ಪ್ರಶ್ನೆ 1 ಬಹು ಆಯ್ಕೆ ಪ್ರಶ್ನೆಗಳು
1. ಕರ್ನಾಟಕದಲ್ಲಿ ___________ ವಾಯುಗುಣವಿದೆ. – ಉಷ್ಣವಲಯದ ಮಾನ್ಸೂನ್ ವಾಯುಗುಣ.
2. ಕರ್ನಾಟಕದ ವಾರ್ಷಿಕ ವಾಯುಗುಣವನ್ನು ________ ಭಾಗಗಳಾಗಿ ವಿಂಗಡಿಸಲಾಗಿದೆ. – 04
3. ರಾಜ್ಯದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ದಾಖಲಾಗಿರುವ ಪ್ರದೇಶ. – ರಾಯಚೂರು
4. ಬೇಸಿಗೆಯಲ್ಲಿ __________ ವಿಧದ ಮಳೆಯಾಗುವುದು. – ಪರಿಸರಣ ಮಳೆ.
5. ಬೇಸಿಗೆಯಲ್ಲಿ ಬೀಳುವ ಮಳೆಯನ್ನು ಕಾಫಿ ಹೂ ಮಳೆ ಎಂದು ಕರೆಯಲು ಕಾರಣ
–ಕಾಫಿ ಗಿಡಗಳು ಹೂ ಬಿಡಲು ನೆರವಾಗುವದರಿಂದ.
6. ಬೇಸಿಗೆಯಲ್ಲಿ ಬೀಳುವ ಮಳೆಯನ್ನು ಮಾವಿನ ಹುಯ್ಲು ಎಂದು ಕರೆಯಲು ಕಾರಣ
- ಮಾವು ಫಲಸಿಗೆ ಅನುಕೂಲವಾಗುವದರಿಂದ.
7. ಬೇಸಿಗೆ ಕಾಲದಲ್ಲಿ ಬೀಳುವ ರಾಜ್ಯ ಮಳೆಯ ಸರಾಸರಿ ಪ್ರಮಾಣ – ಶೇಕಡಾ 7.
8. ಈ ಮಾರುತಗಳು ಅರಬ್ಬಿಸಮುದ್ರದ ಮೇಲಿಂದ ಬೀಸುವ ತೇವಾಂಶಭರಿತ ಮಾರುತಗಳನ್ನು ಮಲೆನಾಡು ಘಟ್ಟಗಳು ತಡೆದು ಅಧಿಕ ಮಳೆಯನ್ನು ಸುರಿಸುತ್ತವೆ. – ನೈರುತ್ಯ ಮಾನ್ಸೂನ್ ಮಾರುತಗಳು
9. ಕರ್ನಾಟಕದಲ್ಲಿ ಅಧಿಕ ಮಳೆ ಬೀಳುವ ಪ್ರದೇಶ. – ಆಗುಂಬೆ.
10. ರಾಜ್ಯದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ. – ಚಿತ್ರದುರ್ಗ ಜಿಲ್ಲೆಯ ನಾಯಕನ ಹಟ್ಟಿ.
11. ನೈರುತ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ ರಾಜ್ಯವು ಪಡೆಯುವ ಮಳೆಯ ಪ್ರಮಾಣ – ಶೇ 80ರಷ್ಟು.
12. ಮಾನ್ಸೂನ್ ಮಾರುತಗಳ ನಿರ್ಗಮನ ಕಾಲವನ್ನು ಹೀಗೂ ಕರೆಯುವರು.- ಈಶಾನ್ಯ ಮಾನ್ಸೂನ್ ಮಾರುತಗಳ ಕಾಲ.
13. ಬಂಗಾಳ ಕೊಲ್ಲಿಯಲ್ಲಿ ಚಂಡಮಾರುಗಳು ಉಗಮವಾಗುವದು ಈ ಕಾಲದಲ್ಲಿ – ಈಶಾನ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ.
14. ಸಾಮಾನ್ಯವಾಗಿ ಚಂಡಮಾರುತಗಳು ಸೃಷ್ಟಿಯಾಗುವುದು ಈ ತಿಂಗಳುಗಳಲ್ಲಿ – ನವಂಬರ್ & ಡಿಸೆಂಬರ್.
15. ಈಶಾನ್ಯ ಮಾನ್ಸೂನ್ ಮಾರುತಗಳ ಕಾಲದಲ್ಲಿ ರಾಜ್ಯವು ಪಡೆಯುವ ಮಳೆಯ ಪ್ರಮಾಣ – ಶೇ 12 ರಷ್ಟು.
16. ಈ ಕಾಲದಲ್ಲಿ ರಾಜ್ಯದಲ್ಲಿ ಕಡಿಮೆ ಉಷ್ಣಾಂಶ, ಕಡಿಮೆ ಆರ್ಧ್ರತೆ ಮತ್ತು ಕಡಿಮೆ ಮಳೆಯನ್ನು ಪಡೆಯುತ್ತದೆ. – ಚಳಿಗಾಲದಲ್ಲಿ.
17. ಈ ತಿಂಗಳನ್ನು ಕರ್ನಾಟಕದ ಪ್ರವಾಸ ಮಾಸ ಎಂದು ಕರೆಯುವರು. – ಜನವರಿ.
18. ಜನವರಿ ತಿಂಗಳನ್ನು ಕರ್ನಾಟಕದ ಪ್ರವಾಸ ಮಾಸ ಎಂದು ಕರೆಯಲು ಕಾರಣ – ಅತಿ ಕಡಿಮೆ ಉಷ್ಣಾಂಶ ದಾಖಲಾಗುವದರಿಂದ
19. ಕರ್ನಾಟಕದಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾದ ಪ್ರದೇಶ – ಬೆಳಗಾವಿ (6.7ºಸೆಂ,)
20. ಕರ್ನಾಟಕದಲ್ಲಿ ___________ ಪ್ರಕಾರದ ಮಣ್ಣಿದೆ. – 04.
