Monday, 30 November 2020

ರಾಷ್ಟ್ರೀಯ ಭಾವೈಕ್ಯತೆ

Admin       Monday, 30 November 2020

 ರಾಷ್ಟ್ರೀಯ ಭಾವೈಕ್ಯತೆ


2) ಜ್ಞಾನ ರಚನೆಗೆ ಇರುವ ಅವಕಾಶಗಳು :

* ರಾಷ್ಟ್ರ ಪದದ ಅರ್ಥ
* ರಾಷ್ಟ್ರೀಯತೆಯ  ಪರಿಕಲ್ಪನೆ
*  ಭಾರತ ದೇಶದ ವಿವಿಧತೆಯ  ವ್ಯಾಪ್ತಿ
* ಏಕತೆಯ ಮಹತ್ವ ಮತ್ತು ಅಂಶಗಳು
* ರಾಷ್ಟ್ರೀಯ ಭಾವೈಕ್ಯತೆಯ  ಪರಿಕಲ್ಪನೆ
* ರಾಷ್ಟ್ರೀಯ  ಭಾವೈಕ್ಯತೆ  ಬೆಳಸುವುದು
* ರಾಷ್ಟ್ರೀಯ  ಭಾವೈಕ್ಯತೆ  ಹೇಗೆ  ಸಾಧ್ಯ?
* ರಾಷ್ಟ್ರೀಯ  ಭಾವೈಕ್ಯತೆ ಇರುವ ಅಡತಡೆಗಳು
* ಭಾರತೀಯತೆಯ  ಪರಿಭಾವನೆ.

