Monday, 30 November 2020

ಸಂವಿಧಾನ ನೋಟ್ಸ್

Admin       Monday, 30 November 2020

 ಸಂವಿಧಾನ

ಭಾರತಕ್ಕೆ ಸ್ವಾತಂತ್ರ್ಯ : ಆಗಸ್ಟ್ 15, 1947

ಸ್ವಾತಂತ್ರ್ಯ ಸಿಕ್ಕಾಗ ಭಾರತ ಎದುರಿಸಿದ ಸವಾಲುಗಳು

1.   ನಿರಾಶ್ರಿತರ ಸಮಸ್ಯೆ

2.   ಸಂಸ್ಥಾನಗಳ ವಿಲೀನೀಕರಣ

3.   ಕಾನೂನು ಸುವ್ಯವಸ್ಥೆಗೊಳಿಸುವುದು

·         ನಿರಾಶ್ರಿತರ ಸಮಸ್ಯೆ : ದಂಡಕಾರಣ್ಯ ಹಾಗೂ ವಿವಿಧ ಕಡೆ ನಿರಾಶ್ರಿತರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಯಿತು.

·         ಸಂಸ್ಥಾನಗಳ ವಿಲೀನೀಕರಣ : ಸರ್ದಾರ್ ವಲ್ಲಭ ಬಾಯಿ ಪಟೇಲ್ ರವರು ಯಶಸ್ವಿಯಾಗಿ ನಿರ್ವಹಿಸಿದರು.

·         ಕಾನೂನು ಸುವ್ಯವಸ್ಥೆಗೊಳಿಸುವುದು : ಸಂವಿಧಾನ ರಚನೆ ಮಾಡಬೇಕಾದ ಅಗತ್ಯವುಂಟಾಯಿತು.

ಸಂವಿಧಾನದ ಅರ್ಥ : ಇಡೀ ರಾಷ್ಟ್ರವನ್ನು ಒಂದು ಚೌಕಟ್ಟಿನಲ್ಲಿ ಹೇಗೆ ನಿಯಂತ್ರಿಸಬೇಕು ಎಂದು ತಿಳಿಸಿಕೊಡುವ ವ್ಯೆವಸ್ಥೆಯನ್ನು ಸಂವಿಧಾನ ಎನ್ನುವರು.

 

 ಸಂವಿಧಾನ ರಚನಾ ಸಭೆ : ಮೋತಿಲಾಲ್ ನೆಹರು ಸಮಿತಿಯ ಶಿಪಾರಸ್ಸು ಹಾಗೂ ಕರಾಚಿ ಕಾಂಗ್ರೆಸ್ ಅಧಿವೇಶನದ ನಿರ್ಣಯಗಳು ಸಂವಿಧಾನ ರಚನಾ ಸಭೆ ರಚನೆಗೆ ಒತ್ತಾಯಿಸಿದವು.

·         ಸಂವಿಧಾನ ರಚನಾ ಸಮಿತಿ

ಅಧ್ಯಕ್ಷರು : ಡಾ. ರಾಜೇಂದ್ರ ಪ್ರಸಾದ್

ಮೊದಲ ಸಂವಿಧಾನ ರಚನಾ ಸಭೆ : ಡಿಸೆಂಬರ್ 9 1946

ಅಧ್ಯಕ್ಷತೆ : ಸಚ್ಚಿದಾನಂದ ಸಿನ್ಹಾ ( ಹಂಗಾಮಿ ಅಧ‍್ಯಕ್ಷರು )

ಎರಡನೆಯ ಸಂವಿಧಾನ ರಚನಾ ಸಭೆ : ಡಿಸೆಂಬರ್ 11 1946

ಅಧ್ಯಕ್ಷತೆ : ಡಾ. ರಾಜೇಂದ್ರ ಪ್ರಸಾದ್

ಸದಸ್ಯರು : ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭ ಬಾಯಿ ಪಟೇಲ್, ಸುಚೇತಾ ಕೃಪಲಾನಿ, ಸರೋಜಿನಿ ನಾಯ್ಡು, ಕೆಂಗಲ್ ಹನುಮಂತಯ್ಯ, ಸಿ. ರಾಜಗೋಪಾಲಚಾರಿ, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಕೆ.ಎಂ.ಮುನ್ಸಿ ಮುಂತಾದವರು.

·         ಸಂವಿಧಾನ ಕರಡು ಸಮಿತಿ

ಅಧ್ಯಕ್ಷರು : ಡಾ. ಬಿ ಆರ್ ಅಂಬೇಡ್ಕರ್

ಸದಸ್ಯರು : ಎನ್ ಗೋಪಾಲಸ್ವಾಮಿ ಅಯ್ಯಂಗಾರ್, ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ವಿ.ಟಿ.ಕೃಷ್ಣಾಮಾಚಾರಿ, ಕೆ.ಎಂ.ಮುನ್ಸಿ ಮುಂತಾದವರು.

ಸಂವಿಧಾನ ರಚನೆ :

·         145 ದಿನ ಸಭೆ ( ಚರ್ಚೆ )

·         2 ವರ್ಷ,11 ತಿಂಗಳು,18 ದಿನ

·         ಅಂಗೀಕಾರ : ನವೆಂಬರ್ 26, 1949

·         ಜಾರಿಗೆ : ಜನೆವರಿ 26, 1950

( 1930, ಜನೆವರಿ 26 ರ ಲಾಹೋರ್ ಕಾಂಗ್ರೆಸ್ ಅಧಿವೇಶನದಲ್ಲಿ ಬಾರತ “ ಪೂರ್ಣ ಸ್ವರಾಜ್ಯ “ ಎಂದು ಅಂಗೀಕರಿಸಿದ್ದರ ಸವಿನೆನಪಿಗಾಗಿ )

ಬಾರತ ಸಂವಿಧಾನದ ಪೂರ್ವಪೀಠಿಕೆ ( ಪ್ರಸ್ತಾವನೆ )

·         ಸಂವಿಧಾನದ ಒಡವೆ

·         ರಾಜಕೀಯ ಜಾತಕ (ಕೆ.ಎಂ.ಮುನ್ಸಿ )

·         ಸಂವಿಧಾನದ ರೂಪುರೇಷೆ, ಮೌಲ್ಯ, ಸಿದ್ಧಾಂತ ಮತ್ತು ಉದ್ದೇಶಗಳ ಸಾರಾಂಶವೇ ಪೂರ್ವಪೀಠಿಕೆ.

