ಅರ್ಥ
ಸರಕು ಮತ್ತು ಸೇವೆಯನ್ನು ಉತ್ಪಾದಿಸುವ ಉದ್ದೇಶಕ್ಕಾಗಿ ದೈಹಿಕವಾಗಿ ಅಥವಾ ಮಾನಸಿಕವಾಗಿ ಕೆಲಸ ಮಾಡುವ ಸಾಮಥ್ರ್ಯವನ್ನು ಶ್ರಮ ಎನ್ನುವರು.
*ಶ್ರಮವು ಮುಖ್ಯವಾದ ಅತ್ಯವಶ್ಯಕವಾದ ಉತ್ಪಾದನಾಂಗವಾಗಿದೆ
* ಭೂಮಿ ಮತ್ತು ಬಂಡವಾಳದ ಜೊತೆಗೆ ಮುಖ್ಯವಾದ ಉತ್ಪಾದನಾಂಗವಾಗಿದೆ
ಶ್ರಮದ ಸಹಾಯವಿಲ್ಲದೇ ಯಾವುದೇ ವಸ್ತುವನ್ನು ಉತ್ಪಾದಿಸಲು ಸಾದವಿಲ್ಲ
ಸಂತೋಷಕ್ಕೆ ಕೈಗೊಳ್ಳುವ ಕೆಲಸಕ್ಕೆ ಹೊರತಾಗಿ ಸರಕುಗಳ ದೇಹ ಮತ್ತು ಮನಸ್ಸು ಕೈಗೊಳ್ಳುವ ಯಾವುದೇ ಭಾಗಶಃ ಅಥವಾ ಪೂರ್ಣ ಪ್ರಯತ್ನವನ್ನು ಶ್ರಮ ಎಂದು ಕರೆಯುತ್ತಾರೆ.
ಶ್ರಮದ ಲಕ್ಷಣಗಳು :
ಶ್ರಮವನ್ನು ಶ್ರಮಿಕರಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ
ಶ್ರಮವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ
ಶ್ರಮದ ಪೂರೈಕೆಯು ಕಾಲದಿಂದ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ
ಶ್ರಮದ ಸಾಮಥ್ರ್ಯದಲ್ಲಿ ಭಿನ್ನತೆಯಿದೆ
ಶ್ರಮವು ಒಂದು ಚಟುವಟಿಕೆಯ ಅಂಶವಾಗಿದೆ.
ಶ್ರಮ ಮತ್ತು ಶ್ರಮಿಕ ಅವಿಭಾಜ್ಯ ಅಂಗವಾಗಿದೆ
ಶ್ರಮಕ್ಕೆ ಚಲನೆ ಇದೆ
ಮಹತ್ವ :
ಶ್ರಮವು ಉತ್ಪನ್ನಕಾರಕ ಅಂಶವಾಗಿದೆ
ಇತರೆ ಉತ್ಪಾದನಾಂಗಗಳನ್ನು ಚುರುಕುಗೊಳಿಸುತ್ತದೆ
ಉತ್ಪಾದನಾಂಗಗಳನ್ನು ಉತ್ಪಾದನಾ ಉದ್ದೇಶಗಳಿಗಾಗಿ ಉಪಯೋಗಗಕಾರಿಗಳನ್ನಾಗಿ ಮಾಡುತ್ತದೆ
ಒಂದು ದೇಶದಲ್ಲಿನ ಶ್ರಮಶಕ್ತಿಯ ಗಾತ್ರವು 15 ರಿಂದ 60 ವರ್ಷಗಳ ನಡುವಿನ ವಯೋಗುಂಪಿನಲ್ಲಿರುವ ಜನರ ಸಂಖ್ಯೆಯಿಂದ ನಿರ್ದರಿಸಲ್ಪಡುತ್ತದೆ.
ಶ್ರಮದ ವಿಧಗಳು :
ಕೆಲಸದ ಸ್ವರೂಪ : ದೈಹಿಕ ಮತ್ತು ಮಾನಸಿಕ ಶ್ರಮ
ಕೌಶಲ್ಯ : ಕೌಶಲ್ಯ ಸಹಿತ ಕೌಶಲ್ಯ ರಹಿತ ಶ್ರಮ
ತರಭೇತಿ :ವೃತ್ತಿಪರ ಮತ್ತು ಆಡಳಿತಾತ್ಮಕ
ಆದಾಯ ಗಳಿಕೆ : ಉತ್ಪಾದಕ ಮತ್ತು ಅನುತ್ಪಾದಕ
ಶ್ರಮ ವಿಭಜನೆ :
ಶ್ರಮ ವಿಭಜನೆಯು ಮಾನವ ಜನಾಂಗದಷ್ಟು ಹಳೆಯದಾಗಿದೆ,ಪುರಾತನ ಕಾಲದಲ್ಲಿ ಪುರುಷ ಮತ್ತು ಸ್ತ್ರೀಯರ ನಡುವೆ ಪ್ರಾಥಮಿಕ ಶ್ರಮ ವಿಭಜನೆ ಇತ್ತು .ಪುರುಷರು ಭೇಟೆಯಾಡುವದು ಮತ್ತು ಮೀನು ಹಿಡಿಯುವ ಕೆಲಸವನ್ನು ಮಾಡಿತ್ತಿದ್ದರೆ .ಮಹಿಳೆಯರು ಅಡುಗೆ ಮಾಡುವದು ಬಟ್ಟೆ ಒಗೆಯುವದು,ಮಕ್ಕಳ ಪಾಲನೆ ಮಾಡುತ್ತಿದ್ದರು .
ಶ್ರಮ ವಿಭಜನೆ : ಉತ್ಪಾದನಾ ಪ್ರಕ್ರಿಯೆಯ ವಿವಿಧ ಭಾಗಗಳನ್ನು ವಿವಿಧ ಕೆಲಸಗಾರರು ಅಥವಾ ವಿವಿಧ ಕೆಲಸಗಾರರ ಗುಂಪುಗಳಿಗೆ ಹಂಚುವದನ್ನು ಶ್ರಮ ವಿಭಜನೆ ಎನ್ನುತ್ತಾರೆ.