3) ವಿಮರ್ಶಾಯುಕ್ತ ಶಿಕ್ಷಣಕ್ರಮ ಅಳವಡಿಕೆಗೆ ಇರುವ ಅವಕಾಶಗಳು

* ರಾಷ್ಟ್ರ  ಮತ್ತು ರಾಷ್ಟ್ರೀಯತೆಯ  ಹಿನ್ನಲೆಯಲ್ಲಿ  ಭಾರತ ದೇಶದ  ಅಖಂಡತೆಯ ಪರಿಕಲ್ಪನೆಯನ್ನು ನಾವೆಲ್ಲಾ  ಭಾರತೀಯರು ಎಂಬ  ಪರಿಭಾಷೆಯೊಂದಿಗೆ ಅರ್ಥೈಸಿಕೊಳ್ಳುವರು.
* ರಾಷ್ಟ್ರೀಯತೆಯ ಪರಿಭಾವನೆ ಅಲ್ಲಿನ ಜನರು ತಮ್ಮ  ರಕ್ಷಣೆಗೆ ಹೋರಾಟ ಮಾಡಲು ಕಾರಣವಾದ  ಮೂಲಸ್ಫೂರ್ತಿ ಯಾವುದು  ಎಂದು  ಚಿಂತಿಸುವರು.
* ರಾಷ್ಟ್ರೀಯ ಭಾವೈಕ್ಯತೆಯ  ಪರಿಧಿಯಲ್ಲಿ ವಿವಿಧ  ಜಾತಿ, ಧರ್ಮ, ಪ್ರಾದೇಶಿಕತೆ, ಭಾಷೆಗಳನ್ನು ಒಳಗೊಂಡಂತೆ  ಶಕ್ತಿಯುತವಾದ  ಐಕ್ಯತೆಯನ್ನು ಕಟ್ಟುಕೊಳ್ಳುವುದು ಹೇಗೆ ಎಂದು ಚರ್ಚಿಸುವರು.
* ಭಾರತದ ಸಂವಿಧಾನದ ಚೌಕಟ್ಟಿನಲ್ಲಿ  ಭಾರತದಂತಹ ರಾಷ್ಟ್ರ  ವಿಶಾಲವಾದ ಭೌಗೋಳಿಕ ಮತ್ತು  ಪ್ರಾಕೃತಿಕ  ವೈವಿಧ್ಯತೆಯನ್ನು  ಹೊಂದಿರುವುದಲ್ಲದೆ ವಿವಿಧ ಧರ್ಮಗಳ, ಮತಗಳ ಆಚರಣೆಗಳ ನಡುವೆಯೂ  ಅದ್ವಿತೀಯವಾದ  ಅಖಂಡತೆಯನ್ನು ಉಳಿಸಿಕೊಂಡು  ಬಂದಿರುವ  ಹೆಮ್ಮೆಯನ್ನು  ಅವಲೋಕಿಸಿ  ಮೆಚ್ಚಿಕೊಳ್ಳುವರು.
* ಭಾರತ  ದೇಶವು ತನ್ನೊಳಗಿನ ಭೌಗೋಳಿಕ, ಸಾಮಾಜಿಕ, ಭಾಷೆ, ಸಂಪ್ರದಾಯ, ರಾಜಕಾರಣ,  ಧರ್ಮ, ಜನಾಂಗ,  ಶಿಕ್ಷಣ, ಸಂಸ್ಕೃತಿಗಳನ್ನು  ಏಕತೆಯ  ಸ್ವಾಸ್ಥ್ಯಕ್ಕೆ ಹೊಂದಿಕೊಳ್ಳುವಂತೆ ಮಾಡಿರುವಲ್ಲಿನ  ಮಹತ್ವವನ್ನು  ಕುರಿತು  ಚರ್ಚಿಸುವರು.
*   ರಾಷ್ಟ್ರಗೀತೆಯನ್ನು  ಹಾಡುವುದು ರಾಷ್ಟ್ರದ  ಭೌಗೋಳಿಕ ಐಕ್ಯತೆಗೆ  ಹೇಗೆ ಕಾರಣವಾಗುತ್ತದೆ ಎಂಬುದನ್ನು ಕುರಿತು ವಿಶ್ಲೇಷಿಸುವರು.
*  ಭಾರತದಲ್ಲಿನ ಏಕರೂಪ ಲಿಖಿತ ಸಂವಿಧಾನ  ವ್ಯವಸ್ಥೆಯೇ ರಾಜಕೀಯ  ಐಕ್ಯತೆಗೆ ಮಾನದಂಡವಾಗಿದೆ ಎಂದು  ಚರ್ಚಿಸಿ ತೀರ್ಮಾನ  ಕೈಗೊಳ್ಳುವರು.
* ಭಾರತದಲ್ಲಿ ಎಲ್ಲ ಮತೀಯರಿಗೂ ತಮ್ಮ ತಮ್ಮ ಮತ ಚಲಾಯಿಸುವ ಸಮಾನ ಹಕ್ಕಿನ ಅವಕಾಶ ನೀಡಿರುವುದೇ ಸರ್ವಮತ ಸಮನ್ವಯತೆಗೆ ಕಾರಣವಾಗಿದೆ ಎಂಬುದನ್ನು ಒಪ್ಪಿಕೊಳ್ಳುವರು.
*   ಭಾರತದ ರಾಷ್ಟ್ರೀಯ ಐಕ್ಯತೆಯನ್ನು ಬಿಂಬಿಸುವಲ್ಲಿ  ಭಾಷೆ  ಮತ್ತು  ಸಂಸ್ಕೃತಿಗಳು  ಹೇಗೆ ಸಾಮ್ಯತೆಯನ್ನು  ಹೊಂದಿವೆ ಎಂಬ  ವಿಚಾರವನ್ನು ವಿಮರ್ಶಿಸುವರು.
*   ಜಾತ್ಯತೀತತೆ,  ಪ್ರಜಾಪ್ರಭುತ್ವ, ರಾಷ್ಟ್ರೀಯ ಹಬ್ಬಗಳು, ಬಂಧನಗಳು, ರಾಷ್ಟ್ರೀಯ ಐಕ್ಯತೆಯನ್ನು ವೃದ್ಧಿಸುವ ಅಂಶಗಳಾಗುವಲ್ಲಿ ವಹಿಸಿರುವ  ಪ್ರಾಮುಖ್ಯತೆಯನ್ನು  ಪರಸ್ಪರ ಚರ್ಚಿಸಿ, ತೀರ್ಮಾನ  ಕೈಗೊಳ್ಳುವರು.
* ರಾಷ್ಟ್ರೀಯ ಐಕ್ಯತೆಗೆ  ದಕ್ಕೆ ತರುತ್ತಿರುವ ಅಡತಡೆಗಳನ್ನು  ಕುರಿತು  ಚರ್ಚಿಸುವರು. ಉದಾ : ಕೋಮುಗಲಬೆ, ಪ್ರಾದೇಶಿಕತೆ, ಜಾತೀಯತೆ,  ಜಲ, ಗಡಿ, ಭ್ರಷ್ಟಾಚಾರ ಭಾಷೆ ಕುರಿತ ವಿವಾದ ಇತ್ಯಾದಿಗಳು.
ಉದಾ :  ಹಿಂದೂ  ಮುಸ್ಲಿಂ, ಕನ್ನಡಿಗ, ಪಂಜಾಬಿ,  ಸ್ಪೃಶ್ಯ-ಅಸ್ಪೃಶ್ಯ, (ಚೀನಾ, ಭಾರತ, ಪಾಕಿಸ್ತಾನ  ಗಡಿ  ವಿವಾದ). ಕಾಸರಗೋಡು ವಿವಾದ, ಬೆಳಗಾಂ  ವಿವಾದ, ಕಾವೇರಿ ಸಮಸ್ಯೆ.

4) ಜ್ಞಾನ ಪುರರ್ರಚನೆಗೆ ಇರುವ ಅವಕಾಶಗಳು
*   ನಾವೆಲ್ಲಾ  ಭಾರತೀಯರು ಎಂಬ  ಹಿನ್ನಲೆಯಲ್ಲಿ  ತಾವು ವಾಸಿಸುವ  ಈ ನೆಲವನ್ನು ಮಾತೃಭೂಮಿ  ಎಂದು  ಪರಿಭಾವಿಸಿಕೊಂಡು,  ರಾಷ್ಟ್ರದ ಇಡೀ ಜನ  ಸಮೂಹದಲ್ಲಿ ಮೂಡುವ  ಸೋದರತೆ, ಸಮಾನತೆ,  ಆತ್ಮೀಯತೆ, ನಾವೆಲ್ಲಾ ಒಂದೇ ಎಂಬ ಭಾವನೆಯು ಮಕ್ಕಳಲ್ಲಿ  ಬೆಳೆಯಲು ಅವಕಾಶ  ಉಂಟಾಗುವುದು.
ಉದಾ :  - ತರಗತಿಯಲ್ಲಿ  ನಾವೆಲ್ಲ  ಒಂದೇ ಎಂಬ ಭಾವನೆ.
- ಹುಟ್ಟೂರು, ಕುಟುಂಬದ ಬಗ್ಗೆ  ಹೆಮ್ಮೆ.
* ಏಕತೆ,  ಒಗ್ಗಟ್ಟು,  ರಾಷ್ಟ್ರೀಯತೆಯ ಭಾವನೆಗಳಿಗೆ ಚ್ಯುತಿ  ಬಂದಾಗ ಪ್ರತಿರೋಧಿಸುವುದು ಉದಾ :  - ಶಾಲೆಯ ಬಗ್ಗೆ
- ಶಿಕ್ಷಕರ  ವಿಚಾರವಾಗಿ
- ಕುಟುಂಬ
- ತಂದೆ  ತಾಯಿ
- ದೇಶ/ಗಡಿ  ಇತ್ಯಾದಿ.

