ಭಾರತದ ಮತ ಪ್ರವರ್ತಕರು
ಜ್ಞಾನ ರಚನೆಗೆ ಇರುವ ಅವಕಾಶಗಳು :
- ಭಾರತದ ಮತ ಪ್ರವರ್ತಕರುಗಳ ಪರಿಚಯ
- ಮತ ಪ್ರವರ್ತಕರುಗಳು ಪ್ರತಿಪಾದಿಸಿದ ತತ್ವಗಳು
- ಭಾರತದ ಮತ ಪ್ರವರ್ತಕರ ಬೋಧನೆಗಳು
- ಶಂಕರಾಚಾರ್ಯರ ಜೀವನ ಮತ್ತು ಆದರ್ಶಗಳು
- ಮಧ್ವಾಚಾರ್ಯರ ಜೀವನ ಮತ್ತು ಬೋಧನೆಗಳು
- ರಾಮಾನುಜಾಚಾರ್ಯರ ಹುಟ್ಟು ಮತ್ತು ಚಿಂತನೆಗಳು
- ಬಸವಣ್ಣನವರ ಬದುಕು, ಬರಹ, ಆಡಳಿತ ಮತ್ತು ಆಚರಣೆಗಳು.
- ಮತ ಪ್ರವರ್ತಕರು ಪ್ರತಿಪಾದಿಸಿದ ಸಿದ್ಧಾಂತಗಳು
ವಿಮರ್ಶಾಯುಕ್ತ ಶಿಕ್ಷಣ ಕ್ರಮ ಅಳವಡಿಕೆಗೆ ಇರುವ ಅವಕಾಶಗಳು :
- ಭಾರತದಲ್ಲಿ 9 ರಿಂದ 14ನೇ ಶತಮಾನದಲ್ಲಿ ಆದಂತಹ ವೈಚಾರಿಕ ಆಂದೋಲ ಸನಾತನ ಧರ್ಮದೊಳಗಿನ ಜಾತಿ, ಸಂಪ್ರದಾಯ ಮತ್ತು ದರ್ಶನಗಳನ್ನು ಅರ್ಥೈಸಿಕೊಂಡ ಹಿನ್ನಲೆಯಲ್ಲಿ ಹುಟ್ಟಿಕೊಂಡ ಭಾವನೆಗಳೇಂಬುದನ್ನು ವಿಮರ್ಶಾಯುಕ್ತವಾಗಿ ವ್ಯಾಖ್ಯಾನಿಸುವುದು.
- ಭಾರತೀಯ ಧಾರ್ಮಿಕ ಕ್ಷೇತ್ರದಲ್ಲಿನ ತತ್ವ ಸಂಪತ್ತು, ಅಭಿವ್ಯಕ್ತಿ, ಸ್ವಾತಂತ್ರ್ಯ ಹಾಗೂ ಧಾರ್ಮಿಕ ಸುಧಾರಣೆಯ ಆಂದೋಲನಗಳು ಧರ್ಮ ಸುಧಾರಕರ ವೈವಿಧ್ಯಮಯ ದೃಷ್ಟಿಕೋನಗಳಿಂದ ಹೊಸ ಪಂಥವಾದ ಭಕ್ತಿ ಚಳುವಳಿ ಉದಯವಾಗಲು ಕಾರಣವಾದ
ಸನ್ನಿವೇಶಗಳನ್ನು ಅರ್ಥೈಸಿಕೊಳ್ಳುವರು.
- ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದ ಶಂಕರಾಚಾರ್ಯರು 'ಈ ಜಗತ್ತಿಗೆ ಬ್ರಹ್ಮನೊಬ್ಬನೇ ಸತ್ಯ, ಉಳದದ್ದು ಮಿತ್ಯ. ಜೀವನು ಮತ್ತು ಬ್ರಹ್ಮನು ಬೇರೆಯಲ್ಲ' ಎಂಬ ನಿರೂಪಣೆಯನ್ನು ತಮ್ಮ ಆಳವಾದ ಆಧ್ಯಯನದ ಮೂಲಕ ಪ್ರತಿಪಾದಿಸಿದುದನ್ನು ಜ್ಞಾನ ಮಾರ್ಗದ ಬೋಧನೆಗಳ ಅಡಿಯಲ್ಲಿ ಅರ್ಥೈಸಿಕೊಳ್ಳುವರು.