ಶ್ರಮ ವಿಭಜನೆಯ ಅನೂಕೂಲಗಳು :
ಶ್ರಮದ ದಕ್ಷತೆ : ಶ್ರಮಿಕರ ದಕ್ಷತೆಯನ್ನು ಹೆಚ್ಚಿಸುತ್ತದೆ
ಉತ್ಪಾದನೆಯ ಗುಣಮಟ್ಟ : ಶ್ರಮದ ದಕ್ಷತೆಯಲ್ಲಿನ ಹೆಚ್ಚಳವು ಉತ್ಪನ್ನದ ಪ್ರಮಾಣವನ್ನು ಹೆಚ್ಚಿಸುವದಲ್ಲದೇ ಉತ್ಪಾದಿತ ಸರಕುಗಳ ಮತ್ತು ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ಲಾಭ : ಉತ್ಪನ್ನದ ಪ್ರಮಾಣ ಮತ್ತು ಗುಣಮಟ್ಟದಲ್ಲಿನ ಹೆಚ್ಚಳವು ಹೆಚ್ಚಿನ ಲಾಭವನ್ನು ತಂದು ಕೊಡುತ್ತದೆ
ಸರಾಸರಿ ವೆಚ್ಚ : ಶ್ರಮ ವಿಭಜನೆಯಿಂದ ಒಟ್ಟು ಉತ್ಪನ್ನವು ಹೆಚ್ಚ್ಳವಾಗುತ್ತಿರುವವರೆಗೆ ಉತ್ಪಾದಿತ ಸರಕುಗಳ ಸರಾಸರಿ ವೆಚ್ಚ ಕಡಿಮೆಯಾಗುತ್ತಿರುತ್ತದೆ.ಅದು ಅನುಬೋಗಿಗಳ ಕಡಿಮೆ ಬೆಲೆಯಲ್ಲಿ ಸರಕುಗಳನ್ನು ಪಡೆಯುತ್ತಾರೆ
ಸಂಶೋಧನೆ ಮತ್ತು ಅಭಿವೃದ್ಧಿ : ಶ್ರಮವಿಭಜನೆ ದೀರ್ಘವಧಿಯಲ್ಲಿನ ಸಂಶೋಧನೆ ಮತ್ತು ಆವಿಷ್ಕಾರಕ್ಕೆ ಸಹಾಯಕವಾಗಿದೆ.ಇದು ವಿವಿಧ ರೀತಿಯ ನವೀನ ಉತ್ಪನ್ನಗಳ ಉತ್ಪಾದನೆಗೆ ದಾರಿ ಮಾಡಿ ಕೊಡುತ್ತದೆ.
ಶ್ರಮ ವಿಭಜನೆಯ ಅನಾನೂಕೂಲಗಳು:
ಕೆಲಸದ ಏಕತಾನತೆ : ಶ್ರಮವಿಭಜನೆಯ ಅಡಿಯಲ್ಲಿ ಒಬ್ಬ ಕೆಲಸಗಾರನು ವರ್ಷಗಳವರೆಗೆ ಒಂದೇ ರೀತಿಯ ಕೆಲಸವನ್ನು ಮತ್ತೆ ಮತ್ತೆ ಮಾಡಬೇಕಾಗುತ್ತದೆ.ಆದುದರಿಂದ ಕಾಲಾ ನಂತರದಲ್ಲಿ ಕೆಲಸಗಾರರು ಕೆಲಸಸದಲ್ಲಿ ಏಕತಾನತೆಯನ್ನು ಅನುಭವಿಸುತ್ತಾರೆ ಮತ್ತು ಅದರಿಂದ ಬೇಸರಗೊಳ್ಳುವರು.
ಜವಾಬ್ದಾರಿಯ ಕೊರತೆ : ಉತ್ಪನ್ನದ ಗುಣಮಟ್ಟವು ನಿರೀಕ್ಷತ ಮಟ್ಟದಲ್ಲಿ ಇಲ್ಲವೆಂದರೆ ಯಾರೊಬ್ಬರು ಅದರ ಜವಾಬ್ದಾರಿಯನ್ನು ಹೊರಲಾರರು.
ಹೆಚ್ಚಿದ ಅವಲಂಬನೆ : ಉತ್ಪಾದನೆಯನ್ನು ಹಲವಾರು ಪ್ರಕ್ರಿಯೆಗಳನ್ನಾಗಿ ವಿಭಜಿಸಿದಾಗ ಮತ್ತು ಪ್ರತಿ ವಿಭಾಗವು ಬೇರೆ ಬೇರೆ ಕೆಲಸಗಾರರಿಂದ ನಿರ್ವಹಿಸಲ್ಪಟ್ಟಾಗ ,ಇದು ಕೆಲಸಗಾರರ ನಡುವೆ ಅವಲಂಬನೆಗೆ ದಾರಿ ಮಾಡಿಕೊಡುತ್ತದೆ.
ನಿರುದ್ಯೋಗ : ಶ್ರಮವಿಭಜನೆಯು ವೃತ್ತಿ ವೈಶಿಷ್ಟ್ಯತೆಗೆ ದಾರಿಮಾಡಿಕೊಡುತ್ತದೆ.ಒಬ್ಬ ಕೆಲಸಗಾರನು ಇಡೀ ವಸ್ತುವನ್ನು ತಾನೇ ಪೂರ್ಣ ತಯಾರಿಸುವದಕ್ಕೆ ಬದಲಾಗಿ ,ಅದರ ಒಂದು ಸಣ್ಣ ಭಾಗದ ತಯಾರಿಕೆಯಲ್ಲಿ ವೈಶಿಷ್ಟ್ಯತೆಗಳಿಸಿರುತ್ತಾನೆ .ಅವನನ್ನು ಕೆಲಸದಿಂದ ತೆಗೆದುಹಾಕಿದರೆ ಅವನು ಅದೇ ರೀತಿಯ ಕೆಲಸವನ್ನು ಹುಡಕಬೇಕಾಗುತ್ತದೆ ಮತ್ತು ಅಲ್ಲಿಯವರೆಗೆ ಅವನು ನಿರುದ್ಯೋಗಿಯಾಗುತ್ತನೆ .
