ಪ್ರಶ್ನೆ 1 ಬಹು ಆಯ್ಕೆ ಪ್ರಶ್ನೆಗಳು
1. ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಅಪಾರವಾದ ಕೊಡುಗೆ ನೀಡಿದವರು –
ಸರ್. ಎಂ. ವಿಶ್ವೇಶ್ವರಯ್ಯನವರು.
2. ಕೈಗಾರಿಕೆಗಳ ಬೆಳವಣಿಗೆಯ ಬಗ್ಗೆ ಸರ್ ಎಂ ವಿಶ್ವೇಶ್ವರಯ್ಯನವರು ಈ ತತ್ವ ಪ್ರತಿಪಾಧಿಸಿದರು. – ‘ಕೈಗಾರಿಕೀರಣ ಇಲ್ಲವೇ ನಾಶ’.
3. ದಕ್ಷಿಣ ಭಾರತದ ಮೊಟ್ಟ ಮೊದಲ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ – ಭದ್ರಾವತಿಯ ಮೈಸೂರು ಐರನ್ ಅಂಡ್ ಸ್ಟೀಲ್ ಇಂಡಸ್ಟ್ರೀಸ್ ಲಿಮಿಟೆಡ್ (MISL).
4. ಭದ್ರಾವತಿಯ ಮೈಸೂರು ಐರನ್ ಅಂಡ್ ಸ್ಟೀಲ್ ಇಂಡಸ್ಟ್ರೀಸ್ ಲಿಮಿಟೆಡ್ (MISL) – ಕ್ರಿ ಶ 1923ರಲ್ಲಿ.
5. ಭದ್ರಾವತಿಯ ಮೈಸೂರು ಐರನ್ ಅಂಡ್ ಸ್ಟೀಲ್ ಇಂಡಸ್ಟ್ರೀಸ್ ಲಿಮಿಟೆಡ್ (MISL) ನ ಉಸ್ತುವಾರಿಯನ್ನು ಭಾರತೀಯ ಉಕ್ಕು ಪ್ರಾಧಿಕಾರಕ್ಕೆ ವಹಿಸಿದ ವರ್ಷ – 1989.
6. ಇಂದು ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಕೆಗೆ ಇರುವ ಹೆಸರು – ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ.
7. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗೆ ಈ ಗಣಿಯಿಂದ ಕಬ್ಬಿಣದ ಅದಿರು ರವಾನೆಯಾಗುತ್ತದೆ. – ಕೆಮ್ಮಣ್ಣುಗುಂಡಿ.
8. ಕರ್ನಾಟಕದ ಎರಡನೇ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ – ಖಾಸಗಿ ವಲಯದ ಜಿಂದಾಲ್ ವಿಜಯನಗರ ಉಕ್ಕು ಲಿಮಿಟೆಡ್.
9. ಜಿಂದಾಲ್ ವಿಜಯನಗರ ಉಕ್ಕು ಲಿಮಿಟೆಡ್ ಸ್ಥಾಪನೆಯಾದ ಸ್ಥಳ – ಬಳ್ಳಾರಿ ಜಿಲ್ಲೆಯ ತೋರಣಗಲ್ . (2001ರಲ್ಲಿ)
10. ಜಿಂದಾಲ್ ವಿಜಯನಗರ ಉಕ್ಕು ಲಿಮಿಟೆಡ್ ಕಾರ್ಖಾನೆ ಸ್ಥಾಪನೆಗೆ ಬಳಸಿದ ತಂತ್ರಜ್ಞಾನ – ಅತ್ಯಾಧುನಿಕ ಕೋರೆಕ್ಸ್ ತಂತ್ರಜ್ಞಾನ
11. ಕರ್ನಾಟಕದ ಮೊದಲ ಹತ್ತಿ ಬಟ್ಟೆ ಗಿರಣಿ ಆರಂಭವಾದದ್ದು – ಕ್ರಿಶ 1884ರಲ್ಲಿ ಎಂ.ಎಸ.ಕೆ. ಗಿರಣಿ – ಗುಲಬರ್ಗಾದಲ್ಲಿ.
12. ಕರ್ನಾಟಕದ ಅತಿ ಮುಖ್ಯ ಹತ್ತಿ ಬಟ್ಟೆ ಕೈಗಾರಿಕಾ ಕೇಂದ್ರ – ದಾವಣಗೇರೆ.
13. ಕರ್ನಾಟಕದ ಮ್ಯಾಂಚೇಸ್ಟರ್ – ದಾವಣಗೇರೆ.
14. ದಾವಣಗೇರೆಯನ್ನು ಕರ್ನಾಟಕದ ಮ್ಯಾಂಚೇಸ್ಟರ್ ಎಂದು ಕರೆಯಲು ಕಾರಣ – ಅತಿ ಹೆಚ್ಚು ಹತ್ತಿಬಟ್ಟೆ ಗಿರಿಣಿಯನ್ನು ಹೊಂದಿರುವದರಿಂದ.
15. ಪ್ರಸ್ತುತ ರಾಜ್ಯದಲ್ಲಿರುವ ಹತ್ತಿಬಟ್ಟೆ ಗಿರಿಣಿಗಳ ಸಂಖ್ಯೆ – 44 ಹತ್ತಿಬಟ್ಟೆ ಗಿರಿಣಿಗಳು.
16. ಕರ್ನಾಟಕ ಸರಕಾರವು ಸುವರ್ಣ ಜವಳಿ ನೀತಿ 2008-13 ಎಂಬ ಯೋಜನೆಯನ್ನು ಪ್ರಾರಂಭಿಸಿದ ಉದ್ದೇಶ – ಜವಳಿ ಉದ್ಯಮದ ಸ್ಥಿತಿಯನ್ನು ಸುಧಾರಿಸಲು.
17. ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳಲ್ಲಿ ಬಟ್ಟೆಯ ಸಿದ್ದ ಉಡುಪಿನ ಪಾರ್ಕಗಳನ್ನು ಸ್ಥಾಪಿಸಲಾಗಿದೆ. – 11 ಜಿಲ್ಲೆಗಳು.
18. ಮೊಟ್ಟಮೊದಲು ಆಧುನಿಕ ಸಕ್ಕರೆ ಕೈಗಾರಿಕೆ ಇದು – ಮೈಸೂರು ಸಕ್ಕರೆ ಕಾರ್ಖಾನೆ ಮಂಡ್ಯ (ಕ್ರಿ ಶ 1933 )
19. ಸ್ವತಂತ್ರ ಪೂರ್ವದ ಮೊಟ್ಟಮೊದಲ ಆಧುನಿಕ ಸಕ್ಕರೆ ಕಾರ್ಖಾನೆ - ಮೈಸೂರು ಸಕ್ಕರೆ ಕಾರ್ಖಾನೆ ಮಂಡ್ಯ. (ಕ್ರಿ ಶ 1933 )
20. ಇಂದು ರಾಜ್ಯದಲ್ಲಿರುವ ಒಟ್ಟು __________ ಸಕ್ಕರೆ ಕಾರ್ಖಾನೆಗಳಿವೆ – 47 ಸಕ್ಕರೆ ಕಾರ್ಖಾನೆಗಳು.
21. ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ಜಿಲ್ಲೆಗಳು – ಬೆಳಗಾವಿ ಮತ್ತು ಬಾಗಲಕೋಟೆ.
22. ಕಾಕಂಬಿಯಿಂದ ________ ನ್ನು ಉತ್ಪಾದಿಸುವರು. – ಮದ್ಯಸಾರ.
23. ಅರಣ್ಯಾಧಾರಿತವಾದ ಕೈಗಾರಿಕೆ – ಕಾಗದ ಕೈಗಾರಿಕೆ.
24. ಕರ್ನಾಟಕದ ಮೊಟ್ಟ ಮೊದಲ ಕಾಗದ ಕೈಗಾರಿಕೆ – ಭದ್ರಾವತಿಯ ‘ಮೈಸೂರು ಪೇಪರ್ ಮಿಲ್’ (ಕ್ರಿಶ 1936)
25. ದಾಂಡೇಲಿಯಲ್ಲಿರುವ ಖಾಸಗಿ ವಲಯದಲ್ಲಿರುವ ಕಾಗದ ಕಾರ್ಖಾನೆ – ‘ವೆಸ್ಟ್ ಕೋಸ್ಟ್ ಪೇಪರ್ ಮಿಲ್’.