·         ಬಾರತದ ಸಂವಿಧಾನದ ಮೂಲ ತಯ್ವಗಳು ಹಾಗೂ ಯೋಗ್ಯ ಸತ್ವಗಳನ್ನು ಒಳಗೊಂಡಿದೆ.

·         ಸಂವಿಧಾನದ ಪ್ರಸ್ತಾವನೆಯನ್ನು ಡಿಸೆಂಬರ್ 13, 1946 ರಂದು ನೆಹರು ಅವರು ಮಂಡಿಸಿದ “ಧ್ಯೇಯಗಳ ನಿರ್ಣಯ” ಸಂವಿಧಾನ ರಚನಾ ಸಭೆ ಜನೆವರಿ 22, 1947 ರಂದು ಅಂಗೀಕರಿಸಲಾಯಿತು.

ಪೂರ್ವಪೀಠಿಕೆ

“ ಭಾರತದ ಪ್ರಜೆಗಳಾದ ನಾವು, ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ ಈ ಕೆಳಗಿನ ಹಕ್ಕುಗಳಾದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯವನ್ನುಸ್ಥಾನಮಾನ ಮತ್ತು ಅವಕಾಶಗಳ ಸಮಾನತೆ ;ಗಳನ್ನು ದೊರಕಿಸಿ, ವೈಯಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವತೆಯನ್ನು ಪ್ರೋತ್ನಾಹಿಸಲು ನಿರ್ಧರಿಸಿ; ನಮ್ಮ ಸಂವಿಧಾನ ರಚನಾಸಭೆಯಲ್ಲಿ ಈ ೧೯೪೯ರ ನವೆಂಬರ್ ಮಾಹೆಯ ೨೬ನೇ ದಿನದಂದು, ನಾವಾಗಿ ನಾವೇ ಈ ಸಂವಿಧಾನವನ್ನು ಸ್ವೀಕರಿಸಿ,ಶಾಸನವನ್ನಾಗೆ ವಿಧಿಸಿಕೊಳ್ಳುತ್ತೇವೆ.”

ಪೂರ್ವಪೀಠಿಕೆಯ ಪ್ರಮುಖ ಅಂಶಗಳು

·         ಭಾರತದ ಪ್ರಜೆಗಳಾದ ನಾವು

·         ಸಾರ್ವಭೌಮ ರಾಷ್ಟ್ರ

·         ಸಮಾಜವಾದಿ  ( 1976 ರಲ್ಲಿ ಸಂವಿಧಾನದ 42 ನೇ ತಿದ್ದುಪಡಿ ಮೂಲಕ ಸೇರಿಸಲಾಗಿದೆ.)

·         ಜಾತ್ಯಾತೀತ (ಮತ ನಿರಪೇಕ್ಷ ) ರಾಷ್ಟ್ರ. ( 1976 ರಲ್ಲಿ ಸಂವಿಧಾನದ 42 ನೇ ತಿದ್ದುಪಡಿ ಮೂಲಕ ಸೇರಿಸಲಾಗಿದೆ.)

·         ಪ್ರಜಾಸತಾತ್ಮಕ ಗಣರಾಜ್ಯ

 

ಸಂವಿಧಾನದ ಲಕ್ಷಣಗಳು

1.   ಲಿಖಿತ ಮತ್ತು ಬೃಹತ್ ಸಂವಿಧಾನ

·         ಬರವಣಿಗೆ ರೂಪದಲ್ಲಿದೆ.

·         ಮೂಲತಃ 22 ಭಾಗಗಳು, 8 ಅನುಸೂಚಿಗಳು, 345 ವಿಧಿಗಳನ್ನು ಹೊಂದಿತ್ತು.

·         ಈಗ 25 ಭಾಗಗಳು, 12 ಅನುಸೂಚಿಗಳು, 450 ವಿಧಿಗಳನ್ನು ಹೊಂದಿದೆ.

2.   ಸರಳ - ಕಠಿಣ ಸಂವಿಧಾನ

·         ಸಂವಿಧಾನ ತಿದ್ದುಪಡಿ ವಿಧಾನ ಸುಲಭವೂ ಆಗಿರದೇ ಹಾಗೂ ಕಠಿಣವೂ ಆಗಿರದೇ ಸರಳ ಮತ್ತು ಕಠಿಣತೆಯಿಂದ ಕೂಡಿದೆ

3.   ಸಂಸದೀಯ ಸರ್ಕಾರ ಪದ್ಧತಿ

·         ಪ್ರಜೆಗಳಿಂದ ಆಯ್ಕೆಯಾದ ಸಂಸತ್ತು ಪರಮಾಧಿಕಾರ ಹೊಂದಿದೆ.

·         ಮಂತ್ರಿಮಂಡಳ ಶಾಸಕಾಂಕದ ವಿಶ‍್ವಾಸವಿರುವವರೆಗೂ ಅಧಿಕಾರದಲ್ಲಿರುತ್ತದೆ, ವಿಶ‍್ವಾಸ ಕಳೆದುಕೊಂಡ ತಕ್ಷಣ ರಾಜೀನಾಮೆ ನೀಡಬೇಕಾಗುತ್ತದೆ.

4.   ಗಣತಂತ್ರ ವ್ಯವಸ್ಥೆ

·         ಯಾವ ದೇಶದ ಮುಖ್ಯಸ್ಥನನ್ನು ಚುನಾವಣೆಯ ಮೂಲಕ ಆಯ್ಕೆಯಾಗುತ್ತಾರೋ ಅದನ್ನು ಗಣರಾಜ್ಯ ಎನ್ನುವರು

·         ಅನುವಂಶಿಕವಾಗಿ ಯಾರೂ ದೇಶದ ಆಡಳಿತವನ್ನು ಹೊಂದಿಲ್ಲ.

·         ರಾಷ್ಟ್ರಪತಿ ಸಂವಿಧಾನದ ಮುಖ್ಯಸ್ಥರಾಗಿದ್ದರೂ ಚುನಾವಣೆಯ ಮೂಲಕ ಆಯ್ಕೆಯಾಗುತ್ತಾರೆ.

5.   ಸಂಯುಕ್ತ ಪದ್ಧತಿ

·         ಭಾರತ ಅನೇಕ ರಾಜ್ಯಗಳ ಒಕ್ಕೂಟವಾಗಿದ್ದರೂ ಅಧಿಕಾರಗಳನ್ನು ಕೇಂದ್ರ ಹಾಗೂ ರಾಜ್ಯಗಳ ಮಧ‍್ಯೆ ಹಂಚಲಾಗಿದೆ

·         ಕೇಂದ್ರ ಪಟ್ಟಿ- 100

·         ರಾಜ್ಯ ಪಟ್ಟಿ - 61

·         ಸಮವರ್ತಿ ಪಟ್ಟಿ 52

·         ಕೇಂದ್ರ ರಾಜ್ಯಗಳ ಮಧ್ಯ ಉಂಟಾಗುವ ವಿವಾದಗಳನ್ನು ಬಗೆಹರಿಸಲು ಸುಪ್ರೀಂ ಕೋರ್ಟ್ ಅಧಿಕಾರ ಹೊಂದಿದೆ.

6.   ಮೂಲಭೂತ ಹಕ್ಕುಗಳು

·         ಜನರಿಗೆ ಸಂವಿಧಾನ ನೇರವಾಗಿ ನೀಡಿರುವ ಹಕ್ಕುಗಳೇ ಮೂಲಭೂತ ಹಕ್ಕುಗಳು.

·         ಸಂವಿಧಾನದ 3ನೇ ಭಾಗದಲ್ಲಿ ಅಳವಡಿಸಲಾಗಿದೆ.

·         ಸರ್ವೋಚ್ಛ ನ್ಯಾಲಾಲಯವನ್ನು ಮೂಲಭೂತ ಹಕ್ಕುಗಳು ರಕ್ಷಕ ಎನ್ನುವರು.

1.   ಸ್ವಾತಂತ್ರ್ಯದ ಹಕ್ಕು

2.   ಸಮಾನತೆಯ ಹಕ್ಕು

3.   ಶೋಷಣೆಯ ವಿರುದ್ಧದ ಹಕ್ಕು

4.   ಧಾರ್ಮಿಕ ಹಕ್ಕು

5.   ಸಾಂಸ್ಕೃತಿಕ ಮತ್ತು ವಿದ್ಯಾಭ್ಯಾಸದ ಹಕ್ಕು

6.   ಸಂವಿಧಾನಬದ್ಧ ಪರಿಹಾರದ ಹಕ್ಕು

7.   ಮೂಲಭೂತ ಕರ್ತವ್ಯಗಳು

ನಾವು ಏನನ್ನು ಮಾಡಬೇಕು ಎನ್ನುವುದೇ ಕರ್ತವ್ಯಗಳು.

ಸಂವಿಧಾನದ 4ನೇ A  ಭಾಗದಲ್ಲಿವೆ.

ಒಟ್ಟು 11 ಮೂಲಭೂತ ಕರ್ತವ್ಯಗಳಿವೆ.

8.   ರಾಜ್ಯನಿರ್ದೇಶಕ ತತ್ವಗಳು

·         ಸಂವಿಧಾನದ 4ನೇ ಭಾಗದಲ್ಲಿವೆ.

·         ಐರಿಷ್ ಸಂವಿಧಾನದಿಂದ ಪ್ರಭಾವಿತವಾಗಿ ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿದೆ.

·         ಇವು ಸಾಮಾಜಿಕ ಹಾಗೂ ಆರ್ಥಿಕ ಪ್ರಜಾಪ್ರಭುತ್ವವನ್ನು ಪಡೆಯಲು ಬುನಾದಿಯಾಗಿವೆ.

·         ಐರಿಷ್ ಸಂಇಧಾನದಿಂದ ಪಡೆಯಲಾಗಿದೆ.

·         ದೇಶದ ಆಡಳಿತಕ್ಕೆ ಮೂಲ ನಿಯಮಗಳಾಗಿವೆ

·         ಕಾನೂನನ್ನು ರೂಪಿಸಿ ಜಾರಿಗೆ ತರುವಾಗ ಸರ್ಕಾರ ಇವುಗಳಿಗೆ ಹೆಚ್ಚು ಗಮನವನ್ನು ನೀಡಬೇಕು.

·         ಇವುಗಳನ್ನು ಸರ್ಕಾರ ಜಾರಿಗೊಳಿಸದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ.

 

9.   ಸ್ವತಂತ್ರ ಹಾಗೂ ಏಕೀಕೃತ ನ್ಯಾಯಾಂಗ ವ್ಯವಸ್ಥೆ

·         ಸ್ವತಂತ್ರವಾದ ಮತ್ತು ಏಕೀಕೃತ ವ್ಯವಸ್ಥೆಯಾಗಿದೆ.

·         ಶಾಸಕಾಂಗ ಮತ್ತು ಕಾರ್ಯಾಂಗಗಳು ನ್ಯಾಯಾಂಗದ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.

·         ಸರ್ವೋಚ್ಛ ನ್ಯಾಯಾಲಯ ಪ್ರಮುಖವಾಗಿದ್ದು ಇದರ ಅಡಿಯಲ್ಲಿ ಉಚ್ಛ ನ್ಯಾಯಾಲಯ ಹಾಗೂ ಇತರ ಆಧೀನ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತವೆ.

10. ಏಕಪೌರತ್ವ

·         ಜನತೆಯ ಸಂಕುಚಿತ ಪ್ರಾಂತೀಯ ಮನೋಭಾವನೆಯನ್ನು ನಿಯಂತ್ರಿಸಿ ರಾಷ್ಟ್ರೀಯ ಮನೋಭಾವನೆಯನ್ನು ಬೆಳೆಸಲು ಏಕಪೌರತ್ವಕ್ಕೆ ಅವಕಾಶ ಮಾಡಿಕೊಟ್ಟಿದೆ.

·         ಯಾವುದೇ ರಾಜ್ಯದಲ್ಲಿ ಜನಿಸಿದ್ದರೂ ಯಾವುದೇ ಪ್ರದೇಶದಲ್ಲಿ ವಾಸಿಸಿದರೂ ಎಲ್ಲರಿಗೂ ಒಂದೇ ಪೌರತ್ವ ಇದೆ.

11. ವಯಸ್ಕ ಮತದಾನ ಪದ್ಧತಿ

·         18 ವರ್ಷ ಮೇಲ್ಪಟ್ಟ ಎಲ್ಲ ಪ್ರಜೆಗಳಿಗೂ ಮತದಾನದ ಹಕ್ಕನ್ನು ನೀಡಲಾಗಿದೆ.

12. ದ್ವಿಸದನ ಶಾಸಕಾಂಗ

·         ಭಾರತದ ಶಾಸಕಾಂಗವನ್ನು ಸಂಸತ್ತು ಎಂದು ಕರೆಯುವರು.

·         ಸಂಸತ್ತು 2 ಸದನಗಳನ್ನು ಹೊಂದಿದೆ.

1.   ಮೇಲ್ಮನೆ ( ರಾಜ್ಯಸಭೆ )

2.   ಕೆಳಮನೆ ( ಲೋಕಸಭೆ )

13. ಪಕ್ಷಪದ್ಧತಿ

·         ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ವ್ಯವಸ್ಥೆಯ ಬುನಾದಿ.

·         ಅನೇಕ ಪಕ್ಷಗಳಿದ್ದು ಬಹು ಪಕ್ಷಪದ್ಧತಿ ಅಸ್ಥಿತ್ವದಲ್ಲಿದೆ.

·         ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಪಡೆದ ಪಕ್ಷ ಆಡಳಿತ ಪಕ್ಷವಾದರೆ ಉಳಿದವು ವಿರೋಧ ಪಕ್ಷಗಳಾಗುತ್ತವೆ.

·          

ಮೂಲಭೂತ ಹಕ್ಕುಗಳು

·         ಜನರಿಗೆ ಸಂವಿಧಾನ ನೇರವಾಗಿ ನೀಡಿರುವ ಹಕ್ಕುಗಳೇ ಮೂಲಭೂತ ಹಕ್ಕುಗಳು.

·         ಸಂವಿಧಾನದ 3ನೇ ಭಾಗದಲ್ಲಿ ಅಳವಡಿಸಲಾಗಿದೆ.

·         ಸಮಾಜದಲ್ಲಿ ಮಾನವನು ನಾಗರಿಕ ಜೀವನವನ್ನು ನಡೆಸಲು ಮೂಲಭೂತ ಹಕ್ಕುಗಳು ಅವಶ್ಯಕ

·         ಮೊದಲು 7 ಮೂಲಭೂತ ಹಕ್ಕುಗಳಿದ್ದವು.

·         ಸಂವಿಧಾನದ 44 ನೇ ತಿದ್ದುಪಡಿಯ ಮೂಲಕ ಆಸ್ತಿಯ ಹಕ್ಕನ್ನು ರದ್ದುಪಡಿಸಲಾಗಿದೆ.

 

1.   ಸಮಾನತೆಯ ಹಕ್ಕು

·         ಸಂವಿಧಾನದ 14 ರಿಂದ 18 ನೇ ವಿಧಿಗಳು ಸಮಾನತೆಯ ಹಕ್ಕುಗಳ ಬಗ್ಗೆ ತಿಳಿಸುತ್ತವೆ.

·         ಶಾಸನಾತ್ಮಕವಾಗಿ,ಸಾಮಾಜಿಕವಾಗಿ, ಆರ್ಥಿಕವಾಗಿ, ಕಾನೂನಿನ ಮುಂದೆ ಎಲ್ಲರೂ ಸಮಾನರು.

·         ಕಾನೂನಿಗಿಂತ ಯಾರೂ ಶ್ರೇಷ್ಟರಲ್ಲ.ಸರ್ಕಾರಿ ಉದ್ಯೋಗ ಸೇರಲು ಪ್ರತಿಯೊಬ್ಬರಿಗೂ ಸಮಾನ ಅವಕಾಶವಿದೆ.

·         ಜಾತಿ, ಲಿಂಗ, ಧರ್ಮ, ಜನ್ಮಸ್ಥಳ ಮುಂತಾದವುಗಳ ಆಧಾರದ ಮೇಲೆ ಬೇಧಭಾವ ಮಾಡಬಾರದು.

2.   ಸ್ವಾತಂತ್ರ್ಯದ ಹಕ್ಕು

·         ಸಂವಿಧಾನದ 19 ರಿಂದ 22 ನೇ ವಿಧಿಗಳು ಸ್ವಾತಂತ್ರ್ಯದ ಹಕ್ಕುಗಳ ಬಗ್ಗೆ ತಿಳಿಸುತ್ತವೆ.

·         ವಾಕ್ ಮತ್ತು ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು

·         ಶಸ್ತ್ರರಹಿತ ಶಾಂತಿಯುತ ಸಭೆ ಸೇರುವ ಹಕ್ಕು

·         ಸಂಘಸಂಸ್ಥೆಗಳನ್ನು ಸ್ಥಾಪಿಸುವ ಹಕ್ಕು

·         ಭಾರತದಲ್ಲಿ ಸಂಚರಿಸುವ, ವಾಸಿಸುವ ಹಕ್ಕು

·         ಯಾವೂದೇ ವೃತ್ತಿ ಹೊಂದುವ ಹಕ್ಕು

3.   ಶೋಷಣೆಯ ವಿರುದ್ಧದ ಹಕ್ಕು

·         ಸಂವಿಧಾನದ 23 ಹಾಗೂ 24ನೇ ವಿಧಿಗಳು ಶೋಷಣೆಯ ವಿರುದ್ಧದ ಹಕ್ಕುಗಳ ಬಗ್ಗೆ ತಿಳಿಸುತ್ತವೆ.

·         ಶೋಷಣೆಯು ಸಾಮಾಜಿಕ ಪಿಡುಗಾಗಿದ್ದು, ಇದನ್ನು ನಿರ್ಮೂಲನೆ ಮಾಡಲು ಶೋಷಣೆಯ ವಿರುದ್ಧದ ಹಕ್ಕನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆ.

·         ದುರ್ಬಲರನ್ನು, ಬಡವರನ್ನು, ಮಹಿಳೆಯರನ್ನು ಮಕ್ಕಳನ್ನು ಶೋಷಣೆಯ ಮಾಡುವಂತಿಲ್ಲ.

·         ಬಿಕ್ಷಾಟನೆ, ಸತಿಪದ್ಧತಿ, ದೇವದಾಸಿಪದ್ಧತಿ, ಅನೈತಿಕ ಚಟುವಟಿಕೆ, ಬಲವಂತದ ದುಡಿಮೆಯನ್ನು ನಿಷೇಧಿಸಲಾಗಿದೆ.

·         14 ವರ್ಷದ ಕಡಿಮೆ ಮಕ್ಕಳನ್ನು ದುಡಿಮೆಗೆ ನೇಮಿಸಿಕೊಳ‍್ಳುವಂತಿಲ್ಲ.

·         ಶೋಷಣೆಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಶಾಸನಗಳು

1.   ಕನಿಷ್ಟ ಕೂಲಿ ಕಾಯ್ದೆ - 1948

2.   ಅನೈತಿಕ ವ್ಯವಹಾರ ಕಾಯ್ದೆ - 1956

3.   ವರದಕ್ಷಿಣೆ ನಿಷೇಧ ಕಾಯ್ದೆ - 1961

4.   ಜೀತಪದ್ಧತಿ ನಿರ್ಮೂಲನಾ ಕಾಯ್ದೆ 1976

5.   ಸತಿ ನಿಷೇಧ ಕಾಯ್ದೆ 1987

6.   ಮಾಣವ ಹಕ್ಕು ರಕ್ಷಣಾ ಕಾಯ್ದೆ - 1993

7.   ಕೌಟುಂಬಿಕ ದೌರ್ಜನ್ಯ ಕಾಯ್ದೆ - 2005

4.   ಧಾರ್ಮಿಕ ಹಕ್ಕು

·         ಸಂವಿಧಾನದ 25 ರಿಂದ 28 ನೇ ವಿಧಿಗಳು ಧಾರ್ಮಿಕ ಹಕ್ಕುಗಳ ಬಗ್ಗೆ ತಿಳಿಸುತ್ತವೆ.

·         ಯಾವುದೇ ಧರ್ಮವನ್ನು ರಾಷ್ಟ್ರೀಯ ಧರ್ಮವನ್ನಾಗಿ ಸ್ವೀಕರಿಸಿಲ್ಲ.

·         ಪೌರರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಯಾವುದೇಧರ್ಮವನ್ನು ಸ್ವೀಕರಿಸುವ, ಪಾಲಿಸುವ, ಪ್ರಸಾರ ಮಾಡುವ ಸ್ವಾತಂತ್ರ್ಯ ಪಡೆದಿದ್ದಾರೆ.

·         ಧಾರ್ಮಿಕ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸುವಂತಿಲ್ಲ.

5.   ಸಾಂಸ್ಕೃತಿಕ ಮತ್ತು ವಿದ್ಯಾಭ್ಯಾಸದ ಹಕ್ಕು

ಸಂವಿಧಾನದ 29 ಮತ್ತು 30ನೇ ನೇ ವಿಧಿಗಳು ಸ್ವಾತಂತ್ರ್ಯದ ಹಕ್ಕುಗಳ ಬಗ್ಗೆ ತಿಳಿಸುತ್ತವೆ.

·         ತಮ್ಮ ಲಿಪಿ, ಭಾಷೆ, ಸಂಸ್ಕೃತಿಯನ್ನು ರಕ್ಷಿಸುವ ಹೊಣೆ ರಾಜ್ಯಗಳದ್ದಾಗಿರುತ್ತದೆ.

·         ಧಾರ್ಮಿಕ ಹಾಗೂ ಭಾಷಾ ಅಲ್ಪಸಂಖ್ಯಾತರ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದ ಅಳವಡಿಸಲಾಗಿದೆ

·         ಅಲ್ಪಸಂಖ್ಯಾತ ಸಂಸ್ಥೆಗಳು ಹಾಗೂ ರಾಜ್ಯ ಧನಸಹಾಯ ಪಡೆದ ವಿಧ‍್ಯಾ ಸಂಸ್ಥೆಗಳು ಯಾರಿಗೇ ಆಗಲಿ ಪ್ರವೇಶ ನಿರಾಕರಿಸುವಂತಿಲ್ಲ.

·         ಸಂವಿಧಾನದ 21 A ವಿಧಿಯನ್ವಯ ಶೀಕ್ಷಣವನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿದೆ.

·         ಇದರಂತೆ 6 ರಿಂ 14 ವರ್ಷದ ಮಕ್ಕಳಿಗೆ ರಾಜ್ಯಸರ್ಕಾರವೇ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡಬೇಕು.

6.   ಸಂವಿಧಾನಬದ್ಧ ಪರಿಹಾರದ ಹಕ್ಕು

ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಸಂವಿಧಾನದ 32ನೇ ವಿಧಿಯಲ್ಲಿ ಅವಕಾಶ ಮಾಡಿಕೊಡುತ್ತದೆ.

ಡಾ. ಬಿ ಆರ್ ಅಂಬೇಡ್ಕರ್ ಇದನ್ನು “ ಸಂವಿಧಾನದ ಆತ್ಮ ಮತ್ತು ಹೃದಯ” ವಿದ್ದಂತೆ ಎಂದಿದ್ದಾರೆ.

ಯಾವುದೇ ವ್ಯಕ್ತಿ, ಕೇಂದ್ರ, ರಾಜ್ಯ ಸರ್ಕಾರದಿಂದ ಮೂಲಭೂತ ಹಕ್ಕುಗಳಿಗೆ ಧಕ್ಕೆಯುಂಟಾದರೆ ನೇರವಾಗಿ ಸುಪ್ರಿಂ ಕೋರ್ಟ್ ಗೆ ಅರ್ಜಿ ಸಲ್ಲಿಸಬಹುದು.

ಆದ್ದರಿಂದ ಸರ್ವೋಚ್ಛ ನ್ಯಾಯಾಲಯವನ್ನು ಮೂಲಭೂತ ಹಕ್ಕುಗಳ ರಕ್ಷಕ ಎನ್ನುವರು.

ಮೂಲಭೂತ ಹಕ್ಕುಗಳ ರಕ್ಷಣೆಗೆ ‘ರಿಟ್’ ಅರ್ಜಿ ಸ್ವೀಕರಿತ್ತದೆ.

ವಿವಿಧ ರಿಟ‍್‍ಗಳು

1.   ಬಂಧೀ ಪ್ರತ್ಯಕ್ಷೀಕರಣ : ಕಾರಣವಿಲ್ಲದೇ ವ್ಯಕ್ತಿಯನ್ನು ಪೋಲೀಶರು ಬಂಧಿಸಿದರೆ ವ್ಯಕ್ತಿ ಅಥವಾ ಅವನ ಪರವಾಗಿ ಸಲ್ಲಿಸುವ ರಿಟ್ ಅರ್ಜಿ

2.   ಪರಮಾದೇಶ : ಅಧಿಕಾರಿಯೊಬ್ಬ ತಮ್ಮ ಅಧಿಕಾರ ಚಲಾಯಿಸಲು ನಿರಾಕರಿಸಿದಾಗ ಅಥವಾ ಸಾರ್ವಜನಿಕ ಕರ್ತವ್ಯ ಮಾಡಲು ನಿರಾಕರಿಸಿದಾಗ ನ್ಯಾಲಾಯದ ಸಂಬಂದಪಟ್ಟವರಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಆದೇಶ ನೀಡುವುದೇ ಪರಮಾದೇಶ.

3.   ಪ್ರತಿಬಂಧಕಾಜ್ಞೆ : ಆಧೀನ ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿಗೆ ಮೀರಿ ಮೊಕದ್ದಮೆಯನ್ನು ವಿಚಾರಣೆ ಮಾಡಬಾರದು ಎಂದು ಅಥವಾ ತೀರ್ಪು ನೀಡಬಾರದು ಎಂದು ಸುಪ್ರಿಂ ಕೋರ್ಟ್ ಹೊರಡಿಸುವ ಲಿಖಿತ ರೂಪದ ನಿಷೇಧಾಜ್ಞೆಯನ್ನು ಪ್ರತಿಬಂಧಕಾಜ್ಞೆ ಎನ್ನುವರು.

4.   ಸರ್ಷಿಯೋರರಿ : ಕೆಳಗಿನ ನ್ಯಾಯಾಲಯವು ತನ್ನ ಅಧಿಕಾರ ವ್ಯಾಪ್ತಿಗೆ ಮೀರಿ ತೀರ್ಪು ನೀಡಿದ್ದಾದರೆ ಅದನ್ನು ರದ್ದುಗೊಳಿಸಿ ಅದಕ್ಕೆ ಸಂಬಂಧಿಸಿದ ಮೊಕದ್ದಮೆಯನ್ನು ಸಂಬಂದಪಟ್ಟ ಮೇಲಿನ ನ್ಯಾಯಾಲಯಕ್ಕೆ ವರ್ಗಾಯಿಸಬೇಕೆಂದು ಸರ್ವೋಚ್ಛ ನ್ಯಾಯಾಲಯವು ಕೆಳಗಿನ ನ್ಯಾಯಾಲಯಕ್ಕೆ ನೀಡುವ ಆಜ್ಞಾಪತ್ರವೇ ಸರ್ಷಿಯೋರರಿ.

5.   ಕೋ-ವಾರೆಂಟ್ : ಅರ್ಹತೆಯಿಲ್ಲದ ವ್ಯಕ್ತಿ ಕಾನೂನುಬಾಹಿರವಾಗಿ ಸರ್ಕಾರದ ಹುದ್ದೆ ಹೊಂದಿದ್ದರೆ ಅಂತಹ ವ್ಯಕ್ತಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೆ ಕೋ-ವಾರೆಂಟ್ ಎನ್ನುವರು.