*   ವಿವಿಧತೆಯನ್ನು ಗೌರವಿಸುವುದು,  ಅನುಸರಿಸುವುದು.
ಉದಾ :  - ಸಂಸ್ಕೃತಿ, ಭಾಷೆ,  ಧರ್ಮ, ಆಚಾರಗಳು

- ಶಾಲೆಗಳಲ್ಲಿ  ವಿವಿಧ ಧರ್ಮಿಯರ ಜಯಂತಿ  ಆಚರಣೆ
- ಒಟ್ಟಿಗೆ ಕುಳಿತು  ಊಟ, ಆಟ,  ಪಾಠಗಳನ್ನು  ಆಲಿಸುವುದು
- ಸಾಮೂಹಿಕ  ಭೋಜನ, ಅಂತರ್ಜಾತಿ ವಿವಾಹ.

*  ಭಾರತೀಯರಾದ ನಾವೆಲ್ಲಾ  ಒಂದೇ ಎಂಬ ಭಾವನೆಯನ್ನು  ಮೂಡಿಸಿಕೊಳ್ಳುವುದು.
ಉದಾ :  - ನೈಸರ್ಗಿಕ  ವಿಕೋಪಗಳ  ಸಂದರ್ಭ

- ರಾಷ್ಟ್ರೀಯ  ಹಬ್ಬಗಳ  ಆಚರಣೆ
- ಗಡಿತಂಟೆ
- ಜಾತ್ರಾ ಮಹೋತ್ಸವ
- ಆಟೋಟ ಸ್ಪರ್ಧೆ
*   ಹಿಮಾಲಯದಿಂದ  ಕನ್ಯಾಕುಮಾರಿವರೆಗಿನ ವಿಶಾಲವಾದ  ಭಾರತದಲ್ಲಿ ಏಕರೀತಿಯ ಮನೋಭಾವನೆಯನ್ನು  ಬೆಳಸಿಕೊಳ್ಳಲು  ಇಲ್ಲಿನ ಆಡಳಿತ  ವ್ಯವಸ್ಥೆ, ಸುಲಭ ಸಂಪರ್ಕ ಸಾಧನಗಳು, ಶಿಕ್ಷಣ ಸ್ವಾಸ್ಥ್ಯ ಹಾಗೂ ಕಾನೂನು ಪದ್ಧತಿಗಳ ಅನುಕೂಲಿಸಿರುವ ಹಿನ್ನಲೆಯಲ್ಲಿ
ಮಕ್ಕಳು, ತಾರತಮ್ಯ ರಹಿತ  ಮನೋಭಾವನೆ  ಸುಲಭ ಹಾಗೂ ಸುಲಲಿತವಾದ ಸಂಪರ್ಕ ವ್ಯವಸ್ಥೆಯಿಂದ ವಿಜ್ಞಾನದ ಬಗ್ಗೆ ಮೆಚ್ಚುಗೆ  ಹಾಗೂ  ತಾನು ಕ್ರಿಯಾಶೀಲನಾಗಿ ಬೆಳೆಯಬೇಕೆಂಬ ಚಿಂತನೆ, ಉಚಿತ ಮತ್ತು ಕಡ್ಡಾಯ ಶಿಕ್ಷಣದಿಂದ ವಿನೂತನ ಜ್ಞಾನವನ್ನು  ಕಟ್ಟಿಕೊಳ್ಳುವರು.
*   ಹಿಮಾಲಯ  ಪರ್ವತದ ಉಪಯೋಗಗಳು,  ಭಾರತ  ಪರ್ಯಾಯದ್ವೀಪ ಎನ್ನುವ ಹಿನ್ನಲೆಯಲ್ಲಿ ನೈಸರ್ಗಿಕ ಕೊಡುಗೆಗಳೂ ಐಕ್ಯತೆಗೆ ಪೂರಕವಾಗಿರುವುದನ್ನು ಗ್ರಹಿಸಿಕೊಂಡು, ಏಕತೆಯನ್ನು ಪುಷ್ಟೀಕರಿಸುವಲ್ಲಿ ರಾಷ್ಟ್ರಗೀತೆಯ ಮಹತ್ವವನ್ನು  ಅರಿತು, ನಿಸರ್ಗ, ರಾಷ್ಟ್ರ, ರಾಷ್ಟ್ರಗೀತೆಯ  ಬಗ್ಗೆ  ಗೌರವವನ್ನು, ಅಭಿಮಾನ,  ರಕ್ಷಣೆಯ  ಮೌಲ್ಯಗಳ  ಭಾವನೆಯನ್ನು ಹೊಂದುವರು.
* ರಾಷ್ಟ್ರ, ರಾಜಕೀಯ  ಐಕ್ಯತೆಯನ್ನು ಸಾಧಿಸಿರುವ ಹಿನ್ನಲೆಯಲ್ಲಿ ಸಂವಿಧಾನದ  ಬಗ್ಗೆ ಗೌರವ ಹಾಗೂ  ಅನುಸರಣೀಯ  ಭಾವನೆಯನ್ನು  ಹೊಂದುವರು.