ವರ್ಗ ಕಲಹ ; ಶ್ರಮವಿಭಜನೆ ದೊಡ್ಡ ಪ್ರಮಾಣದ ಉತ್ಪಾದನೆಗೆ ಅನೂಕೂಲ ಮಾಡಿಕೊಡುವದಲ್ಲದೆ,ಉತ್ಪಾದಕರು ಅತಿ ಹೆಚ್ಚಿನ ಲಾಭ ಗಳಿಸಲು ಸಯಾಯಕವಾಗಿದೆ.ಉತ್ಪಾದಕರು ಕಾರ್ಮಿಕರಿಗೆ ಕಡಿಮೆ ಕೂಲಿಯನ್ನು ಕೊಡುವದರಿಂದ ತಾವು ಶ್ರೀಮಂತರಾಗುತ್ತಾರೆ.ಇದು ಸಮಾಜವನ್ನು ಉಳ್ಳವರು ಮತ್ತು ಇಲ್ಲದವರನ್ನಾಗಿ (ಶ್ರೀಮಂತ ಮತ್ತು ಬಡವ) ವರ್ಗೀಕರಿಸುತ್ತದೆ.
ಶ್ರಮದ ಲಿಂಗ ಪರಿಣಾಮ :
ದೇಶದ ಶ್ರಮಶಕ್ತಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸುಮಾರು 31% ರಷ್ಟು ಮತ್ತು ನಗರ ಪ್ರದೇಶದಲ್ಲಿ ಶೇ 20% ಮಹಿಳೆಯರಿದ್ದಾರೆ.ಪುರುಷರಿಗೆ ಹೋಲಿಸಿದಾಗ ಮಹಿಳಾ ಶ್ರಮಶಕ್ತಿಯ ಪ್ರಮಾಣ ಹೆಚ್ಚುತ್ತಿದೆ.ಒಂದು ದೇಶದ ಬೆಳವಣಗೆ ಮತ್ತು ಅಭಿವೃದ್ಧಿಯಲ್ಲಿ ಪುರುಷರಂತೆ ಮಹಿಳೆಯರೂ ಸಮಾನ ಪ್ರಾಮುಖ್ಯತೆಯನ್ನು ಪಡೆದಿದ್ದಾರೆ.ಆರ್ಥಿಕ ಪ್ರಗತಿಯ ಜೊತೆಗೆ ,ಮಹಿಳೆಯರು ಶಕ್ತಿಶಾಲಿ ಭಾರತದ ಒಂದು ಶಕ್ತಿಯಾಗಿ
ಹೊರಹೊಮ್ಮುತ್ತಿದ್ದದಾರೆ.ಆದರೆ ದುರಾದೃಷ್ಟದ ಸಂಗತಿ ಎಂದರೆ ಭಾತರತದಲ್ಲಿ ಮಹಿಳಾ ಕಾರ್ಮಿಕರ ಸಾಮಾಜಿಕ ಆರ್ಥಿಕ ಸ್ಥಿತಿಗತಿ ಉತ್ತಮವಾಗುತ್ತಿಲ್ಲ ಸಮಾಜದಲ್ಲಿ ಮಹಿಳೆಯರನ್ನು ಒಂದಲ್ಲ ಒಂದು ರೀತಿಯಲ್ಲಿ ಶೋಷಣೆ ಮಾಡಲಾಗುತ್ತಿದೆ,ಭಾತರದಲ್ಲಿ 2011 ಜನಗಣತಿ ಪ್ರಕಾರ 587 ಮಿಲಿಯನ್ ಮಹಿಳೆಯರಿದ್ದರೆ,ದೇಶದಲ್ಲಿ ಲಿಂಗ ತಾರತಮ್ಯ ಮತ್ತು ಹೆಚ್ಚು ಲಿಂಗ ಅಸಮಾನತೆ ಅಸ್ತಿತ್ವದಲ್ಲಿದ್ದಂತೆ ಲಿಂಗ ಸಂಬಂಧಿ ಕಾಳಜಿಗಳು ಮಹತ್ವವನ್ನು ಪಡೆಯುತ್ತವೆ ಸರ್ಕಾರವು ಆಯವ್ಯಯದಲ್ಲಿ ಲಿಂಗ ಸಂಬಂಧಿ ಆಯವ್ಯವನ್ನು ಮಂಡಿಸಲು ನಿರ್ಧರಿಸಿದೆ
ಲಿಂಗ ತಾರತಮ್ಯ