 

ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು

·         ಸಾಮಾಜಿಕವಾಗಿ ಸಷ್ಟವಾಗಿರುವಹಕ್ಕುಗಳ ರಕ್ಷಣೆಗಾಗಿ ಅಥವಾ ಸಾರ್ವಜನಿಕರ ಹಿತಾಸಕ್ತಿ ರಕ್ಷಣೆಗಾಗಿ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ನ್ಯಾಯಾಲಯದಲ್ಲಿ ಹೂಡುವ ಮೊಕದ್ದಮೆಗಳನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಎನ್ನುವರು.

·         ಇತ್ತೀಚೆಗೆ ಮಾದ್ಯಮಗಳ ಮಾಹಿತಿಯ ಆಧಾರದ ಮೇಲೆ ನ್ಯಾಯಾಲಯಗಳೇ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳುತ್ತಿವೆ.

ಮೂಲಭೂತ ಕರ್ತವ್ಯಗಳು

·         ಹಕ್ಕುಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

·         ಕರ್ತವ್ಯರಹಿತ ಹಕ್ಕಿಗೆ ಪ್ರಾಮುಖ್ಯತೆಯಾಗಲೀ ಮೌಲ್ಯವಾಗಲೀ ಇರುವುದಿಲ್ಲ.

·         ಇವುಗಳಿಗೆ ನ್ಯಾಯಾಲಯದ ರಕ್ಷಣೆಯಿಲ್ಲ

·         ಇವುಗಳನ್ನು ಉಲ್ಲಂಘಿಸಿದವರಿಗೆ ಸಾಮಾನ್ಯ ಕಾನೂನಿನನ್ವಯ ಶಿಕ್ಷೆಯಾಗುತ್ತದೆ.

1.   ಸಂವಿಧಾನ, ರಾಷ್ಟ್ರದ್ವಜ ಮತ್ತು ರಾಷ್ಟ್ರಗೀತೆಗಳನ್ನು ಗೌರವಿಸುವುದು.

2.   ಸ್ವಾತಂತ್ರ್ಯ ಚಳುವಳಿಯ ಸ್ಪೂರ್ತಿದಾಯಕ ಆದರ್ಶ ತತ್ವಗಳನ್ನು ಪಾಲಿಸುವುದು.

3.   ಭಾರತದ ಸಾರ್ವಭೌಮತೆ, ಏಕತೆ,ಸಮರ್ಗತೆಯನ್ನು ಕಾಪಾಡುವುದು ಮತ್ತು ರಕ್ಷಿಸುವುದು.

4.   ಅಗತ್ಯ ಬಂದಾಗ ರಾಷ್ಟ್ರವನ್ನು ರಕ್ಷಿಸಿ ದೇಶದ ಸೇವೆ ಮಾಡಬೇಕು.

5.   ಭಾರತೀಯರಲ್ಲಿ ಸಾಮರಸ್ಯ ಹಾಗೂ ಸಹೋದರತೆಯ ಭಾವನೆಯನ್ನು ಬೆಳೆಸಬೇಕು ಮತ್ತು ಮಹಿಳೆಯರ ಗೌರವಕ್ಕೆ ಭಂಗ ತರುವ ಆಚರಣೆಗಳನ್ನು ತ್ಯಜಿಸಬೇಕು.

6.   ನಮ್ಮ ಸಂಘಟಿತ ಸಂಸ್ಕೃತಿಯ ಪರಂಪರೆಯನ್ನು ಗೌರವಿಸಿ ರಕ್ಷಿಸಬೇಕು.

7.   ಅರಣ್ಯಗಳು, ಸರೋವರಗಳು, ನದುಗಳು, ವನ್ಯಮೃಗಗಳೂ ಸೇರಿದಂತೆಪ್ರಕೃತಿ, ಪರಿಸರವನ್ನು ಅಭಿವೃದ್ಧಿಪಡಿಸಬೇಕು ಹಾಘೂ ಜೀವಂತ ಪ್ರಾಣಿಗಳಿಗೆ ಅನುಕಂಪ ತೋರಿಸಬೇಕು.

8.   ವೈಜ್ಞಾನಿಕ ಹಾಗೂ ಮಾನವೀಯತೆಯ ಗುಣಗಳ ವಿಚಾರಣಾ ಹಾಗೂ ಸುಧಾರಣಾ ಭಾವನೆಯನ್ನು ಬೆಳೆಸಿಕೊಳ್ಳಬೇಕು.

9.   ಸಾರ್ವಜನಿಕ ಆಸ್ತಿಯನ್ನು ರಕ್ಷಿಸಬೇಕು ಮತ್ತು ಹಿಂಸಾಮಾರ್ಗವನ್ನು ತ್ಯಜಿಸಬೇಕು.

10. ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಗಳಲ್ಲಿ ಪ್ರಾವೀಣ್ಯತೆಯನ್ನು ಪ್ರದರ್ಶಿಸಿ ರಾಷ್ಟ್ರದ ಪ್ರಗತಿಗೆ ಶ್ರಮಿಸಬೇಕು.

11. ತಂದೆ/ತಾಯಿ ಅಥವಾ ಪೋಷಕರು6 ರಿಂದ 14 ವರ್ಷದದವರೆಗೆ ತಮ್ಮ ಮಗುವಿನ ಶಿಕ್ಷಣಕ್ಕೆ ಅವಕಾಶವನ್ನು ಕಲ್ಪಿಸಿಕೊಡಬೇಕು.

 

 

ರಾಜ್ಯನಿರ್ದೇಶಕ ತತ್ವಗಳು

·         ಸಂವಿಧಾನದ 4ನೇ ಭಾಗದಲ್ಲಿವೆ.

·         ಮಾರ್ಗದರ್ಶಿ ಸೂತ್ರಗಳೆಂದೂ ಕರೆಯುತ್ತಾರೆ.

·         ಸುಖೀ ರಾಜ್ಯದ ಕಲ್ಪನೆಯಿಂದ ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿದೆ.

·         ಐರಿಷ್ ಸಂವಿಧಾನದಿಂದ ಪ್ರಭಾವಿತವಾಗಿ ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿದೆ.

·         ಇವು ಸಾಮಾಜಿಕ ಹಾಗೂ ಆರ್ಥಿಕ ಪ್ರಜಾಪ್ರಭುತ್ವವನ್ನು ಪಡೆಯಲು ಬುನಾದಿಯಾಗಿವೆ.

·         ದೇಶದ ಆಡಳಿತಕ್ಕೆ ಮೂಲ ನಿಯಮಗಳಾಗಿವೆ

·         ಕಾನೂನನ್ನು ರೂಪಿಸಿ ಜಾರಿಗೆ ತರುವಾಗ ಸರ್ಕಾರ ಇವುಗಳಿಗೆ ಹೆಚ್ಚು ಗಮನವನ್ನು ನೀಡಬೇಕು.

·         ಯಾವುದೇ ಪಕ್ಷ ಾಡಳಿತ ನಡೆಸುವಾಗ ಇವುಗಳನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಬೇಕು.

·         ಇವುಗಳನ್ನು ಸರ್ಕಾರ ಜಾರಿಗೊಳಿಸದಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ.

ರಾಜ್ಯನಿರ್ದೇಶಕ ತತ್ವಗಳು

1.   ಎಲ್ಲಾ ಪೈರರಿಗೂ ತಮ್ಮಜೀವನೋಪಾಯಕ್ಕೆ ಬೇಕಾದ ಸೈಲಭ‍್ಯಗಳನ್ನು ಒದಗಿಸುವುದು.

2.   ಸಮುದಾಯದಲ್ಲಿನ ಸಂಪತ್ತು ಮತ್ತು ಉತ್ಪಾದನಾ ಸಾಧನಗಳು ಕೆಲವೇ ಜನರ ಸ್ವತ್ತಾಗದಂತೆ ತಡೆಗಟ್ಟುವುದು.

3.   ಸ್ತ್ರೀ ಮತ್ತು ಪುರುಷರೆಲ್ಲರಿಗೂ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಮತ್ತು ಕಾರ್ಮಿಕರ ಯೋಗಕ್ಷೇಮ ರಕ್ಷಿಸುವುದು.

4.   ವೃದ್ಧರಯ, ರೋಗಿಗಳು, ಅಸಮರ್ಥರು, ಮತ್ತು ದುರ್ಬಲವರ್ಗದವರಿಗೆ ಸಹಾಯಧನ ನೀಡುವುದು.

5.   ದೇಶದಾದ್ಯಂತ ಏಕರೂಪದ ನಾಗರಿಕ ಕಾನೂನನ್ನು ಜಾರಿಗೆ ತರುವುದು.

6.   6 ವರ್ಷದವರೆಗಿನ ಎಲ್ಲ ಮಕ್ಕಳಿಗೆ ಬಾಲ್ಯಪೋಷಣೆ ಮತ್ತು ಶಾಲಾಪೂರ್ವ ಶಿಕ್ಷಣವನ್ನು ಕೊಡಲು ರಾಜ್ಯಗಳು ಪ್ರಯತ್ನಿಸುವುದು.

7.   ಐತಿಹಾಸಿಕ ಸ್ಮಾರಕ ಮತ್ತು ಸ್ಥಳಗಳನ್ನು ರಕ್ಷಿಸುವುದು.

8.   ನ್ಯಾಯಾಂಗವನ್ನು ಕಾರ್ಯಾಂಗದಿಂದ ಪ್ರತ್ಯೇಕಿಸುವುದು.

9.   ಅಂತರಾಷ್ಟ್ರೀಯ ಶಾಂತಿಯುತ ವಿದೇಶಾಂಗ ನೀತಿಯನ್ನು ಪಾಲಿಸುವುದು. ಭದ್ರತೆ ಕಾಪಾಡಿ ವಿಶ್ವ ಕಾನೂನನ್ನು ಗೌರವಿಸಿವಿದಿ.

10. ಗ್ರಾಮ ಪಂಚಾಯಿತಿಯನ್ನು ಸ್ಥಾಪಿಸುವುದು.

11. ಗ್ರಾಮೀಣ ಹಾಗೂ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವುದು.

12. ಕೃಷಿ ಮತ್ತು ಪಶುಸಂಗೋಪನೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿವುದು.

13. ಪಾನ ನಿಷೇಧವನ್ನು ಜಾರಿಗೆ ತರುವುದು.

14. ವೈಜ್ಞಾನಿಕ ಆಧಾರದ ಮೇಲೆ ಬೇಸಾಯವನ್ನು ಅಭಿವೃದ್ಧಿಪಡಿಸಿವುದು.

§  ರಾಜ್ಯನಿರ್ದೇಶಕ ತತ್ವಗಳು ಪ್ರಮುಖವಾಗಿದ್ದು ಎಲ್ಲರ ಸುಖವನ್ನು ಸಾಧಿಸುವುದೇ ಇವುಗಳ ಗುರಿಯಾಗಿದೆ,

§  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇವುಗಳನ್ನು ಜಾರಿಗೆ ತರುವ ಪ್ರಯತ್ನ ಮಾಡುತ್ತಿವೆ.

§  ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಇವು ದಿಕ್ಸೂಚಿಯಾಗಿವೆ.

logoblog

Thanks for reading ಸಂವಿಧಾನ ನೋಟ್ಸ್

Previous
« Prev Post

No comments:

Post a Comment