21. ಕೆಂಪು ಮಣ್ಣು ಕೆಂಪು ಬಣ್ಣವನ್ನು ಹೊಂದಿರಲು ಕಾರಣ – ಕಬ್ಬಿಣದ ಆಕ್ಸೈಡ್ ಇರುವುದರಿಂದ.
22. ಗ್ರ್ಯಾನೈಟ್, ನೀಸ್ ಶಿಲಾದ್ರವ್ಯಗಳಿಂದ ರೂಪಗೊಂಡ ಮಣ್ಣು – ಕೆಂಪು ಮಣ್ಣು.
23.ಬಸಾಲ್ಟ್ ಅಥವಾ ಅಗ್ನಿ ಶಿಲೆಗಳ ಶೀಥಿಲಿಕರಣದಿಂದ ಉಂಟಾದ ಮಣ್ಣು – ಕಪ್ಪು ಮಣ್ಣು.
24. ಹತ್ತಿ ಬೆಳೆಗೆ ಅತ್ಯಂತ ಸೂಕ್ತವಾದ ಮಣ್ಣು – ಕಪ್ಪು ಮಣ್ಣು.
25. ಅತಿ ಹೆಚ್ಚು ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣವನ್ನು ಹೊಂದಿದ ಮಣ್ಣು – ಕಪ್ಪು ಮಣ್ಣು.
26. ಅಧಿಕ ತೇವಾಂಶ ಮತ್ತು ಮಳೆ ಬೀಳುವ ಪ್ರದೇಶಗಳಲ್ಲಿ ಕಂಡುವ ಬರುವ ಮಣ್ಣು – ಜಂಬಿಟ್ಟಿಗೆ ಮಣ್ಣು
27. ಸಮುದ್ರ ತೀರ ಪ್ರದೇಶಗಳಲ್ಲಿ ನದಿ ಮತ್ತು ಸಮುದ್ರದ ಅಲೆಗಳಿಂದ ಸಂಚಯನವಾದ ಮಣ್ಣು – ಮೆಕ್ಕಲು ಮಣ್ಣು.
28. ಕರ್ನಾಟಕದ ಕಾಡುಗಳಲ್ಲಿ ವಿಶೇಷವಾಗಿ ಈ ಮರಗಳು ಬೆಳೆಯುತ್ತವೆ. – ಶ್ರೀಗಂಧದ ಮರಗಳು.
29. ಶ್ರೀಗಂಧದ ನಾಡು ಎಂದು ಕರೆಯಲ್ಪಡುವ ರಾಜ್ಯ – ಕರ್ನಾಟಕ.
30. ಕರ್ನಾಟಕದಲ್ಲಿ ದಾಖಲಾದ ಅರಣ್ಯ ಪ್ರದೇಶ - 43.4 ಲಕ್ಷ ಚ.ಕಿ.ಮೀ.ಗಳು.
31. ಭಾರತದಲ್ಲಿ ಅರಣ್ಯ ಹಂಚಿಕೆಯಲ್ಲಿ ಕರ್ನಾಟಕದ ಸ್ಥಾನ – 7ನೇ ಸ್ಥಾನ.
32. ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವನ್ನೊಳಗೊಂಡ ಜಿಲ್ಲೆ – ಉತ್ತರ ಕನ್ನಡ.
33. ಕರ್ನಾಟಕದಲ್ಲಿ ಅತಿ ಕಡಿಮೆ ಅರಣ್ಯವನ್ನು ಹೊಂದಿದ ಜಿಲ್ಲೆ – ವಿಜಯಪುರ.
34. ಅತಿ ಹೆಚ್ಚು ಮಳೆ ಬೀಳುವ ಋತುಮಾನ – ನೈರುತ್ಯ ಮಾನ್ಸೂನ್ ಮಾರುತಗಳ ಕಾಲ.
35. ಉತ್ತರ ಕರ್ನಾಟಕದಲ್ಲಿ ಈ ಮಣ್ಣು ಹೆಚ್ಚಾಗಿ ಕಂಡುಬರುತ್ತದೆ. – ಕಪ್ಪುಮಣ್ಣು.
36. ಸದಾ ಹಸಿರಿನಿಂದ ಕೂಡಿದ ಅರಣ್ಯಗಳು __________ ಪ್ರದೇಶದಲ್ಲಿವೆ. – ಮಲೆನಾಡು.
ಪ್ರಶ್ನೆ 2 ಪ್ರಶ್ನೋತ್ತರಗಳು.
1. ಕರ್ನಾಟಕದ ನಾಲ್ಕು ಋತುಮಾನಗಳಾವುವು?
ಉತ್ತರ : ಕರ್ನಾಟಕದ ನಾಲ್ಕು ಋತುಮಾನಗಳು
ಬೇಸಿಗೆ ಕಾಲ (ಮಾರ್ಚ – ಮೇ)
ಮಳೆಗಾಲ (ಜೂನ್ – ಸಪ್ಟಂಬರ್)
ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ (ಅಕ್ಟೋಬರ್ – ನವಂಬರ್)
ಚಳಿಗಾಲ (ಡಿಸೆಂಬರ್ – ಫೆಬ್ರುವರಿ)
2. ಕರ್ನಾಟಕದ ಮಳೆಗಾಲವನ್ನು ಕುರಿತು ಬರೆಯಿರಿ.
ಉತ್ತರ : ಕರ್ನಾಟಕದಲ್ಲಿ ಮಳೆಗಾಲದ ಲಕ್ಷಣ.
Ø ಕರ್ನಾಟಕದಲ್ಲಿ ಮಳೆಗಾಲವನ್ನು ನೈರುತ್ಯ ಮಾನ್ಸೂನ್ ಮಾರುತಗಳ ಕಾಲವೆಂದು ಕರೆಯುವರು.
Ø ಅರಬ್ಬಿಸಮುದ್ರದ ಮೇಲಿಂದ ಬೀಸುವ ತೇವಾಂಶಭರಿತ ಮಾರುತಗಳನ್ನು ಮಲೆನಾಡು ಘಟ್ಟಗಳು ತಡೆದು ಅಧಿಕ ಮಳೆಯನ್ನು ಸುರಿಸುತ್ತವೆ.
Ø ಪೂರ್ವದ ಕಡೆಗೆ ಹೋದಂತೆಲ್ಲಾ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ಪೂರ್ವದ ಮೈದಾನವು ಮಳೆಯ ನೆರಳಿನ ಪ್ರದೇಶವೆಂದು ಕರೆಯಲ್ಪಡುವದು.
Ø ರಾಜ್ಯದಲ್ಲಿ ಆಗುಂಬೆ ಅಧಿಕ ಮಳೆ ಪಡೆದರೆ, ಚಿತ್ರದುರ್ಗ ಜಿಲ್ಲೆಯ ನಾಯಕನ ಹಟ್ಟಿ ಅತಿ ಕಡಿಮೆ ಮಳೆಯನ್ನು ಪಡೆದ ದಾಖಲೆಯಿದೆ.
Ø ಈ ಋತುಮಾನದಲ್ಲಿ ಕರ್ನಾಟಕದಲ್ಲಿ ಶೇ. 80 ರಷ್ಟು ಮಳೆಯಾಗುತ್ತದೆ.
3. ಕರ್ನಾಟಕದಲ್ಲಿ ಮಣ್ಣಿನ ವಿಧಗಳನ್ನು ತಿಳಿಸಿ.
ಉತ್ತರ : ಕರ್ನಾಟಕದಲ್ಲಿ ನಾಲ್ಕು ಪ್ರಕಾರದ ಮಣ್ಣಿನ ವಿಧಗಳಿವೆ. ಅವುಗಳೆಂದರೆ –
1. ಕೆಂಪುಮಣ್ಣು 2. ಕಪ್ಪು ಮಣ್ಣು 3. ಜಂಬಿಟ್ಟಿಗೆ ಮಣ್ಣು 4. ಕರಾವಳಿಯ ಮೆಕ್ಕಲು ಮಣ್ಣು
4. ಕರ್ನಾಟಕದ ವಿವಿಧ ಸ್ವಾಭಾವಿಕ ಸಸ್ಯವರ್ಗಗಳನ್ನು ತಿಳಿಸಿ.
ಉತ್ತರ : ಮಳೆಯ ಪ್ರಮಾಣ, ಭೂಸ್ವರೂಪ ಹಾಗೂ ಮಣ್ಣಿನ ಲಕ್ಷಣಗಳನ್ನಾಧರಿಸಿ ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗವನ್ನು 4 ಪ್ರಕಾರಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ –
1. ನಿತ್ಯ ಹರಿದ್ವರ್ಣ ಕಾಡುಗಳು 2. ಎಲೆ ಉದುರುವ ಸಸ್ಯವರ್ಗ
3. ಮಿಶ್ರಣ ಕಾಡುಗಳು 4. ಕುರುಚಲು ಮತ್ತು ಹುಲ್ಲುಗಾವಲುಗಳು
5. ಕರ್ನಾಟಕವನ್ನು ಶ್ರೀಗಂಧದ ನಾಡು ಎಂದು ಏಕೆ ಕರೆಯುತ್ತಾರೆ?
ಉತ್ತರ : ಕರ್ನಾಟಕದ ಕಾಡುಗಳಲ್ಲಿ ವಿಶೇಷವಾಗಿ ಶ್ರೀಗಂಧದ ಮರಗಳು ಬೆಳೆಯುತ್ತವೆ. ಇದರಿಂದ ಸುಗಂಧ ದ್ರವ್ಯ, ಕುಸುರಿ ಕೆಲಸದ ಕುಶಲ ವಸ್ತುಗಳು ಸಾಬೂನು, ಔಷಧಿಗಳನ್ನು ತಯಾರಿಸಲಾಗುವುದು.ಇವು ವಿಶ್ವವಿಖ್ಯಾತವಾಗಿದ್ದು, ದೇಶೀಯ ಅಪಾರವಾದ ಬೇಡಿಕೆ ಪೂರೈಸುವದಲ್ಲದೇ ವಿದೇಶಗಳಿಗೂ ರಫ್ತು ಮಾಡಲಾಗುತ್ತದೆ.ಆದ್ದರಿಂದ ಕರ್ನಾಟಕವು ಶ್ರೀಗಂಧದ ನಾಡು ಎಂದೇ ಪ್ರಸಿದ್ಧಿ ಪಡೆದಿದೆ.
6. ನಮ್ಮ ಅರಣ್ಯಗಳಲ್ಲಿರುವ ಪ್ರಮುಖ ವನ್ಯ ಪ್ರಾಣಿಗಳನ್ನು ಹೆಸರಿಸಿ.
ಉತ್ತರ :ಆನೆ, ಹುಲಿ, ಸಿಂಹ, ಚಿರತೆ, ಕಾಡೆಮ್ಮೆ, ಕಡವೆ, ಜಿಂಕೆ, ಕರಡಿ, ಮುಳ್ಳು ಹಂದಿ ಮೊದಲಾದ ವನ್ಯ ಪ್ರಾಣಿಗಳು ನಮ್ಮ ಅರಣ್ಯಗಳಲ್ಲಿ ಕಂಡುಬರುತ್ತದೆ.
7. ಬೇಸಿಗೆ ಕಾಲದ ಲಕ್ಷಣಗಳನ್ನು ತಿಳಿಸಿ.
ಉತ್ತರ : ಬೇಸಿಗೆ ಕಾಲದ ಲಕ್ಷಣಗಳು
ಈ ಕಾಲದಲ್ಲಿ ವಾಯುಗುಣವು ಅತಿ ಶಾಖ, ಶುಷ್ಕ ಮತ್ತು ಸೆಖೆಯಿಂದ ಕೂಡಿರುತ್ತದೆ.
ಎಪ್ರೀಲ್ – ಮೇ ತಿಂಗಳಲ್ಲಿ ಉಷ್ಣಾಂಶವು ಗರಿಷ್ಠ ಮಟ್ಟವನ್ನು ತಲುಪುತ್ತದೆ.
ಉತ್ತರ ಮೈದಾನದಲ್ಲಿ ಆರ್ದ್ರತೆಯ ಪ್ರಮಾಣವು ದಕ್ಷಿಣ ಮೈದಾನಕ್ಕಿಂತ ಕಡಿಮೆಯಿರುತ್ತದೆ.
ಬೇಸಿಗೆ ಅವಧಿಯಲ್ಲಿ ಅಧಿಕ ಬಾಷ್ಪೀಭವನದಿಂದ ಮಳೆ ಮೋಡಗಳು ನಿರ್ಮಾಣವಾಗಿ ಗುಡುಗು, ಮಿಂಚು, ಸಿಡಿಲುಗಳ ಅಬ್ಬರದೊಂದಿಗೆ ಪರಿಸರಣ ರೀತಿಯ ಮಳೆಯಾಗುವುದು.
ಈ ಮಳೆಯು ಕಾಫಿ ಗಿಡ ಹೂ ಬಿಡಲು ಮತ್ತು ಮಾವು ಫಸಲಿಗೆ ನೆರವಾಗುತ್ತದೆ.
ಈ ಕಾಲದಲ್ಲಿ ರಾಜ್ಯದ ವಾರ್ಷಿಕ ಒಟ್ಟು ಮಳೆಯಲ್ಲಿ ಶೇ. 7 ಭಾಗ ಬೀಳುತ್ತದೆ.
8. ಮಾನ್ಸೂನ್ ಮಾರುತಗಳು ಅಕ್ಬೋಬರ್ ತಿಂಗಳು ಆರಂಭದೊಡನೆ ಹಿಂದಿರುಗಲು ಕಾರಣವೇನು?
ಉತ್ತರ : ಅಕ್ಟೋಬರ್ ತಿಂಗಳು ಆರಂಭವಾದೊಡನೆ ಉತ್ತರ ಭಾರತದಲ್ಲಿ ಉಷ್ಣಾಂಶವು ಕಡಿಮೆಯಾಗಿ ಒತ್ತಡ ಹೆಚ್ಚಾಗುವದರಿಂದ ನೈರುತ್ಯ ಮಾನ್ಸೂನ್ ಮಾರುತಗಳು ಈಶಾನ್ಯದಿಂದ ನೈರುತ್ಯಕ್ಕೆ ಬೀಸುತ್ತ ನಿರ್ಗಮಿಸುತ್ತವೆ.
9. ಚಳಿಗಾಲದ ಲಕ್ಷಣಗಳನ್ನು ತಿಳಿಸಿ.
ಉತ್ತರ : ಚಳಿಗಾಲದ ಲಕ್ಷಣಗಳು
ಈ ಕಾಲದಲ್ಲಿ ಕಡಿಮೆ ಉಷ್ಣಾಂಶ, ಕಡಿಮೆ ಆರ್ದ್ರತೆಕ ಮಳೆಯೂ ಕಡಿಮೆ ಹಾಗೂ ತಿಳಿಯಾದ ಆಕಾಶವುಳ್ಳ ಹವಾಗುಣವಿರುತ್ತದೆ.
ಜನವರಿ ತಿಂಗಳಲ್ಲಿ ಅತಿ ಕಡಿಮೆ ಉಷ್ಣಾಂಶ ದಾಖಲಾಗುವದರಿಂದ ಈ ತಿಂಗಳನ್ನು ಕರ್ನಾಟಕದ ಪ್ರವಾಸದ ಮಾಸ ಎನ್ನುವರು.
ಒಮ್ಮೊಮ್ಮೆ ಪ್ರಾತಃಕಾಲದಲ್ಲಿ ಕಾವಳ ಕಂಡುಬರುವುದು.
ರಾಜ್ಯದ ಒಟ್ಟು ಮಳೆಯಲ್ಲಿ ಶೇ. 1 ಭಾಗ ಈ ಅವಧಿಯಲ್ಲಿ ಬೀಳುವುದು.
10. ಕೆಂಪು ಮಣ್ಣಿನ ಗುಣಲಕ್ಷಣಗಳನ್ನು ತಿಳಿಸಿ.
ಉತ್ತರ : ಕೆಂಪುಮಣ್ಣಿನ ಗುಣಲಕ್ಷಣಗಳು
Ø ಇದು ಗ್ರಾನೈಟ್, ನೀಸ್ ಶಿಲಾದ್ರವ್ಯಗಳಿಂದ ರೂಪುಗೊಂಡಿದ್ದು, ಕಬ್ಬಿಣದ ಆಕ್ಸೈಡ್ ಇರುವುದರಿಂದ ಈ ಮಣ್ಣು ಕೆಂಪಾಗಿರುವುದು.
Ø ಕೆಂಪುಮಣ್ಣಿನಲ್ಲಿ ಹೆಚ್ಚು ಸುಣ್ಣ ಮತ್ತು ಉಪ್ಪಿನಾಂಶವಿದ್ದು,ಸಾವಯವ ಅಂಶ ಕಡಿಮೆ ಇದೆ.
Ø ಹೆಚ್ಚು ಹಗುರ ಮತ್ತು ತೆಳು ಪದರುಳ್ಳ ಈ ಮಣ್ಣು ಅಷ್ಟೊಂದು ಫಲವತ್ತಾದುದಲ್ಲ.
Ø ಈ ಮಣ್ಣಿಗೆ ತೇವಾಂಶ ಉಳಿಸಿಕೊಳ್ಳುವ ಸಾಮರ್ಥ್ಯ ಕಡಿಮೆ ಇದೆ.
Ø ಈ ಮಣ್ಣಿನಲ್ಲಿ ತೃಣಧಾನ್ಯಗಳಾದ ರಾಗಿ, ನವಣೆ, ಸಜ್ಜೆ, ಜೋಳ, ಇತ್ಯಾದಿ ಮತ್ತು ತಂಬಾಕು, ದ್ವಿದಳಧಾನ್ಯಗಳು, ನೆಲಗಡಲೆಯಂತಹ ಮಳೆ ಆಶ್ರಿತ ಬೆಳೆಗಳನ್ನು ಬೆಳೆಯಬಹುದು.
Ø ತುಮಕೂರು, ಬೆಂಗಳೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಲ್ಲಿ ಈ ಮಣ್ಣು ಹೆಚ್ಚಾಗಿ ಕಂಡುಬರುತ್ತದೆ.
11. ಕಪ್ಪುಮಣ್ಣಿನ ಗುಣಲಕ್ಷಣಗಳನ್ನು ತಿಳಿಸಿ.
ಉತ್ತರ : ಕಪ್ಪು ಮಣ್ಣಿನ ಗುಣಲಕ್ಷಣಗಳು
Ø ಇದು ಬಸಾಲ್ಟ್ ಅಥವಾ ಅಗ್ನಿಶಿಲೆಗಳ ಶಿಥಿಲೀಕರಣದಿಂದ ಉಂಟಾಗಿದೆ.
Ø ಇದರಲ್ಲಿ ಮೆಗ್ನೀಶಿಯಂ, ಅಲ್ಯೂಮಿನಿಯಂ ಮತ್ತು ಕಬ್ಬಿಣದ ಆಕ್ಸೈಡಗಳಿರುತ್ತವೆ. ಹಾಗಾಗಿ ಇದರ ಬಣ್ಣ ಕಪ್ಪು.
Ø ಇದಕ್ಕೆ ಹೆಚ್ಚು ದಿನ ತೇವಾಂಶವನ್ನು ಹಿಡಿದಿಟ್ಟುಕೊಳ್ಳುವ ಗುಣವಿದೆ.
Ø ಇದು ಹತ್ತಿ ಬೆಳೆಗೆ ಅತ್ಯಂತ ಸೂಕ್ತವಾದ್ದರಿಂದ ಇದಕ್ಕೆ ಕಪ್ಪು ಹತ್ತಿ ಮಣ್ಣು ಎಂದು ಕರೆಯುತ್ತಾರೆ.
Ø ಈ ಮಣ್ಣಿನಲ್ಲಿ ಹತ್ತಿ, ಜೋಳ, ಸೂರ್ಯಕಾಂತಿ, ಮೆಣಸಿನಕಾಯಿ, ಮೆಕ್ಕೆಜೋಳ, ಬೇಳೆಕಾಳು, ಕಬ್ಬು, ಈರುಳ್ಳಿ ಮತ್ತು ಭತ್ತವನ್ನು ಬಳೆಯಲಾಗುತ್ತದೆ.
Ø ಇದು ಉತ್ತರ ಕರ್ನಾಟಕದ ಜಿಲ್ಲೆಗಳಾದ ಧಾರವಾಡ, ಗದಗ, ಬಳ್ಳಾರಿ, ಕೊಪ್ಪಳ, ಕಲಬುರಗಿ, ಯಾದಗಿರಿ, ಬಾಗಲಕೋಟೆ, ಬೆಳಗಾವಿ ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.
12. ಜಂಬಿಟ್ಟಿಗೆ ಮಣ್ಣಿನ ಲಕ್ಷಣಗಳನ್ನು ತಿಳಿಸಿ.
ಉತ್ತರ : ಜಂಬಿಟ್ಟಿಗೆ ಮಣ್ಣಿನ ಲಕ್ಷಣಗಳು
Ø ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆ ಬೀಳುವ ಭಾಗಗಳಲ್ಲಿ ಜಂಬಿಟ್ಟಿಗೆ ಮಣ್ಣು ಕಂಡುಬರುತ್ತದೆ.
Ø ನೀರಿನಲ್ಲಿ ಕರಗುವ ಸುಣ್ಣ ಮತ್ತು ಸಿಲೀಕೇಟ್ ಗಳು ಮಳೆ ನೀರಿನಲ್ಲಿ ಕರಗಿ ರಳದ ಮಣ್ಣಿನ ಸ್ತರಗಳಿಗೆ ಸಾಗಿಸಲ್ಪಡುತ್ತದೆ.
Ø ಕರಗದಂತಹ ಕಬ್ಬಿಣ ಮತ್ತು ಅಲ್ಯೂಮಿನಿಯಂಗಳು ಮೇಲ್ಪದರುಗಳಲ್ಲಿ ಉಳಿಯುತ್ತವೆ.
Ø ಇದು ಮಳೆಗಾಲದಲ್ಲಿ ಮೃದುವಾಗಿ, ಬೇಸಿಗೆ ಕಾಲದಲ್ಲಿ ಒಣಗಿ ಗಟ್ಟಿಯಾಗಿ ಲ್ಯಾಟರೈಟ್ ಶಿಲೆಯಾಗುತ್ತದೆ.
Ø ಈ ಮಣ್ಣಿನಲ್ಲಿ ಗೋಡಂಬಿ, ಕಾಫಿ, ಚಹ, ಏಲಕ್ಕಿ, ಮೆಣಸು, ರಬ್ಬರ್, ತೆಂಗು ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ.
Ø ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ ಮುಂತಾದ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
13. ಕರಾವಳಿಯ ಮೆಕ್ಕಲು ಮಣ್ಣಿನ ಗುಣಲಕ್ಷಣಗಳನ್ನು ತಿಳಿಸಿ.
ಉತ್ತರ : ಕರಾವಳಿಯ ಮೆಕ್ಕಲು ಮಣ್ಣಿನ ಗುಣಲಕ್ಷಣಗಳು
Ø ಇದು ನದಿ, ಸಮುದ್ರದ ಅಲೆಗಳಿಂದ ಸಾಗಿಸಲ್ಪಟ್ಟು ಸಮುದ್ರ ತೀರದಲ್ಲಿ ಸಂಗ್ರಹವಾಗಿದೆ.
Ø ಇದರಲ್ಲಿ ಮರಳು ಮತ್ತು ಜೇಡಿ ಮಿಶ್ರಣವಾಗಿರುವುದರ ಜೊತೆಗೆ ಕೊಳೆತ ಜೈವಿಕಾಂಶಗಳು ಸಮೃದ್ಧವಾಗಿರುತ್ತವೆ.
Ø ಭತ್ತ ಗೋಡಂಬಿ, ತೆಂಗು, ಅಡಿಕೆ, ಬಾಳೆ ಮುಂತಾದ ಬೆಳೆಗಳ ಸಾಗುವಳಿಗೆ ಈ ಮಣ್ಣು ಸೂಕ್ತ.
Ø ಇದು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುತ್ತದೆ.
14. ನಿತ್ಯಹರಿದ್ವರ್ಣ ಕಾಡುಗಳ ಪ್ರಮುಖ ಲಕ್ಷಣಗಳನ್ನು ತಿಳಿಸಿ.
ಉತ್ತರ : ನಿತ್ಯಹರಿದ್ವರ್ಣ ಕಾಡುಗಳ ಪ್ರಮುಖ ಲಕ್ಷಣಗಳು
ವಾರ್ಷಿಕ ಸರಾಸರಿ 250 ಸೆಂ.ಮೀ. ಗಳಿಗೂ ಅಧಿಕ ಮಳೆ ಬೀಳುವ ಭಾಗಗಳಲ್ಲಿ ಈ ಕಾಡುಗಳು ಕಂಡುಬರುತ್ತವೆ.
ಅಧಿಕ ಉಷ್ಣಾಂಶ ಮತ್ತು ಅಧಿಕ ಮಳೆಯಾಗುವದರಿಂದ ಇಲ್ಲಿ ಮರಗಳು ಎತ್ತರವಾಗಿ ಹಾಗೂ ದಟ್ಟವಾಗಿ ಬೆಳೆಯುತ್ತವೆ.
ಈ ಕಾಡುಗಳು ದುರ್ಗಮವಾಗಿದ್ದು, ಕೆಲವು ಕಡೆ ಸೂರ್ಯನ ಕಿರಣಗಳು ನೆಲಕ್ಕೆ ತಲುಪುವುದಿಲ್ಲ.
ಇಲ್ಲಿ ಪ್ರಮುಖವಾಗಿ ಬೀಟೆ, ತೇಗ, ಮತ್ತಿ, ನಂದಿ, ದೂಪ, ಹೊನ್ನೆ, ಹೆಬ್ಬಲಸು ಮೊದಲಾದ ಎತ್ತರದ ಮರಗಳು ಬೆಳೆಯುತ್ತವೆ.
ಸಾಂಭಾರ ಪದಾರ್ಥಗಳಾದ ಲವಂಗ, ಏಲಕ್ಕಿ, ದಾಲ್ಚಿನ್ನಿ, ಔಷಧಿ ಸಸ್ಯಗಳು ಹೇರಳವಾಗಿ ಬೆಳೆಯುತ್ತವೆ.
ಇಂತಹ ಕಾಡುಗಳು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಂಡುಬರುತ್ತವೆ.
15. ಎಲೆ ಉದುರುವ ಸಸ್ಯವರ್ಗದ ಲಕ್ಷಣಗಳನ್ನು ತಿಳಿಸಿ.
ಉತ್ತರ :ಎಲೆ ಉದುರುವ ಸಸ್ಯವರ್ಗದ ಲಕ್ಷಣಗಳು
ಈ ಕಾಡುಗಳಲ್ಲಿ ಚಳಿಗಾಲದ ತರುವಾಯ ತೇವಾಂಶದ ಕೊರತೆಯಿಂದಾಗಿ ಮರಗಳ ಎಲೆಗಳು ಉದುರುತ್ತವೆ. ಮತ್ತೆ ವಸಂತ ಋತುವಿನಲ್ಲಿ ಚಿಗುರುತ್ತವೆ.
ವಾರ್ಷಿಕ ಸರಾಸರಿ 60 – 120 ಸೆಂ.ಮೀ. ಮಳೆ ಬೀಳುವ ಭಾಗಗಳಲ್ಲಿ ಇಂತಹ ಸಸ್ಯವರ್ಗ ಕಂಡುಬರುತ್ತದೆ.
ತೇಗ, ಹೊನ್ನೆ, ಮತ್ತಿ, ಬೇವು, ಮಾವು, ಹಲಸು, ಮುತ್ತುಗ, ಬಾಗೆ, ಆಲ, ಶ್ರೀಗಂಧ ಮತ್ತು ಬಿದಿರು ಇಲ್ಲಿ ಬೆಳೆಯುವ ಪ್ರಮುಖ ಮರಗಳು.
ಇಂತಹ ಕಾಡುಗಳು ಚಿಕ್ಕಮಗಳೂರು, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪೂರ, ಕೋಲಾರದ ದಕ್ಷಿಣ ಭಾಗಗಳು ಮತ್ತು ಬೆಂಗಳೂರಿನ ಗ್ರಾಮಾಂತರ ಜಿಲ್ಲೆಗಳಲ್ಲಿ ಕಂಡುಬರುತ್ತವೆ.
16. ಮಿಶ್ರ ಬಗೆಯ ಕಾಡುಗಳ ಲಕ್ಷಣಗಳನ್ನು ತಿಳಿಸಿ.
ಉತ್ತರ :ಮಿಶ್ರ ಬಗೆಯ ಕಾಡುಗಳ ಲಕ್ಷಣಗಳು
ನಿತ್ಯ ಹರಿದ್ವರ್ಣ ಮತ್ತು ಅಗಲ ಎಲೆಗಳುಳ್ಳ ಎಲೆ ಉದುರಿಸುವ ಪ್ರಕಾರದ ಮರಗಳು ಬೆಳೆಯುವ ಸಸ್ಯವರ್ಗವೇ ಮಿಶ್ರ ಬಗೆಯ ಕಾಡುಗಳಾಗಿವೆ.
ಇವು ವಾರ್ಷಿಕ ಸರಾಸರಿ 120 – 150 ಸೆಂ.ಮೀ. ಮಳೆ ಬೀಳುವ ಭಾಗಗಳಲ್ಲಿ ಇಂತಹ ಸಸ್ಯವರ್ಗ ಕಂಡುಬರುತ್ತದೆ.
ತೇಗ, ಹೊನ್ನೆ, ಮತ್ತಿ, ಬೇವು, ಮಾವು, ಹಲಸು, ಮುತ್ತುಗ, ಬಾಗೆ, ಆಲ, ಶ್ರೀಗಂಧ ಮತ್ತು ಬಿದಿರು ಇಲ್ಲಿ ಬೆಳೆಯುವ ಪ್ರಮುಖ ಮರಗಳು.
ಇಂತಹ ಕಾಡುಗಳು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದ ಕೆಲವು ಭಾಗಗಳು, ಕೊಡಗಿನ ಪೂರ್ವಭಾಗ ಹಾಗೂ ಚಿಕ್ಕಮಗಳೂರು, ಹಾಶನ ಮತ್ತು ಮೈಸೂರು ಜಿಲ್ಲೆಯ ಭಾಗಗಳಲ್ಲಿ ಕಂಡುಬರುತ್ತದೆ.
17. ಹುಲ್ಲುಗಾವಲು ಮತ್ತು ಕುರುಚಲು ಸಸ್ಯವರ್ಗಗಳ ಲಕ್ಷಣಗಳನ್ನು ತಿಳಿಸಿ.
ಉತ್ತರ :ಹುಲ್ಲುಗಾವಲು ಮತ್ತು ಕುರುಚಲು ಸಸ್ಯವರ್ಗಗಳ ಲಕ್ಷಣಗಳು
ಕರ್ನಾಟಕದಲ್ಲಿ 60 ಸೆಂ.ಮೀ.ಗಿಂತ ಕಡಿಮೆ ವಾರ್ಷಿಕ ಮಳೆ ಬೀಳುವ ಪ್ರದೇಶದಲ್ಲಿ ಇಂತಹ ಸಸ್ಯವರ್ಗ ಹಂಚಿಕೆಯಾಗಿದೆ.
ಮಳೆಯ ಕೊರತೆ ಮತ್ತು ಒಣಹವೆಯಿಂದಾಗಿ ಕುರುಚಲು ಗಿಡ ಮತ್ತು ಮುಳ್ಳಿನ ಗಿಡಗಳು ಬೆಳೆಯುತ್ತವೆ.
ಇಲ್ಲಿ ಕಂಡುಬರುವ ಸಸ್ಯವರ್ಗವೆಂದರೆ ಕಳ್ಳಿ, ಕತ್ತಾಳಿ, ಕರಿಜಾಲಿ, ಬೇಲ, ಈಚಲು, ಹಂಚಿ ಮತ್ತು ಕುಂತಿ ಹುಲ್ಲು ಇತ್ಯಾದಿ.
ಅಲ್ಲಲ್ಲಿ ಆಲ, ಬೇವು, ಅರಳಿ, ಮುತ್ತುಗದಂತಹ ಮರಗಳೂ ಬೆಳೆಯುತ್ತವೆ.
ಇಂತಹ ಸಸ್ಯವರ್ಗವು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ, ಬಳ್ಳಾರಿ, ಚಿತ್ರದುರ್ಗ ಇತ್ಯಾದಿ ಜಿಲ್ಲೆಗಳಲ್ಲಿ ಹಂಚಿಕೆಯಾಗಿವೆ.
18. ಮ್ಯಾಂಗ್ರೋವ್ ಸಸ್ಯವರ್ಗ ಎಂದರೇನು?
ಉತ್ತರ : ಕರಾವಳಿಯಂಚಿನಲ್ಲಿರುವ ನದಿ ಮುಖಜಭೂಮಿ, ಅಳಿವೆಗಳು ಹಾಗೂ ಮರಳುದಂಡೆಗಳ ಭಾಗಗಳಲ್ಲಿ ಬಿಳಿಲುಗಳಿಂದ ಕೂಡಿರುವ ಸಸ್ಯಗಳಿವೆ. ಇವು ಉಪ್ಪು ನೀರಿನಲ್ಲಿ ಬೆಳೆಯುವ ವಿಶಿಷ್ಟವಾದ ಸಾಮರ್ಥ್ಯವನ್ನು ಹೊಂದಿವೆ.ಇದನ್ನೆ ಮ್ಯಾಂಗ್ರೋವ್ ಸಸ್ಯಗಳೆನ್ನುವರು.
19. ಶೋಲಾ ಕಾಡುಗಳು ಎಲ್ಲಿ ಕಂಡು ಬರುತ್ತವೆ?
ಉತ್ತರ : ಪಶ್ಚಿಮ ಘಟ್ಟಗಳಲ್ಲಿ ತಗ್ಗಾದ ಕಣಿವೆಗಳು ಝರಿ, ತೊರೆಗಳಿಂದ ಕೂಡಿದ ಭಾಗಗಳಲ್ಲಿ ವಿಶಿಷ್ಟವಾದ ಶೋಲಾ ಕಾಡುಗಳು ಕಂಡುಬರುತ್ತವೆ.
20. ಕರ್ನಾಟಕದ ಅರಣ್ಯದ ಹಂಚಿಕೆಯನ್ನು ತಿಳಿಸಿ.
ಉತ್ತರ : ಕರ್ನಾಟಕದ ಅರಣ್ಯದ ಹಂಚಿಕೆ.
ಎಲ್ಲಾ ರೀತಿಯ ಅರಣ್ಯಗಳನ್ನೊಳಗೊಂಡತೆ ಕರ್ನಾಟಕದಲ್ಲಿ ದಾಖಲಾದ ಅರಣ್ಯ ಪ್ರದೇಶ 43.4 ಲಕ್ಷ ಚ.ಕಿ.ಮೀ.ಗಳು.
ಇದು ರಾಜ್ಯದ ಭೌಗೋಳಿಕ ಪ್ರದೇಶದಲ್ಲಿ ಶೇ. 22.6 ಭಾಗದಷ್ಟಾಗುತ್ತದೆ.
ಭಾರತದಲ್ಲಿ ಸಮೃದ್ಧ ಅರಣ್ಯಗಳುಳ್ಳ ರಾಜ್ಯಗಳಲ್ಲಿ ಕರ್ನಾಟಕವು ಏಳನೇ ಸ್ಥಾನದಲ್ಲಿದೆ.
ಉತ್ತರ ಕನ್ನಡ ಹೆಚ್ಚು ಅರಣ್ಯ ಪ್ರದೇಶವನ್ನೊಳಗೊಂಡ ಜಿಲ್ಲೆಯಾಗಿದೆ.
ಶಿವಮೊಗ್ಗ ಮತ್ತು ಚಾಮರಾಜನಗರ ಜಿಲ್ಲೆಗಳು ಕ್ರಮವಾಗಿ ಎರಡು ಮತ್ತು ಮೂರನೆಯ ಸ್ಥಾನಗಳಲ್ಲಿವೆ.
ವಿಜಯಪುರ ಅತಿ ಕಡಿಮೆ ಅರಣ್ಯವುಳ್ಳ ಜಿಲ್ಲೆಯಾಗಿದೆ.
21. ಕರ್ನಾಟಕದಲ್ಲಿ ವನ್ಯಪ್ರಾಣಿಗಳು ಕಂಡು ಬರುವ ಪ್ರದೇಶಗಳಾವುವು?
ಉತ್ತರ ; ವನ್ಯಪ್ರಾಣಿಗಳ ನೆಲೆಯನ್ನೊಳಗೊಂಡ ರಾಜ್ಯದ ಪ್ರಮುಖ ಅರಣ್ಯ ಪ್ರದೇಶಗಳೆಂದರೆ – ಉತ್ತರ ಕನ್ನಡ ಮತ್ತು ಬೆಳಗಾವಿಯ ಭಾಗಗಳನ್ನೊಳಗೊಂಡ ಕರಾವಳಿಯ ಭಾಗ, ಸಹ್ಯಾದ್ರಿ – ಮಲೆನಾಡಿನ ಬೆಟ್ಟಗಳ ಸಾಲು, ಉದಾ : ಬಾಬಬುಡನಗಿರಿ ಸರಣಿ, ಬಿಳಿಗಿರಿರಂಗನಬೆಟ್ಟ, ಮಲೈಮಹದೇಶ್ವರ ಬೆಟ್ಟ, ಗೋಪಾಲಸ್ವಾಮಿ ಬೆಟ್ಟ ಮುಂತಾದವುಗಳುಳ್ಳ ದಕ್ಷಿಣ ಮೈದಾನ, ಇಂದು ಕರ್ನಾಟಕದಲ್ಲಿ 5 ರಾಷ್ಟ್ರೀಯ ಉದ್ಯಾನ, 4 ಪಕ್ಷಿಧಾಮ, 17 ವನ್ಯಪ್ರಾಣಿಧಾಮಗಳಿವೆ.
No comments:
Post a Comment