-  ವಿವಿಧ  ಧರ್ಮಗಳನ್ನು ಹೊಂದಿರುವ  ಭಾರತದಂತಹ  ರಾಷ್ಟ್ರದಲ್ಲಿ ಸರ್ವಮತ ಸಮನ್ವಯತೆಯ  ಸಮಾನ ಹಕ್ಕು ನೀಡಿರುವುದರಿಂದ  ಮಕ್ಕಳಲ್ಲಿ  ಸಮಾನತೆ,  ಗೌರವತೆ, ಮೆಚ್ಚುಗೆ, ಸಹೃದಯತೆ, ಸಮಾನತಾ ಭಾವದ  ಗುಣಗಳನ್ನು  ಬೆಳಸಿಕೊಳ್ಳುವರು.
 ಉದಾ :  - ಉರುಸ್  ಆಚರಣೆ
- ಕುಂಭಮೇಳ
- ಸಾಂಸ್ಕೃತಿಕ  ಹಬ್ಬ/ಜಾತ್ರೆಗಳ  ಆಚರಣೆ
- ಪೈಗಂಬರ್,  ಬುದ್ಧ, ಏಸು,  ಕೃಷ್ಣ ಜಯಂತಿಗಳ  ಆಚರಣೆ.

* ಭಾರತ 'ಬಹುಭಾಷಾ  ತವರು'  ಎಂದು  ಭಾವಿಸಿ, ರಾಷ್ಟ್ರೀಕೃತ  ಭಾಷೆಗಳು ಸೇರಿದಂತೆ ಎಲ್ಲಾ ಭಾಷೆಗಳನ್ನು  ಒಪ್ಪುವ,  ಸ್ವೀಕರಿಸುವ  ಮನೋಗುಣವನ್ನು  ಬೆಳಸಿಕೊಂಡು ಪ್ರೀತಿ, ಸೌಹಾರ್ದತೆ,  ಆತ್ಮೀಯತೆ,  ಕೊಡುಕೊಳ್ಳುವಿಕೆಗಳ ಹೃದಯ ವೈಶಾಲ್ಯತೆಯನ್ನು
ಬಳಸಿಕೊಳ್ಳುವರು.
ಉದಾ :  - ಸಂಸ್ಕೃತ  ಮತ್ತು ಇತರ ಭಾಷೆಗಳ ಸಂಬಂಧ

- ದ್ರಾವಿಡ ಭಾಷೆಗಳ  ಒಡಂಬಡಿಕೆ
- ಅನುವಾದ  ಪ್ರಕ್ರಿಯೆ, ಪ್ರಶಸ್ತಿ  ವಿತರಣೆ
- ಶಾಸ್ತ್ರೀಯ ಸ್ಥಾನಮಾನ  ಒದಗಿಸುವುದು
- ಭಾಷಾವಾರು ರಾಜ್ಯ  ವಿಂಗಡಣೆ
- ತ್ರಿಭಾಷಾ ಸೂತ್ರ

*   ಭಾರತದ ಸಾಂಸ್ಕೃತಿಕ  ವೈವಿಧ್ಯತೆಯನ್ನು  ಇಲ್ಲಿನ  ಜನರ ಸಂಪ್ರದಾಯ, ಆಚಾರ, ವಿಚಾರ, ವೇಷಭೂಷಣಗಳು,  ಆಹಾರ  ಪದ್ಧತಿ, ಜೀವನಶೈಲಿಯಿಂದ ಗ್ರಹಿಸಿಕೊಂಡು  ಇವುಗಳ ನಡುವಿನ  ಸಾಮ್ಯತೆಯ  ನಿರ್ದಶನವಾಗಿ  ಮಕ್ಕಳು,  ರಾಷ್ಟ್ರದ ಬಗ್ಗೆ  ಹೆಮ್ಮೆ, ಅಭಿಮಾನ,
ಸಮಾನತೆ,  ಮಹತ್ವಗಳನ್ನು  ಪಡೆದುಕೊಳ್ಳುವರು.
ಉದಾ :  - ಗುಡಿ  ಚರ್ಚು,  ಮಸೀದಿಗಳ  ರಕ್ಷಣೆ
- ಹಿಂದಿ, ಇಂಗ್ಲೀಷ್, ಉರ್ದು,  ಕನ್ನಡ,  ತೆಲುಗು ಭಾಷೆ  ಕಲಿಕೆ.

