ಹಣಕಾಸಿನ ನಿರ್ವಹಣೆ
Lession no 2
Business studies
ವ್ಯವಹಾರ ಸಂಸ್ಥೆಗಳಲ್ಲಿ ಹಣಕಾಸಿನ ಅರ್ಥ : ಹಣಕಾಸು ಎಂದರೆ ವ್ಯವಹಾರ ಸಂಸ್ಥೆಗಳ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಹಣದ ಸಂಗ್ರಹಣೆ ಮತ್ತು ಅದನ್ನು ಲಾಭದಾಯಕ ಬಳಕೆಗಾಗಿ ಉಪಯೋಗಿಸುವದು ಎಂದು ಅರ್ಥ.
ಗುಟಮನ್ ಮತ್ತು ಡಾಗಲ್ ರ ಪ್ರಕಾರ : “ಒಂದು ವ್ಯವಹಾರ ಸಂಸ್ಥೆಯ ಹಣಕಾಸಿನ ಚಟುವಟಿಕೆಯ ಯೋಜನೆ,ಸಂಗ್ರಹಣೆ,ನಿಯಂತ್ರಣ ಮತ್ತು ನಿಧಿಗಳ ಕಾರ್ಯಚರಣೆಗಳನ್ನು ಹೊಂದಿರುತ್ತದೆ”
ಮೇಲಿನ ಅರ್ಥ ಮತ್ತು ವಾಖ್ಯೆಗಳಿಂದ ನಮಗೆ ಸ್ಪಷ್ಟವಾಗುವದೇನೆಂದರೆ ವ್ಯವಹಾರ ಸಂಸ್ಥೆಯ ಹಣಕಾಸಿ ಪ್ರಕ್ರಿಯೆ ಎಂದರೆ ನಿಧಿಗಳ ಸಂಗ್ರಹಣೆ,ಹಂಚಿಕೆ,ಮತ್ತು ಅದನ್ನು ಸಮರ್ಪಕವಾಗಿ ನಿಭಾಯಿಸುವದು ಎಂದರ್ಥ.
ವ್ಯವಹಾರ ಸಂಸ್ಥೆಗಳಲ್ಲಿ ಹಣಕಾಸಿನ ಅರ್ಥ ಮತ್ತು ಪ್ರಾಮುಖ್ಯತೆ.
·
ಹಣಕಾಸು ವ್ಯವಹಾರ ಸಂಸ್ಥೆಗಳ ಜೀವ ರಕ್ತವಾಗಿದೆ ,ಹಣಕಾಸು ಇಲ್ಲದೇ ಯಾವುದೇ ವ್ಯವಹಾರ ಚಟುವಟಿಕೆಗಳು ಸಾಧ್ಯವಿಲ್ಲ
·
ಹಣಕಾಸು ಉತ್ಪಾದನೆಯ ಕಾರ್ಯದಲ್ಲಿ ಮತ್ತು ವಸ್ತುಗಳನ್ನು ಹಾಗೂ ಸೇವೆಗಳನ್ನು ಒದಗಿಸುವ ಪ್ರಕ್ರಿಯೆಯಲ್ಲಿ ಬೇಕಾಗುವ ಸಾಧನಗಳನ್ನು ಪೂರೈಸುತ್ತದೆ.
·
ಹಣಕಾಸು ವ್ಯವಹಾರ ಸಂಸ್ಥೆಗಳ ಹಲವಾರು ಅಂಗಗಳು ತಮ್ಮ ಗುರಿಗಳನ್ನು ಸಾಧಿಸುವದು ಮತ್ತು ವ್ಯವಹಾರ ನೆಡೆಸಿಕೊಂಡು ಹೋಗುವ ದಿಕ್ಕಿನಲ್ಲಿ ಪ್ರಮುಖ ಪಾತ್ರವಹಿಸುತ್ತದೆ
·
ಹಣಕಾಸು ಬಂಡವಾಳವನ್ನು ತೊಡಗಿಸಿಕೊಳ್ಳುವದರಲ್ಲಿ ಹಾಗೂ ವಿನಿಯೋಗ ಮಾಡುವ ದಿಕ್ಕಿನಲ್ಲಿ ಒಂದು ನಿಯಂತ್ರಿತ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತದೆ
·
ಹಣಕಾಸು ಸಂಸ್ಥೆಯನ್ನು ಆಧುನಿಕತೆಗೊಳಿಸುವದು ವೈವಿಧ್ಯತೆಮಾಡುವದು ವಿಸ್ತರಿಸುವದು ಹಾಗೂ ವೃದ್ಧಿಗೊಳಿಸುವದರಲ್ಲಿ ಸಹಾಯ ಮಾಡುತ್ತದೆ.
·
ಹಣಕಾಸು ಸಂಸ್ಥೆಯು ಕೈಗೊಳ್ಳುವ ಹೊಸ ಪರಿಶೋಧನೆಗಳು ಮಾರುಕಟ್ಟೆ ಸಮೀಕ್ಷೆ ಜಾಹೀರಾತು ಹಾಗೂ ಸಂಸ್ಥೆಯ ಬಗ್ಗೆ ಹೆಚ್ಚು ಪ್ರಚಾರ ಪಡಿಸುವಲ್ಲಿ ಅವಶ್ಯಕವಾಗಿದೆ
·
ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಹಣಕಾಸಿನ ಅವಶ್ಯಕತೆ ಹೆಚ್ಚಾಗಿದೆ
·
ಹಣಕಾಸಿನ ಸ್ಥಿರತೆ ಒಂದು ಸಂಸ್ಥಯ ಯೋಗ್ಯತೆಯನ್ನು ಹೆಚ್ಚಿಸುತ್ತದೆ
ವ್ಯವಹಾರ ಸಂಸ್ಥೆಗಳಿಗೆ ಹಣಕಾಸಿನ ಪೂರೈಕೆ
ವ್ಯವಹಾರ ಸಂಸ್ಥೆಗಳು ತಾವು ಪಡೆದ ಹಣವನ್ನು ಹಿಂದಿರುಗಿಸುವಲ್ಲಿ ಸಾಮನ್ಯವಾಗಿ ಎರಡು ಅವಧಿಗಳ ಹಣಕಾಸು ಬೇಕಾಗುತ್ತದೆ ,ಯಾವುವೆಂದರೆ (1) ಅಲ್ಫಾವದಿ ಹಣಕಾಸು (2) ದೀರ್ಘಾವಧಿ ಹಣಕಾಸು
ಅಲ್ಪಾವಧಿ ಹಣಕಾಸು : ದಿನವಹಿ ಕಾರ್ಯವಹಿವಾಟುಗಳಿಗಾಗಿ ವ್ಯವಹಾರ ಸಂಸ್ಥೆಗಳಿಗೆ ಬೇಕಾಗುವ ಹಣದ ಅವಶ್ಯಕತೆಯನ್ನು ಅಲ್ಪಾವದಿ ಹಣಕಾಸು ಎನ್ನುತ್ತವೆ.
ಸಾಮನ್ಯವಾಗಿ ಈ ಅವಧಿಯ ಒಂದು ವರ್ಷಕ್ಕೆ ಸೀಮಿತವಾಗಿರುತ್ತದೆ ಅಲ್ಪಾವದಿ ಹಣಕಾಸಿನ ಅವಶ್ಯಕತೆ ಈ ಕೆಳಗಿನ ಚಟುವಟಿಕೆಗಳಿಗಾಗಿ ಬೇಕಾಗುತ್ತದೆ ಇದು ಸಂಸ್ಥೆಯ ಕಾರ್ಯಶೀಲ ಬಂಡವಾಳಕ್ಕಾಗಿ (Working
Capital)ಅವಶ್ಯಕವಾಗಿದೆ.ಅಂದರೆ ಕಚ್ಚಾ ಪದಾರ್ಥಗಳನ್ನು ಕೊಳ್ಳಲು ವೇತನ ಮತ್ತು ಕೂಲಿಗಳನ್ನು ಕೊಡಲು ಮಾರುಕಟ್ಟೆಗೆ ತಗಲುವ ವೆಚ್ಚಗಳನ್ನು ಭರಿಸಲು ಹಾಗೂ ಆಡಳಿತಾತ್ಮಕ ವೆಚ್ಚಗಳನ್ನು ಭರಿಸಲು ಹಣಕಾಸು ಬೇಕಾಗುತ್ತದೆ.
ಸಂಸ್ಥೆಗಳಿಗೆ ವಸ್ತುಗಳನ್ನು ಮಾರಾಟ ಮಾಡಿದಾಗಿನಿಂದ ಅವುಗಳ ಬೆಲೆ ಬರುವವರೆಗೂ ಕೆಲವು ಸಮಯ ತೆಗೆದುಕೊಳ್ಳುತ್ತದೆ.ಈ ಅವಧಿಯಲ್ಲಿ ತಗಲುವ ವೆಚ್ಚಗಳನ್ನು ಭರಿಸಲು ಅಲ್ಪಾವಧಿ ಹಣಕಾಸಿನ ಅವಶ್ಯಕತೆ ಇರುತ್ತದೆ.
ಅಲ್ಪಾವಧಿ ಹಣಕಾಸಿನ ಮೂಲಗಳು : ವ್ಯವಹಾರ ಸಂಸ್ಥೆಗಳು ಅಲ್ಪಾವಧಿಗಾಗಿ ಹಣವನ್ನು ಅನೇಕ ಮೂಲಗಳಿಂದ ಸಂಗ್ರಹಿಸುತ್ತವೆ.ಅವುಗಳೆಂದರೆ
ಎ) ವ್ಯಾಪರ ಸಾಲ : ವ್ಯಾಪರ ಸಾಲ ಎಂದರೆ ಸಂಸ್ಥೆಗಳು ಸರಕುಗಳನ್ನು ಪೂರೈಕೆ ಮಾಡುವದರಿಂದ ಪಡೆಯುವ ಸಾಲ.ಸಾಮನ್ಯವಾಗಿ ವ್ಯವಹಾರ ಸಂಸ್ಥೆಗಳು ಸರಕುಗಳನ್ನು ತೆಗೆದುಕೊಂಡು ಎರಡು ಮೂರು ತಿಂಗಳುಗಳಲ್ಲಿ ಹಣವನ್ನು ಪಾವತಿ ಮಾಡುತ್ತಾರೆ.
ಬ) ಬ್ಯಾಂಕು ಉದ್ದರಿ ಅಥವಾ ಬ್ಯಾಂಕುಸಾಲ : ಸಾಮನ್ಯವಾಗಿ ವ್ಯವಹಾರ ಬ್ಯಾಂಕುಗಳಿಂದ ಮೂರು ತಿಂಗಳಿಂದ ಒಂದು ವರ್ಷದವರೆಗೂ ಮರುಪಾವತಿ ಮಾಡಲು ಸಾಲ ಪಡೆಯುತ್ತಾರೆ.ವ್ಯವಹಾರ ಸಂಸ್ಥೆಗಳಿಗೆ ಬ್ಯಾಂಕುಗಳು “ಓವರ್ ಡ್ರಾಪ್ಟ್” ಮೂಲಕ ಕೂಡಾ ಹಣವನ್ನು ಒದಗಿಸುತ್ತವೆ.
ಸಿ) ಗ್ರಾಹಕ ಮುಂಗಡಗಳು : ಕೆಲವು ಸಂದರ್ಭಗಳಲ್ಲಿ ವ್ಯವಹಾರ ಸಂಸ್ಥೆಗಳು ತಾವು ಸರಕುಗಳನ್ನು ಮಾರಾಟ ಮಾಡುವ ಗ್ರಾಹಕರಿಂದ ಮುಂಗಡವಾಗಿ ಹಣವನ್ನು ಪಡೆಯುತ್ತಾರೆ
ಡಿ) ಅಲ್ಪಾವಧಿ ಸಾರ್ವಜನಿಕ ಠೇವಣಿಗಳು ಅಥವಾ ಕಂತುಗಳ ಮೂಲಕ ಸಾಲ : ಇವುಗಳ ಪ್ರಕಾರ ವ್ಯವಹಾರ ಸಂಸ್ಥೆಗಳು ಕೆಲವು ಸಂದರ್ಭಗಳಲ್ಲಿ ಸಾರ್ವಜನಿಕರಿಂದ ಠೇವಣಿಗಳನ್ನು ಸಂಗ್ರಹಿಸುತ್ತವೆ ಅಥವಾ ಸ್ಥಳೀಯ ಲೇವಾದೇವಿಗಾರರಿಂದ
ಕಂತುಗಳ ಮೂಲಕ ಹಣ ವಾಪಸ್ಸು ಮಾಡುವ ರೀತಿಯಲ್ಲಿ ಹಣವನ್ನು ಸಂಗ್ರಹಿಸುತ್ತವೆ.
ಇ) ಸ್ಥಳೀಯ ಲೇವಾದೇವಿಗಾರರಿಂದ (ಸಾಹುಕಾರರು) ಸಾಲ ಪಡೆಯುವದು : ಕೆಲವು ಅತೀ ಜರೂರ ಸಂದರ್ಭಗಳಲ್ಲಿ ವ್ಯವಹಾರ ಸಂಸ್ಥೆಗಳು ಸ್ಥಳೀಯ ಲೇವಾದೇವಿಗಾರರಿಂದ ಅಲ್ಪಾವಧಿ ಸಾಲವನ್ನು ಪಡೆಯುತ್ತವೆ.
ದೀರ್ಘಾವಧಿ ಹಣಕಾಸು :ಸಾಮನ್ಯವಾಗಿ ಈ ಅವಧಿಯ ಸಾಲದ ಮರುಪಾವತಿ ಹೆಚು ಸಮಯಕ್ಕೆ ಅಂದರೆ ಒಂದು ವರ್ಷಕ್ಕೆ ಮೀರಿರುತ್ತದೆ
ಈ ಸಾಲವು ಅಭಿವೃದ್ಧಿ ಕಾರ್ಯಗಳಾದ ಉತ್ಪಾದನೆಯ ಮಟ್ಟವನ್ನು ಹೆಚ್ಚಿಸುವದು ಆಧುನಿಕ ಉತ್ಪಾದನಾ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವದು ಮುಂತಾದವುಗಳಿಗೆ ಅನ್ವಯಿಸುತ್ತದೆ.ಈ ರೀತಿಯ ಸಾಲವು ಸ್ಥಿರ ಬಂಡವವಾಳದ ಕೆಲಸಗಳನ್ನು ಮಾಡುವದಕ್ಕೆ ಬೇಕಾಗುತ್ತದೆ ಉದಾ
: ಸ್ಥಿರ ಾಸ್ತಿಗಳನ್ನು ಹೊಂದುವದು ಮತ್ತು ಪ್ರಸ್ತುತ ಉತ್ಪಾದನಾ ಕಾರ್ಯಗಳನ್ನು ಆಧುನಿಕ ಕಾರ್ಯಗಳಿಗೆ ವಿಸ್ತರಿಸುವದು ಮುಂತಾದವು
ದೀರ್ಘಾವದಿ ಸಾಲವು ಅಲ್ಪಾವಧಿ ಸಾಲಕ್ಕಿಂತ ದುಭಾರಿಯಾಗುತ್ತದೆ ಅಂದರೆ ಬಡ್ಡಿದರವು ಹೆಚ್ಚಾಗಿರುತ್ತದೆ ಈ ಸಾಲವನ್ನು ಷೇರುಗಳನ್ನು ಕೊಡುವದರ ಮೂಲಕ ಅಥವಾ ವಂತಿಗೆಗಳ ಮೂಲಕ ಪಡೆಯುತ್ತವೆ ಮತ್ತು ಹಣಕಾಸಿನ ಸಂಸ್ಥೆಗಳಿಂದಲೂ ಪಡೆಯುತ್ತವೆ
ಎ) ಷೇರುಗಳನ್ನು ಕೊಡುವ ಮೂಲಕ ಸಂಗ್ರಹ : ಕೂಡು ಬಂಡವಾಳ ಸಂಸ್ಥೆಗಳು ಬಂಡವಾಳವನ್ನು ಸಣ್ಣ ಸಣ್ಣ ಕನಿಷ್ಟ ಮೊತ್ತದ ಮೂಲಕ ಸಂಗ್ರಹಿಸುತ್ತವೆ .ಕೂಡು ಬಂಡವಾಳ ಸಂಸ್ಥೆಗಳನ್ನು ಪ್ರಾರಂಬಿಸುವಾಗ ಪ್ರವತ್ರಕರು ಷೇರುಗಳನ್ನು ಸಾರ್ವಜನಿಕರಿಗೆ ಹಂಚುತ್ತಾರೆ ಹಾಗೂ ಈ ಸಂಸ್ಥೆಗಳು ತಮಗೆ ಬಂಡವಾಳ ಹೆಚ್ಚಿಸಿಕೊಳ್ಳಬೇಕಾದ ಸಂದರ್ಭಗಳು ಬಂದಾಗ ಷೇರುಗಳನ್ನು ಸಾರ್ವಜನಿಕರಿಗೆ ಹಂಚುತ್ತವೆ
ಬಿ) ಸಾಲಪತ್ರಗಳನ್ನು ನೀಡುವ ಮೂಲಕ ಹಣಕಾಸಿನ ಸಂಗ್ರಹ : ಕೂಡು ಬಂಡವಾಳ ಸಂಸ್ಥೆಗಳು ದೀರ್ಘಾವಧಿ ಸಾಲಗಳನ್ನು ಸಂಗ್ರಹಿಸಲು ಸಾಲಪತ್ರಗಳನ್ನು ಸಾರ್ವಜನಿಕರಿಗೆ ನೀಡುವದರ ಮೂಲಕ ಹಣವನ್ನು ಸಂಗ್ರಹಿಸಲು ಅವಕಾಶವಿದೆ.ಈ ಸಾಲಪತ್ರಗಳು (Debentures) ಸಂಸ್ಥೆಯು ಸಾಲಪತ್ರಗಳಾಗಿವೆ.ಒಂದು ಸಂಸ್ಥೆಯು ತನ್ನ ಮೊಹರಿನ ಮೇಲೆ ಸಾರ್ವಜನಿಕರಿಗೆ ಸಾಲಪತ್ರಗಳನ್ನು ನೀಡಿ ಸಾಲವನ್ನು ಒಂದು ಅವಧಿಯ ನಂತರ ಮರುಪಾವತಿ ಮಾಡುವ ಕರಾರರನ್ನು ಸಾಲಪತ್ರಗಳಲ್ಲಿ ತಿಳಿಸಿರುತ್ತವೆ .ಒಂದು ನಿರ್ದಿಷ್ಟ ದರದ ಬಡ್ಡಿಯನ್ನು ಸಾಲಪತ್ರವನ್ನು ಹೊಂದಿರುವವರಿಗೆ ಕೊಡಲು ಒಪ್ಪಿರುತ್ತವೆ ಈ
,ಮೂಲಕ ಕೂಡ ವ್ಯವಹಾರ ಸಂಸ್ಥೆಗಳು ದೀರ್ಘಾವಧಿ ಸಾಲವನ್ನು ಸಾರ್ವಜನಿಕರಿಂದ ಸಂಗ್ರಹಿಸುತ್ತವೆ
ವ್ಯವಹಾರ ಸಂಸ್ಥೆಗಳಿಗೆ ಹಣಕಾಸನ್ನು ಪೂರೈಸುವ ಸಂಸ್ಥೆಗಳು
(ಎ) ಹಣಕಾಸಿನ ಸಂಸ್ಥೆಗಳು : ಸಾಂಘಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳಿಗೆ ದೀರ್ಘಾವಧಿ ಸಾಲವನ್ನು ನೀಡಲು ಕೆಲವು ಹಣಕಾಸಿನ ಸಂಸ್ಥೆಗಳು ಸ್ಥಾಪಿತವಾಗಿವೆ ಅವುಗಳೆಂದರೆ
1) ಭಾರತೀಯ ಕೈಗಾರಿಕಾ ಹಣಕಾಸಿನ ನಿಗಮ (IFCI)
2) ರಾಜ್ಯ ಹಣಕಾಸು ನಿಗಮ (SFC’s)
3) ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕು (IBRD)
4) ನಿರ್ಯಾತ ,ಆಯಾತ ಬ್ಯಾಂಕ್ ಅಥವಾ ಆಮದು ರಫ್ತು ಬ್ಯಾಂಕು (EXIM Bank)
5) ವಾಣಿಜ್ಯ ಬ್ಯಾಂಕುಗಳು (Commercial Banks)
6) ಸಹಕಾರಿ ಬ್ಯಾಂಕುಗಳು (Co-operative banks)
1) ಭಾರತೀಯ ಕೈಗಾರಿಕಾ ಹಣಕಾಸು ನಿಗಮ (IFCI) ಈ ಸಂಸ್ಥೆಯು ಭಾರತೀಯ ಪಾರ್ಲಿಮೆಂಟಿನ ಕಾಯಿದೆಯ ಪ್ರಕಾರ ಕೈಗಾರಿಕೆಗಳಿಗೆ ದೀರ್ಘಾವಧಿ ಸಾಲಗಳನ್ನು ಕೊಡಲು 1948 ರಲ್ಲಿ ಸ್ಥಾಪಿತವಾಯಿತು .ಈ ನಿಗಮವು ಸಾರ್ವಜನಿಕ ನಿಯಮಿತ ಕಂಪನಿಗಳು ಸಹಕಾರಿ ಸಂಘಗಳು ಮತ್ತು ರಾಜ್ಯ ಸರ್ಕಾರದ ಒಡೆತನದಲ್ಲಿನ ಕಂಪನಿಗಳಿಗೆ ಸಾಲವನ್ನು ಕೊಡುತ್ತದೆ
2) ರಾಜ್ಯ ಹಣಕಾಸು ನಿಗಮ : (SFCs) ಭಾರತದ ಪಾರ್ಲಿಮೆಂಟು 1951 ರಲ್ಲಿ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ರಾಜ್ಯ ಹಣಕಾಸು ನಿಗಮಗಳನ್ನು ಸ್ಥಾಪಿಸಲು ಕಾಯಿದೆಯನ್ನು ಮಾಡಿತು.ಈ ಕಾಯಿದೆಯು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಹೊರತು ಪಡಿಸಿ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುತ್ತದೆ .ರಾಜ್ಯ ಹಣಕಾಸು ನಿಗಮಗಳು ತಮ್ಮ ರಾಜ್ಯಗಳಲ್ಲಿನ ಸಣ್ಣ ಪ್ರಮಾಣದ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಹಣಕಾಸನ್ನು ಒದಗಿಸುತ್ತವೆ.
3) ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕು :(IDBI) ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕುಗಳ ಕಾಯಿದೆಯ 1964 ಪ್ರಕಾರ ಪ್ರಾರಂಭವಾಯಿತು ಇದು
1967 ರ ತನಕ ಭಾರತೀಯ ರಿಸರ್ವ ಬ್ಯಾಂಕಿನ ಒಡೆತನದಲ್ಲಿತ್ತು 1976 ರಲ್ಲಿ ಒಡೆತನವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಲಾಯಿತು ಈಗ ಇದು ಸ್ವಾಯತ್ತ ಸಂಸ್ಥೆಯಾಗಿ ಕೆಲಸ ನಿರ್ವಹಿಸುತ್ತದೆ .ಈ
ಬ್ಯಾಂಕ್ ಭಾರತೀಯ ಕೈಗಾರಿಕಾ ಹಣಕಾಸು ನಿಗಮ ಮತ್ತು ರಾಜ್ಯ ಹಣಕಾಸು ನಿಗಮಗಳ ಷೇರುಗಳನ್ನು ಸಹಾ ಕೊಂಡುಕೊಳ್ಳುತ್ತದೆ ಹಾಗೂ ಈ ನಿಗಮಗಳಿಗೆ ಸಾಲವನ್ನು ಕೊಡುತ್ತದೆ.
ನಿರ್ಯಾತ ಮತ್ತು ಆಯಾತ ಬ್ಯಾಂಕ್ : (EXIM BANK)ಇದು ಭಾರತದ ನಿರ್ಯಾತ (ರಫ್ತು) ಮತ್ತು ಆಯಾತ (ಆಮದು) ಬ್ಯಾಂಕಾಗಿದೆ.ಇದನ್ನು 1982 ರಲ್ಲಿ ಸ್ಥಾಪಿಸಲಾಯಿತು ಇದು ಸರ್ಕಾರಿ ಒಡೆತನದ ಬ್ಯಾಂಕಾಗಿದೆ ಇದು ರಫ್ತು ಮತ್ತು ಆಮದುಗಳಿಗೆ ಸಹಾಯ ಮಾಡುತ್ತದೆ.ಅಂದರೆ ಆಮದು ಮತ್ತು ರಫ್ತು ಮಾಡುವ ಸಂಸ್ಥೆಗಳಿಗೆ ಹಣಕಾಸನ್ನು ಒದಗಿಸುತ್ತದೆ
ಈ ಮೇಲಿನ ಹೇಳಿದ ಅನೇಕ ಹಣಕಾಸಿನ ಸಂಸ್ಥೆಗಳಲ್ಲದೆ ವ್ಯಾಪಾರ ಸಂಸ್ಥೆಗಳು ,ವಾಣಿಜ್ಯ ಬ್ಯಾಂಕುಗಳು ಮತ್ತು ಸಹಕಾರ ಬ್ಯಾಂಕುಗಳಿಂದ ಕೂಡಾ ಹಣವನ್ನು ಸಾಲವಾಗಿ ಪಡೆಯುತ್ತವೆ ,ಇದೇ ಅಲ್ಲದೆ ವ್ಯವಹಾರ ಸಂಸ್ಥೆಗಳಿಗೆ ದೀರ್ಘಕಾಲದ ಸಾರ್ವಜನಿಕ ಠೇವಣಿಗಳಿಂದ ಮತ್ತು ಸಾಹಸ ಬಂಡವಾಳದಿಂದ ಕೂಡ ಹಣಕಾಸಿನ ಸೌಲಬ್ಯಗಳು ಲಭಿಸುತ್ತವೆ.
ದೀರ್ಘಕಾಲದ ಸಾರ್ವಜನಿಕ ಠೇವಣಿಗಳು : ವ್ಯವಹಾರ ಸಂಸ್ಥೆಗಳು ತಮ್ಮ ದೀರ್ಘಾವಧಿ ಹಣದ ಅವಶ್ಯಕತೆಗಳನ್ನು ಸಾರ್ವಜನಿಕರಿಂದ ದೀರ್ಘಕಾಲದ ಠೇವಣಿಗಳ ಮೂಲಕ ಕೂಡ ಸಂಗ್ರಹಿಸುತ್ತವೆ.ಈರೀತಿ ಸಾಲಗಳನ್ನು ಪಡೆಯುವದು ಸುಲಭ ಹಾಗೂ ಹೆಚ್ಚು ನಿಯಮಾಚಾರಣೆಗಳು ಬೇಕಾಗಿರುವದಿಲ್ಲ .ಸಂಸ್ಥೆಗಳು ಈ ರೀತಿಯ ಠೇವಣಿಗಳನ್ನು ಐದು ವರ್ಷಗಳ ಅವಧಿಗೆ ಸಂಗ್ರಹಿಸಬಹುದು .ಈ ಠೇವಣಿಗಳು ಸಾಮನ್ಯವಾಗಿ ಭದ್ರತೆ ಇರುವುದಾಗಿರುತ್ತವೆ.ಈ ಠೇವಣಿಗಳ ಮೇಲೆ 8ರಿಂದ 10 ರವರೆಗೆ ಬಡ್ಡಿಯನ್ನು ಕೊಡಬಹುದು ಆದರೆ ಠೇವಣಿಗಳ ಒಟ್ಟು ಮೊತ್ತ ಸಂದಾಯವಾದ ಬಂಡವಾಳಕ್ಕಿಂತ ಶೇ 25 ರಷ್ಟನ್ನು ಮೀರುವಂತಿಲ್ಲ .ಈ ಸಾಲಗಳಿಂದ ಸಾರ್ವಜನಿಕರು ಸಹ ತಮ್ಮ ಹಣವನ್ನು ಠೇವಣಿಗಳಂತೆ ಇಟ್ಟು ಲಾಭ ಪಡೆಯಲು ಸಾಧ್ಯವಾಗುತ್ತದೆ.
ಸಾಹಸ ಬಂಡವಾಳ : (Venture
Capital)ಹಸ ಬಂಡವಾಳವೆಂದರೆ ಹೊಸ ಮತ್ತು ಸಂಶೋಧನಾತ್ಮಕವಾದ ಕಾರ್ಯಗಳನ್ನು ಕೈಗೊಳ್ಳುವ ವ್ಯವಹಾರ ಸಂಸ್ಥೆಗಳ ಹಣದ ಅವಶ್ಯಕತೆಗಳ ಮೂಲ ರೀತಿಯದ್ದಾಗಿದೆ.ಸಂಸ್ಥೆಗಳು ತಯಾರು ಮಾಡುವ ಉತ್ಪನ್ನಗಳು ಹೆಚ್ಚು ನಷ್ಟಭಯದ ಅಪಾಯದಿಂದ ಕೂಡಿರುತ್ತದೆ .ಆದರೆ ಹೆಚ್ಚು ಪ್ರತಿಫಲ ನೀಡುತ್ತದೆ ಈ ಸಾಹಸ ಬಂಡವಾಳ ಕಂಪನಿಗಳು ಬಂಡವಾಳವನ್ನು ಒದಗಿಸುವದರ ಜೊತೆಗೆ ಕಂಪನಿಗಳ ತಾಂತ್ರಿಕ ಕೆಲಸಗಳಲ್ಲಿ ಕ್ರಿಯಾಶೀಲ ಆಸಕ್ತಿಯನ್ನು ತೋರಿಸುತ್ತದೆ.
ಅನ್ಯೋನ್ಯ ನಿಧಿಗಳು : ಭಾರತದಲ್ಲಿ ದೀರ್ಘಾವದಿ ಸಾಲಗಳನ್ನು ಒದಗಿಸುವ ಸಂಸ್ಥೆಗಳಲ್ಲಿ ಅನ್ಯೋನ್ನ ನಿಧಿಗಳೂ ಕೂಡಾ ಒಂದಾಗಿವೆ .ಇವು ಮೊದಲಿಗೆ 1964 ರಲ್ಲಿ ತೆಲೆ ಎತ್ತಿದವು ಈಗ ಖಾಸಗಿರಂಗ ಮತ್ತು ಸಾರ್ವಜನಿಕ ರಂಗದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸ್ಥಾಪಿಸಲ್ಪಟ್ಟಿವೆ .ಅನ್ಯೋನ್ಯ ನಿಧಿ ಎಂದರೆ ಸಾರ್ವಜನಿಕರ ಉಳಿತಾಯವನ್ನು ಒಟ್ಟು ಸೇರಿಸುವ ವೈವಿಧ್ಯಯಮಯವಾದ ಬಂಡವಾಳ ಪತ್ರಗಳು ,ಇವು ಸರ್ಕಾರಿ ಬಂಡವಾಳ ಪತ್ರಗಳು ,ಠೇವಣಿ ಪತ್ರಗಳು ಇತ್ಯಾದಿಗಳಲ್ಲಿ ಹೂಡಿಕೆ ಮಾಡುವ ಹಣಕಾಸಿನ ಮಾಧ್ಯಮವಾಗಿರುತ್ತದೆ. ಉದಾಹರಣೆಗಳೆಂದರೆ ಯುನಿಟ್ ಟ್ರಸ್ಟ ಆಫ್ ಇಂಡಿಯಾ ,(UTI) SBI ಮಾಗ್ನಮ್ ಈಕ್ವಿಟಿ ಫಂಡ್ , ಜೀವವಿಮಾ ಬೆಳವಣಗೆ ಠೇವಣಿ ಮಾರುಕಟ್ಟೆ ಯೋಜನೆ ,ಪ್ರುಡೆನ್ಸಿಯಲ್ ಫಂಡ್ ಆದಾಯ ಠೇವಣಿ ಬಜಾಜ್ ಅಲಿಯನ್ಸ ಮುಂತಾದವು .
ಅಂತರಾಷ್ಟ್ರೀಯ ಮಟ್ಟದ ಹಣಕಾಸಿನ ಮೂಲಗಳಲ್ಲಿ ಜಾಗತಿಕ ನ್ಯಾಸಧಾರಿ ರಶೀದಿಗಳು (GDRS) ಮತ್ತು ಅಮೇರಿಕಾದ ಠೇವಣಿ ರಶೀದಿಗಳು(AMd) ಮುಖ್ಯ ಪಾತ್ರ ವಹಿಸುತ್ತವೆ.
(ಬಿ) ಹಣಕಾಸಿನ ಮಾರುಕಟ್ಟೆ : ಹಣಕಾಸಿನ ಮಾರುಕಟ್ಟೆಗಳಲ್ಲಿ ಎರಡು ವಿಧಗಳಿವೆ ಅವುಗಳೆಂದರೆ
1)
ಹಣದ ಮಾರುಕಟ್ಟೆ (Money Market) 2) ಬಂಡವಾಳ ಮಾರುಕಟ್ಟೆ (Capital Market)
1)
ಹಣದ ಮಾರುಕಟ್ಟೆ : (Money
Market)ಹಣದ ಮಾರುಕಟ್ಟೆಯೆಂದರೆ ಒಂದು ಆರ್ಥಿಕ ವ್ಯವಸ್ಥೆಯಲ್ಲಿ ಅಲ್ಪಾವದಿ ಸಾಲವನ್ನು ಕೊಡುವ ಮತ್ತು ಕೊಳ್ಳುವ ಹಣಕಾಸಿನ ಸಂಸ್ಥೆಗಳಿಗೆ ಸಂಬದ್ದಿಸಿದ್ದಾಗಿವೆ .ಇಂಥಹ ಮಾರುಕಟ್ಟೆಯ ಕಾರ್ಯಶೀಲ ಬಂಡವಾಳಕ್ಕಾಗಿ ವ್ಯವಹಾರ ಸಂಸ್ಥೆಗಳಿಗೆ ಹಣಕಾಸನ್ನು ಒದಗಿಸುತ್ತವೆ .ಈ ಮಾರುಕಟ್ಟೆಗಳಲ್ಲಿ ಸಾಲಗಳ ಮೇಲಿನ ಬಡ್ಡಿದರ ನಿಗದಿಪಡಿಸಿರುವ ಬಡ್ಡಿ ದರಕ್ಕಿಂತ ಹೆಚ್ಚಾಗಿರುತ್ತದೆ.ಈ ಮಾರುಕಟ್ಟೆಗಳಿಂದ ಸಾಲಗಲನ್ನು ಒಂದು ದಿನದಿಂದ ಒಂದು ವಾರ,ಒಂದು ತಿಂಗಳು .3ರಿಂದ 6 ತಿಂಗಳುಗಳ ಅವಧಿಗೆ ಪಡೆಯಬಹುದು .ಈ ಸಾಲಗಳನ್ನು ವ್ಯಾಪರ ವಿನಿಮಯ ಪತ್ರಗಳು ಅಲ್ಪಾವದಿ ಸಹಕಾರಿ ಬಾಂಡುಗಳು ,ಖಜಾನೆ ವಿನಿಮಯ ಪತ್ರಗಳು ಮುಂತಾದವುಗಳ ಉದ್ಧರಿ ಸಾಧನಗಳೊಂದಿಗೆ ಪಡೆಯಬಹುದು .ಈದಿಸೆಯಲ್ಲಿ ವಾಣಿಜ್ಯ ಬ್ಯಾಂಕುಗಳು ಮತ್ತು ಖಾಸಗಿ ಲೇವಾದೇವಿಗಾರರು ಪ್ರಮುಖ ಪಾತ್ರ ವಹಿಸುತ್ತಾರೆ.
2) ಬಂಡವಾಳ ಮಾರುಕಟ್ಟೆ (Capital Market) ಬಂಡವಾಳ ಮಾರುಕಟ್ಟೆಯೆಂದರೆ ದೀರ್ಘಾವದಿಗಾಗಿ ಬಂಡವಾಳ ಸಾಲ ನೀಡುವದಕ್ಕಾಗಿ ಮತ್ತು ಸಾಲ ಪಡೆಯುವದಕ್ಕಾಗಿ ಸೌಲಭ್ಯ ಕಲ್ಪಿಸುವ ಸಾಂಸ್ಥಿಕ ವ್ಯವಸ್ಥೆಗಳಾಗಿವೆ .ಸಾಮಾನ್ಯವಾಗಿ ಇವು ಸಂಸ್ಥೆಗಲ ಸ್ಥಿರ ಬಂಡವಾಳಕ್ಕಾಗಿ ಸಾಲವನ್ನು ನೀಡುತ್ತವೆ .ಇಲ್ಲಿ ಬಡ್ಡಿದರವು ಹಣದ ಮಾರುಕಟ್ಟೆ ವಿಧಿಸುವದಕ್ಕಿಂತ ಕಡಿಮೆ ಇರುತ್ತದೆ,ಇವು 20 ರಿಂದ 30 ವರ್ಷದ ಅವಧಿಗೆ ಸಾಲ ಒದಗಿಸುತ್ತವೆ.ಬಂಡವಾಳ ಮಾರುಕಟ್ಟೆಯಲ್ಲಿ ಹಣಕಾಸಿನ ಸಂಸ್ಥೆಗಳು ಬಂಡವಾಳ ಸಂಸ್ಥೆಗಳು (Finance
corporations) ಹೊಡಿಕೆ ವಿಶ್ವಸ್ಥ ಸಮಿತಿಗಳುm(Investment Trusts) ಅನ್ಯೋನ್ಯ ನಿದಿಗಳು ಪ್ರಮುಖವಾಗಿ ವ್ಯವಹರಿಸುತ್ತವೆ.
ಷೇರು ಮಾರುಕಟ್ಟೆ(ಷೇರುಗಳ ವಿನಿಮಯ ಕೇಂದ್ರ) (Stock
Exchange) ಇದು ಬಂಡವಾಳ ಮಾರುಕಟ್ಟೆಯ ಒಂದು ಘಟಕವಾಗಿದೆ.ಚಾಲ್ತಿಯಲ್ಲಿರುವ ಷೇರುಗಳನ್ನು ಮತ್ತು ಬಾಂಡುಗಳನ್ನು ಖರೀದಿದಾರರು ಮತ್ತು ಮಾರಾಟಗಾರರು ಮತ್ತು ಅವರ ಪ್ರತಿನಿಧಿಗಳು ವ್ಯವಹಾರ ಮಾಡುವ ಒಂದು ಸ್ಥಳವಾಗಿದೆ .ಪ್ರಪಂಚದ ಮೊದಲ ಷೇರು ಮಾರುಕಟ್ಟೆ 1973 ರಲ್ಲಿ ಲಂಡನ್ನ ಪಟ್ಟಣದಲ್ಲಿ ರೂಪಗೊಂಡಿತು .ಭಾರತದಲ್ಲಿ ಮೊದಲ ಷೇರು ಮಾರುಕಟ್ಟೆ 1875 ರಲ್ಲಿ ಮುಂಬೈ ಪಟ್ಟಣದಲ್ಲಿ ಪ್ರಾರಂಭವಾಯಿತು .ಈಗ ಭಾರತದಲ್ಲಿ 24 ಷೇರು ಮಾರುಕಟ್ಟೆಗಳಿವೆ ,ಇವುಗಳಲ್ಲಿ ಹದಿಮೂರು ಸಾರ್ವಜನಿಕ ನಿಯಂತ್ರಣ ಕಂಪನಿಗಳಾಗಿವೆ ,ಆರು ಕಂಪನಿಗಳ ಭರವಸೆಯಿಂದ ನಿಯಮಿತವಾದ ಕಂಪನಿಗಳಾಗಿವೆ ,ಉಳಿದವು ಸ್ವಪ್ರೇರಣೆಯಾಗಿದ್ದು ಲಾಭಗಳಿಕೆಯ ಸಂಸ್ಥೆಗಳಾಗಿವೆ ,ಎಂಟು ಷೇರುಮಾರುಕಟ್ಟೆಗಳು ಮಾತ್ರ ಖಾಯಂ ಷೇರು ಮಾರುಕಟ್ಟೆಗಳಾಗಿದ್ದು ಉಳಿದವು ತಮ್ಮ ಇರುವಿಕೆಯನ್ನು ಪ್ರತಿವರ್ಷವು ನವೀಕರಿಸಬೇಕಾಗುತ್ತದೆ
ಷೇರು ಮಾರುಕಟ್ಟೆಗಳು ಷೇರುಗಳನ್ನು ಮತ್ತು ಭದ್ರತಾ ಪತ್ರಗಳ(Securities) ಕೊಳ್ಳುವಿಕೆ ಮತ್ತು ಮಾರುವಿಕೆಯನ್ನು ನಿಯಂತ್ರಿಸುತ್ತವೆ ಮತ್ತು ಹಿಡಿತದಲ್ಲಿಟ್ಟುಕೊಂಡಿರುತ್ತವೆ.ಇವು ಸರ್ಕಾರದಿಂದ ನಿಯಂತ್ರಿಸಲ್ಪಡುತ್ತವೆ ,ಇವು ಷೇರುಗಳನ್ನು ಮತ್ತು ಬಾಂಡುಗಳನ್ನು ಮಾರುವದು ಮತ್ತು ಕೊಳ್ಳುವದೆ ಅಲ್ಲದೇ ಇವುಗಳನ್ನು ಹೊಂದಿರುವ ಷೇರುಮಾರುಕಟ್ಟೆಯ ಸದಸ್ಯರಿಗೆ ತಮ್ಮ ವಹಿವಾಟುಗಳನ್ನು ನಿರ್ವಹಿಸಲು ಒಂದು ಜಾಗವನ್ನು ಕೊಡುತ್ತದೆ ,ಈ ಸದಸ್ಯರು ತಮ್ಮದೇ ಲೆಕ್ಕದಲ್ಲಿ ನಿಯಮಗಳು ಕಾಯಿದೆಗಳು ಮತ್ತು ನಿಯಂತ್ರಣಗಳಿಗೆ ಒಳಪಟ್ಟಿರುತ್ತಾರೆ.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವನ್ನು (NSE) ದೇಶದಾದ್ಯಂತ ಷೇರುಗಳ ವಹಿವಾಟನ್ನು ನೆಡಸಲು ಸ್ಥಾಪಿಸಲಾಗಿದೆ.ಈ ಸಂಸ್ಥೆಯು ಹೂಡಿಕೆದಾರರಿಗೆ ಅಂತರಾಷ್ಟ್ರೀಯ ಬಂಡವಾಳ ಮಾರುಕಟ್ಟೆಗಳ ದಿಕ್ಕಿನಂತೆ ಭಾರತದ ಹಣಕಾಸಿನ ಮಾರುಕಟ್ಟೆಯನ್ನು ನೆಡೆಸಲು ಸಹಾಯ ಮಾಡುತ್ತದೆ .ಇದು 1993 ರಲ್ಲಿ ಕಾರ್ಯ ನಿರ್ವಹಿಸಲು ಪ್ರಾರಂಬಿಸಿತು .ಈಗ ಇದು ಕಂಪ್ಯೂಟರ್ ಪದ್ದತಿ ದೂರವಾಣಿ ,ಟೆಲೆಕ್ಸ ಮತ್ತು ಫ್ಯಾಕ್ಸಗಳ ನೆರವಿನಿಂದ ದೇಶಧ ಮೂಲೆ ಮೂಲೆಗೂ ವ್ಯಾಪಾರ ನೆಡೆಸುತ್ತದೆ .ಈ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ ದಲ್ಲಾಳಿಗಳಿಗೆ ಮಾತ್ರ ವ್ಯಾಪರ ಮಾಡಲು ಅವಕಾಶವಿರುತ್ತದೆ .ಷೇರುದಾರರು ತಮ್ಮ ಷೇರುಗಳನ್ನು ಮಾರಲು ಅಥವಾ ಕೊಳ್ಳಲು ಬ್ಯಾಂಕಿನಲ್ಲಿ ಒಂದು ವಿಶೇ಼ಷ ಲೆಕ್ಕ ತೆಗೆಯಬೇಕಾಗುತ್ತದೆ.ಇದಕ್ಕೆ ಡಿಮ್ಯಾಟ್ (Demat) ಲೆಕ್ಕ ಎನ್ನುತ್ತೇವೆ ,ಈ ಡಿಮ್ಯಾಟ್ ಖಾತೆಯು ಷೇರುಗಳ ಭದ್ರತೆಯನ್ನು ಕಾಪಾಡುತ್ತದೆ.ಈ ಡಿಮ್ಯಾಟ್ ಖಾತೆ ಇಲ್ಲದೇ ಷೇರುಗಳನ್ನು ಮಾರಲು ಮತ್ತು ಕೊಳ್ಳಲು ಸಾದ್ಯವಿಲ್ಲ.
No comments:
Post a Comment