ಸಾಮಾಜೀಕರಣ ಹಾಗೂ ಕುಟುಂಬದ ಸಂಬಂಧಗಳು
ಮಗುವು ಕ್ರಮೇಣ ಬೆಳೆದು ಸಾಮಾಜಿಕ ವ್ಯಕ್ತಿಯಾಗಿ ರೂಪುಗೊಳ್ಳುವ ಪ್ರಕ್ರಿಯೆಯನ್ನು ಸಾಮಾಜೀಕರಣ ಎನ್ನುವರು.• ಸಾಮಾಜೀಕರಣವು ಸಾರ್ವತ್ರಿಕವಾದುದು.
• ಮಾನವನ ಜೀವನಪರ್ಯಂತ ನಡೆಯುವ ಕ್ರಿಯೆಯಾಗಿದೆ.
• ಮಾನವ ಪ್ರಾಣಿಗಳಿಗಿಂತ ಭಿನ್ನವಾಗಿರುತ್ತಾನೆ.
• ಪ್ರಾಣಿಗಳಿಗೆ ಕಲಿಕೆಯ ಸಾಮರ್ಥ್ಯ ಬಹಳ ಕಡಿಮೆಯಿರುತ್ತದೆ.
• ಮಾನವ ಹುಟ್ಟಿನಿಂದಲೇ ನೈಸರ್ಗಿಕ ಕೊಡುಗೆಯಾಗಿ ಕಲಿಕಾ ಸಾಮರ್ಥ್ಯವನ್ನು ಪಡೆದಿರುತ್ತಾನೆ.
• ಸಮಾಜದ ಪ್ರಚಲಿತ ಸಂಪ್ರದಾಯಗಳು, ಆಚಾರಗಳು, ನೈತಿಕ ನಿಯಮಗಳನ್ನು ಅನುಸರಿಸುತ್ತಾ ತನ್ನ ಸಾಮಾಜಿಕ ವರ್ತನೆಯಲ್ಲಿ ಅಳವಡಿಸಿಕೊಳ್ಳುತ್ತಾನೆ.
• ಶಿಶುವು ಹುಟ್ಟಿದಾಗ ಸಮಾಜದಲ್ಲಿ ಪಾಲ್ಗೊಳ್ಳಲು ಸಮರ್ಥವಾಗಿರುವುದಿಲ್ಲ.
• ಕ್ರಮೇಣ ಮಾನವ ಮಾಣವ ಸಮಾಜದ ಸಂಬಂಧಗಳನ್ನು ಅಭಿವೃದ್ಧಿಪಡಿಸಿಕೊಂಡು ಕಲಿಕಾ ಪ್ರಕ್ರಿಯೆ ನಡೆಯುತ್ತದೆ.
• ಹೀಗೆ ಸಾಮಾಜಜೀಕರಣಕ್ಕೊಳಗಾಗುತ್ತದೆ.
ಸಾಮಾಜೀಕರಣದ ಮಹತ್ವ/ಕಾರ್ಯಗಳು
• ಮಾನವನನ್ನು ಸಮೂಹ-ಜೀವಿಯಾಗಿಸುತ್ತದೆ.
• ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯಕವಾದಿದೆ.
• ಜೀವನದಲ್ಲಿ ಶಿಸ್ತನ್ನು ನಮೂಡಿಸುತ್ತದೆ.
• ವಿವಿಧ ಕೌಶಲ್ಯಗಳ ಕಲಿಕೆಗೆ ಮತ್ತು ಅಳವಡಿಕೆಗೆ ಅವಕಾಶವನ್ನು ಒದಗಿಸುತ್ತದೆ.
• ಸರಿಯಾದ ಆಕಾಂಕ್ಷೆಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.
• ಸಾಮಾಜಿಕ ಅಂತರವನ್ನು ತಗ್ಗಿಸುತ್ತದೆ.
• ಭವ್ಯ ಭವಿಷ್ತವನ್ನು ರೂಪಿಸಲು ಅವಕಾಶವನ್ನು ನೀಡುತ್ತದೆ.
• ಸಂಸ್ಕೃತಿಯ ನಿರಂತರ ಮುಂದುವರಿಕೆಗೆ ಸಹಾತಕಾರಿಯಾಗಿದೆ.
• ಸಾಮಾಜಿಕ ವ್ಯವಸ್ಥೆಗೆ ಭದ್ರತೆ ನೀಡುತ್ತದೆ.
ಸಾಮಾಜೀಕರಣದ ನಿಯೋಗಿಗಳು
ಸಾಮಾಜೀಕರಣದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಸಾಮಾಜೀಕರಣದ ನಿಯೋಗಿಗಳು ಎನ್ನುವರು.
1. ಕುಟುಂಬ
2. ಸಮವಯಸ್ಕರು
3. ಧರ್ಮ
4. ಶಾಲೆ
5. ಸಮೂಹ ಮಾಧ್ಯಮ
6. ನೆರೆ ಹೊರೆ
ಕುಟುಂಬ
• ಮಗುವಿನ ಸಾಮಾಜೀಕರಣದಲ್ಲಿ ಕುಟುಂಬದ ಪಾತ್ರ ಬಹಳ ಮುಖ್ಯವಾದುದು.
• ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮಗುವಿನ ಮೊದಲ ಗುರು.
• ತಂದೆ-ತಾಯಿಯರ ನಡೆ ನುಡಿ, ಚಟುವಟಿಕೆಗಳು, ವ್ಯವಹರಿಸುವಿಕೆ ಮೊದಲಾದ ಅಂಶಗಳು ಮಗುವಿನ ಮೇಲೆ ಪ್ರಭಾವ ಬೀರುತ್ತವೆ.
• ಪ್ರೀತಿ, ವಿಶ್ವಾಸ, ವಾತ್ಸಲ್ಯ, ಸಹನೆ, ಸಹಕಾರ, ಸಹೃದಯತೆ ಮೊದಲಾದ ಜೀವನ ಮೌಲ್ಯಗಳನ್ನು ಮಗು ಮನೆಯಲ್ಲಿ ಕಲಿಯುತ್ತದೆ.
• ಮಗುವಿಗೆ ಹೊಗಳಿಕೆ, ತಪ್ಪು ಮಾಡಿದಾಗ ಶಿಕ್ಷೆ ನೀಡಿ ಸರಿಯಾದ ದಾರಿಯಲ್ಲಿ ನಡೆಸಲಾಗುತ್ತದೆ.
• ಮಲ್ಲಿಗೆ ಮಿಗ್ಗುಗಳಂತಿದ್ದ ಮಕ್ಕಳ ಮನಸ್ಸು ಸಾಮಾಜೀಕರಣದಿಂದಾಗಿ ಅರಳುತ್ತದೆ ಹಾಗೂ ಪ್ರಪುಲ್ಲವಾಗುತ್ತದೆ.
ಸಮವಯಸ್ಕರು
• ಸಮವಯಸ್ಕರು ಜೊತೆಯ ಆಟಗಾರರು ಮತ್ತು ಸ್ನೇಹಿತರೂ ಆಗಿರುತ್ತಾರೆ.
• ಸಾಮಾಜಿಕರಣದ ಮುಖ್ಯ ನಿಯೋಗಿಗಳಾಗಿರುತ್ತಾರೆ.
• ಸಹಕಾರ ಹಾಗೂ ಪರಸ್ಪರ ಹೋದಾಣಿಕೆಯನ್ನು ಆಧರಿಸಿರುತ್ತದೆ.
• ಪೋಷಕರಿಂದ ಮತ್ತು ಶಿಕ್ಷಕರಿಂದ ತಿಳಿಯಲಾಗದ ವಿಷಯಗಳನ್ನು ಸ್ನೇಹಿತರಿಂದ ನಗು ತಿಳಿಯುತ್ತದೆ.
ಧರ್ಮ
• ಧರ್ಮವು ಸಾಮಾಜಿಕ ಜೀವನಕ್ಕೆ ಆದರ್ಶದ ತಳಹದಿ ಹಾಕುತ್ತದೆ.
• ಧರ್ಮವು ನೀತಿಯುತವಾದ ಜೀವನ ನಡೆಸಲು ಬೋಧಿಸುತ್ತದೆ.
• ತಂದೆ-ತಾಯಿ, ಹಿರಿಯರು, ಸಂಬಂಧಿಕರು ಧಾರ್ಮಿಕ ಸ್ಥಳಗಳಿಗೆ ಹೋಗುವುದನ್ನು ಮಕ್ಕಳು ಗಮನಿಸುತ್ತಾರೆ.
• ಪೂಜೆ, ಹಬ್ಬ, ಜಾತ್ರೆ, ಉತ್ಸವ ಮೊದಲಾದ ಚಟುವಟಿಕೆಯಲ್ಲಿ ಭಾಗವಹಿಸುತ್ತಾರೆ.
• ಸಮಾಜಸೇವೆಯಲ್ಲಿ ಆಸಕ್ತಿ, ದಾನ, ಧರ್ಮ ಮುಂತಾದ ಸಮಾಜದ ಒಳಿತಿಗೆ ನೆರವಾಗುತ್ತಾರೆ.
ಶಾಲೆ
• ಗುರುಗಳು ಮತ್ತು ಸ್ನೇಹಿತರ ವ್ಯಕ್ತಿತ್ವದ ಪ್ರಭಾವಕ್ಕೆ ಒಳಗಾಗುತ್ತಾರೆ.
• ಶಿಕ್ಷಣದಿಂದ ಮಗುವಿನ ವರ್ತನೆ, ಜ್ಞಾನ, ಶೀಲ ಮತ್ತು ಮನೋಭಾವಗಳುರೂಪಗೊಳ್ಳುತ್ತವೆ.
• ಮಗುವಿನ ಸುಪ್ತಶಕ್ತಿ, ಸಾಮರ್ಥ್ಯಗಳನ್ನುಪ್ರಕಟಗೊಳಿಸಿ ಸಾಮಾಜಿಕ ಜೀವನಕ್ಕೆ ಅಣಿಗೊಳಿಸುತ್ತದೆ.
• ಪ್ರೀತಿ, ವಿಸ್ವಾಸ, ಸಹನೆ, ಸಹೃದಯತೆ, ಸನ್ನಡತೆ ಸದ್ಭಾವನೆ ಮೊದಲಾದ ಜೀವನ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುತ್ತಾರೆ.
• ಪಠ್ಯೇತರ ಚಟುವಟಿಕೆಗಳು ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿಭಾಗವಹಿಸುವಂತೆ ಪ್ರೇರೇಪಿಸಬೇಕು.
• ವೃತ್ತಿಶಿಕ್ಷಣ, ಲೈಂಗಿಕಶಿಕ್ಷಣ, ದೈಹಿಕಶಿಕ್ಷಣ, ಆಧ್ಯಾತ್ಮಶಿಕ್ಷಣ, ಜೀವನ ಕೌಶಲ್ಯಗಳಿಂದ ಮಗುವಿನ ಸಾಮಾಝೀಕರಣ ಸಾಧ್ಯವಾಗುತ್ತದೆ.
ಸಮೂಹ ಮಾಧ್ಯಮ
• ಆಧುನಿಕ ಸಮಾಜದಲ್ಲಿ ದೂರದರ್ಶನ, ಚಲನಚಿತ್ರ, ಸುದ್ಧಿಪತ್ರಿಕೆ, ನಿಯತಕಾಲಿಕಗಳು, ನಾಟಕಗಳು, ರೇಡಿಯೋ ಅಂತರ್ಜಾಲ ಮುಂತಾದ ಸಮೂಹ ಮಾಧ್ಯಮಗಳು ಸಾಂಆಜೀಕರಣದ ಪ್ರಮೂಖ ನಿಯೋಗಿಗಳಾಗಿವೆ.
• ಇವುಗಳಲ್ಲಿನ ಕಥೆ, ಕಾಂದಬರಿ, ಕವನ, ನಾಟಕ, ಸಂಗೀತ ಮುಂತಾದವುಗಳಿಂದ ಪ್ರಭಾವಿತರಾಗುತ್ತಾರೆ.
• ವಾರ್ತೆಗಳು, ಸಂವಾದಗಳು, ರಸಪ್ರಶ್ನೆ ಕಾರ್ಯಕ್ರಮಗಳು, ವಿಚಾರ ಸಂಕೀರಣ, ವಿವಿಧ ಸ್ಥಳಗಳ ವೀಕ್ಷಣೆ ಮೊದಲಾದವುಗಳಿಗೆ ಸಮೂಹ ಮಾಧ್ಯಮಗಳು ಸದ್ಬಳಕೆಯಾಗುತ್ತವೆ.
• ಉತ್ತಮ ಸಂಸ್ಕಾರ ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಾಯಕವಾಗಿವೆ.
ಆದರೆ, ಬೆಳೆಯುತ್ತಿರುವ ಯುವಜನಾಂಗ ಇವುಗಳ ಪ್ರಭಾವದಿಂದ ಸಂಸ್ಕೃತಿ ಹಾಗೂ ಮೌಲ್ಯಗಳಿಂದ ದೂರ ಸರಿಯುತ್ತಿದೆ.
ನೆರೆ ಹೊರೆ
• ನೆರೆ ಹೊರೆ ಎಂದರೆ ಅಕ್ಕಪಕ್ಕದವರು ಎಂದರ್ಥ.
• ನೆರೆ ಹೊರೆಯ ಜನರು ಪರಸ್ಪರ ಸಂಬಂಧವನ್ನು ಹೊಂದಿರುತ್ತಾರೆ.
• ನೆರೆ ಹೊರೆಯ ಪಾತ್ರ ನಗರ ಹಾಗೂ ಗ್ರಾಮಗಳೆರಡರಲ್ಲೂ ಕಂಡುಬರುತ್ತದೆ
• ಆದರೆ, ಎರಡರಲ್ಲೂ ಪಾತ್ರ ಮತ್ತು ಸ್ವರೂಪ ಬೇರೆಬೇರೆ ಇರುತ್ತದೆ.
• ಗ್ರಾಮೀಣ ಪ್ರದೇಶದಲ್ಲಿ ಇದರ ಪಾತ್ರ ಮಹತ್ವದ್ದಾಗಿರುತ್ತದೆ.
• ಕಷ್ಟ-ಸುಖಗಳನ್ನು ಹಂಚಿಕೊಂಡು ಒಂದೇ ಕುಟುಂಬದವರಂತೆ ಜೀವಿಸುವರು.
• ಹಬ್ಬ ಹರಿದಿನ, ವಿವಾಹ, ಧಾರ್ಮಿಕ ಸಮಾರಂಭ ಮುಂತಾದ ಸಂದರ್ಣಗಳಲ್ಲಿ ಇಬ್ಬರಿಗೊಬ್ಬರು ಸ್ಪಂದಿಸುತ್ತಾರೆ.
• ನಗರಪ್ರದೇಶಗಳಲ್ಲಿ ನೆರೆಹೊರೆಯವರನ್ನು ನಮ್ಮವರು ಎಂದು ಗುರ್ತಿಸುವುದಕ್ಕಿಂತ ವೈಯಕ್ತಿಕವಾಗಿ ಗುರ್ತಿಸಲಾಗುತ್ತದೆ.
ಲಿಂಗ ಹಾಗೂ ಸಾಮಾಜೀಕರಣ
• ಲಿಂಗಾಧಾರಕ್ಕೆ ಅನುಗುಣವಾಗಿ ಸಾಮಾಜೀಕರಣ ಪ್ರಕ್ರಿಯೆ ಸಾಧಾರಣವಾಗಿ ನಡೆಯುತ್ತದೆ.
( ಆಟದ ಸಾಮಾನುಗಳ ಚಿತ್ರ )
• ಮಹಿಳೆಯರ ಸಾಮಾಜಿಕ ಸ್ಥಾನಮಾನಗಳು ಗಣನೀಯವಾಗಿ ಬದಲಾವಣೆಯಾಗುತ್ತಿವೆ.
• ಆಧುನಿಕ ಶಿಕ್ಷಣದಿಂದ ಮೊದಲು ಪುರುಷರು ಮಾತ್ರ ಪಡೆಯಬಹುದಾಗಿದ್ದ ಕೆಲವು ಅಂತಸ್ತುಗಳನ್ನು ಸ್ತ್ರೀಯರು ಪಡೆಯುತ್ತಿದ್ದಾರೆ.
• ವೈಧ್ಯಕೀಯ ವೃತ್ತಿ, ವಕೀಲಿ ವೃತ್ತಿ, ಸಂಶೋಧನೆ, ಕಾರ್ಖಾನೆ ಕಾರ್ಯ, ಸೈನಿಕೋದ್ಯಮ ಯುದ್ಧೋಪಕರಣ ಮುಂತಾದ ಕಾರ್ಯಗಳಲ್ಲಿ ಸ್ತ್ರೀಯರು ತೊಡಗಿಕೊಂಡಿದ್ದಾರೆ.
• ಆದರೂ ಲಿಂಗ ಬೇಧವನ್ನು ಆಧರಿಸಿ ಶ್ರಮವಿಭಜನೆ ಇನ್ನೂ ಮುಂದುವರೆದಿದೆ.
• ಸ್ವಾತಂತ್ರ್ಯಾ ನಂತರ ಸಮಾನತೆ ತತ್ವದ ಅನುಷ್ಟಾನ, ಹೆಣ್ಣುಮಕ್ಕಳ ಶಿಕ್ಷಣಕ್ಕೆ ಸರ್ಕಾರ ಕೈಗೊಂಡ ವಿಶೇಷ ಕಾರ್ಯಕ್ರಮಗಳು ಬದಲಾದ ಸಾಮಾಜಿಕ ಧೋರಣೆಗಳು ಸಾಮಾಜೀಕರಣದಲ್ಲಿ ಲಿಂಗಸಮಾನತೆ ತರುವಲ್ಲಿ ಪಾತ್ರವಹಿಸಿವೆ.
About is few
ReplyDelete