*   ರಾಷ್ಟ್ರೀಯ  ಐಕ್ಯತೆಯನ್ನು  ವೃದ್ಧಿಗೊಳಿಸುವ ಅಂಶಗಳಾದ ಜಾತ್ಯಾತೀತೆ, ರಾಷ್ಟ್ರೀಯ ಹಬ್ಬಗಳ ಆಚರಣೆ ರಾಷ್ಟ್ರೀಯ  ಲಾಂಛನಗಳಿಗೆ  ನೀಡುವ ಗೌರವದಿಂದಾಗಿ,  ಮಕ್ಕಳಲ್ಲಿ ಸರ್ವಧರ್ಮ ಸಮನ್ವಯತೆ, ಸಾಮರಸ್ಯ ಆರೋಗ್ಯಕರವಾದ ಒಗ್ಗೂಡಿಕೆಯ ಮನೋಭಾವನೆ
ತಮ್ಮದಾಗಿಸಿಕೊಳ್ಳುವರು.

ಉದಾ :  - 'ವಸುದೈವ ಕುಟುಂಬಕಂ'
ಮಾನವ  ಕುಲಂ  ತಾನೊಂದೆವಲಂ
ರಾಷ್ಟ್ರೀಯ  ಚಿಹ್ನೆಗಳ  ಬಗ್ಗೆ  ಗೌರವ

*   ಪ್ರಜಾಪ್ರಭುತ್ವದ ಪರಿಕಲ್ಪನೆ : ಪ್ರಜೆಗಳೇ ಪ್ರಭುಗಳು ಎಂದು ಅರ್ಥೈಸಿಕೊಂಡು, ಪ್ರಜೆಗಳಾದವರ ಹಕ್ಕು,  ಕರ್ತವ್ಯಗಳನ್ನು  ಅರಿತು, ಪ್ರಜ್ಞಾವಂತ  ಪ್ರಜೆಯಾಗುವ ಭಾವನೆಯನ್ನು ಬೆಳಸಿಕೊಳ್ಳುವರು.
*   ಅನ್ಯೂನ್ಯತೆಯ ಗುಣವನ್ನು ಕಟ್ಟಿಕೊಳ್ಳುವರು
ಉದಾ :  - ಪಂಜಾಬಿನ  ಗೋಧಿ  ಇವೆಲ್ಲವನ್ನು
- ಆಂಧ್ರದ  ಭತ್ತ  ದೇಶದ
- ಸಿಮ್ಲಾ, ಡಾರ್ಜಲಿಂಗ್ನ ಹಣ್ಣುಗಳು ಇತರೆ  ಭಾಗಗಲ್ಲಿ     ಬಳಸಿಕೊಳ್ಳಲಾಗುತ್ತದೆ.
*  ಅಖಂಡ ಭಾರತೀಯತೆಗೆ  ದಕ್ಕೆ ತರುವಂತಹ ವಿಷಯಗಳಾದ  ಕೋಮುಗಲಬೆ,  ಅತಿಯಾದ ಪ್ರಾದೇಶಿಕ  ನಿಷ್ಠೆ, ಜಾತೀಯತೆ, ಗಡಿವಿವಾದ, ಜಲವಿವಾದ, ಭಾಷಾ ವಿವಾದ, ಭ್ರಷ್ಟಾಚಾರ ಇವುಗಳ  ಬಗ್ಗೆ ಮಕ್ಕಳಲ್ಲಿ ತಿರಸ್ಕಾರ  ಭಾವನೆ ಬೆಳೆದು, ಪರಸ್ಪರ ಸಹಕಾರ, ಸಹಾಯ
ಮನೋಭಾವನೆಗಳಿಗೆ ಆದ್ಯತೆಯನ್ನು ಕೊಟ್ಟುಕೊಳ್ಳುವರಲ್ಲದೆ  ಮತೀಯ  ಗುಂಪುಗಾರಿಕೆಯ ಬಗ್ಗೆ ಉದಾಸೀನತೆ ಶಿಕ್ಷಣಕ್ಕೆ  ಹೆಚ್ಚು  ಒತ್ತು.  ಸಂಸ್ಕೃತಿ,  ಮತಧರ್ಮಗಳಿಗೆ ಗೌರವ ಭಾವನೆಯನ್ನು  ಕೊಟ್ಟು ಕೊಳ್ಳುವರು.

5) ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಅಳವಡಿಕೆಗೆ ಇರುವ ಅವಕಾಶಗಳು
*   ರಾಷ್ಟ್ರೀಯತೆ  ಬೆಳೆಸುವುದು

ಉದಾ :  - ಸ್ವಾತಂತ್ರ್ಯ  ಹೋರಾಟಗಾರರ  ಜೀವನ  ಚರಿತ್ರೆ ಓದಿಸುವುದು.
- ರಾಷ್ಟ್ರೀಯ  ಹಬ್ಬಗಳ  ಆಚರಣೆ
- ರಾಷ್ಟ್ರೀಯತೆ  ಬಿಂಬಿಸುವ  ಚಲನಚಿತ್ರಗಳ ಪ್ರದರ್ಶನ
- ರಾಷ್ಟ್ರಾಭಿಮಾನ ವ್ಯಕ್ತಪಡಿಸುವ ಗೀತೆಗಳ  ಸಂಗ್ರಹ

