಧಾರಣೆ ಮತ್ತು ಇಗ್ನೇಷಿಯಸ್ ಲಯೋಲ
- ಕೈಗಾರಿಕಾ ಕ್ರಾಂತಿ, ಅರ್ಥ, ಕಾರಣಗಳು
- ಕೈಗಾರಿಕಾ ಕ್ರಾಂತಿಯ ಪರಿಣಾಮಗಳು
ವಿಮರ್ಶಾಯುಕ್ತ ಶಿಕ್ಷಣಕ್ರಮ ಅಳವಡಿಕೆಗೆ ಇರುವ ಅವಕಾಶಗಳು
-
ಕಾನ್ಸ್ಟಾಂಟಿನೋಪಲ್ ಘಟನೆ ಹೇಗೆ ಯೂರೋಪಿನಲ್ಲಿ ಪುನರುಜ್ಜೀವನದೊಂದಿಗೆ ಭೌಗೋಳಿಕ
ಅನ್ವೇಷಣೆ, ಧಾರ್ಮಿಕ ಸುಧಾರಣೆ ಮತ್ತು ಕೈಗಾರಿಕಾ ಕ್ರಾಂತಿಗೆ ಪ್ರೇರಣೆಯಾಯಿತು
ಎಂಬುದನ್ನು ಅರ್ಥೈಸಿಕೊಳ್ಳವುದರೊಂದಿಗೆ ಪ್ರೇರಣೆಯಾಯಿತು ಎಂಬುದನ್ನು
ಅರ್ಥೈಸಿಕೊಳ್ಳವುದರೊಂದಿಗೆ ಒಂದು ಘಟನೆ ಏನೆಲ್ಲಾ ಬದಲಾವಣೆಗೆ ಕಾರಣವಾಗಿರುತ್ತದೆ
ಎಂಬುದನ್ನು ಕುತೂಹಲದಿಂದ ಚರ್ಚೆ ಮಾಡಿ ತಿಳಿಯುವರು.
- ಅಂದಿನ ಸಂದರ್ಭದಲ್ಲಿ
ಮಾನವತಾವಾದ ಹುಟ್ಟಿಕೊಂಡ ಸಂದರ್ಭದೊಂದಿಗೆ, ಆಧುನಿಕ ಜಗತ್ತಿನ, ಗಾಂಧಿ,
ಅಂಬೇಡ್ಕರ್, ನೆಲ್ಸನ್ ಮಂಡೇಲರವರು ಈ ಮಾನವತಾವಾದದ ಪರವಾಗಿ ಹೆಜ್ಜೆ ಇಡಲು
ಕಾರಣವೇನೆಂಬುದನ್ನು ತಿಳಿಯುವರು.
- ಶ್ರೇಷ್ಠ ಸಂಸ್ಕೃತಿ ಎಂದರೇನು? ಎಂಬುದನ್ನು ನೈಜ ಘಟನಾವಳಿಗಳೊಂದಿಗೆ ಅರ್ಥೈಸಿಕೊಂಡು ಅನುಕರಣೆ ಮಾಡುವ ಸಾಮಥ್ರ್ಯವನ್ನು ಪಡೆಯುವುದು.
-
ಇಟಲಿಯ ಜ್ಞಾನ ಪುನರುಜ್ಜೀವನದ ತವರೆನಿಸಿಕೊಳ್ಳಲು ಆ ಕಾಲಘಟ್ಟದಲ್ಲಿ ತಂಡ ತಂಡವಾಗಿ
ಇಟಲಿಗೆ ವಲಸೆ ಬಂದ ಬುದ್ಧಿ ಜೀವಿಗಳು ಕಾರಣರಾದರು ಎಂಬುದನ್ನು ಅಧ್ಯಯನ
ಮಾಡುವುದರೊಂದಿಗೆ ಒಂದು ಬುದ್ಧಿ ಜೀವಿ ಜನ ಸಮೂಹ ಆಯಾ ಕಾಲದ ವರ್ತಮಾನದ ವಿಕಾಸ
ನಿರಂತರವಾಗಿ ಕಾರಣವಾಗುತ್ತಲೇ ಬಂದಿದೆ ಎಂಬುದನ್ನು ಅರಿಯುವರು.
ಉದಾ : ಪೆಟ್ರಾಕ್ - ಆಫ್ರಿಕಾ
ಬಕಾಶಿಯಾ - ಡೆಕಾಮೆರಾನ್
ಡಾಂಟೆ - ಡಿವೈನ್ ಕಾಮಿಡಿ ಕೃತಿಗಳ ಮೂಲಕ ಈ ಬುದ್ಧಿ ಜೀವಿಗಳು ಪುನರುಜ್ಜೀವನದ ಕಣ್ಣು ತೆರೆಸಿದರು.
*
ಊಳಿಗಮಾನ್ಯ ಪದ್ಧತಿಯ ಆಡಳಿತದಿಂದ ನೊಂದಿದ್ದ ಯೂರೋಪಿನ ಸಾಮಾನ್ಯ ಜನ ಪುನರುಜ್ಜೀವನ
ಸಂದರ್ಭವನ್ನು ಸ್ವೀಕರಿಸುವಲ್ಲಿ ವಹಿಸಿದ ಪಾತ್ರವನ್ನು ಒಂದು ಹೊಸ ಸ್ವತಂತ್ರ
ಬೆಳವಣಿಗೆಯ ಪರಿಕಲ್ಪನೆ ಜಗತ್ತಿನ ವಿಕಾಸಕ್ಕೆ ಹೇಗೆ ಕಾರಣವಾಯಿತು ಎನ್ನುವುದನ್ನು
ಪುನರುಜ್ಜೀವನದ ಕಾರಣಗಳೊಂದಿಗೆ ಚಚರ್ಾತ್ಮಕವಾಗಿ ತಿಳಿದುಕೊಳ್ಳುವರು.
*
ಜನರಾಡುವ ಭಾಷೆಗಳು (ಪ್ರಾದೇಶಿಕ ಭಾಷೆ) ಪ್ರಾಬಲ್ಯಕ್ಕೆ ಬಂದಾಗ ಆ
ಭಾಷೆಯನ್ನಾಡುವವರು ತಮ್ಮ ಬೌದ್ಧಿಕ ವಿಕಾಸವನ್ನು ಬೆಳಸಿಕೊಳ್ಳುವುದರೊಂದಿಗೆ ಸಾಮಾಜಿಕ
ಸ್ಥಿತ್ಯಂತರಗಳು ಉಂಟಾಗುವ ಬಗೆಯನ್ನು ಅರ್ಥೈಸಿಕೊಂಡು ಈ ಹಿನ್ನಲೆಯಲ್ಲಿ ಮಾತೃಭಾಷೆಯ
ಮಹತ್ವವನ್ನು ಅರಿಯುವರು.
ಉದಾ : ಲ್ಯಾಟಿನ್ ಬದಲು ಪ್ರಾದೇಶಿಕ ಭಾಷೆಗಳಾದ ಇಂಗ್ಲೀಷ್, ಇಟಾಲಿಯನ್, ಫ್ರೆಂಚ್, ಜರ್ಮನ್ ಇತ್ಯಾದಿ.
*
ಮಾನವ ಸಹಜ ಭಾವನೆಗಳನ್ನು ಶಿಲ್ಪ ಚಿತ್ರಗಳಲ್ಲಿ ಮೂಡಿಸುವುದರೊಂದಿಗೆ, ಕಲೆಯೂ ಸಹ
ಮಾನವ ನಿರ್ಮಿತ ಸಮಾಜವನ್ನು ಅರ್ಥೈಸುವಲ್ಲಿ ವಹಿಸುವ ಪಾತ್ರವನ್ನು ತಿಳಿಯುವರು.
*
16ನೆಯ ಶತಮಾನದಲ್ಲಿ ಬೆಳಕಿಗೆ ಬಂದ ವಿಜ್ಞಾನದ ಬೆಳವಣಿಗೆ ಪ್ರತಿಯೊಬ್ಬರಲ್ಲೂ
ಏಕೆ? ಏನು? ಹೇಗೆ? ಎಂಬ ಪ್ರಶ್ನೆಗಳನ್ನು ಮೂಡಿಸಿ ಹೊಸ ಹೊಸ ಆವಿಷ್ಕಾರಗಳಿಗೆ
ನಾಂದಿಯಾದ ಈ ಸಂದರ್ಭ ಪುನರುಜ್ಜೀವನ ಕಾಲದಲ್ಲಾಗಿರುವುದಕ್ಕೆ ಮೆಚ್ಚುಗೆ
ವ್ಯಕ್ತಪಡಿಸುವರು. ಹಾಗೂ ಪ್ರಸ್ತುತ ಸಂದರ್ಭದ ವಿಜ್ಞಾನದ ಮಹತ್ವವನ್ನು ಅರಿಯುವರು.
ಉದಾ : ಭೂಕೇಂದ್ರವಾದದ ಬಗ್ಗೆ ಇದ್ದಂತಹ ನಂಬಿಕೆ ಸೂರ್ಯ ಕೇಂದ್ರವಾದ - ಕೆಪ್ಲರ್
ನ್ಯೂಟನ್ನನ - ಗುರುತ್ವಾಕರ್ಷಣೆ
ಹ್ಯಾಂಡೂವಸಾಲಯಿಸ್ನ - ಶರೀರಶಾಸ್ತ್ರ ಇತ್ಯಾದಿ.
*
ಪುನರುಜ್ಜೀವನವು ಸಮಾಜದಲ್ಲಿ ಮಾನವೀಯತೆಯ ಮಾರ್ಗ, ವೈಜ್ಞಾನಿಕ ಶೋಧ ತಂತ್ರಜ್ಞಾನ
ಮತ್ತು ಕೈಗಾರಿಕಾ ಕ್ರಾಂತಿಗೆ ಹೊಸ ಚಿಂತನೆಗೆ ನಾಂದಿ ಹಾಡಿತಲ್ಲದೆ ಮುಂದಿನ ಧಾರ್ಮಿಕ
ಸುಧಾರಣೆಗಳಿಗೂ ಕಾರಣವಾದ ಸಂದರ್ಭವನ್ನು ಹಾಗೂ ಅದರ ಪರಿಣಾಮದ
ಮಹತ್ವವನ್ನು ತಿಳಿಯುವರು.
*
16ನೇ ಶತಮಾನ ಭೌಗೋಳಿಕ ಅನ್ವೇಷಣೆಗಳ ಯುಗವಾಗಿ ಪ್ರಪಂಚದ ಅನೇಕ ಭಾಗಗಳಿಗೆ ಹೊಸ
ಜಲಮಾರ್ಗಗಳನ್ನು ಕಂಡು ಹಿಡಿದ ಹಿನ್ನಲೆಯಲ್ಲಿ ಯುರೋಪಿಯನ್ನರ ಸಾಹಸ ಗಾಥೆಯನ್ನು
ಕುತೂಹಲ ಮತ್ತು ಆಸಕ್ತಿಯಿಂದ ಅರ್ಥೈಸಿಕೊಳ್ಳುವರು.
* ಯೂರೋಪಿಯನ್ನರ ಭೌಗೋಳಿಕ
ಅನ್ವೇಷಣೆಗಳಿಗೆ ಬಹುಮುಖ್ಯ ಕಾರಣಗಳಾದ ವ್ಯಾಪಾರ, ಧರ್ಮಪ್ರಚಾರ, ಕುತೂಹಲ ಹಾಗೂ
ಅರಬ್ಬರೊಂದಿಗೆ ಪೈಪೋಟಿಗಳು ಬಹು ಮುಖ್ಯ ಅಂಶಗಳಾಗಿದ್ದು ಈ ಸಂದರ್ಭದಲ್ಲಿ ವಿಜ್ಞಾನ
ಮತ್ತು ಇಲ್ಲಿನ ಸಂಶೋಧನೆಗಳು ಹೊಸ ಜಲಮಾರ್ಗ ಕಂಡು ಹಿಡಿಯುವಲ್ಲಿ ವಹಿಸಿದ
ಪಾತ್ರವನ್ನು ಘಟನೆಗಳ ಮೂಲಕ ಅರ್ಥೈಸಿಕೊಳ್ಳುವರು.
ಉದಾ : - ನಾವಿಕರ ದಿಕ್ಸೂಚಿ
- ಅಸ್ಪ್ರೋಲೋಬ್, ನಕ್ಷೆಗಳು, ಭೂಪಟಗಳ ಸಂಶೋಧನೆಗಳು.
- ಭೂಮಿಯ ಗೋಳಾಕೃತಿ ತಿಳಿಯಿತು.
*
ಭೌಗೋಳಿಕ ಅನ್ವೇಷಣೆಗಳ ಹಿನ್ನಲೆಯಲ್ಲಿ ಬೆಳಕಿಗೆ ಬಂದ ಭೂಶೋಧನೆಗಳನ್ನು ಮಕ್ಕಳು
ಹೆಚ್ಚು ಕುತೂಹಲದಿಂದ ನಾವಿಕರ ಸಾಹಸಗಳನ್ನು ಮೆಚ್ಚಿಕೊಂಡು ತಾವು ಸಾಹಸ
ಪ್ರವೃತ್ತಿಯನ್ನು ರೂಪಿಸಿಕೊಳ್ಳುವಲ್ಲಿ ತೊಡಿಗಿಸಿಕೊಳ್ಳುವರು.
* ಭೂ ಶೋಧನೆಗಳು
ಪ್ರಾರಂಭದಲ್ಲಿ ವ್ಯಾಪಾರ, ಧರ್ಮಪ್ರಚಾರ, ಪೈಪೋಟಿಯ ಹಿನ್ನಲೆಯಲ್ಲಿ ಚಲಿಸಿ, ಮುಂದೆ
ಬಲಾಡ್ಯ ರಾಷ್ಟ್ರಗಳು, ಅಬಲ ರಾಷ್ಟ್ರಗಳ ಮೇಲೆ ಸಾಮ್ರಾಜ್ಯಶಾಹಿ ಮತ್ತು ವಸಾಹತು
ಶಾಹಿಯ ಪ್ರಾಭಲ್ಯವನ್ನು ಬೆಳಸಿದವಲ್ಲದೆ, ಐರೋಪ್ಯ ರಾಷ್ಟ್ರಗಳಲ್ಲಿ ಕಟ್ಟುಕೊಂಡ
ಕೈಗಾರಿಕಾ ಕ್ರಾಂತಿಯಿಂದ ಬಡರಾಷ್ಟ್ರಗಳು ಮಾರುಕಟ್ಟೆ ಕೇಂದ್ರಗಳಾಗಿ ಬದಲಾಗತೊಡಗಿದವು
ಎಂಬುದನ್ನು ಕಾರಣಗಳ ಮೂಲಕ ಅರ್ಥೈಸಿಕೊಳ್ಳುವರು.
* ಚರ್ಚಿನ ಏಕಸ್ವಾಮ್ಯವನ್ನು
ಪ್ರಶ್ನಿಸಿ ನಡೆದ ಬಂಡಾಯವೇ ಮತಸುಧಾರಣೆಯಾಗಿದ್ದು ಇದು ಹೊಸಯುಗದ ಉದಯಕ್ಕೆ ಹೇಗೆ
ಕಾರಣವಾಯಿತು ಎಂಬುದನ್ನು ಇಂದಿನ ಧರ್ಮ, ಜಾತಿಯಿಂದ ಬಂದೊದಗಿರುವ ಅಪಾಯಕಾರಿ ಸಮಾಜದ
ಸುಸ್ಥಿತಿಗೆ ತಮ್ಮ
ಪಾತ್ರವೇನು ಎಂಬುದನ್ನು ಈ ಮೂಲಕ ತಿಳಿಯಲೆತ್ನಿಸುವರು.
*
ಚರ್ಚ್ ನ ಏಕಸ್ವಾಮ್ಯವನ್ನು ಪ್ರಶ್ನಿಸಿದ ಮಾರ್ಟಿನ್ ಲೂಥರ್ ಕ್ಯಾಥೋಲಿಕ್ಕರ
ಬೋಧನೆಗಳನ್ನು ಖಂಡಿಸಿ ಚರ್ಚ್ನ ಅಧಿಕಾರಗಳನ್ನು ಅವರ ಹಣದಾಹ, ಅಧಿಕಾರದಾಹ,
ಬಳಸಿಕೊಳ್ಳುತ್ತಿದ್ದ ಕ್ಷಮಾಪಣೆ ಎಂಬ ಹುನ್ನಾರವನ್ನು ದಿಕ್ಕರಿಸಿ ಚರ್ಚ್ ಯಾರೊಬ್ಬರ
ಸ್ವತ್ತಲ್ಲ. ಸರ್ವರನ್ನು ಸಮಾನತೆಯಿಂದ ಕಾಣುವ ಧರ್ಮ ಪ್ರಚಾರವೇ ಶ್ರೇಷ್ಠವಾದದ್ದು,
ಎಂದು ಘೋಶಿಸಿ ಆ ಮೂಲಕ ಪ್ರಾಟಸ್ಟೆಂಟ್ ಎಂಬ ಅನುಯಾಯಿಗಳ ತಂಡದೊಂದಿಗೆ ಚರ್ಚ್ಗೆ ಹೊಸ
ಭಾಷ್ಯ ಬರೆದ ಮಾಟರ್ಿನ್ ಲೂಥರ್ ಸಾಹಸ ಮತ್ತು ಧೈರ್ಯವನ್ನು ಮನದಲ್ಲಿ ಮೆಚ್ಚಿ ಅಂತಹ
ಗುಣಗಳನ್ನು ತಮ್ಮಲ್ಲಿ ಬೆಳೆಸಿಕೊಳ್ಳುವರು.
* ಮತ ಸುಧಾರಣೆಯಿಂದ ಕ್ರೈಸ್ತ ಮತದ
ಅಖಂಡತೆಗೆ ಭಾರೀ ಪೆಟ್ಟುಬಿದ್ದಿತು. ಈ ಹಿನ್ನಲೆಯಲ್ಲಿ ವಿಘಟನೆಗೊಂಡ ಕ್ಯಾಥೋಲಿಕ್
ಅರ್ಥೊಡಾಕ್ಸ್ ಮತ್ತು ಪ್ರಾಟಸ್ಟಂಟ್ ಗುಂಪುಗಳು ಬೆಳೆಯತೊಡಗಿ ರಾಜರು
ಸ್ವತಂತ್ರರಾಗತೊಡಗಿ ರಾಷ್ಟ್ರೀಯ ಪ್ರಭುತ್ವಗಳು ಉದಯವಾಗತೊಡಗಿದ ಸಂದರ್ಭವನ್ನು ಇತಿಹಾಸದ
ಮಹತ್ವ ವರ್ತಮಾನದ ಜೀವಂತಿಕೆಯ ಮೇಲೆ ಉಂಟು ಮಾಡುವ ಪರಿಣಾಮವನ್ನು ಆಶ್ಚರ್ಯದಿಂದ
ಗ್ರಹಿಸಿಕೊಳ್ಳುವರು.
* ಮತ ಸುಧಾರಣೆಯಿಂದಾದ ಪ್ರಾಟಸ್ಟಂಟರ ಪ್ರಭಾವನ್ನು
ತಪ್ಪಿಸಲು ಮತ್ತೆ ಕ್ಯಾಥೋಲಿಕ್ ಗುಂಪು ಚರ್ಚ್ನಲ್ಲಿ ಆಂತರಿಕವಾದ ಸುಧಾರಣೆಗಳನ್ನು
ಪರಿಹಾರಗಳನ್ನು ತರುವ ಪ್ರಯತ್ನ ಪ್ರಾರಂಭಿಸಿತು. ಈ ಸಂಬಂಧ ಇಗ್ನೇಷಿಯಸ್ ಲಯೋಲ
ಎಂಬುವನು 'ಜೀಸಸ್' ಎಂಬ ಸೊಸೈಟಿಯನ್ನು ಹುಟ್ಟು ಹಾಕುವುದರ ಮೂಲಕ, ಕಳೆದು
ಹೋಗುತ್ತಿರುವ ಕ್ಯಾಥೋಲಿಕ್ ಚರ್ಚ್ನ ಖ್ಯಾತಿಯನ್ನು ಕಟ್ಟುವ ಪ್ರಯತ್ನದ ಮಾನವ
ಸಹಜಗುಣದ ವರ್ತನೆಗಳನ್ನು ತಮ್ಮ ಸಮಾಜದ ಸುತ್ತಲ ಜನರೊಂದಿಗೆ ಹೋಲಿಸಿ ಕೊಳ್ಳುವರು.
*
ವಸಾಹತುಗಳ ಸ್ಥಾಪನೆಯಿಂದ ವ್ಯಾಪಾರ ಹೆಚ್ಚಿ, ಸಿದ್ಧಪಡಿಸಿದ ವಸ್ತುಗಳಿಗೆ ಬೇಡಿಕೆ
ಹೆಚ್ಚಿ ಲಾಭಗಳಿಕೆಯ ಪ್ರಮಾಣವು ಹೆಚ್ಚಾಗತೊಡಗಲು ಕಾರಣ ಉತ್ಪಾದನೆಯಲ್ಲಿ ಹೊಸ
ವಿಧಾನಗಳು ಸಾರಿಗೆ ಕ್ಷೇತ್ರಗಳ ಬದಲಾಣೆಗಳೇ ಇಂಗ್ಲೇಡ್ನಲ್ಲೂ ಕಂಡುಬಂದುದರಿಂದ
ಕ್ರಿ.ಶ. 1760 ರಿಂದ 1830ರ ವರೆಗಿನ ಈ ಅವಧಿ ಕೈಗಾರಿಕಾ ಕ್ರಾಂತಿಯುಗವೆಂದು
ಪರಿಗಣಿಸಲ್ಪಟ್ಟ ವಿಜ್ಞಾನದ ಬೆಳವಣಿಗೆ ಹಿನ್ನಲೆಯ ಸಂದರ್ಭವನ್ನು ಉದಾಹರಣೆಗಳ ಮೂಲಕ
ತಿಳಿಯುವರು.
ಉದಾ : ಸ್ಯಾಮ್ಯುಯಲ್ ಕ್ರಾಮ್ಟನ್ - ಮ್ಯೂಲ್ಯಂತ್ರ
ಎಲಿವಿಟ್ನ - ಕಾಟನ್ಜಿನ್ ಜೇಮ್ಸ್ವ್ಯಾಟ್ - ಹಾವಿಯಯಂತ್ರ
ಜಾರ್ಚ್ ಸ್ಟೀವನ್ಸನ್ - ರೈಲು ಬಂಡಿ ಇತ್ಯಾದಿ.
*
ಕೈಗಾರಿಕಾ ಕ್ರಾಂತಿಯಿಂದ ಯಂತ್ರಗಳ ಬೇಡಿಕೆ ಹೆಚ್ಚಿ, ಆರ್ಥಿಕ ಸಾಮಾಜಿಕ
ಕ್ಷೇತ್ರಗಳಲ್ಲಿ ಬದಲಾವಣೆಗಳು ಉಂಟಾದವಲ್ಲದೆ ಹೊಸ ಕೈಗಾರಿಕೆಗಳು ಹುಟ್ಟುಕೊಂಡು
ಉತ್ಪಾದನಾ ವೆಚ್ಚ ಕಡಿಮೆಯಾಗಿ ಜೀವನಾವಶ್ಯಕ ವಸ್ತುಗಳು ಅಗ್ಗವಾಗಿ ದೊರೆಯತೊಡಗಿ ಗುಡಿ
ಕೈಗಾರಿಕೆಗಳು
ನಾಶವಾಗತೊಡಗಿ ಸಮಾಜದಲ್ಲಿ ಲಾಭಾಂಶ, ಹಣ, ಕಾರ್ಮಿಕ, ಮಾಲಿಕರ ನಡುವೆ ಸಾಮಾಜಿಕ
ಮತ್ತು ಆರ್ಥಿಕ ತಾರತಮ್ಯ ಉಂಟಾಗಲು ಇಂತಹ ಕ್ರಾಂತಿಗಳು ಕಾರಣವಾಗುವ ಸಂದರ್ಭವನ್ನು
ತಾರ್ಕಿಕವಾಗಿ ಅರ್ಥೈಸಿಕೊಳ್ಳುವರು.
ಜ್ಞಾನ ಪುನರ್ರಚನೆಗಿರುವ ಅವಕಾಶಗಳು
-
ಕ್ರಿ.ಶ. 1453ರ ಕಾನ್ಸ್ಟಾಂಟಿನೋಪಲ್ ಪತನದಿಂದಾಗಿ ಪ್ರಪಂಚದ ಇತಿಹಾಸದ 15 ಮತ್ತು
16ನೇ ಶತಮಾನ ಯೂರೋಪಿನಲ್ಲಿ ಪುನರುಜ್ಜೀವನ, ಭೌಗೋಳಿಕ ಅನ್ವೇಷಣೆ, ಧಾರ್ಮಿಕ
ಸುಧಾರಣೆ, ಕೈಗಾರಿಕಾ ಕ್ರಾಂತಿಗೆ ಕಾರಣವಾದಂತೆಯೇ ಅಂದಿನ ಊಳಿಗಮಾನ್ಯ
ಪದ್ದತಿಯ ಅವನತಿಗೂ ಕಾರಣವಾದುದನ್ನು ಸಾಮ್ರಾಜ್ಯಶಾಹಿ ಧೋರಣೆ ಇಂದಿನ ಘಟನಾವಳಿಗಳೊಂದಿಗೆ ತೌಲನಿಕ ಜ್ಞಾನವನ್ನು ಕಟ್ಟಿಕೊಳ್ಳುವರು.
ಉದಾ : - ಇಂದಿನ ಸಾಮ್ರಾಜ್ಯಶಾಹಿ ದೊರೆಗಳಂತೆ ಕಂಡು ಬರುತ್ತಿರುವ ಬಹುರಾಷ್ಟ್ರೀಯ ಕಂಪನಿಗಳ ಸ್ಥಾಪನೆ
- ಜ್ಞಾನಸ್ಪೋಟದ ಪರಿಣಾಮಗಳು
- ಚಂದ್ರ ಮತ್ತು ಮಂಗಳ, ಗುರು ಗ್ರಹಗಳ ಕುರಿತ ಅನ್ವೇಷಣೆ ಮತ್ತು ಹುಡುಕಾಟ
- ನಗರೀಕರಣ ವ್ಯವಸ್ಥೆ
- ವಿಶ್ವಭ್ರಾತೃತ್ವದ ಪರಿಕಲ್ಪನೆಗಳು
*
ಯೂರೋಪಿನಲ್ಲುಂಟಾದ ಪುನರುಜ್ಜೀವನ ಸಂದರ್ಭವು ಹೆಚ್ಚಾಗಿ ಮಾನವತವಾದ,
ಶ್ರೇಷ್ಠಾನುಕರಣೆಗೆ, ಜನರನ್ನು ತರಲೆತ್ನಿಸಲು ಅಂದಿನ ಸಾಹಿತ್ಯ, ಕಲೆ, ವಾಸ್ತುಶಿಲ್ಪ
ಮತ್ತು ವಿಜ್ಞಾನ ಪ್ರಮುಖ ಪಾತ್ರವನ್ನು ವಹಿಸಿದ ವಿಷಯವನ್ನು ಅರ್ಥೈಸಿಕೊಳ್ಳುವಾಗ
ಮಕ್ಕಳು ಈ 21ನೇ ಶತಮಾನದಲ್ಲಿ ಹಾಗೂ ಈ ಎಲ್ಲ ಬುದ್ಧಿಜೀವಿಗಳ ವಿಜ್ಞಾನ, ಸಾಹಿತ್ಯ
ಕಲೆಯ ಬೆಳವಣಿಗೆಯಲ್ಲಿ ಮಾನವತಾವಾದದ ಕೊರಗುವಿಕೆಗೆ ಕಾರಣಗಳೇನೆಂಬುದನ್ನು ಪ್ರಶ್ನಿಸಿ
ಉದಾಹರಣೆ ಮೂಲಕ ಕಂಡುಕೊಳ್ಳುವರು.
ಉದಾ : - ಷೇಕ್ಸ್ಪಿಯರ್ ವಿರಚಿತ ನಾಟಕಗಳ ಪ್ರಸ್ತುತತೆ
- ಲಿಯೋನಾರ್ಡೋಡ ವಿಂಚಿಯ Lost Supper ಮೊನಲಿಸಾ ಕಲಾಕೃತಿಗಳು.
- ವಿಜ್ಞಾನದ ಆವಿಷ್ಕಾರದಿಂದಾಗಿರುವ, ದಿಕ್ಸೂಚಿ, ಆಸ್ಟ್ರೋಲೋಬ್ ಈಗಿನ ಉಪಗ್ರಹ, ಬಾಂಬ್ ಬಳಕೆ, ಶಸ್ತ್ರಾಸ್ತ್ರಗಳ ತಯಾರಿ ಇತ್ಯಾದಿ.
*
ಜಗತ್ತಿನಲ್ಲಿ ಜ್ಞಾನವೇ ಪ್ರಬಲವಾದುದು. ಈ ಜ್ಞಾನವು ಮಾನವನ ವಿಕಾಸಕ್ಕೆ
ಪೂರಕವಾಗಿರುತ್ತದೆ. ಆದ್ದರಿಂದಲೇ ಯೂರೋಪಿನಲ್ಲಿ ಜ್ಞಾನ ಪುನರುಜ್ಜೀವನ
ಸಂದರ್ಭದಿಂದಾಗಿ ಇಡೀ ವಿಶ್ವದಲ್ಲಿಯೇ ವೈಜ್ಞಾನಿಕ ದೃಷ್ಟಿ ಬೆಳೆಯಿತು. ಸಾಗರ
ಮಾರ್ಗಗಳ ಶೋಧನೆ, ತಂತ್ರಜ್ಞಾನ, ಕೈಗಾರಿಕಾಕ್ರಾಂತಿ ಹೊಸ ಚಿಂತನೆಗಳು, ಧಾರ್ಮಿಕ
ಸುಧಾರಣೆಗಳಿಗೆ ನಾಂದಿಯಾಯಿತು ಎಂಬುದನ್ನು ತಿಳಿದುಕೊಂಡು ತಮ್ಮ ಜೀವನದಲ್ಲಿಯೂ
ಜ್ಞಾನದ ಮಹತ್ವವೇನು. ಇಂತಹ ಜ್ಞಾನವನ್ನು ಕಟ್ಟಿಕೊಳ್ಳಲು ತಮ್ಮ ಪಾತ್ರವೇನು
ಎಂಬುದನ್ನು ಗ್ರಹಿಸಿಕೊಳ್ಳುವರು.
* ಭೂ ಅನ್ವೇಷಣೆಗಳಿಂದಾಗಿ 15 ಮತ್ತು 16ನೇ
ಶತಮಾನದಲ್ಲಿ ಹೊಸ ಖಂಡಗಳಾದ ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ, ಆಸ್ಟ್ರೇಲಿಯಾ
ಮುಂತಾದ ಹೊಸ ಹೊಸ ಪ್ರದೇಶಗಳ ಪರಿಚಯವಾಯಿತು. ಈ ಹಿನ್ನಲೆಯಲ್ಲಿ ಸಾಹಸಮಯ
ಪ್ರವೃತ್ತಿಯಿಂದ
ಮನುಷ್ಯನು ಕಂಡು ಹಿಡಿದ ಹೊಸ ಖಂಡಗಳ ಪರಿಚಯವನ್ನು ಮಕ್ಕಳು
ಮಾಡಿಕೊಳ್ಳುವುದರೊಂದಿಗೆ ತಮ್ಮ ಜೀವನದಲ್ಲಿ ಸಾಹಸ ಹಾಗೂ ಸಂಶೋಧನಾತ್ಮಕ ಗುಣಗಳನ್ನು
ತಮ್ಮದಾಗಿಸಿಕೊಳ್ಳುವರು.
* ಭೂ ಶೋಧನೆಗಳಿಂದಾಗಿ, ವಸಾಹತುಶಾಹಿ ಮತ್ತು
ಸಾಮ್ರಾಜ್ಯಶಾಹಿ ಬೆಳವಣಿಗೆಗಳು ಅಸ್ತಿತ್ವಕ್ಕೆ ಬಂದು ಮುಂದೆ ಮಾನವ ಸಹಜ
ಸ್ವಾತಂತ್ರ್ಯವನ್ನು ಕಳೆದುಕೊಂಡಂತಾಗಿ ಶ್ರೀಮಂತ ಹಾಗೂ ಬಡ ರಾಷ್ಟ್ರಗಳೆಂಬ ವೈಷಮ್ಯ,
ತಾರತಮ್ಯ ಉಂಟಾಗಿ ಇಂದಿನ
ಜಗತ್ತಿನ ಸ್ಥಿತಿಗೆ ಕಾರಣವಾಯಿತೆಂಬುದನ್ನು ತಿಳಿದುಕೊಂಡು ಸಾಮ್ರಾಜ್ಯಶಾಹಿ ಧೋರಣೆಯನ್ನು ಖಂಡಿಸುವರು.
*
ಚರ್ಚ್ನ ಏಕಸ್ವಾಮ್ಯವನ್ನು ಪ್ರಶ್ನಿಸುತ್ತಾ ಹುಟ್ಟಿಕೊಂಡ ಮತಸುಧಾರಣೆ ಮಾರ್ಟಿನ್
ಲೂಥರ್ನ ನೇತೃತ್ವದಲ್ಲಿ ಧಾರ್ಮಿಕ ವಿಚಾರಗಳ ಬಗ್ಗೆ ಹೊಸಯುಗದ ಉದಯಕ್ಕೆ
ಕಾರಣವಾದುದನ್ನು ತಿಳಿದುಕೊಂಡ ಮಕ್ಕಳು ತಮ್ಮ ಅಂತರಾಳದಲ್ಲಿ ವೈಜ್ಞಾನಿಕ ದೃಷ್ಟಿ
ಕುತೂಹಲ ಸಮಾನತೆಯ ಅಂಶಗಳೆಂಬ ಮೌಲ್ಯಗಳನ್ನು ಗ್ರಹಿಸುವರು.
* ಯೂರೋಪಿನಲ್ಲಿ
ಸುಮಾರು 30 ವರ್ಷಗಳ ಕಾಲ ಕ್ಯಾಥೋಲಿಕ್ ಮತ್ತು ಪ್ರಾಟಿಸ್ಟಂಟರ ನಡುವೆ ನಡೆದ
ಧಾರ್ಮಿಕ ಕಲಹ ದ್ವೇಶ, ಹೋರಾಟ, ಕಿರುಕುಳ, ಅಂಧಕಾರತ್ವಕ್ಕೆ ಕಾರಣವಾಗಿ, ಜನರಲ್ಲಿನ
ಧಾರ್ಮಿಕ ಮನಸ್ಸುಗಳ ಅಶಾಂತಿಗೆ ನಾಂದಿಯಾಗಿ ಪ್ರಗತಿ ಶೂನ್ಯವಾಗುತ್ತದೆ. ಈ ರೂಪದ
ಘಟನೆಗಳು ಬಹುಮತೀಯ ರಾಷ್ಟ್ರವಾಗಿರುವ ನಮ್ಮ ಭಾರತದಲ್ಲಿ ಬಹು ಹಿಂದಿನಿಂದಲೂ
ನಡೆದುಕೊಂಡು ಬಂದಿದ್ದು ಅಂತಹ ಘಟನೆಗಳು ಮರುಕಳಿಸದಂತೆ ತಡೆಯಲು ತಮ್ಮ ಜವಾಬ್ದಾರಿ
ಏನೆಂಬ ಜ್ಞಾನವನ್ನು ಕಟ್ಟುಕೊಳ್ಳುವರು.
ಉದಾ : ಸಿಕ್ ನರಮೇಧ ಗೋದ್ರಾ ನರಮೇಧ, ಕ್ರೈಸ್ತರ ಚರ್ಚ್ಗಳ ಮೇಲಿನ ದಾಳಿ.
*
ಬಹು ಸೂಕ್ಷ್ಮವೆನಿಸಿಕೊಂಡಿರುವ ಧಾರ್ಮಿಕ ಅಪಮಾನತೆಗಳು, ಸಮಾಜದ ಏಕತೆಗೆ ಕುಂದುಂಟು
ಮಾಡಿ, ಧಾರ್ಮಿಕ ಘಟನೆಗಳಿಗೆ ಕಾರಣವಾದ ಕ್ಯಾಥೋಲಿಕ್, ಪ್ರಾಟಿಸ್ಟಂಟ್ ಮತ್ತು
ಆರ್ಥೊಡಾಕ್ಸ್ ಚರ್ಚ್ಗಳು ಹುಟ್ಟಿಕೊಂಡ ಈ ಘಟನೆ ಭಾರತದಂತಹ ರಾಷ್ಟ್ರಗಳಲ್ಲಿ ಇಲ್ಲಿನ
ಅಖಂಡತೆಯನ್ನು ಎತ್ತಿಹಿಡಿಯುವ ಬದಲಾಗಿ ಇತ್ತೀಚೆಗೆ ಹಿಂದುಗಳೇ ಹಿಂದು ಧರ್ಮದಲ್ಲಿನ
ಆಚರಣೆಗಳನ್ನು ಅನುಸರಿಸಲಾರದೆ ಮೇಲ್ಜಾತಿಯವರ ಕಪಿಮುಷ್ಟಿಯಿಂದ ಬಿಡಿಸಿಕೊಳ್ಳಲಾಗದೆ
ಹಿಂದೂ ಧರ್ಮದಿಂದಲೇ ಮತಾಂತರಗೊಳ್ಳುವುದಕ್ಕೆ ಕಾರಣವೇನೆಂಬ
ಜ್ಞಾನವನ್ನು ತಿಳಿದುಕೊಳ್ಳುವರು.
*
ಚರ್ಚಿನ ವಿಘಟನೆಯಿಂದ ಕ್ಯಾಥೋಲಿಕ್ ತಮ್ಮ ಪ್ರಭಾಲ್ಯವನ್ನು ಕಳೆದುಕೊಳ್ಳತೊಡಗಿದಾಗ,
ಇಗ್ನೇಷಿಯಸ್ ಲಯೋಲ ಎಂಬಾತನ ನೇತೃತ್ವದಲ್ಲಿ 'ಜೀಸಸ್' ಎಂಬ ಸೊಸೈಟಿ ಹುಟ್ಟಿಕೊಂಡು
ಕ್ಯಾಥೋಲಿಕ್ ಚರ್ಚ್ನ ಕಳೆದು ಹೋದ ವೈಭವವನ್ನು ಮರಳಿ ಸ್ಥಾಪಿಸಲು ಯತ್ನಿಸಿದ
ಸಂದರ್ಭದಿಂದ ಮಕ್ಕಳು ಮಾನವನ ಪಾರಂಪರಿಕ ಮನಸ್ಸು ತನ್ನ ಮೂಲ ನೆಲೆಯನ್ನು
ಕಂಡುಕೊಳ್ಳಲು ಏನೆಲ್ಲಾ ಪ್ರಯತ್ನ/ಹೋರಾಟವನ್ನು ಇನ್ನಿಲ್ಲದಂತೆ ಮಾಡಬೇಕಾಗುತ್ತದೆ.
ಹಾಗಾದ ಹೊಸದೊಂದನ್ನು ದಿಕ್ಕರಿಸಲು ಹವಣಿಸುವ ಹುನ್ನಾರದ ಮನಸ್ಥಿತಿಯನ್ನು
ಅರ್ಥೈಸಿಕೊಂಡು ಪ್ರಸ್ತುತ ಸಂದರ್ಭದಲ್ಲಿಯೂ ಕೆಲವು ಧರ್ಮಗಳ ಕಠಿಣವಾದ ಆಚರಣೆಗಳೇ ಈ
ರೂಪದ ವಿಘಟನೆಗಳಿಗೆ ಹೇಗೆ ಕಾರಣವಾಗುತ್ತಿದೆ ಎಂಬುದನ್ನು ಹೋಲಿಸುವ ಸಾಮಥ್ರ್ಯದ
ಜ್ಞಾನವನ್ನು ಕಟ್ಟುಕೊಳ್ಳುವರು.
ಉದಾ : ದಯಾನಂದ ಸರಸ್ವತಿಯವರ 'ವೇದಗಳಿಗೆ ಹಿಂತಿರುಗಿ' ಘೋಷಣೆ.
*
18ನೇ ಶತಮಾನದ ವಸಾಹತುಗಳ ಸ್ಥಾಪನೆ, ಕೈಗಾರಿಕಾ ಕ್ರಾಂತಿಯಂತಹ ಘಟನೆಗೆ ಕಾರಣವಾಗಿ
ವೈಜ್ಞಾನಿಕ ಸಿದ್ಧ ವಸ್ತುಗಳ ಬೇಡಿಕೆ. ಪೂರೈಕೆಗಳಿಂದಾಗಿ ಗುಡಿ ಕೈಗಾರಿಕೆಗಳು ಅವನತಿಯ
ಹಾದಿ ಹಿಡಿದ ಸಂದರ್ಭವನ್ನು ಗ್ರಹಿಸಿದ ಮಕ್ಕಳು ಗೃಹ ಕೈಗಾರಿಕೆಗಳ
ವಿನಾಶವನ್ನು ಪಡೆಯುವಲ್ಲಿ ನಮ್ಮ ಮುಂದಿನ ಸವಾಲುಗಳೇನೆಂಬ ಜ್ಞಾನವನ್ನು ಕಟ್ಟುಕೊಳ್ಳುವರು.
*
ಇತ್ತೀಚೆಗೆ ಜಗತ್ತಿನಾದ್ಯಂತ ಸ್ಥಾಪನೆಯಾಗುತ್ತಿರುವ ಬೃಹತ್ ಕೈಗಾರಿಕೆಗಳಿಂದ
ನಿರಂತರವಾಗಿ ಬಂಡವಾಳಶಾಹಿ ವರ್ಗವು ಉದಯವಾಗುತ್ತಲಿದ್ದು, ಅನೇಕ ರೀತಿಯ ವರ್ಗ
ಸಂಘರ್ಷಗಳುಂಟಾಗುವುದಲ್ಲದೆ ಪರಿಸರ ಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ ಇನ್ನಿತರ
ರೋಗರುಜಿನಗಳಿಗೆ ಕಾರಣವಾಗಿ ಗುಡಿಕೈಗಾರಿಕೆಗಳು ಕಳೆಗುಂದಿರುವ ಹಿನ್ನಲೆಯಲ್ಲಿ
ವೈಜ್ಞಾನಿಕ ಆವಿಷ್ಕಾರದ ಯಂತ್ರಬಳಕೆಯ ಈ ಬೃಹತ್ ಕೈಗಾರಿಕೆಗಳನ್ನು ಹಾಗೂ ಅವುಗಳ
ಸ್ಥಾಪನೆಯನ್ನು ಮಕ್ಕಳು ಪ್ರತಿರೋಧ ವ್ಯಕ್ತಪಡಿಸುವ ಸಾಮಥ್ರ್ಯ ಕಲ್ಪಿಸಿಕೊಳ್ಳುವರು.
ನಿರಂತರ ಮತ್ತು ವ್ಯಾಪಕ ಮೌಲ್ಯ ಮಾಪನಕ್ಕಿರುವ ಅವಕಾಶಗಳು
* ಪ್ರಶ್ನಾವಳಿಗಳ ಮೂಲಕ ಪುನರುಜ್ಜೀವನ, ಭೌಗೋಳಿಕ ಅನ್ವೇಷಣೆ, ಧಾರ್ಮಿಕ ಸುಧಾರಣೆ ಹಾಗೂ ಕೈಗಾರಿಕಾ ಕ್ರಾಂತಿಗಳಿಗೆ ಕಾರಣಗಳನ್ನು ಪಟ್ಟಿ ಮಾಡುವುದು.
* ಚಿತ್ರಪಟಗಳನ್ನು ಪ್ರದರ್ಶಿಸುವುದರ ಮೂಲಕ ಜ್ಞಾನವನ್ನು ಸಂಗ್ರಹಿಸುವುದು.
* ಕ್ಯಾಥೋಲಿಕ್ ಮತ್ತು ಪ್ರಾಟಿಸ್ಟಂಟ್ ಚರ್ಚ್ಗಳ ಧೋರಣೆಯನ್ನು ಗುಂಪುಗಳ ಮೂಲಕ ಚರ್ಚಿಸುವುದು.
* ಪುನರುಜ್ಜೀವನ ಕಾಲದ ಸಾಹಿತ್ಯ, ಕಲೆ ಮತ್ತು ವಿಜ್ಞಾನಗಳನ್ನು ಕುರಿತು ಲಿಖಿತ ಪರೀಕ್ಷೆ ಆಯೋಜಿಸುವುದು.
(ಸೂಚನೆ : ಮಕ್ಕಳಿಗೆ ಪುಸ್ತಕನೀಡಿ ಓದಲು ಸೂಚಿಸುವುದು)
*
ಕೈಗಾರಿಕಾ ಕ್ರಾಂತಿಗೆ ಸಂಬಂಧಿಸಿದಂತೆ ಮೌಖಿಕ ಪರೀಕ್ಷೆಯ ಪ್ರಶ್ನೆಗಳನ್ನು ಜ್ಞಾನ
ಪುನರ್ರಚನೆಗೆ ಸಂಬಂಧಿಸಿದ ಪ್ರಶ್ನೆ ಕೋಠಿಯನ್ನು ತಯಾರಿಸಿಕೊಳ್ಳುವುದು.
ಉದಾ : ಬೃಹತ್ ಕೈಗಾರಿಕೆಗಳನ್ನು ಪ್ರತಿರೋಧಿಸಲು ಕಾರಣಗಳೇನೆಂಬುದನ್ನು ಮಕ್ಕಳಿಂದ ಹೇಳಿಸುವುದು.
* ಮಿಂಚು ಪಟ್ಟಿಗಳ ಬಳಕೆಯ ಮೂಲಕ ಮಕ್ಕಳು ಕಟ್ಟಿಕೊಂಡ ಜ್ಞಾನವನ್ನು ಪರೀಕ್ಷಿಸುವುದು.
ಉದಾ : ಮಾರ್ಟಿನ್ ಲೂಥರ್ - ಮತಸುಧಾರಣೆ
ಇಗ್ನೇಶಿಯಸ್ ಲಯೋಲ - ಪ್ರತಿ ಸುಧಾರಣೆ
* ಹೊಂದಿಸಿ ಬರೆಯುವ ವಿಧಾನ
ಉದಾ : ಲೇಖಕರ ಪಟ್ಟಿ - ಕೃತಿಗಳ ಪಟ್ಟಿ
* ವೀಕ್ಷಣಾ ವಿಧಾನ
- ಮಕ್ಕಳೊಂದಿಗೆ ಚರ್ಚ್ಗಳಿಗೆ ಭೇಟಿ ನೀಡುವುದು.
ಈ ಮೂಲಕ ಪ್ರಾಟಿಸ್ಟಂಟ್ ಮತ್ತು ಕ್ಯಾಥೋಲಿಕ್ ಚರ್ಚ್ ನಡುವಿನ ವ್ಯತ್ಯಾಸ ಗ್ರಹಿಸುವುದು.
* ನಕ್ಷೆ ಮತ್ತು ಭೂಪಟಗಳನ್ನು ಬಳಸಿ ಪ್ರದೇಶಗಳನ್ನು ಗುರುತಿಸುವುದು.
ಉದಾ : ಇಟಲಿ, ಇಂಗ್ಲೆಂಡ್ ಗುಡ್ಹೋಪ್ ಭೂಶಿರ, ಅರಬ್ಬೀ ಸಮುದ್ರ. ಪನಾಮ ಕಾಲುವೆ ಇತ್ಯಾದಿ.
* ಪಠ್ಯಪುಸ್ತಕದ ಪೂರ್ಣ ಘಟಕಾವಲೋಕನ ಕ್ರಮ
* ಭೌಗೋಳಿಕ ಅನ್ವೇಷಣೆಯನ್ನು ಕುರಿತ ಯೋಜನೆಯನ್ನು ತಯಾರಿಸುವುದು.
* ತರಗತಿಯಲ್ಲಿ ಸರ್ವ ಧರ್ಮ ಸಮನ್ವಯ ಬಿಂಬಿಸುವಂತಹ ಕಥೆ, ನಾಟಕ, ಘಟನೆಗಳನ್ನು ಸಂಗ್ರಹಿಸುವುದು.
ಉದಾ : - ಸುದ್ಧಿ ಮಾಧ್ಯಮಗಳ ಮೂಲಗಳಿಂದ ಮಗು ತನ್ನ ಸುತ್ತ ನಡೆದ ಈ ತರದ ಘಟನೆಗಳನ್ನು ತರಗತಿಯಲ್ಲಿ ಹೇಳುವುದು.
- ಚಿತ್ರಪಟಗಳ ರಚನೆ
- ಚರ್ಚಾಸ್ಪರ್ಧೆ
- ಆಶುಭಾಷಣ ಸ್ಪರ್ಧೆ ಏರ್ಪಾಟು ಮಾಡುವುದು.
ಕಲಿಕೆಯನ್ನು ಅನುಕೂಲಿಸುವ ವಿಧಾನಗಳು
*
ಪ್ರಶ್ನೋತ್ತರ ವಿಧಾನ : ಮಕ್ಕಳಿಗೆ ಘಟಕವನ್ನು ಅವಲೋಕನ ಮಾಡಲು ಮೊದಲೇ ಸೂಚಿಸಿ
ತರಗತಿಯ ಸಂದರ್ಭದಲ್ಲಿ ಪ್ರಶ್ನೆಗಳನ್ನು ಮಕ್ಕಳ ಸಾಮಥ್ರ್ಯಕ್ಕನುಗುಣವಾಗಿ ಕೇಳಿ
ಉತ್ತರಗಳನ್ನು ಪಡೆದುಕೊಳ್ಳುತ್ತಾ ಘಟಕದ ಬಗ್ಗೆ ಕುತೂಹಲ ಮೂಡುವಂತೆ ಮಾಡುವುದು.
ಉದಾ : ಭೌಗೋಳಿಕ ಸಂಶೋಧನೆಗಳು (ಘಟಕ) ಪ್ರಶ್ನಿಸಿ ಅಮೇರಿಕಾ ಎಂದು ಹೆಸರು ಬರಲು ಕಾರಣವೇನು?
*
ಸಮಸ್ಯಾ ಪರಿಹಾರ ವಿಧಾನ : ಪ್ರಸ್ತುತ ಸಮಸ್ಯೆಗಳನ್ನು ಎತ್ತಿಹಿಡಿದು ತಾವು
ಕಲಿಯುತ್ತಿರುವ ಘಟಕದ ಹಿನ್ನಲೆಯಲ್ಲಿ ಪರಿಹಾರ ಕಂಡುಕೊಳ್ಳುವಂತಹ ವಿಧಾನವನ್ನು
ಅನುಕೂಲಿಸುವುದು.
ಉದಾ : ಘಟಕ (ಕೈಗಾರಿಕಾ ಕ್ರಾಂತಿ)
ಸಮಸ್ಯೆ : ಪರಿಸರ ಮಾಲಿನ್ಯ
ಪರಿಹಾರ : ಗೃಹ ಕೈಗಾರಿಕೆ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ
ಸಮಸ್ಯೆ : ನಗರೀಕರಣ
ಪರಿಹಾರ : ಕೈಗಾರಿಕಾ ವಿಕೇಂದ್ರೀಕರಣ
* ವಿಶ್ಲೇಷಣಾ ವಿಧಾನ : ಘಟಕಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಜ್ಞಾನವನ್ನು ಮಕ್ಕಳಿಗೆ ಪೂರೈಸುವುದು.
ಉದಾ
: ಕೆಪ್ಲರ್ ನಿಯಮ ನ್ಯೂಟನ್ ನಿಯಮದ ಜೊತೆಗೆ ಶರೀರ ಶಾಸ್ತ್ರ ವಿಚಾರಗಳು,
ಕೊಪರ್ನಿಕಸ್,ಟಾಲ್ಸ್ಟಾಯ್, ಥಾಮಸ್ ಅಲ್ವ ಎಡಿಸನ್ ವಿಚಾರಗಳನ್ನು
ಪ್ರಸ್ತುತಪಡಿಸುವುದು.
* ಚರ್ಚಾ ವಿಧಾನ : ತರಗತಿಗಳಲ್ಲಿ ಗುಂಪುಗಳನ್ನು ಮಾಡಿ ಒಂದೊಂದು ಗುಂಪಿಗೂ ಒಂದು ಅಂಶವನ್ನು ಚರ್ಚಿಸಲು ತಿಳಿಸುವುದು.
ಉದಾ : ಜ್ಞಾನ ಪುನರುಜ್ಜೀವನ
ಧಾರ್ಮಿಕ ಸುಧಾರಣೆ
ಪ್ರತಿ ಸುಧಾರಣೆ.
ಸಂಪನ್ಮೂಲಗಳ ಕ್ರೂಢೀಕರಣ
- 9ನೇ ತರಗತಿ ಪಠ್ಯ ಪುಸ್ತಕ
- ಯೂರೋಪಿನ ಇತಿಹಾಸ ಟಿ. ಪಾಲಾಕ್ಷ, ಅಕಬರಾಲಿ
- ಚಿತ್ರದಲ್ಲಿ ಚರಿತ್ರೆ
- ಅಂತರ್ಜಾಲ
- ವಿಶ್ವಕೋಶಗಳು
- ಪಿ.ಪಿ.ಟಿ. ತಯಾರಿಕೆ
- ವಿಜ್ಞಾನಿ, ಸಾಹಿತ್ಯ, ಕಲಾವಿದರುಗಳು, ಚರ್ಚ್ ಮಾದರಿ ಚಿತ್ರ ಸಂಪುಟ
- ಪ್ರಶ್ನಾವಳಿಗಳ ತಯಾರಿಕೆ ಉದಾ : ಮೌಖಿಕ ಪರೀಕ್ಷೆ
- ಸಮಸ್ಯೆಗಳನ್ನು ಗುರುತಿಸಿರುವ ಮಿಂಚುಪಟ್ಟಿ
- ತರಗತಿಯಲ್ಲಿ ಗುಂಪು ರಚನೆ
ಬೋಧನೋಪಕರಣಗಳು
- ಪ್ರಪಂಚದ ಭೂಪಟ
- ಯೂರೋಪ್ ಖಂಡದ ಭೂಪಟ
- ವಿಜ್ಞಾನಿ ಮತ್ತು ಬರಹಗಾರರ ಚಿತ್ರಪಟಗಳು
- ಪರಿಸರ ಮಾಲಿನ್ಯ ತೋರಿಸುವ ಅಂತಜರ್ಾಲ ಚಿತ್ರಗಳು
- ಮೊನಲಿಸಾ ಚಿತ್ರಪಟ
- ಮಿಂಚು ಪಟ್ಟಿಗಳು
- ಹೋಲಿಕೆ ವ್ಯತ್ಯಾಸಗಳ ಪಟ್ಟಿ
- ಗುರುತ್ವಾಕರ್ಷಣ ನಿಯಮದ ಚಿತ್ರ
- ಹಡಗಿನ ಚಿತ್ರ
- ದಿಕ್ಸೂಚಿ ಮತ್ತು ಆಸ್ಟ್ರೋಲ್ಯಾಬ್ ಮಾದರಿಗಳು
ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು
- ಜ್ಞಾನ ಪುನರುಜ್ಜೀವನ ಅರ್ಥ ಮತ್ತು ಪ್ರಾಮುಖ್ಯತೆ
- ಪುನರುಜ್ಜೀವನಕ್ಕೆ ಕಾರಣವಾದ ಅಂಶಗಳು
- ಧಾರ್ಮಿಕ ಅಸಮತೋಲನದಿಂದಾಗುವ ಪರಿಣಾಮಗಳು
- ಭೌಗೋಳಿಕ ಸಂಶೋಧನೆಗೆ ಕಾರಣಗಳು
- ಭೂ ಶೋಧನೆ ಪರಿಣಾಮಗಳು
- ವಸಾಹತುಶಾಹಿ ಮತ್ತು ಸಾಮ್ರಾಜ್ಯ ಶಾಹಿ ಸ್ಥಾಪನೆಗೆ ಕಾರಣ ಪರಿಣಾಮಗಳು.
- ವೈಜ್ಞಾನಿಕ ಸಂಶೋಧನೆ ಮತ್ತು ಪರಿಣಾಮಗಳು.
- ಕೈಗಾರಿಕಾ ಕ್ರಾಂತಿ ಮತ್ತು ನಗರೀಕರಣ
- ಗುಡಿ ಕೈಗಾರಿಕೆಗಳ ಪ್ರಾಮುಖ್ಯತೆ.
- ಗುಡಿ ಕೈಗಾರಿಕೆಗಳ ವಿನಾಶಕ್ಕೆ ಕಾರಣಗಳು
- ಸಮಾಜದ ವರ್ಗ ವ್ಯವಸ್ಥೆಗೆ ಕಾರಣಗಳು
- ಚರ್ಚ್ ಏಕಸ್ವಾಮ್ಯದ ವಿರುದ್ಧದ ನಿಲವುಗಳು
- ಸಾಮ್ರಾಜ್ಯಶಾಹಿ ಧೋರಣೆಯ ವಿರುದ್ಧದ ನಿಲುವುಗಳು.
No comments:
Post a Comment