- ಜನಸಾಮಾನ್ಯರಿಗೆ ಮುಕ್ತಿ ಮಾರ್ಗವನ್ನು ತೋರಿಸುವ ಹಿನ್ನಲೆಯಲ್ಲಿ ಮುಂದೆ ಬಂದ ರಾಮಾನುಜಾಚಾರ್ಯರು ಭಕ್ತಿ ತತ್ವಕ್ಕೆ ಪ್ರಾಧಾನ್ಯತೆ ನೀಡುವುದರೊಂದಿಗೆ, ಜೀವ ಮತ್ತು ಪ್ರಕೃತಿ ಬ್ರಹ್ಮನ ಅಧೀನ, ಇದರಿಂದ ಆತ್ಮ, ಪರಮಾತ್ಮ ಏಕಕಾಲದಲ್ಲಿ ಒಂದಾಗಲು
ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿ ಜಾತಿ ಪದ್ಧತಿಯನ್ನು ಖಂಡಿಸುತ್ತಾ ಭಗವಂತನಿಗೆ ಶರಣಾಗತಿಯೆ ಮೋಕ್ಷ ಪಡೆಯುವ ಮಾರ್ಗ ಎನ್ನುವ ರಾಮಾನುಜಾಚಾರ್ಯರ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಮುಕ್ತಿಮಾರ್ಗದ ಚೌಕಟ್ಟಿನಲ್ಲಿ ಗ್ರಹಿಸುವರು.
- ದ್ವೈತ ಸಿದ್ಧಾಂತವನ್ನು ಪ್ರತಿಪಾದನೆ ಮಾಡಿದ ಮಧ್ವಾಚಾರ್ಯರು ತಮ್ಮ ಆಳವಾದ ಧರ್ಮಶಾಸ್ತ್ರಗಳ ಅಧ್ಯಯನದ ಜ್ಞಾನದಿಂದಾಗಿ ಸ್ವತಂತ್ರ ವಿಚಾರ ಶಕ್ತಿಯನ್ನು ಬಳಸಿಕೊಂಡು, 'ಜೀವ' ಮತ್ತು 'ಪರಮಾತ್ಮ' ಬೇರೆ ಬೇರೆ, ಈ ಜಗತ್ತು ಯಾವತ್ತೂ ಮಾಯೆಯಲ್ಲ ಅದು ಪರಮಾತ್ಮನಷ್ಟೆ ಸತ್ಯ. ಇಲ್ಲಿನ ಈಶ್ವರ ಮಾತ್ರ ಸ್ವತಂತ್ರ್ಯ, ಪರಮಾತ್ಮ ಹಾಗೂ ಜೀವಿಗಳ ಸಂಬಂಧ ಸ್ವಾಮಿ-ಸೇವಕ ಹಿನ್ನಲೆಯಲ್ಲಿ ಹುಟ್ಟಿಕೊಂಡವು ಎಂಬ ಹೊಸ ಸಿದ್ಧಾಂತವನ್ನು ಪ್ರತಿಪಾದಿಸಿ ನಾರಾಯಣನನ್ನು ಭಕ್ತಿಯಿಂದ ಪೂಜಿಸುವುದರಿಂದ ಮಾತ್ರ ಮುಕ್ತಿ ಸಾಧ್ಯ'' ಎಂಬ ಪರಿಕಲ್ಪನೆಯನ್ನು ಮಧ್ವಾಚಾರ್ಯರ ಜೀವನ ಮತ್ತು ಬೋಧನೆಗಳ ಹಿನ್ನಲೆಯಲ್ಲಿ ತಿಳಿಯುವರು.