*   ರಾಷ್ಟ್ರೀಯ  ಭಾವೈಕ್ಯತೆ  ಮೂಡಿಸುವುದು


ಉದಾ :  - ತರಗತಿಗಳಲ್ಲಿ  ಪ್ರತಿಯೊಬ್ಬರಿಗೂ  ಸಮಾನ ಅವಕಾಶ  ಕಲ್ಪಿಸುವುದು.
- ಎಲ್ಲಾ ಧರ್ಮಗಳ  ಪವಿತ್ರ  ಗ್ರಂಥಗಳ  ವಾಚನ
- ಸರ್ವಧರ್ಮ  ಸಮನ್ವಯ  ಗೀತೆಗಳ  ಪಠಣ
- ಗಾಂಧೀಜಿಯವರ  ಸರ್ವೋದಯ  ಕೃತಿ  ಓದುವುದು
- ಕ್ರೀಡಾ ಸ್ಪರ್ಧೆಗಳ  ಆಯೋಜನೆ
- ಸಾಂಸ್ಕೃತಿಕ ಉತ್ಸವಗಳ ಆಚರಣೆ
- ರಾಷ್ಟ್ರೀಯ ವೈವಿಧ್ಯತೆಯ ಪ್ರದರ್ಶನ
- ಹಿಂದು,  ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ, ಸಿಖ್ ದೇವಾಲಯಗಳಿಗೆ  ಭೇಟಿ.

*   ವೈವಿಧ್ಯತೆಯಲ್ಲಿ  ಏಕತೆ


- ಭಾರತ ಒಂದು  ಉಪಖಂಡ ಹೇಗೆ  ಎಂಬುದರ  ಬಗ್ಗೆ ಚರ್ಚೆ, (ನಿದರ್ಶನಗಳೊಂದಿಗೆ)
- ವಿವಿಧ  ಕುಟುಂಬಗಳಿಂದ ಕೂಡಿರುವ ಗ್ರಾಮಗಳ  ಭೇಟಿ.
- ಹೀಗೆ ಗ್ರಾಮ, ಹೋಬಳಿ,  ತಾಲ್ಲೂಕು,  ಜಿಲ್ಲೆ, ರಾಜ್ಯ,  ರಾಷ್ಟ್ರಗಳ ರಚನೆಯಾಗಿದೆ ಎಂಬುದಾಗಿ ಅವಲೋಕಿಸಿ  ತೀರ್ಮಾನ ತೆಗೆದುಕೊಳ್ಳುವುದು.

*  ಧಾರ್ಮಿಕ ಐಕ್ಯತೆ
- ಸರ್ವಧರ್ಮಗಳ ಹಬ್ಬಗಳ ಆಚರಣೆ
- ಜಾತ್ರೆ,  ಉತ್ಸವ,  ಉರುಸ್ಗಳಿಗೆ ಪ್ರೋತ್ಸಾಹ
- ಸರ್ವ  ಧಾರ್ಮಿಕ ಸಮ್ಮೇಳನಗಳನ್ನು  ಆಯೋಜಿಸುವುದು.
- ಎಲ್ಲಾ ಧರ್ಮಗಳ ಸಾರ ಕುರಿತು ಚರ್ಚೆ
- ದಯವೇ  ಧರ್ಮದ  ಮೂಲ  ವ್ಯಾಖ್ಯಾನಿಸುವುದು
- ಮೂಢನಂಬಿಕೆಗಳನ್ನು  ಖಂಡಿಸುವ ಗೋಷ್ಠಿಗಳು
- ಧರ್ಮಗಳ ಸಾಮ್ಯತೆ ಕುರಿತು  ವಿಚಾರ  ಸಂಕಿರಣ
- ಧಾರ್ಮಿಕ  ಗುರುಗಳನ್ನು ಆಹ್ವಾನಿಸುವುದು.

*  ಭಾಷಾ ಐಕ್ಯತೆ

- ಭಾರತೀಯ ಭಾಷೆಗಳನ್ನ ಪಟ್ಟಿ
- ರಾಷ್ಟ್ರೀಕೃತ ಭಾಷೆಗಳು
- ಭಾಷಾವಾರು ಪ್ರಾಂತ್ಯಗಳ  ವಿಂಗಡಣೆ ಕುರಿತು ಚರ್ಚೆ
- ಅನುವಾದ ಸಾಹಿತ್ಯ  ಕುರಿತು ಅವಲೋಕನ
- ಜ್ಞಾನಪೀಠ  ಪ್ರಶಸ್ತಿ ಪುರಸ್ಕೃತರು
- ಭಾಷಾ ವ್ಯತ್ಯಾಸ  (ಧ್ವನಿ,  ಲಿಪಿ, ಅರ್ಥ)
- ಭಾಷಾ  ಸಾಮ್ಯತೆ ಮತ್ತು  ಸಂಸ್ಕೃತ ಭಾಷೆಯ  ಪ್ರಾಬಲ್ಯ
- ದ್ರಾವಿಡ ಭಾಷೆಗಳ  ಹೊಂದಾಣಿಕೆ