ಲಿಂಗ ತಾರತಮ್ಯ ಎಂಬ ಪದವನ್ನು ಮಹಿಳೆಯರು ಆರ್ಥಿಕವಾಗಿ ಹಿಂದುಳಿದಿರುವದನ್ನು ಮತ್ತು ಅವಕಾಶವಂಚಿತರಾಗಿರುವದನ್ನು ಸೂಚಿಸಲು ಬಳಸಲಾಗುತ್ತದೆ .ಮಹಿಳೆರಿಗೆ ಪುರುಷರಷ್ಟೇ ಸಮಾನ ಸ್ಥಾನಮಾನ ಮತ್ತು ಅವಕಾಶಗಳು ಸಿಗದಿದ್ದಾಗ ಅದನ್ನು ಲಿಂಗ ಅಸಮಾನತೆ ಎನ್ನುತ್ತೇವೆ.ಭಾರತದಲ್ಲಿ ಮಹಿಳೆಯರು ಮತ್ತು ಪುರುಷರ ನಡುವೆ ಬಹು ವ್ಯಾಪಕವಾದ ಅಸಮಾನತೆ ಇದೆ,ಜೀವನದ ನಾನಾ ಸ್ಥರದಲ್ಲಿ ಮಹಿಳೆಯರನ್ನು ಅಸಮಾನತೆಯಿಂದ ನಡೆಸಿಕೊಳ್ಳುಲಾಗುತ್ತದೆ ,ಅವುಗಳೆಂದರೆ ಅಸಮಾನ ಲಿಂಗಾನುಪಾತ ಕೆಳಮಟ್ಟದ ಮಹಿಳಾ ಸಾಕ್ಷರತಾ ದರ ಕಡಿಮೆ ಮಹಿಳಾ ಕೆಲಸದ ಭಾಗವಹಿಸುವಿಕೆ ದರ ಕಡಿಮೆ ಮಹಿಳಾ ಆರ್ಥಿಕ ಚಟುವಟಿಕೆ ದರ ಪುರುಷ ಉದ್ಯೋಗಿಗಳಿಗೆ ಹೋಲಿಸಿದಲ್ಲಿ ಸರ್ಕಾರದ ಉನ್ನತ ಅಧಿಕಾರ ಸ್ಥಾನದಲ್ಲಿ ಮಹಿಳೆಯರ ಭಾಗವಹಿಸುವಿಕೆ ಕಡಿಮೆ ಇರುವದು ವಿಧಾನಸಭೆಗಳು ಮತ್ತು ಲೋಕಸಭೆಯಲ್ಲಿ ಮಹಿಳಾ ಸದಸ್ಯರ ಭಾಗವಹಿಸುವಕೆ ಬಹಳ ಕಡಿಮೆ ಇದೆ.
ಮಹಿಳೆಯರು ಪುರುಷಗಿಂತ ಹೆಚ್ಚಿನ ಕೆಲಸದ ಹೊರೆಯನ್ನು ಹೊರುತ್ತಿದ್ದಾರೆ ಇವರು ಮನೆಯ ಕೆಲಸಗಳಲ್ಲಿ ಹೆಚ್ಚಿನ ಪಾಲು ಜವಾಬ್ದಾರರಾಗಿದ್ದು ಅವರು ಶ್ರಮದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು ಹೆಚ್ಚಿನ ಹೊರೆಯಾಗಿದೆ ಈ ದ್ವಿಮುಖ ಕೆಲಸವನ್ನು ಅಂಕಿ ಅಂಶಗಳಲ್ಲೂ ಗುರುತಿಸುತ್ತಿಲ್ಲ.ಸಾಮಾಜಿಕ ನೀತಿ ನಿರೂಪಣೆಯಲ್ಲು ಪರಿಗಣಿಸುತ್ತಿಲ್ಲ .
ಉತ್ಪಾದಕ ಶ್ರಮ :
ಯಾವ ಶ್ರಮವು ತುಷ್ಟಿಗುಣವು ಸೃಷ್ಟಿಸುತ್ತದೆಯೋ ಅಥವಾ ಯಾವುದು ಆದಾಯವನ್ನು ಗಳಿಸುವಲ್ಲಿ ನಿರತವಾಗಿದೆಯೋ ಅದೇ ಉತ್ಪಾದಕ ಶ್ರಮ .ಸಮಾಜಘಾತುಕ ಚಟುವಟಿಕೆಗಳನ್ನು ಉತ್ಪಾದಕ ಶ್ರಮವೆಂದು ಪರಿಗಣಿಸಲಾಗುವದಿಲ್ಲ ಏಕೆಂದರೆ ಅವರು ಇತರರ ಸಂಪತ್ತನ್ನು ದೋಚಲು ಪ್ರಯತ್ನಿಸುತ್ತಾರೆ .
ಅಡಂ ಸ್ಮಿತ್ ರ ಪ್ರಕಾರ ;ಯಾವ ಶ್ರಮವು ಭೌತಿಕ ಸರಕುಗಳನ್ನು ಅಥವಾ ಆಸ್ತಿಗಳನ್ನು ನಿರ್ಮಿಸುವದಕ್ಕೆ ಮುಂದಾಗುತ್ತದೆಯೋ ಅದು ಮಾತ್ರ ಉತ್ಪಾದಕ ಶ್ರಮವಾಗಿದೆ.
ಪುನರುತ್ಪಾದನಾ ಶ್ರಮವು ಮನೆಯಲ್ಲಿ ನಿರ್ವಹಿಸುವ ಶ್ರಮವಾಗಿದೆ ಇದನ್ನು ಸಂಸಾರಿಕ ಶ್ರಮ ಎಂತಲೂ ಕರೆಯುತ್ತಾರೆ ಇದು ಮಹಿಳೆಯರು ಮನೆಯಲ್ಲಿ ನಿರ್ವಹಿಸುವ ಕೂಲಿರಹಿತ ಕೆಲಸವಾಗಿದೆ .ಮಕ್ಕಳಿಗೆ ಜನ್ಮ ನಿಡುವದು ಮತ್ತು ಪಾಲನೆ ಮಾಡುವದು ಸ್ವಚ್ಚತೆಯನ್ನು ಕಾಪಾಡುವದು ಅಡುಗೆ ಮಾಡುವದು ಮುಂತಾದವು ಪುನರುತ್ಪಾದನಾ ಶ್ರಮದ ಉದಾಹರಣೆಗಳಾಗಿವೆ ,ಪುನರುತ್ಪಾದನಾ ಶ್ರಮವನ್ನು ಸ್ತ್ರೀಯರು ನಿರ್ವಹಿಸಬೇಕಾದ ಶ್ರಮವೆಂದು ಹಣೆಪಟ್ಟಿ ಕಟ್ಟಲಾಗಿದೆ,ಮತ್ತು ಅದು ಸ್ತ್ರೀ ಮತ್ತು ಪುರುಷರ ನಡುವಿನ ಅಸಮಾನತೆಯ ಜೊತೆ ಜೊತೆಗೆ ಪುರುಷರಿಂದ ಮಹಿಳೆಯರ ಶೋಷಣೆಗೆ ಆಧಾರವಾಗಿ ಗುರುತಿಸಲ್ಪಡುತ್ತಿದೆ ಇದು ಪುರುಷ ಪ್ರಾಧನ್ಯತೆ ಅನಕ್ಷರತೆ ಅಜ್ಞಾನ ಮುಢನಂಬಿಕೆಗಳಿಂದ ಬೆಂಬಲಿಸಲ್ಪಟ್ಟಿದೆ
ಜೀತ ಕಾರ್ಮಿಕ ರದ್ದತಿ :
ಜಮೀನುದಾರರ ಮನೆಯಲ್ಲಿ ನಿಗದಿತ ಮೊತ್ತಕ್ಕೆ ನಿಗದಿತ ಅವಧಿಯವರೆಗೆ ಅಥವಾ ಮಾಡಿದ ಸಾಲವನ್ನು ಹಿಂತಿರುಗಿಸುವವರೆಗೆ ಕೆಲಸ ಮಾಡಲು ಬದ್ದನಾದವನನ್ನು ಜೀತಕಾರ್ಮಿಕ ಎನ್ನುತ್ತಾರೆ .ಅವನು ಸಾಲದ ಹಣಕ್ಕಾಗಿ ತನ್ನನ್ನು ತಾನು ಜಮೀನುದಾರನಿಗೆ ಒತ್ತೆ ಇಟ್ಟುಕೊಂಡಿರುತ್ತಾನೆ.ಜಮೀನುದಾರರು ಕಡಿಮೆ ಕೂಲಿಯನ್ನು ಕೊಟ್ಟು ಹೆಚ್ಚಿನ ಕೆಲಸವನ್ನು ಮಾಡಿಸಿಕೊಳ್ಳುವ ಮೂಲಕ ಕೆಲಸಗಾರರನ್ನು ಶೋಷಣೆ ಮಾಡುವರು.ಇದು ಗುಲಾಮಗಿರಿಯ ಮತ್ತೊಂದು ರೂಪವಾಗಿದೆ ,ಭಾರತ ಸರ್ಕಾರವು 1976 ರಲ್ಲಿ ಜೀತ ಕಾರ್ಮಿಕ ಪದ್ಧತಿಯನ್ನು ರದ್ದು ಪಡಿಸಿದೆ.ಈ ಸಾಮಾಜಿಕ ಅನಿಷ್ಟ ಪದ್ದತಿಯು ಕಡಿಮೆಯಾಗಿದ್ದರೂ ದೇಶದ ಕೆಲವು ಭಾಗಗಳಲ್ಲಿ ಇನ್ನೂ ಜೀವಂತವಾಗಿದೆ.
ಬಾಲ ಕಾರ್ಮಿಕರ ಪದ್ದತಿಯ ರದ್ಧತಿ :
14 ವರ್ಷಗಳ ಒಳಗಿನ ಮಗು ಕೂಲಿಗಾಗಿ ದುಡಿಯುತ್ತಿದ್ದರೆ ಅದನ್ನು ಬಾಲ ಕಾರ್ಮಿಕ ಎಂದು ಕರೆಯಲಾಗುತ್ತದೆ.ಭಾರತದಲ್ಲಿ ಇದು ಒಂದು ಗಂಭೀರ ಸಮಸ್ಯೆಯಾಗಿದೆ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಸುಮಾರು ಶೇ 90% ಮಕ್ಕಳು ಕೃಷಿ ಮತ್ತು ಅದಕ್ಕೆ ಸಂಬಂದಿಸಿದ ಚಟುವಟಿಕೆಗಳಲ್ಲಿ ದುಡಿಯುತ್ತಿದ್ದಾರೆ.ನಗರ ಪ್ರದೇಶಗಳಲ್ಲಿ ಅವರು ಸಣ್ಣ ಕೈಗಾರಕೆ ಬೆಂಕಿ ಪೆಟ್ಟಿಗೆ ಕೈಗಾರಿಕೆ ಗ್ಯಾರೇಜು ಹೋಟೆಲ್ ವ್ಯವಹಾರಿ ಸಂಸ್ಥೆಗಳು ಮುಂತಾದ ಕಡೆಗಳಲ್ಲಿ ದುಡಿಯುತ್ತಿದ್ದಾರೆ.ಇದು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತದೆ,ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಮತ್ತು ಮಕ್ಕಳ ಭವಿಷ್ಯವನ್ನು ಹಾಳು ಮಾಡುತ್ತದೆ .ಭಾರತ ಸರ್ಕಾರವು 1986 ರಲ್ಲಿ ಬಾಲ ಕಾರ್ಮಿಕ ನಿಷೇಧ ಕಾಯ್ದೆಯನ್ನು ಪಾಸು ಮಾಡಿದೆ .ಇದು 14 ವರ್ಷಗಳ ಒಳಗಿನ ಮಕ್ಕಳನ್ನು ಅಪಾಯಕರ ಉದ್ಯೋಗಳಲ್ಲಿ ದುಡಿಯಲು ನೇಮಿಸಿಕೊಳ್ಳುವದನ್ನು ನಿಷೇಧಿಸಿದೆ.
ಉದ್ಯೋಗ :
ಒಬ್ಬ ವ್ಯಕ್ತಿಯು ತನ್ನ ಜೀವನ ನಿರ್ವಹಣೆಗಾಗಿ ನಿರಂತರ ಆದಾಯ ತರುವ ಖಾಸಗಿ ಅಥವಾ ಸಾರ್ವಜನಿಕ ವಲಯದಲ್ಲಿ ಸದ್ಯದ ಮಾರುಕಟ್ಟೆಯ ಕೂಲಿ ದರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸನ್ನಿವೇಶವನ್ನು ಉದ್ಯೋಗ ಎನ್ನುತ್ತೇವೆ.ಬೇರೆ ರೀತಿಯಲ್ಲಿ ಹೇಳುವದಾದರೆ ಜನರು ತಮ್ಮ ಜೀವನ ನಿರ್ವಹಣೆಗಾಗಿ ಅಥವಾ ಕ್ರಮಬದ್ಧ ಆಧಾಯ ಗಳಿಸುವದಕ್ಕಾಗಿ ವಿವಿಧ ಉತ್ಪಾದಕ ಚಟುವಟಿಕೆಗಳಲ್ಲಿ ನಿರತರಾಗಿರುವ ಸನ್ನಿವೇಶವನ್ನು ಉದ್ಯೋಗ ಎನ್ನುತ್ತೇವೆ.
ನಿರುದ್ಯೋಗ :
ಯಾವುದೇ ಒಬ್ಬ ಶ್ರಮಿಕನು ಪ್ರಸ್ತುತ ಮಾರುಕಟ್ಟೆದರದಲ್ಲಿ ಕೆಲಸ ಮಾಡಲು ಇಚ್ಚಿಸಿದ್ದು ಆದರೆ ಕೆಲಸ ಪಡೆಯಲಾಗದಿದ್ದರೆ ಅವನನ್ನು ನಿರುದ್ಯೋಗಿ ಎಂದು ಕರೆಯಲಾಗುತ್ತದೆ .ಬೇರೆ ರೀತಿಯಲ್ಲಿ ಹೇಳುವದಾದರೆ ,ಸದ್ಯ ಚಾಲ್ತಿಯಲ್ಲಿರುವ ಕೂಲಿ ದರದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ದುಡಿಯಲು ಸಮರ್ಥರಿರುವ ಜನರು ಉದ್ಯೋಗವಕಾಶಗಳನ್ನು ಪಡೆಯಲಾಗದ ಸನ್ನಿವೇಶವನ್ನು ನಿರುದ್ಯೋಗ ಎನ್ನುವರು .
ಭಾರತದಲ್ಲಿ ನಿರುದ್ಯೋಗಿಗಳು ಮತ್ತು ಉದ್ಯೋಗರಹಿತ ಜನರ ಸಂಖ್ಯೆ ಹೆಚ್ಚುತ್ತಿದೆ ,ಅವರಲ್ಲಿ ವಿದ್ಯಾವಂತರು ಕೌಶಲ್ಯ ಹೊಂದಿದವರು ಗ್ರಾಮೀಣ ಮತ್ತು ನಗರದ ಜನರು ಸೇರಿದ್ದಾರೆ .1951 ರಲ್ಲಿ ಒಟ್ಟು ನಿರುದ್ಯೋಗಿಗಳ ಸಂಖ್ಯೆಯು ಸುಮಾರು ಐದು ಮಿಲಿಯನ್ ಗಳಷ್ಟಿತ್ತು 2009-2010 ರಲ್ಲಿ ದೇಶದಲ್ಲಿ ಒಟ್ಟು 468.8 ಮಿಲಿಯನ್‍ಗಳಷ್ಟು ಶ್ರಮಶಕ್ತಿ ಇದ್ದು ಅದರಲ್ಲಿ 9.8 ಮಿಲಿಯನ್ ಗಳಷ್ಟು (ಶೇ2%) ನಿರುದ್ಯೋಗಿಗಳಾಗಿದ್ದಾರೆ.
ಓSSಔ ವರ್ಗೀಕರಣ : ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಘಟನೆ (ಓSSಔ) ನಿರುದ್ಯೋಗವನ್ನು ಅಳೆಯುವದಕ್ಕಾಗಿ ಮೂರು ಪರಿಕಲ್ಪನೆಗಳನ್ನು ಅಬಿವೃದ್ದಿಪಡಿಸಿದೆ ಅವುಗಳೆಂದರೆ ನಿರುದ್ಯೋಗದ ಸಾಮನ್ಯ ಸ್ಥಿತಿ,ವಾರದ ಸ್ಥಿತಿ,ಮತ್ತು ದೈನಂದಿನ ಸ್ಥಿತಿಯ ಪರಿಕಲ್ಪನೆ,
ಸಾಮನ್ಯ ಸ್ಥಿತಿ :
ಒಬ್ಬ ಶ್ರಮಿಕನು ಒಂದು ವರ್ಷದಲ್ಲಿ ಕನಿಷ್ಟ 183 ದಿನಗಳಷ್ಟು ಉದ್ಯೋಗವನ್ನು ಪಡೆಯಲಾಗದಿದ್ದರೆ ಅವನನ್ನು ಸಾಮನ್ಯ ಸ್ಥಿತಿಯ ನಿರುದ್ಯೋಗಿ ಎಂದು ಪರಿಗಣಿಸಲಾಗುತ್ತದೆ,ಶ್ರಮಿಕರು ವರ್ಷದ ಹೆಚ್ಚಿನ ಭಾಗ ನಿರುದ್ಯೋಗಿಗಳಾಗಿ ಉಳಿಯುತ್ತಾರೆ.ಇದು ಖಾಯಂ ಉದ್ಯೋಗವನ್ನು ಹುಡುಕುತ್ತಿರುವ ವಿದ್ಯಾವಂತ ಜನರಿಗೆ ಅನ್ವಯಿಸುತ್ತದೆ .ಮತ್ತು ಅವರು ದಿನಗೂಲಿ ಕೆಲಸವನ್ನು ಒಪ್ಪಿಕೊಳ್ಳುವದಿಲ್ಲ ಈ ಪರಿಕಲ್ಪನೆಯನ್ನು ಮುಕ್ತ ನಿರುದ್ಯೋಗ ಮತ್ತು ದೀರ್ಘ ಕಾಲದ ನಿರುದ್ಯೋಗವನ್ನು ಅಳೆಯಲು ಬಳಸುತ್ತಾರೆ.
ವಾರದ ಸ್ಥಿತಿ :ಶ್ರಮಿಕನೊಬ್ಬನು ಸಮೀಕ್ಷಾ ವಾರದ ಅವಧಿಯಲ್ಲಿ ಕನಿಷ್ಟ ಒಂದು ಘಂಟೆಯಷ್ಟಾದರು ಉದ್ಯೋಗ ಪಡೆಯಲಾಗದಿದ್ದರೆ ಅವನನ್ನು ವಾರದ ಸ್ಥಿತಿಯ ನಿರುದ್ಯೋಗಿ ಎಂದು ಪರಿಗಣಿಸಲಾಗುತ್ತದೆ ಇದು ಋತುಮಾನ ನಿರುದ್ಯೊಗದ ಮಾಪಕವಾಗಿದೆ.
ದೈನಂದಿನ ಸ್ಥಿತಿ : ವ್ಯಕ್ತಿಯೊಬ್ಬನು ಒಂದು ದಿನದಲ್ಲಿ ಕನಿಷ್ಟ ಒಂದು ಘಂಟೆಯಷ್ಟು ಉದ್ಯೋಗವನ್ನು ಪಡೆಯದಿದ್ದರೆ ಅವನನ್ನು ದೈನಂದಿನ ಸ್ಥಿತಿಯ ನಿರುದ್ಯೋಗಿ ಎಂದು ಪರಿಗಣಿಸಲಾಗುವದು .ಅವನು ಒಂದು ಘಂಟೆ ಮೇಲ್ಪಟ್ಟು ಮತ್ತು ನಾಲ್ಕು ಘಂಟೆಗಳವರೆಗೆ ಕೆಲಸ ಮಾಡಿದರೆ ಅವನನ್ನು ಅರೆಉದ್ಯೋಗಿ ಅಥವಾ ಅರ್ದದಿನದ ಉದ್ಯೊಗಿ ಎಂದು ಕರೆಯುತ್ತಾರೆ .ಅವನನ್ನು ದಿನದಲ್ಲಿ ನಾಲ್ಕು ಘಂಟೆಗಳಿಗಿಂತ ಹೆಚ್ಚು ಅವಧಿ ಕೆಲಸಮಾಡಿದರೆ ಅವನನ್ನು ಒಂದು ದಿನದ ಉದ್ಯೋಗಿ ಎಂದು ಪರಿಗಣಿಸಲಾಗುತ್ತದೆ.ಅದನ್ನು ‘ಮಾನವ ದಿನದ ಉದ್ಯೋಗ’ಎಂತಲೂ ಕರೆಯುತ್ತಾರೆ.ಇದು ದಿನಗೂಲಿ ನಿರುದ್ಯೋಗವನ್ನು ಅಳೆಯಲು ಸಹಾಯವಾಗುತ್ತದೆ.
ಯುವ ನಿರುದ್ಯೋಗ :
15-30 ವರ್ಷಗಳ ಉಯೋಗುಂಪಿನ ಜನರಲ್ಲಿರುವ ನಿರುದ್ಯೋಗವನ್ನು ಯುವ ನಿರುದ್ಯೋಗ ಎಂದು ಕರೆಯುತ್ತಾರೆ.ಇದು ಗ್ರಾಮಿಣ ಮತ್ತು ನಗರ ಪ್ರದೇಶಗಳಲ್ಲಿ ಕಂಡುಬರುತ್ತದೆ ಮತ್ತು ಹೆಚ್ಚಾಗಿ ಬಿಳಿ ಶ್ವೇತ ವಸ್ತ್ರ ಉದ್ಯೋಗ (ದೈಹಿಕ ಶ್ರಮವಿಲ್ಲದ ಉದ್ಯೋಗ) ಕ್ಕಾಗಿ ಕಾಯುತ್ತಿರುವ ವಿದ್ಯಾವಂತರಲ್ಲಿ ಕಂಡು ಬರುತ್ತದೆ.
ಭಾರತದಲ್ಲಿ ನಿರುದ್ಯೋಗ
ಗ್ರಾಮೀಣ ನಿರುದ್ಯೋಗ
ನಗರ ನಿರುದ್ಯೋಗ
ಮರೆಮಾಚಿದ ನಿರುದ್ಯೋಗ
ಕೈಗಾರಿಕಾ ನಿರುದ್ಯೋಗ
ಋತುಮಾನದ ನಿರುದ್ಯೋಗ
ವಿದ್ಯಾವಂತ ನಿರುದ್ಯೋಗ
ನಿರುದ್ಯೋಗದ ಇತರ ವಿಧಗಳು
ಘರ್ಷಣಾತ್ಮಕ ನಿರುದ್ಯೋಗ 2) ದಿನಗೂಲಿ ನಿರುದ್ಯೋಗ 3) ರಚನಾತ್ಮಕ ನಿರುದ್ಯೋಗ 4) ತಾಂತ್ರಿಕ ನಿರುದ್ಯೋಗ 5) ಆವರ್ತ ನಿರುದ್ಯೋಗ 6) ದೀರ್ಘಕಾಲದ ನಿರುದ್ಯೋಗ
ಮರೆಮಾಚಿದ ನಿರುದ್ಯೋಗ : ಇದು ನೈಜ ಅಗತ್ಯಕ್ಕಿಂತ ಹೆಚ್ಚುವರಿ ಮಾನವ ಶಕ್ತಿಯನ್ನು ಹೊಂದಿರುವ ಮತ್ತು ಕೆಲವು ಕೆಲಸಗಾರರ ಸೀಮಾಂತ ಉತ್ಪಾದಕತೆಯು ಶೂನ್ಯವಾಗಿರುವ ನಿರುದ್ಯೋಗದ ಸನ್ನಿವೇಶವಾಗಿದೆ.ಆದುದರಿಂದ ಹೆಚ್ಚುವರಿ ಕೆಲಸಗಾರರನ್ನು ಅಲ್ಲಿಂದ ತೆಗೆದುಹಾಕಿದರೂ ಒಟ್ಟು ಉತ್ಪಾದನಾ ಪ್ರಮಾಣವು ಕಡಿಮೆಯಾಗುವದಿಲ್ಲ,ಇದನ್ನು ಶ್ರಮದ ಅರೆ ಉದ್ಯೋಗ ಎಂದು ಕರೆಯಲಾಗುತ್ತದೆ.ಉದಾ : ಯೋಗ್ಯವಾಗಿ ಸಂಘಟಿತವಾಗಿರುವ ಒಂದು ಕುಂಟುಂದ ಕೃಷಿ ಭೂಮಿಯಲ್ಲಿ ನಾಲ್ಕೂ ಜನರು ದುಡಿಯುತ್ತಿದ್ಧಾರೆಂದು ಭಾವಿಸೋಣ ಅದೇ ಭೂಮಿಯಲ್ಲಿ ಮತ್ತಿಬ್ಬರು ಕೆಲಸಗಾರರನ್ನು ನೇಮಿಸಿಕೊಂಡರೆ ಒಟ್ಟು ಉತ್ಪನ್ನದಲ್ಲಿ ಯಾವುದೇ ಬದಲಾವಣೆಯಾಗದಿದ್ದರೆ ಆ ಇಬ್ಬರು ಕೆಲಸಗಾರರು ಮರೆಮಾಚಿದ ನಿರುದ್ಯೊಗಿಗಳೆನಿಸುತ್ತಾರೆ .ಈ ರೀತಿಯ ನಿರುದ್ಯೋಗವು ಭಾರತದಂತಹ ಮುಂದುವರೆಯುತ್ತಿರುವ ದೇಶಗಳ ಗ್ರಾಮೀಣ ವಲಯದ ಸಾಮನ್ಯ ಲಕ್ಷಣವಾಗಿದೆ .ಸಂಕ್ಷಿಪ್ತದಲ್ಲಿ ಉದ್ಯೋಗದಲ್ಲಿನ ಜನರ ಅತಿಯಾದ ಒತ್ತಡವು ಮರೆಮಾಚಿದ ನಿರುದ್ಯೋಗಕ್ಕೆ ದಾರಿಮಾಡಿಕೊಡುತ್ತದೆ.ಅತಿಯಾದ ಜನಸಂಖ್ಯೆ ಹೊಂದಿದ ದೇಶದಲ್ಲಿ ಇದು ಸರ್ವೇ ಸಾಮನ್ಯವಾಗಿದೆ.
ಋತುಮಾನದ ನಿರುದ್ಯೋಗ :
ಕೃಷಿ ಮತ್ತು ಕೆಲವು ಕೈಗಾರಿಕೆಗಳಲ್ಲಿನ ವೃತ್ತಿಗಳು ಋತುಸಂಬಂಧಿಯಾಗಿವೆ ಅವು ವರ್ಷದಲ್ಲಿ ಒಂದು ನಿರ್ದಿಷ್ಟ ಋತುವಿನಲ್ಲಿ ಮಾತ್ರ ಉದಗಯೋಗ ನೀಡುತ್ತವೆ .ಈರೀತಿಯ ಋತುವಿನಲ್ಲಿ ನಿರುದ್ಯೋಗಿಯಾಗಿ ಉಳಿಯಬೇಕಾಗುತ್ತದೆ .ಇದನ್ನು ಋತುಮಾನದ ನಿರುದ್ಯೋಗ ಎನ್ನುತ್ತಾರೆ .
ಐಚ್ಚಿಕ ನಿರುದ್ಯೋಗ :
ಇದು ವ್ಯಕ್ತಿಯೊಬ್ಬನ ಸ್ವತಃ ಆಯ್ಕೆಯ ನಿರುದ್ಯೋಗವಾಗಿದೆ ,ಇದು ವಿರಾಮದ ವರ್ಗಗಳ ನಿರುದ್ಯೋಗವಾಗಿದೆ,ಯಾರು ಹೆಚ್ಚಿನ ಆಸ್ತಿಗಳನ್ನು ಹೊಂದಿದ್ದಾರೋ ಮತ್ತು ಯಾರು ಯಾವುದೇ ಶ್ರಮವಿಲ್ಲದ ನೆಮ್ಮದಿಯ ಜೀವನವನ್ನು ನೆಡೆಸುತ್ತಿದ್ದಾರೋ ಅಂಥಹ ವರ್ಗಗಳನ್ನು ವಿರಾಮದ ವರ್ಗಗಳೆನ್ನುತ್ತೇವೆ.
ಪ್ರತಿಯೊಂದು ಸಮಾಜದಲ್ಲಿ ಕೆಲವು ಜನರು ಚಾಲ್ತಿಯಲ್ಲಿರುವ ಕೂಲಿ ದರದಲ್ಲಿ ಕೆಲಸಮಾಡಲು ಇಚ್ಚಿಸುವದಿಲ್ಲ ಮತ್ತು ಕೆಲವು ಜನರು ತಮ್ಮ ಆಸ್ತಿ ಅಥವಾ ಇತರೆ ಮೂಲಗಳಿಂದ ನಿರಂತರ ಆದಾಯವನ್ನು ಪಡೆಯುತ್ತಿರುತ್ತಾರೆ ಅಂತಹವರು ಕೆಲಸ ಮಾಡುವ ಅಗತ್ಯವಿರುವದಿಲ್ಲ ,ಇಂಥಹ ಜನರೆಲ್ಲರೂ ಐಚ್ಚಿಕ ನಿರುದ್ಯೀಗಿಗಳಾಗಿರುತ್ತಾರೆ.
Varun
ReplyDelete