26. ಕರ್ನಾಟಕವು ವರ್ಷಕ್ಕೆ ಉತ್ಪಾದಿಸುವ ಕಾಗದ – 3.6 ಲಕ್ಷ ಟನ್.
27. ಕರ್ನಾಟಕದಲ್ಲಿ ಮೊದಲ ಸಿಮೆಂಟ್ ಕಾರ್ಖಾನೆ – ಭದ್ರಾವತಿ ಸಿಮೆಂಟ್ ಕಾರ್ಖಾನೆ (1939)
28. ರಾಜ್ಯವು ವಾರ್ಷಿಕ __________ ಟನ್ ಸಿಮೆಂಟ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. – 121 ಲಕ್ಷ ಟನ್.
29. ಸಿಲಿಕಾನ್ ಸಿಟಿ ಎಂದೇ ಪ್ರಸಿದ್ಧಿ ಪಡೆದ ಕರ್ನಾಟಕದ ನಗರ – ಬೆಂಗಳೂರು ನಗರ.
30. ರಾಜ್ಯದಲ್ಲಿ ಅತಿ ಹೆಚ್ಚು ಕೈಗಾರಿಕೆಗಳನ್ನು ಹೊಂದಿದ ಪ್ರದೇಶ. – ಬೆಂಗಳೂರು-ಕೋಲಾರ-ತುಮಕೂರು ಕೈಗಾರಿಕಾ ವಲಯ.
31. ಕಬ್ಬಿನಿಂದ ________ ನ್ನು ಉತ್ಪಾದಿಸುತ್ತರೆ – ಬೆಲ್ಲ, ಸಕ್ಕರೆ, ಕಾಕಂಬಿ.
32. ಅಮ್ಮಸಂದ್ರದಲ್ಲಿ ____________ ಕೈಗಾರಿಕೆಯಿದೆ. – ಸಿಮೆಂಟ್ ಕೈಗಾರಿಕೆ.
33. ಕರ್ನಾಟಕದಲ್ಲಿ ಜವಳಿ ಪಾರ್ಕಗಳನ್ನು ಸ್ಥಾಪಿಸಿದ ಉದ್ದೇಶ – ವಿದೇಶಗಳಿಗೆ ಜವಳಿ ಉತ್ಪನ್ನಗಳನ್ನು ರಫ್ತು ಮಾಡುವುದು.
ಪ್ರಶ್ನೆ 2 ಪ್ರಶ್ನೋತ್ತರಗಳು.
1. ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆಯನ್ನು ಕುರಿತು ಬರೆಯಿರಿ
ಉತ್ತರ : ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆ
• ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಸರ್ ಎಂ. ವಿಶ್ವೇಶ್ವರಯ್ಯನವರ ಕೊಡುಗೆ ಅಪಾರ.
• ಸರ್ ಎಂ. ವಿಶ್ವೇಶ್ವರಯ್ಯರವರು ‘ಕೈಗಾರಿಕೀಕರಣ ಇಲ್ಲವೆ ವಿನಾಶ’ ಎಂಬ ತತ್ವದಡಿ ರಾಜ್ಯದ ಅನೇಕ ಕೈಗಾರಿಕೆಗಳಿಗೆ ಬುನಾದಿಯನ್ನು ಹಾಕಿದರು.
• 1902ರಲ್ಲಿ ಶಿವನಸಮುದ್ರದಲ್ಲಿ ಜಲವಿದ್ಯುಚ್ಛಕ್ತಿ ಉತ್ಪಾದನೆ ಪ್ರಾರಂಭಗೊಂಡ ಮೇಲೆ ವಿವಿಧ ಮೂಲ ಸಾಮಗ್ರಿ, ದಿನೋಪಯೋಗಿ ವಸ್ತುಗಳನ್ನು ತಯಾರಿಸುವ ಉದ್ಯಮಗಳು ಅಸ್ತಿತ್ವಕ್ಕೆ ಬಂದವು.