*  ಸಾಂಸ್ಕೃತಿಕ ಐಕ್ಯತೆ

- ಮಕ್ಕಳ ಕುಟುಂಬಗಳ  ಸಂಪ್ರದಾಯ  ಮತ್ತು ಆಚರಣೆಗಳ ಸಂಗ್ರಹ
- ತರಗತಿಯ  ವಿವಿಧ ಮಕ್ಕಳ  ಭಾಷಾ ಶೈಲಿ  ಕುರಿತು ಚರ್ಚೆ
- ವೇಷ  ಭೂಷಣಗಳ ವ್ಯತ್ಯಾಸ,  ಸಂಗ್ರಹ.
- ಆಹಾರ ಪದ್ಧತಿಯಲ್ಲಿನ  ವಿವಿಧತೆ  ಕುರಿತು ವರದಿ ತಯಾರಿಕೆ
- ಸಾಂಸ್ಕೃತಿಕ  ಐಕ್ಯತೆಯನ್ನು  ಮೂಡಿಸುವಲ್ಲಿ  ಮಗುವಿನ ಪಾತ್ರ, ಪ್ರಬಂಧ  ರಚನೆ.
- ತನ್ನೂರಿನ  ಸಾಂಸ್ಕೃತಿಕ  ವೈವಿದ್ಯತೆ  ಕುರಿತು ಸಂಗ್ರಹ
- ವಿವಿಧ ಧರ್ಮಿಯರ ಸಾಂಸ್ಕೃತಿಕ  ಸಾಮ್ಯತೆ  ಕುರಿತು ಪ್ರಬಂಧ ರಚನೆ.
- ಹರಿಹರ ನಂದಿಗುಡಿಯ  ಅಜ್ಜಯ್ಯ
- ಶಿವಮೊಗ್ಗ ಅಣಿಗೇರಿಕಟ್ಟೆ
- ಕಾವಳಿಗೆ  ಶಿವಲಿಂಗೇಶ್ವರ ಮಠ
- ಸುರಪುರ  ಹತ್ತಿರದ ತಿಂತಿಣಿ ಮೋನೇಶ್ವರ. ಉದಾ :  - ಭಾವೈಕ್ಯತೆ ಸ್ಥಳಗಳಿಗೆ ಭೇಟಿ
- ಮೊಹರಾಂ, ಬುದ್ಧ ಪೂಣರ್ಿಮೆ,  ದುರ್ಗಮ್ಮದೇವಿ  ಜಾತ್ರೆಗಳ ವೈಶಿಷ್ಟ್ಯಾಗಳ
ಸಂಗ್ರಹ,  ಚಿತ್ರ ಸಂಗ್ರಹಣೆ.

*   ರಾಷ್ಟ್ರೀಯ ಐಕ್ಯತೆಯನ್ನು ವೃದ್ಧಿಸುವುದು

ಉದಾ :  - ಜಾತೀಯತೆಯನ್ನು  ಖಂಡಿಸುವುದು ಹೇಗೆ ಎಂಬ  ಚಚರ್ಾ  ಗೋಷ್ಠಿ.
- ರಾಷ್ಟ್ರೀಯ ಚಿಹ್ನೆಗಳ ಪ್ರದರ್ಶನ.
*   ರಾಷ್ಟ್ರೀಯ ಐಕ್ಯತೆ ವೃದ್ಧಿಸಲು ಇರುವ ಅಡೆತಡೆಗಳು (ಮಾಹಿತಿ ಸಂಗ್ರಹ)
- ಕೋಮುವಾದ
- ಪ್ರಾದೇಶಿಕತೆ
- ಜಾತೀಯತೆ
- ಗಡಿ ವಿವಾದ,  ಜಲ ವಿವಾದ, ಭಾಷಾ ವಿವಾದ, ಭ್ರಷ್ಟಾಚಾರ,  ಅಸ್ಪೃಶ್ಯತೆ, ಇಚ್ಛಾಶಕ್ತಿ ಕೊರತೆ, ಜನರಲ್ಲಿ ಅಜಾಗರೂಕತೆ  ಕುರಿತಂತೆ ಮೌಲ್ಯಮಾಪನ.

6) ಕಲಿಕೆಯನ್ನು ಅನುಕೂಲಿಸುವ ವಿಧಾನಗಳು

*   ರಾಷ್ಟ್ರೀಯತೆಯನ್ನು  ಬಿಂಬಿಸುವ ಹಾಡುಗಳು
*   ರಾಷ್ಟ್ರೀಯ ಚಿಹ್ನೆಗಳ ಪ್ರದರ್ಶನ.
*  ಸರ್ವಧರ್ಮಿಯರ ಸಂತೋಷ ಕೂಟ.
*   ರಾಷ್ಟ್ರೀಯ  ಭಾವೈಕ್ಯತೆ  ಬಿಂಬಿಸುವ  ಸ್ಥಳಗಳಿಗೆ  ಭೇಟಿ
*   ತರಗತಿಯಲ್ಲಿ  ಎಲ್ಲಾ ಭಾಷೆಗಳ ಬಳಕೆ
*   ರಾಷ್ಟ್ರೀಯ ಹಬ್ಬಗಳನ್ನು  ಆಚರಿಸುವ  ಹಿನ್ನಲೆಯ  ಮಹತ್ವ ತಿಳಿಸುವುದು.
*  ಭಾರತದ ವಿವಿಧ ಆಹಾರ ಪದ್ಧತಿಗಳನ್ನು  ಕುರಿತು ಸಂಗ್ರಹ.
*  ವಿವಿಧ ವೇಷಭೂಷಣಗಳ  ಪ್ರದರ್ಶನ
*   ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರದರ್ಶಿಸುವ  ಚಿತ್ರಗಳ  ಪ್ರದರ್ಶನ.
*  ವಿವಿಧ ಧರ್ಮಗಳ ಗ್ರಂಥಗಳ ಪ್ರದರ್ಶನ.
*  ಅಂತರ್ ಜಾತಿ,  ಅಂತರ್ ಧರ್ಮಿಯ ವಿವಾಹಗಳ  ಅಣಕು  ಪ್ರದರ್ಶನ.
*  ಐಕ್ಯತೆ ಬಿಂಬಿಸುವ  ಚಲನ  ಚಿತ್ರಗಳ ಪ್ರದರ್ಶನ.
*  ಭಾವೈಕ್ಯತಾ ದಿನ  ಆಚರಣೆ.