- 'ಕಾಯಕ' ತತ್ವವನ್ನು ಪ್ರತಿಪಾದಿಸಿದ ಜಗಜ್ಯೋತಿ ಬಸವಣ್ಣನವರು ಕಾಯಕವೇ ಕೈಲಾಸ ಎಂಬ ತತ್ವದ ಅಡಿಗಲ್ಲಿನ ಮೇಲೆ ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿ, ಶಿವಭಕ್ತನೇ ಶರಣ ಶರಣನಾದವನು ಜಾತಿ ಬೇಧವನ್ನು ಮಾಡಬಾರದು, ಪರಿಶುದ್ಧ
ಭಕ್ತಿಯೇ ಶಿವನನ್ನು ಸೇರುವ ನಿಜವಾದ ಮಾರ್ಗ ಹಾಗೂ ಪ್ರತಿಯೊಬ್ಬರೂ ದುಡಿದು ತಿನ್ನಬೇಕು. ವೃತ್ತಿಗಳಲ್ಲಿ ಹಿರಿದು - ಕಿರಿದು ಎಂಬ ಭೇದವಿಲ್ಲ ಎನ್ನುವ ಹಿನ್ನಲೆಯಲ್ಲಿ ದುಡಿಮೆ ಸಂಸ್ಕೃತಿಯನ್ನು ಬೆಳೆಸಿದ ರೀತಿಯನ್ನು ಗ್ರಹಿಸಿಕೊಂಡು ಜಾತಿ, ಮತ, ಲಿಂಗ ಭೇದ ಎಣಿಸದೆ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಮಸ್ಯೆಗಳನ್ನು ಕುರಿತು ಚರ್ಚಿಸುವ ಹಾಗೂ ಸರ್ವರಿಗೂ ಸಮಾನತೆಯ ಅವಕಾಶ ಕಲ್ಪಿಸುತ್ತಿದ್ದ ಅನುಭವಮಂಟಪ ಎಂಬ ವಿಚಾರ ವೇದಿಕೆಯ ಪ್ರಾಮುಖ್ಯತೆಯನ್ನು ಮತ್ತು ಪರಿಶುದ್ಧ ಜೀವನಕ್ಕೆ ಬಸವಣ್ಣನವರ ಸಂದೇಶವೇನೆಂಬುದನ್ನು ತಿಳಿದುಕೊಳ್ಳುವರು.
ಜ್ಞಾನದ ಪುನರ್ರಚನೆಗೆ ಇರುವ ಅವಕಾಶಗಳು :
- ಭಾರತದ ಸಂದರ್ಭದಲ್ಲಿ 9 ರಿಂದ 14ನೇ ಶತಮಾನದ ಅವಧಿಯಲ್ಲಾದ ಧಾರ್ಮಿಕ ಸುಧಾರಣೆಗಳು ಪ್ರಬಲವಾಗಿ ಅನುಷ್ಠಾನಗೊಂಡರೂ, ಪ್ರಸ್ತುತ ಕಾಲಘಟ್ಟದಲ್ಲಿ ಇನ್ನೂ ಜಾತಿ, ಲಿಂಗ ವರ್ಗ ತಾರತಮ್ಯದ ಕರಿ ನೆರಳು ಹಾಗೆ ಇರುವುದನ್ನು ಗ್ರಹಿಸಿಕೊಂಡ ಮಕ್ಕಳು, ಧಾರ್ಮಿಕ ಕ್ಷೇತ್ರದೊಳಗಣ ತತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮಾನತೆಯ ಪರಿಕಲ್ಪನೆಯ ಸಮಾಜಮುಖಿ ಚಾಲನೆಯನ್ನು ಜನಮಾನಸದಲ್ಲಿ ತುಂಬಿಕೊಳ್ಳಲು ಮಕ್ಕಳು ತಮ್ಮ ಜವಾಬ್ದಾರಿಗಳೇನೆಂಬ ವೈಚಾರಿಕ ಜ್ಞಾನವನ್ನು ಕಟ್ಟಿಕೊಳ್ಳುವರು.
- ಮನುಷ್ಯನ ಮೋಕ್ಷ ಸಾಧನೆಗೆ ಜ್ಞಾನಮಾರ್ಗವನ್ನು ಬೋಧಿಸಿದ ಶಂಕರಾಚಾರ್ಯರ ತತ್ವನಿಷ್ಠೆಯನ್ನು ಅರ್ಥೈಸಿಕೊಂಡ ಮಕ್ಕಳು ಜಗತ್ತಿನಲ್ಲಿ ಸತ್ಯವೇ ಶ್ರೇಷ್ಠ ಈ ಸತ್ಯ ಬ್ರಹ್ಮನೊಡನೆ ನಮ್ಮೆಲ್ಲರ ಜೀವಾತ್ಮವನ್ನೂ ವಿಲೀನಗೊಳಿಸುವುದು ಹೇಗೆ? ಸತ್ಯವಲ್ಲದ ಜಗತ್ತಿನ ಅಪ್ರಸ್ತುತತೆಯ ನಿರ್ಗುಣಯುಕ್ತ ಲಕ್ಷಣಗಳನ್ನು ದೂರಮಾಡಿ. ಜೀವಾತ್ಮಕ್ಕೆ ಪ್ರತ್ಯೇಕ ಅಸ್ಥಿತ್ವವವೇ ಇಲ್ಲ. ಅದು ಸದಾ ಸತ್ಯವೆಂಬ ಬ್ರಹ್ಮನೊಡನೆ ವಿಲೀನ ಎಂಬುದನ್ನು ತಾರ್ಕಿಕವಾಗಿ ಚರ್ಚಿಸಿ, ನಾನೇ ಬ್ರಹ್ಮ, ಆಹಂಬ್ರಹ್ಮಾಸ್ಮಿ ಎಂಬ ಪ್ರತಿಪಾದನೆಯ ಮೂಲ ಸತ್ವದ ವಿಶೇಷ ಜ್ಞಾನವನ್ನು ಪಡೆದುಕೊಂಡು ಈ ಹಿನ್ನಲೆಯಲ್ಲಿಯೇ ಹುಟ್ಟಿಕೊಂಡು ಶಂಕರಾಚಾರ್ಯರ ಮಠಗಳ ಇಂದಿನ ಕಾರ್ಯಕ್ಷಮತೆ ವೈಖರಿಯನ್ನು ಹೋಲಿಸಿ ಕೊಳ್ಳುವರು.
- ಮನುಷ್ಯನು ತನ್ನ ಜೀವನದಲ್ಲಿ ಮೋಕ್ಷ ಪಡೆಯಲು ಭಕ್ತಿಯೇ ಶ್ರೇಷ್ಠಮಾರ್ಗ. ಭಗವಂತನಿಗೆ ಶರಣಾಗತಿಯೇ ನಿಜವಾದ ಭಕ್ತಿ ಎಂದು ಪ್ರತಿಪಾದಿಸಿದ ರಾಮನುಜಾಚಾರ್ಯರ ಬೋಧನೆಯನ್ನು ತಿಳಿದುಕೊಂಡು ಮಕ್ಕಳು ಧ್ಯಾನ ಮತ್ತು ಏಕಾಗ್ರತೆಯಿಂದ ಮಾತ್ರ ಭಕ್ತಿಯುಂಟಾಗಲು ಸಾಧ್ಯ. ಇದು ಎಲ್ಲರಲ್ಲೂ ಬರಲು ಸಾಧ್ಯವಿಲ್ಲ. ಏಕೆಂದರೆ ಇಂದಿನ ಕಲುಶಿತ ಸಮಾಜದೊಳಗಣ ಜಾತಿಬೇಧ, ಲಿಂಗಭೇದ, ವರ್ಣಭೇದ, ಅಧಿಕಾರ, ಮೋಸ
ವಂಚನೆಗಳಿಂದಾಗಿ ಇಡೀ ಮಾನವ ಕುಲವೇ ದಾರಿ ತಪ್ಪುತ್ತಿರುವ ಈ ಹೊತ್ತಿನಲ್ಲಿ ಭಕ್ತಿ ಪಾರಮ್ಯ ಅನಿವಾರ್ಯವಾಗಿದ್ದು ಇದರಿಂದ ಪರಮಾತ್ಮನ ಅಧೀನತೆಯನ್ನು ಪ್ರತಿಯೊಬ್ಬರು ಕಂಡುಕೊಳ್ಳಬೇಕು. ಆಗ ಮಾತ್ರ ಎಲ್ಲರಿಗೂ ಮೋಕ್ಷ ಎಂಬ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂಬ ಜ್ಞಾನವನ್ನು ತಿಳಿದುಕೊಳ್ಳುವುದು.
- ಜಗತ್ತು ಮಾಯೆಯಲ್ಲ ಅದು ಪರಮಾತ್ಮನಷ್ಟೆ ಸತ್ಯ ಎಂಬ ತತ್ವದಲ್ಲಿ ಜಗತ್ತಿನೊಳಗೆ ಈಶ್ವರನನ್ನು ಕಂಡುಕೊಂಡ ಮಧ್ವಾಚಾರ್ಯರ ತತ್ವಾ ಪ್ರತಿಪಾಧನೆಯನ್ನು ಅರ್ಥೈಸಿಕೊಂಡ ಮಕ್ಕಳು ಈ ಜಗತ್ತಿನಲ್ಲಿ ದೇವರು ಒಬ್ಬನೇ ಎನ್ನುವ ಎಲ್ಲಾ ಧರ್ಮಗಳ ಸಾರವನ್ನು
ಹೋಲಿಸಿಕೊಂಡು ಸರ್ವೊತ್ತಮನಾದ ನಾರಾಯಣನ ಅಂದರೆ ಮೋಕ್ಷ (ನೆಮ್ಮದಿ) ಸನ್ನಿದಿ ದೊರೆಯುವಂತಾಗಲು ಪ್ರತಿಯೊಬ್ಬರು ಈ ಜಗತ್ತಿನಲ್ಲಿ ಇರುವವರೆಗೆ ಸೇವಕನಂತೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸಬೇಕು, ಆಗ ಮಾತ್ರ ಈ ಜೀವಾತ್ಮ ಪರಮಾತ್ಮನನ್ನು ಕಾಣಲು ಸಾಧ್ಯ ಎಂಬ ವಿನೂತನ ಜ್ಞಾನವನ್ನು ಕಟ್ಟುಕೊಳ್ಳುವರು.
- 'ದುಡಿಮೆಯೇ ದೇವರು' ಎಂಬ ನೂತನ ಸಂಸ್ಕೃತಿಯನ್ನು ಆವಿಷ್ಕರಿಸಿಕೊಟ್ಟ ಬಸವಣ್ಣನವರ ಕಾಯಕನಿಷ್ಠೆಯ 'ಕಾಯಕವೇ ಕೈಲಾಸ' ಎಂಬ ತತ್ವವನ್ನು ಗ್ರಹಿಸಿಕೊಂಡ ಮಕ್ಕಳು, ಶರಣನಾದವನಿಗೆ ಯಾವುದರ ಭೇದವಿಲ್ಲ. ಈತನ ಪರಿಶುದ್ಧ ಜೀವನ ಸಮಾನತೆಯ
ಪರಿಕಲ್ಪನೆಯಲ್ಲಿ ಬೆಳೆದು, ನಡೆ-ನುಡಿಗಳು ಒಂದಾಗಿ, ಆಚಾರ ವಿಚಾರಗಳ ಪರಧಿಯೊಳಗೆ ಪ್ರತಿಯೊಬ್ಬನೂ ಕಾಯಕದಲ್ಲಿ ಭಗವಂತ (ಮೋಕ್ಷ)ನನ್ನು ಕಂಡುಕೊಂಡು ಪರಿಶುದ್ಧ ಜೀವನಕ್ಕೆ ಭಕ್ತಿಯೇ ಉದಾತ್ತ ಮಾರ್ಗ ಎಂದು ಪ್ರದಿಪಾದಿಸಿದ ಬಸವಣ್ಣನವರ ಬದುಕಿನ
ಸಂದೇಶವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವರು.
ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನಕ್ಕೆ ಇರುವ ಅವಕಾಶಗಳು
- ಮತ ಪ್ರವರ್ತಕರುಗಳ ತತ್ವ ಸಿದ್ಧಾಂತಗಳನ್ನು ಕುರಿತು ಪ್ರಬಂಧ ಮಂಡಿಸುವುದು.
ಉದಾ : * ಶಂಕರಾಚಾರ್ಯರು ಮತ್ತು ಅದ್ವೈತ ಸಿದ್ಧಾಂತ
* ವಿಶಿಷ್ಟಾದ್ವೈತ ಮತ್ತು ರಾಮಾನುಜಾಚಾರ್ಯರು
* ಶ್ರೀ ವೈಷ್ಣವ ಮಠಗಳನ್ನುಕುರಿತು ಮಾಹಿತಿ ಸಂಗ್ರಹ
* ಶಂಕರಾಚಾರ್ಯರ ಗುರು ಪೀಠಗಳು
* ಅಷ್ಟ ಮಠಗಳು
* ಉಡುಪಿಯ ಶ್ರೀಕೃಷ್ಣ
* ಬಸವಣ್ಣನವರ ಬದುಕು ಮತ್ತು ಕಾಯಕನಿಷ್ಠೆ
* ಮತ ಪ್ರವರ್ತಕರ ಕೃತಿ ದರ್ಶನ
- ಮತ ಪ್ರವರ್ತಕರ ತತ್ವ ಸಿದ್ಧಾಂತಗಳನ್ನು ಕುರಿತಂತೆ ಇಲ್ಲಿನ ಸಾಮ್ಯತೆ, ವ್ಯತ್ಯಾಸ ಮತ್ತು ವೈಶಿಷ್ಟ್ಯಗಳನ್ನು ಕುರಿತಂತೆ ಮಕ್ಕಳ ಗುಂಪು ಚರ್ಚೆ.
- ದುಡಿಮೆಯೇ ದೇವರು ಎಂದು ಕಾಯಕತತ್ವದ ಪ್ರತಿಪಾದನೆಯನ್ನು ನಿರೂಪಿಸಿದ ಬಸವಣ್ಣನವರ ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತದ ಪರಿಕಲ್ಪನೆ ಸಾರ್ವಕಾಲಿಕ ಸತ್ಯ ಎನ್ನುವ ಹಿನ್ನಲೆಯಲ್ಲಿ ಭಾಷಣ ಸ್ಪರ್ಧೆಗಳು.
- ಕಲಿಕಾ ನಿಲ್ದಾಣಗಳ ಮೂಲಕ ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಶಕ್ತಿ ವಿಶಿಷ್ಟಾದ್ವೈತಗಳ ನಡುವಿನ ವ್ಯತ್ಯಾಸ ಗುರುತಿಸುವುದು.
- ಮಿಂಚು ಪಟ್ಟಿಗಳನ್ನು ಬಳಸಿ, ಮತಪ್ರವರ್ತಕರ ಜೀವನ ಚರಿತ್ರೆಯನ್ನು ವಿಶ್ಲೇಷಿಸುವುದು.
- ಪ್ರಶ್ನಾವಳಿ, ಘಟಕ ಪರೀಕ್ಷೆ, ಕಿರು ಪರೀಕ್ಷೆಗಳನ್ನು ನಡೆಸಿ ಕಲಿಕಾ ಸಾಮಥ್ರ್ಯವನ್ನು ನಿರ್ಣಯಿಸುವುದು.
- ಮತ ಪ್ರವರ್ತಕರುಗಳ ಚಿಂತನೆಗಳನ್ನು ಪ್ರತ್ಯೇಕ ಚಾಟರ್್ ಮಾಡಿ ಪ್ರದರ್ಶಿಸುವುದು.
- ಮಕ್ಕಳನ್ನೇ ಶಂಕರ, ಮಧ್ವಾ, ರಾಮಾನುಜ ಹಾಗೂ ಬಸವಣ್ಣನವರ ಪಾತ್ರಧಾರಿಗಳಾಗಿಸಿ ಪ್ರದರ್ಶನ ಏರ್ಪಡಿಸುವುದು.
- ಭಕ್ತಿ, ಧ್ಯಾನ, ಏಕಾಗ್ರತೆ ಕುರಿತು ಟಿಪ್ಪಣಿ ಬರೆಸುವುದು.
- ಬಸವಣ್ಣನವರ ಬದುಕು ಕುರಿತ ನಾಟಕಾಭಿನಯ
- ಪ್ರಸ್ತುತ ಸಂದರ್ಭದಲ್ಲಿ ಬಸವಣ್ಣ ಮತ್ತೆ ಹುಟ್ಟಿ ಬಂದರೆ ತಾನು ಸಮಾಜ ಸುಧಾರಣೆಗಳ ಬಗ್ಗೆ ಕಲ್ಪನೆಯ ಕಥೆ ಬರೆಸುವುದು.
- ಬಸವಣ್ಣನವರ ವಚನಗಳ ಸಂಗ್ರಹ.
- ವಚನಗಾಯನ ಮತ್ತು ವ್ಯಾಖ್ಯಾನ
- ಉಡುಪಿಯ ಕನಕಕಿಂಡಿ ಮಹತ್ವ ಕುರಿತು ಚಿಂತನಾ ಕಾರ್ಯಗಾರ ಏರ್ಪಡಿಸುವುದು.
ಕಲಿಕೆಯನ್ನು ಅನುಕೂಲಿಸುವ ವಿಧಾನಗಳು :
ಕಥನ ವಿಧಾನ : - ಶಂಕರಾಚಾರ್ಯರ ಜೀವನ ಚರಿತ್ರೆ ಕುರಿತು
- ರಾಮಾನುಜಾಚಾರ್ಯರ ನಡೆ ನುಡಿ ಕುರಿತು
- ಬಸವಣ್ಣನವರ ಆಚಾರ ವಿಚಾರ ಚರ್ಚಾ
ವಿಧಾನ : - ತರಗತಿಯಲ್ಲಿ ಗುಂಪುಗಳ ರಚನೆ
- ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಶಕ್ತಿ ವಿಶಿಷ್ಠಾದ್ವೈತ ಕುರಿತು ಚರ್ಚೆ, ತೀರ್ಮಾನ
ಘಟಕ ವಿಧಾನ : - ಶಂಕರಾಚಾರ್ಯರ ಬೋಧನೆಗಳು
- ಮಧ್ವಾಚಾರ್ಯರ ಜೀವನ ತತ್ವಗಳು
- ರಾಮಾನುಜಾಚಾರ್ಯರು ಮತ್ತು ವಿಶಿಷ್ಟಾದ್ವೈತ
- ಕಾಯಕವೇ ಕೈಲಾಸ
ಪ್ರವಾಸ ವಿಧಾನ : - ಕೂಡಲಸಂಗಂಕ್ಕೆ ಕಾಲಡಿ, ಉಡುಪಿ, ಸ್ಥಳಗಳಿಗೆ ಭೇಟಿ, ಜ್ಞಾನ ಸಂಗ್ರಹ.
ಪಾತ್ರಾಭಿನಯ ವಿಧಾನ : - ಮಕ್ಕಳಿಂದಲೇ ಮತ ಪ್ರವರ್ತಕರ ಪಾತ್ರಗಳನ್ನು ನಿರ್ವಹಿಸು ವಂತೆಯೂ ಹಾಗೂ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಳ್ಳುವುದು. ಉದಾ : - ಶಂಕರಾಚಾರ್ಯರು
- ಬಸವಣ್ಣ
- ಮಧ್ವಾಚಾರ್ಯರು
- ರಾಮಾನುಚಾರ್ಯರು
ಅವಲೋಕನ ವಿಧಾನ : - ಪಠ್ಯಪುಸ್ತಕದಲ್ಲಿನ ಸಂಬಂಧಿಸಿದ ಘಟಕಕ್ಕೆ ಪೂರಕ ಅಂಶಗಳನ್ನು
ಅವಲೋಕನ ಮಾಡುವುದು.
ಉದಾ : - ಧರ್ಮಸುಧಾರಣೆ
- ಸ್ಪೃಷ್ಯ, ಅಸ್ಪೃಷ್ಯ
- ವರ್ಗ ತಾರತಮ್ಯ
- ಜಾತಿ ಭೇದ
- ಕಾಯಕದ ಮಹತ್ವವನ್ನು ಕುರಿತಂತೆ ಪಠ್ಯ ಪುಸ್ತಕದ ಜ್ಞಾನವನ್ನು ಗ್ರಹಿಸುವುದು.
ಸಂಪನ್ಮೂಲಗಳ ಕ್ರೂಢೀಕರಣ :
- 9ನೇ ತರಗತಿ ಪಠ್ಯ ಪುಸ್ತಕ
- ಮಧ್ಯಕಾಲಿನ ಭಾರತದ ಇತಿಹಾಸ, ಪಾಲಕ್ಷ, ಅಕಬರಾಲಿ
- ಶಂಕರ, ರಾಮಾನುಜ, ಬಸವಣ್ಣ ಮಧ್ವರನ್ನು ಕುರಿತ ಜೀವನ ಚರಿತ್ರೆ ಕೃತಿಗಳ ಸಂಗ್ರಹ.
- ಬಸವಣ್ಣನವರ ವಚನಗಳ ಸಂಗ್ರಹ
- ಭಾವ ಚಿತ್ರಗಳು
- ಭಾರತದ ಭೂಪಟ
- ಉಡುಪಿಯ ಐತಿಹಾಸಿಕ ಹಿನ್ನಲೆ ಕುರಿತ ಮಾಹಿತಿ ಸಂಗ್ರಹ
- ಕೂಡಲ ಸಂಗಮದ ಚರಿತ್ರೆಯ ಮಹತ್ವ ಸಂಗ್ರಹ
- ಚಿತ್ರದಲ್ಲಿ ಚರಿತ್ರೆ
- ಅಂತರ್ಜಾಲ
- ವಿಶ್ವಕೋಶ ಬಳಕೆ
- ಮತ ಪ್ರವರ್ತಕರ ಚಾರ್ಟ್ ಸಂಗ್ರಹ
ಬೋಧನೋಪಕರಣಗಳು :
- ಕರ್ನಾಟಕ ಮತ್ತು ಭಾರತದ ಭೂಪಟ
- ಮಧ್ವ, ಬಸವ, ರಾಮಾನುಜ, ಶಂಕರರ ಭಾವ ಚಿತ್ರಗಳು, ಮಿಂಚು ಪಟ್ಟಿಗಳು
- ಚರ್ಚಾಂಶಗಳ ಪಟ್ಟಿ
- ಆಯಾ ಮತಪ್ರವರ್ತಕರ ನಂತರ ಬೆಳಕಿಗೆ ಬಂದ ಮಠಗಳ ಪಟ್ಟಿ
- ವಚನಕಾರರ ಹೆಸರುಗಳ ಸಂಗ್ರಹ
- ವಚನಗಳ ಸಂಗ್ರಹ
- ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಅಬ್ದುಲ್ ಕಲಾಂ ಇವರುಗಳ ನಡುವೆ ಸಾಮ್ಯತೆ ಕುರಿತು ನಾಟಕ ರಚನೆ ಮತ್ತು ಅಭಿನಯ.
ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು
- ಧಾರ್ಮಿಕ ಸುಧಾರಣೆ ಎಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಭಕ್ತಿ, ಧ್ಯಾನ, ಏಕಾಗ್ರತೆಗಳ ಮಹತ್ವ.
- ಜಗತ್ತಿನಲ್ಲಿ ಅಮೂಲ್ಯವಾದುದು ಸತ್ಯ
- ಬದುಕಿನಲ್ಲಿ ಜ್ಞಾನಮಾರ್ಗವೇ ಶ್ರೇಷ್ಟವಾದುದು
- ಆತ್ಮೋದ್ಧಾರ ಭಕ್ತಿಯಿಂದ ಮಾತ್ರ ಸಾಧ್ಯ.
- ಕಾಯಕವೇ ಕೈಲಾಸ
- ಸಮಾನತೆ ಕಲ್ಪನೆಯ ಸರಳ ಜೀವನ ಶೈಲಿ
- ಕೆಲಸ ನಿರ್ವಹಿಸುವಲ್ಲಿನ ಸೇವಕತ್ವ
- ಸರ್ವರ ಅಭಿಪ್ರಾಯಗಳಿಗೂ ಮನ್ನಣೆ ದೊರೆಯಬೇಕು
- ದೇವರು ಒಬ್ಬನೇ
- ಮನುಜಮತ ವಿಶ್ವಪಥದ ಪರಿಕಲ್ಪನೆ.
No comments:
Post a Comment