• ಅಕ್ಕಿ ಗಿರಿಣಿ, ಹೆಂಚಿನ ತಯಾರಿಕೆ, ಬೀಡಿ, ಸಿಗರೇಟು, ಕಬ್ಬಿಣ ಮತ್ತು ಹಿತ್ತಾಳೆ ಫೌಂಡ್ರಿಗಳು ಸ್ಥಾಪನೆಯಾದವು.
• 1923ರ ನಂತರ ರಾಜ್ಯದಲ್ಲಿ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆ, ಸಾಬೂನು ತಯಾರಿಕೆ, ಹತ್ತಿ ಮತ್ತು ರೇಷ್ಮೆ ಗಿರಣಿ, ಕಾಗದ, ಸಮೆಂಟ್, ಬಣ್ಣ, ಸಕ್ಕರೆ, ಶ್ರೀಗಂಧದೆಣ್ಣೆ ಮುಂತಾದ ಆಧುನಿಕ ಕೈಗಾರಿಕೆಗಳು ಸ್ಥಾಪನೆಗೊಂಡವು.
2. ಕರ್ನಾಟಕದಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಕುರಿತು ಬರೆಯಿರಿ.
ಉತ್ತರ : ಕರ್ನಾಟಕದಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಬೆಳವಣಿಗೆ.
• ಕರ್ನಾಟಕವು ದಕ್ಷಿಣ ಭಾರತದಲ್ಲೇ ಮೊಟ್ಟ ಮೊದಲ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರವಾಗಿದೆ.
• ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ 1923 ರಲ್ಲಿ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಸ್ಥಾಪಿಸಲಾಯಿತು. ಇದನ್ನು ಮೈಸೂರು ಐರನ್ ಅಂಡ್ ಸ್ಟೀಲ್ ಇಂಡಸ್ಟ್ರೀಸ್ ಲಿಮಿಟೆಡ್ (MISL) ಎಂದು ಕರೆಯಲಾಯಿತು. ಇಂದು ಇದಕ್ಕೆ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯೆಂದು ಕರೆಯುತ್ತಾರೆ.
• ಕರ್ನಾಟಕದ ಮತ್ತೊಂದು ಪ್ರಮುಖ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ ಖಾಸಗಿ ವಲಯದ ಜಿಂದಾಲ್ ವಿಜಯನಗರ ಉಕ್ಕು ಲಿಮಿಟೆಡ್. ಇದು ಬಳ್ಳಾರಿ ಜಿಲ್ಲೆಯ ತೋರಣಗಲ್ ಎಂಬಲ್ಲಿ 2001 ರಲ್ಲಿ ಅತ್ಯಾಧುನಿಕ ಕೊರೆಕ್ಸ್ ತಂತ್ರಜ್ಞಾನವನ್ನು ಉಪಯೋಗಿಸಿ ಸ್ಥಾಪಿಸಲಾಯಿತು.
3. ಹತ್ತಿ ಬಟ್ಟೆ ಕೈಗಾರಿಕೆಗಳ ಹಂಚಿಕೆಯನ್ನು ತಿಳಿಸಿ.
ಉತ್ತರ : ಹತ್ತಿ ಬಟ್ಟೆ ಕೈಗಾರಿಕೆಗಳ ಹಂಚಿಕೆ
• ಕರ್ನಾಟಕದಲ್ಲಿ ಮೊದಲು 1884 ರಲ್ಲಿ ಎಂ.ಎಸ್.ಕೆ. ಗಿರಣಿ ಗುಲ್ಬರ್ಗಾದಲ್ಲಿ ಸ್ಥಾಪನೆಗೊಂಡಿತು.
• ಹುಬ್ಬಳ್ಳಿ, ಬೆಂಗಳೂರು, ದಾವಣಗೆರೆಗಳಲ್ಲಿ ಸ್ಥಾಪನೆಯಾದ ಹತ್ತಿ ಬಟ್ಟೆ ಗಿರಣಿಗಳು ಸ್ವಾತಂತ್ರ್ಯಪೂರ್ವದಲ್ಲಿಯೇ ಸ್ಥಾಪನೆಗೊಂಡವು.
• ದಾವಣಗೆರೆಯಲ್ಲಿ ಅತ್ಯಂತ ಹೆಚ್ಚು ಹತ್ತಿ ಬಟ್ಟೆ ಗಿರಣಿಗಳು ಇರುವುದರಿಂದ ಅದನ್ನು ಕರ್ನಾಟಕದ ಮ್ಯಾಂಚೇಸ್ಟರ್ ಎಂದು ಕರೆಯುತ್ತಾರೆ.
• ರಾಜ್ಯದ ಇತರ ಹತ್ತಿ ಬಟ್ಟೆ ಗಿರಣಿಗಳೆಂದರೆ – ಇಲಕಲ್, ಗುಳೇದಗುಡ್ಡ, ರಬಕವಿ, ಬಾಗಲಕೋಟೆ, ಮೊಣಕಾಲ್ಮೂರು, ಗದಗ-ಬೆಟಗೇರಿ, ಬಾದಾಮಿ, ನರಗುಂದ, ಗೋಕಾಕ್, ಬಳ್ಳಾರಿ, ಹುಣಸೂರು, ನಂಜನಗೂಡು,ಪಿರಿಯಾಪಟ್ಟಣ ಪ್ರಮುಖವಾದವು.
4. ಸಕ್ಕರೆ ಕೈಗಾರಿಕೆಗಳು ಸ್ಥಾಪಿಸಲು ಬೇಕಾಗುವ ಅಂಶಗಳನ್ನು ತಿಳಿಸಿ.
ಉತ್ತರ : ಕಬ್ಬು ಉತ್ಪಾದನೆ, ಉತ್ತಮ ಹವಾಮಾನ, ವಿದ್ಯುತ್ ಸರಬರಾಜು, ಸ್ಥಳೀಯ ಮಾರುಕಟ್ಟೆ, ಸಾರಿಗೆ ವ್ಯವಸ್ಥೆ, ಇತ್ಯಾದಿ ಅಂಶಗಳು ಸಕ್ಕರೆ ಕೈಗಾರಿಕೆಗಳು ಸ್ಥಾಪಿಸಲು ಬೇಕಾಗುವ ಅಂಶಗಳು.
5. ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕೈಗಾರಿಕೆಗಳು ಕೇಂದ್ರಿಕೃತವಾಗಲು ಕಾರಣ ತಿಳಿಸಿ.
ಉತ್ತರ : ಉತ್ತಮ ಹವಾಮಾನ, ವಿದ್ಯುತ್ ಪೂರೈಕೆ, ತಾಂತ್ರಿಕ ಪರಿಣಿತರು, ಆರ್ಥಿಕ ನೆರವು, ವಿಶಾಲವಾದ ಮಾರುಕಟ್ಟೆ ಹಾಗೂ ಮೂಲ ಸೌಕರ್ಯಗಳಿರುವುದರಿಂದ ಬೃಹತ್ ಬೆಂಗಳೂರು ಭಾರತದ ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿ ಹೊರಹೊಮ್ಮಿದೆ.
6. ಕರ್ನಾಟಕದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ಅಂಶಗಳು ಯಾವುವು?
ಉತ್ತರ : ಕರ್ನಾಟಕದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾದ ಸಾಕಷ್ಟು ಅಂಶಗಳಿವೆ. ಅವುಗಳೆಂದರೆ – ಅಪಾರ ಖನಿಜ ಸಂಪತ್ತು, ಕಚ್ಚಾ ವಸ್ತುಗಳು, ಸೂಕ್ತ ವಾತಾವರಣ, ಸಾಕಷ್ಟು ನೀರಿನ ಪೂರೈಕೆ, ಸಾರಿಗೆ ವ್ಯವಸ್ಥೆ, ನುರಿತ ಕಾರ್ಮಿಕರ ಲಭ್ಯತೆ, ವಿಶಾಲ ಮಾರುಕಟ್ಟೆ ಹಾಗೂ ತಂತ್ರಜ್ಞಾನ ಇರುವುದರಿಂದ ಕರ್ನಾಟಕವು ಅನೇಕ ವೈವಿದ್ಯಮಯ ಕೈಗಾರಿಕೆಗಳಿಗೆ ಹೆಸರುವಾಸಿಯಾಗಿದೆ.
7. ಸ್ವತಂತ್ರ್ಯಾನಂತರ ಕರ್ನಾಟಕದಲ್ಲಿ ಸ್ಥಾಪನೆಯಾದ ಕೈಗಾರಿಕೆಗಳು ಯಾವುವು?
ಉತ್ತರ : ಸ್ವತಂತ್ರ್ಯಾನಂತರ ಕೇಂದ್ರ ಸರಕಾರದ ಕೈಗಾರಿಕಾ ನೀತಿ ರಾಜ್ಯದ ಕೈಗಾರಿಕಾ ಪ್ರಗತಿಗೆ ಪೂರಕವಾಯಿತು. ಇದರ ಫಲವಾಗಿ ಅನೇಕ ಕೈಗಾರಿಕೆಗಳು ಸ್ಥಾಪನೆಗೊಂಡವು. ಅವುಗಳೆಂದರೆ – ವಿಮಾನ ಕೈಗಾರಿಕೆ, ಎಂಜಿನೀಯರಿಂಗ್, ಮೆಷಿನ್ ಟೂಲ್ಸ್, ಗಡಿಯಾರಗಳು, ಕಬ್ಬಿಣ ಮತ್ತು ಉಕ್ಕು, ಅಲ್ಯೂಮಿನಿಯಂ, ಮಾಹಿತಿ ತಂತ್ರಜ್ಞಾನ, ವಿದ್ಯುನ್ಮಾನ, ಜೈವಿಕ ತಂತ್ರಜ್ಞಾನ ಉದ್ಯಮ ಇತ್ಯಾದಿ.
8. ಭದ್ರಾವತಿ ಕಬ್ಬಿಣ & ಉಕ್ಕಿನ ಕೈಗಾರಿಕೆಗೆ ಕಚ್ಚಾ ಪದಾರ್ಥಗಳನ್ನು ಎಲ್ಲಿಂದ ಸರಬರಾಜು ಮಾಡಲಾಗುತ್ತದೆ?
ಉತ್ತರ : ಭದ್ರಾವತಿ ಕಬ್ಬಿಣ & ಉಕ್ಕಿನ ಕೈಗಾರಿಕೆಗೆ ಅಗತ್ಯವಾದ ಕಬ್ಬಿಣದ ಅದಿರು ಕೆಮ್ಮಣ್ಣುಗುಂಡಿಯಿಂದ, ಬಂಡಿಗುಡ್ಡದಿಂದ ಸುಣ್ಣ, ಭದ್ರಾ ನದಿಯಿಂದ ನೀರು ಹಾಗೂ ಸಂಡೂರಿನಿಂದ ಮ್ಯಾಂಗನೀಸ್ ಪೂರೈಸಲಾಗುತ್ತದೆ
9. ಕರ್ನಾಟಕದಲ್ಲಿ ಸಿದ್ದ ಬಟ್ಟೆಯ ಉಡುಪಿನ ಜವಳಿ ಪಾರ್ಕಗಳನ್ನು ಎಲ್ಲಿ ಸ್ಥಾಪಿಸಲಾಗಿದೆ?
ಉತ್ತರ : ಕರ್ನಾಟಕದ 11 ಜಿಲ್ಲೆಗಳಲ್ಲಿ ಬಟ್ಟೆಯ ಸಿದ್ದ ಉಡುಪಿನ ಪಾರ್ಕಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ – ದೊಡ್ಡಬಳ್ಳಾಪುರ, ಆನೆಕಲ್, ಬೆಳಗಾವಿ, ಮೈಸೂರು, ರಾಮನಗರಗಳು ಪ್ರಮುಖವಾದವುಗಳು.
10. ಕರ್ನಾಟಕದಲ್ಲಿ ಸಕ್ಕರೆ ಕೈಗಾರಿಕೆಗಳ ಹಂಚಿಕೆಯನ್ನು ತಿಳಿಸಿ.
ಉತ್ತರ : ಕರ್ನಾಟಕದಲ್ಲಿ ಸಕ್ಕರೆ ಕೈಗಾರಿಕೆಗಳ ಹಂಚಿಕೆ
• ಕರ್ನಾಟಕದ ಸಕ್ಕರೆ ಕೈಗಾರಿಕೆಯು ವಿಶೇಷವಾಗಿ ಕಬ್ಬು ಬೆಳೆಯುವ ಪ್ರದೇಶಗಳಲ್ಲೇ ಹಂಚಿಕೆಯಾಗಿದೆ.
• ಕಾವೇರಿ, ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ಜಲಾನಯನ ಪ್ರದೇಶದ ಜಿಲ್ಲೆಗಳಲ್ಲಿ ಕೇಂದ್ರಿಕೃತವಾಗಿವೆ.
• ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿವೆ,
• ಮಂಡ್ಯ, ಮೈಸೂರು, ಬೀದರ್, ಬಿಜಾಪೂರ, ಗುಲ್ಬರ್ಗಾ, ಬಳ್ಳಾರಿ ಮತ್ತು ದಾವಣಗೇರೆ ಜಿಲ್ಲೆಗಳು ಇತರ ಪ್ರಮುಖವಾದ ಜಿಲ್ಲೆಗಳಾಗಿವೆ.
11. ಕಾಗದ ಕೈಗಾರಿಕೆ ಬೇಕಾದ ಕಚ್ಚಾ ಪದಾರ್ಥಗಳು ಯಾವುವು?
ಉತ್ತರ : ಕಾಗದ ಕೈಗಾರಿಕೆಗೆ ಬಿದಿರು, ಮರದ ತಿರುಳು, ಹುಲ್ಲು, ಕಬ್ಬಿನ ಸಿಪ್ಪೆ, ಚಿಂದಿಬಟ್ಟೆ, ರದ್ದಿ ಕಾಗದಗಳನ್ನು ಕಚ್ಚಾ ಪದಾರ್ಥಗಳಾಗಿ ಬಳಸಲಾಗುವುದು.
12. ಕರ್ನಾಟಕದಲ್ಲಿ ಕಾಗದ ಕೈಗಾರಿಕೆಗಳ ಹಂಚಿಕೆಯನ್ನು ತಿಳಿಸಿ
ಉತ್ತರ : ಕರ್ನಾಟಕದಲ್ಲಿ ಕಾಗದ ಕೈಗಾರಿಕೆಗಳ ಹಂಚಿಕೆ
• ಭದ್ರಾವತಿಯಲ್ಲಿ ಮೈಸೂರು ಪೇಪರ್ ಮಿಲ್ ಲಿಮಿಟೆಡ್ ಕಾರ್ಖಾನೆಯು 1936ರಲ್ಲಿ ಸ್ಥಾಪನೆಯಾಯಿತು.
• ನಂತರ ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಖಾಸಗಿ ಕಂಪನಿಯಿಂದ ದಾಂಡೇಲಿಯಲ್ಲಿ ಸ್ಥಾಪನೆಯಾಯಿತು.
• ನಂಜನಗೂಡು, ಕೃಷ್ಣರಾಜನಗರ, ಸತ್ಯಗಾಲ, ಮುಂಡಗೋಡ, ಮುನಿರಾಬಾದ, ಯಡಿಯೂರು ಮತ್ತು ಬೆಂಗಳೂರಿನಲ್ಲಿ ರಾಜ್ಯದ ಇತರ ಕಾಗದ ತಯಾರಿಕಾ ಘಟಕಗಳಿವೆ.
13. ಇತ್ತಿಚೀನ ದಿನಗಳಲ್ಲಿ ಸಿಮೇಂಟಗೆ ಹೆಚ್ಚಿನ ಬೇಡಿಕೆ ಇದೆ ಏಕೆ?
ಉತ್ತರ : ಕರ್ನಾಟಕದಲ್ಲಿ ನಗರೀಕರಣ ಮತ್ತು ಕೈಗಾರಿಕೀಕರಣ ವಿಸ್ತರಣೆ ಹೆಚ್ಚಾಗಿದ್ದರಿಂದ ನಿರ್ಮಾಣ ಕಾರ್ಯಗಳಿಗೆ ಸಿಮೆಂಟಗೆ ಬೇಡಿಕೆ ಹೆಚ್ಚಾಗಿದೆ. ಮನೆ ಕಟ್ಟಲು, ದೊಡ್ಡ ಸಾರ್ವಜನಿಕ ಕಟ್ಟಡಗಳ ನಿರ್ಮಾಣ, ರಸ್ತೆ ಸೇತುವೆ, ಆಣೆಕಟ್ಟೆ ಮೊದಲಾದವುಗಳ ನಿರ್ಮಾಣಕ್ಕೆ ಸಿಮೆಂಟ ಬೇಕು. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಸಿಮೆಂಟಗೆ ಹೆಚ್ಚಿನ ಬೇಡಿಕೆ ಇದೆ.
14. ಕರ್ನಾಟಕದಲ್ಲಿ ಸಿಮೆಂಟ್ ಕಾರ್ಖಾನೆಗಳ ಹಂಚಿಕೆಯನ್ನು ತಿಳಿಸಿ.
ಉತ್ತರ : ಕರ್ನಾಟಕದಲ್ಲಿ ಸಿಮೆಂಟ್ ಕಾರ್ಖಾನೆಗಳ ಹಂಚಿಕೆ
• ರಾಜ್ಯದ ಮೊದಲ ಸಿಮೆಂಟ್ ಕಾರ್ಖಾನೆಯು 1939 ರಲ್ಲಿ ಭದ್ರಾವತಿಯಲ್ಲಿ ಸ್ಥಾಪಿತವಾಯಿತು.
• ನಂತರ ಬಾಗಲಕೋಟೆ, ತುಮಕೂರು ಜಿಲ್ಲೆಯ ಅಮ್ಮಸಂದ್ರ, ಗುಲ್ಬರ್ಗಾ ಜಿಲ್ಲೆಯ ಶಹಾಬಾದಗಳಲ್ಲಿ ಸ್ಥಾಪಿಸಲ್ಪಟ್ಟವು.
• ಇತರ ಸಿಮೆಂಟ್ ಕೈಗಾರಿಕೆ ಕೇಂದ್ರಗಳೆಂದರೆ – ವಾಡಿ, ಲೋಕಾಪುರ, ಇಟ್ಟಿಗೆಹಳ್ಳಿ, ಮಡಕೆರೆ, ಕಂಚಿಪುರ, ಕಲದಗಿ, ಕುರಕುಂಟ, ಸೇಡಂ ಮತ್ತು ಚಿತ್ತಾಪುರ ಪ್ರಮುಖವಾದವು.
15. ಕರ್ನಾಟಕದ ಕೈಗಾರಿಕಾ ವಲಯಗಳು ಯಾವುವು?
ಉತ್ತರ : ರಾಜ್ಯದಲ್ಲಿ ಕೈಗಾರಿಕೆಗಳು ವ್ಯಾಪಿಸಿರುವ ಆಧಾರದಲ್ಲಿ ಕರ್ನಾಟಕವನ್ನು ಐದು ಕೈಗಾರಿಕಾ ವಲಯಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ –
• ಬೆಂಗಳೂರು – ಕೋಲಾರ – ತುಮಕೂರು – ಕೈಗಾರಿಕಾ ವಲಯ – ಇದು ಅತಿ ಹೆಚ್ಚು ಕೈಗಾರಿಕೆಗಳನ್ನು ಹೊಂದಿರುವ ಪ್ರದೇಶವಾಗಿದೆ.
• ಬೆಳಗಾವಿ – ಧಾರವಾಡ ವಲಯ
• ದಕ್ಷಿಣ ಕನ್ನಡ – ಉಡುಪಿ ಜಿಲ್ಲೆ
• ಬಳ್ಳಾರಿ – ರಾಯಚೂರು – ಕೊಪ್ಪಳ ಜಿಲ್ಲಾ ಕೈಗಾರಿಕಾ ವಲಯ
• ಮೈಸೂರು – ಮಂಡ್ಯ ಕೈಗಾರಿಕಾ ವಲಯ.
ವಿಷಯ ಅಂಶ ಸಹಕಾರಿಯಾಗಿದೆ
ReplyDelete