7) ಸಂಪನ್ಮೂಲ ಕ್ರೂಢೀಕರಣ
*   9ನೇ  ತರಗತಿ ಸಮಾಜ  ವಿಜ್ಞಾನ ಪಠ್ಯಪುಸ್ತಕ
*   ಸರ್ವಧರ್ಮ ಸಮನ್ವಯ  ಬಿಂಬಿಸುವ  ಛಾಯಾ ಚಿತ್ರಗಳು
*   ಚಿತ್ರದಲ್ಲಿ ಚರಿತ್ರೆ
*   ಇಟಲಿ ಜರ್ಮನಿ, ಏಕೀಕರಣಗಳ ಹಿನ್ನಲೆ  ಸಂಗ್ರಹ
*   ಫ್ರಾನ್ಸ್ ಮತ್ತು ರಷ್ಯಾ  ಕ್ರಾಂತಿಗಳಿಗೆ  ಕಾರಣ ಕುರಿತು ಚರ್ಚಾಂಶಗಳ  ಸಂಗ್ರಹ.
*   ರಾಷ್ಟ್ರೀಯ  ಭಾವೈಕ್ಯತೆ  ಬಿಂಬಿಸುವ ಚಲನಚಿತ್ರಗಳ  ಸಿ.ಡಿ. ಸಂಗ್ರಹ.
ಉದಾ : ಲಗಾನ್,  ಚಕ್ದೇ  ಇಂಡಿಯಾ.
*   ನೈಸರ್ಗಿಕ  ವಿಕೋಪಗಳ ಸಂದರ್ಭದಲ್ಲಿ  ಮಾನವೀಯತೆ ಮರೆಯುವ ದೃಶ್ಯಗಳ  ಸಂಗ್ರಹ.
*   ಗಾಂಧಿ ಕುರಿತು ಚಲನಚಿತ್ರಗಳ ಸಂಗ್ರಹ.
*   ರಾಷ್ಟ್ರೀಯ  ಭಾವೈಕ್ಯತೆಯ ಹಾಡುಗಳ  ಸಂಗ್ರಹ.  (ಎಲ್ಲಾ ಭಾಷೆಗಳಿಗೆ  ಸಂಬಂಧಿಸಿದಂತೆ)
*  ವಿವಿಧ ಭಾಷೆಗಳಲ್ಲಿ  ಐಕ್ಯತೆ  ಬಿಂಬಿಸುವ ಅನುವಾದಿತ  ಪುಸ್ತಕಗಳ ಸಂಗ್ರಹ.

8) ಬೋಧನೋಪ್ರಕರಣಗಳು
*   ರಾಷ್ಟ್ರೀಯ  ಚಿಹ್ನೆಗಳು
*   ಭಾವೈಕ್ಯತೆ  ಪ್ರದರ್ಶಿಸುವ ಚಿತ್ರಗಳು
*  ಸಾಂಸ್ಕೃತಿಕ ಭಾರತ ಭೂಪಟ
*   ಭಾರತ  ಪ್ರಾಕೃತಿಕ  ಭೂಪಟ
*   ರಾಷ್ಟ್ರೀಕೃತ ಭಾಷೆಗಳ  ಚಾರ್ಟ್
*   ಉಡುಗೆ ತೊಡುಗೆಗಳ  ಚಾರ್ಟ್
*  ವಿವಿಧ ಧರ್ಮಿಯ ಪವಿತ್ರ  ಸ್ಥಳಗಳ ಚಿತ್ರ
*   ರಾಷ್ಟ್ರೀಯ ಹಬ್ಬಗಳ ಆಚರಣೆ  ಸಂದರ್ಭದ ಚಿತ್ರಗಳು
*   ಸರ್ವಧರ್ಮ ಸಮನ್ವಯದ  ಫೋಟೋ
*   ಮಕ್ಕಳನ್ನೇ  ವಿವಿಧ ಧರ್ಮಿಯರನ್ನಾಗಿಸಿ ಪ್ರಾರ್ಥನೆಗಳ ಅಣಕು ಪ್ರದರ್ಶನ
*   ಸರ್ವಧರ್ಮದ ಪ್ರಾತ್ಯಕ್ಷಿಕೆಗಳು
logoblog

Thanks for reading ರಾಷ್ಟ್ರೀಯ ಭಾವೈಕ್ಯತೆ

Previous
« Prev Post

1 comment: