ಮುಖ್ಯಾಂಶಗಳು:
• ಕಂಪನಿಯ ಕೊನೆಯ ಗವರ್ನರ್ ಜನರಲ್ ಲಾರ್ಡ ಮೌಂಟ್ ಬ್ಯಾಟನ್ ಆಗಿದ್ದನು.
• ಭಾರತದ ಪ್ರಥಮ ಗೃಹಮಂತ್ರಿ ಸರ್ಧಾರ್ ವಲ್ಲಭಬಾಯಿ ಪಟೇಲರು ಆಗಿದ್ದರು.
• ಭಾರತದ ಪ್ರಥಮ ರಾಷ್ಟ್ರಪತಿ ಡಾ. ಬಾಬುರಾಜೇಂದ್ರಪ್ರಸಾದ.
• ಪಾಂಡಿಚೇರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾಗಿ 1963 ರಲ್ಲಿ ಸೇರಿತು.
• ರಾಜ್ಯ ಪುನರ್ವಿಂಗಡನಾ ಕಾನೂನು 1956 ರಲ್ಲಿ ಜಾರಿಗೆ ಬಂದಿತು.
• 1950ರ ಜನವರಿ 26ರಂದು ಭಾರತದ ಸಂವಿಧಾನ ಜಾರಿಗೆ ಬಂದಿತು.
• ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ದೇಶದಲ್ಲಿ 562 ಸಂಸ್ಥಾನಗಳಿದ್ದವು.
• ಸಂಸ್ಥಾನಗಳ ವಿಲೀನಿಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರು ಗೃಹಮಂತ್ರಿ. ಸರ್ಧಾರ್ ವಲ್ಲಭಬಾಯಿ ಪಟೇಲರು.
• ಗೋವಾವನ್ನು ಪೋರ್ಚಗೀಸರಿಂದ ವಿಮೋಚನೆಗೊಳಿಸಿದ ವರ್ಷ – 1961.
ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.
1. ನಿರಾಶ್ರೀತರ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿತು?
• ಭಾರತದ ವಿಭಜನೆಯು ಸೃಷ್ಟಿಸಿದ ಘೋರ ಪರಿಣಾಮಗಳಲ್ಲಿ ನಿರಾಶ್ರಿತರ ಸಮಸ್ಯೆಯೂ ಒಂದು.
• ಪಾಕಿಸ್ತಾನದಲ್ಲಿದ್ದ ಲಕ್ಷಾಂತರ ಮುಸ್ಲಿಮೇತರರು ಮನೆ ಮಠಗಳನ್ನು ಕಳೆದುಕೊಂಡು ಭಾರತಕ್ಕೆ ನಿರಾಶ್ರಿತರಾಗಿ ಬಂದರು.
• ಇವರಿಗೆಲ್ಲಾ ವಸತಿ, ವೈದ್ಯಕೀಯ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವದು ಸರಕಾರದ ಕರ್ತವ್ಯವಾಗಿತ್ತು.
• ಈ ಲಕ್ಷಾಂತರ ನಿರಾಶ್ರಿತರ ಪುನರ್ವಸತಿಗಾಗಿ ಒರಿಸ್ಸಾದ ದಂಡಕಾರಣ್ಯ ಯೋಜನೆ ರೂಪಿಸಿದರು.
• ನಿರಾಶ್ರಿತರು ಪಂಜಾಬ್, ರಾಜಸ್ತಾನ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ ನೆಲೆಸಿದರು.
2. ದೇಶೀಯ ಸಂಸ್ಥಾನಗಳ ವಿಲೀನೀಕರಣವನ್ನು ಸರ್ಧಾರ ವಲ್ಲಭಬಾಯಿ ಪಟೇಲರು ಹೇಗೆ ಸಮರ್ಥವಾಗಿ ನಿಭಾಯಿಸಿದರು? ವಿವರಿಸಿ.
• ಬ್ರಿಟಿಷರು ಭಾರತ ಬಿಟ್ಟು ಹೋಗುವಾಗ ದೇಶದಲ್ಲಿ 562 ಸಂಸ್ಥಾನಗಳಿದ್ದವು.
• 1947 ರ ವಿಲೀನ ಕಾಯ್ದೆಯ ಪ್ರಕಾರ ಭಾರತ ಸರ್ಕಾರ ಎಲ್ಲಾ ದೇಶಿಯ ಸಂಸ್ಥಾನಗಳನ್ನು
• ಭಾರತ ಒಕ್ಕೂಟಕ್ಕೆ ಸೇರಿಸಿಕೊಳ್ಳಲು ಗೃಹ ಮಂತ್ರಿ ಸರ್ಧಾರ ವಲ್ಲಭಬಾಯಿ ಪಟೇಲರ ನೇತೃತ್ವದಲ್ಲಿ ಆಹ್ವಾನ ನೀಡಿತು.
• ಈ ರೀತಿ ವಿಲೀನಗೊಂಡವರಿಗೆ ಪ್ರತಿಯಾಗಿ ರಾಜ್ಯಾದಾಯವನ್ನು ಆಧರಿಸಿ ರಾಜಧನವನ್ನು ನಿಗದಿಪಡಿಸಿತು.
• ಸಂಸ್ಥಾನಗಳ ವಿಲೀನಗೊಳ್ಳುವ ಪ್ರಕ್ರಿಯೆಯಲ್ಲಿ ಜುನಾಗಡ್, ಹೈದ್ರಾಬಾದ್ ಮತ್ತು ಜಮ್ಮು ಕಾಶ್ಮೀರ ಸಂಸ್ಥಾನಗಳು ತೀವ್ರ ಪ್ರತಿರೋಧವನ್ನು ತೋರಿದವು.
• ಭಾರತದ ಗೃಹ ಮಂತ್ರಿ ಸರ್ಧಾರ ವಲ್ಲಭಬಾಯಿ ಪಟೇಲರ ನೇತೃತ್ವದಲ್ಲಿ ಜನಾಭಿಪ್ರಾಯ & ಸೈನಿಕ ಕಾರ್ಯಾಚರಣೆ ಮೂಲಕ ಭಾರತದ ದೇಶೀಯ ಸಂಸ್ಥಾನಗಳನ್ನು ವಿಲೀನಗೊಳಿಸುವ ಕಾರ್ಯಭಾರವನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು.
3. ಭಾರತವು ಸ್ವಾತಂತ್ರಗಳಿಸಿದ ಸಮಯದಲ್ಲಿ ಎದುರಿಸಿದ ಸಮಸ್ಯೆಗಳಾವುವು?
ಲಕ್ಷಾಂತರ ನಿರಾಶ್ರಿತರ ಸಮಸ್ಯೆ, ಕೋಮುಗಲಭೆಗಳು, ಸರ್ಕಾರದ ರಚನೆ, ದೇಶೀಯ ಸಂಸ್ಥಾನಗಳ ವಿಲೀನಿಕರಣ ಆಹಾರದ ಉತ್ಪಾದನೆ, ಕೃಷಿ ಬೆಳವಣಿಗೆ, ಕೈಗಾರಿಕೆಗಳ ಬೆಳವಣಿಗೆ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಯಿತು.
4. ಪಾಂಡಿಚೇರಿಯನ್ನು ಪ್ರೆಂಚರಿಂದ ವಿಮುಕ್ತಿಗೊಳಿಸಿದ ರೀತಿಯನ್ನು ವಿವರಿಸಿ.
ಸ್ವಾತಂತ್ರ್ಯದ ನಂತರದಲ್ಲಿ ಪ್ರೆಂಚ್ ವಸಾಹತುಶಾಹಿಗಳು ಪಾಂಡಿಚೇರಿ, ಕಾರೈಕಲ್, ಮಾಹೆ ಮತ್ತು ಚಂದ್ರನಗರಗಳ ಮೇಲಿನ ಹಿಡಿತವನ್ನು ಮುಂದುವರಿಸಿದ್ದರು. ಇವು ಭಾರತಕ್ಕೆ ಸೇರಬೇಕೆಂದು ಕಾಂಗ್ರೇಸ್, ಕಮ್ಯುನಿಸ್ಟ್ ಮತ್ತು ಇತರ ಸಂಘಟನೆಗಳ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ 1954 ರಲ್ಲಿ ಈ ಪ್ರದೇಶಗಳು ಭಾರತಕ್ಕೆ ಸೇರ್ಪಡೆಗೊಂಡವು.
5. ಭಾಷಾವಾರು ಪ್ರಾಂತ್ಯಗಳ ವಿಂಗಡನೆಗೆ ಸರ್ಕಾರ ಕೈಗೊಂಡ ಕ್ರಮವನ್ನು ಕುರಿತು ಬರೆಯಿರಿ.
• ಭಾರತ ಸ್ವತಂತ್ರಾನಂತರ ದೇಶದಾದ್ಯಂತ ¨sಂμಂವಾರು ರಾಜ್ಯಗಳನ್ನು ರಚಿಸಬೇಕೆಂಬ ಕೂಗು ತೀವ್ರವಾಯಿತು.
• ವಿಶಾಲಾಂದ್ರ ರಚಿಸಬೇಕೆಂದು 1952ರಲ್ಲಿ ಪೊಟ್ಟಿ ಶ್ರೀರಾಮುಲು 58 ದಿನಗಳ ಕಾಲ ಉಪವಾಸ ಮಾಡಿ
• ಅಸುನೀಗಿದ ನಂತರ ಈ ಬೇಡಿಕೆ ತೀವ್ರ ಸ್ವರೂಪವನ್ನು ಪಡೆಯಿತು.
• ಹೋರಾಟದ ಸ್ವರೂಪವನ್ನು ಅರಿತ ಕೇಂದ್ರ ಸರಕಾರ 1953ರಲ್ಲಿ ರಾಜ್ಯಗಳ ಪುನರ್ ವಿಂಗಡನೆಗೆ ಫಜಲ್
• ಅಲಿಯವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿತು.
• ಕೆ.ಎಂ.ಪಣಿಕ್ಕರ್ ಮತ್ತು ಹೆಚ್.ಎನ್.ಕುಂಜ್ರು ಸದಸ್ಯರಾಗಿದ್ದರು.
• ಈ ಆಯೋಗದ ವರದಿಯಂತೆ 1956ರಲ್ಲಿ ರಾಜ್ಯ ಪುನರ್ವಿಂಗಡನಾ ಕಾನೂನು ಜಾರಿಗೆ ಬಂದಿತು.
6. ಗೋವಾವನ್ನು ಪೋರ್ಚಗೀಸರಿಂದ ಹೇಗೆ ಮುಕ್ತಿಗೊಳಿಸಲಾಯಿತು?
• ಭಾರತ ಸ್ವಾತಂತ್ರ್ಯಾನಂತರವೂ ಗೋವಾ ಪೋರ್ಚಗೀಸರ ಆಳ್ವಿಕೆಯಲ್ಲಿತ್ತು.
• ಗೋವಾವನ್ನು ಭಾರತಕ್ಕೆ ಸೇರಬೇಕೆಂದು ನಿರಂತರವಾಗಿ ಚಳುವಳಿ ನಡೆಯಿತು.
• ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಗೋವಾ ವಿಮೋಚನಾ ಚಳುವಳಿಯನ್ನು ಬೆಂಬಲಿಸಿತು.
• ಪೋರ್ಚಗೀಸ್ ಸರಕಾರ ಚಳುವಳಿಗಾರರ ಮೇಲೆ ದಮನಕಾರಿ ಕ್ರಮಗಳನ್ನು ಕೈಗೊಂಡಿತು.
• ಇದರಿಂದಾಗಿ ಪೋಲಿಸರ ದೌರ್ಜನ್ಯ ಹೆಚ್ಚಿತು. 1961ರಲ್ಲಿ ಭಾರತದ ಸೈನ್ಯ ಮಧ್ಯಪ್ರವೇಶಿಸಿ ಗೋವಾವನ್ನು ವಶಪಡಿಸಿಕೊಂಡಿತು.
7. ಸರ್ಧಾರ ಪಟೇಲರು ಹೈದರಾಬಾದಿನ ಮೇಲೆ ಪೋಲಿಸ್ ಕಾರ್ಯಾಚರಣೆ ಕೈಗೊಳ್ಳಲು ಕಾರಣವೇನು?
• ಭಾರತ ಸ್ವತಂತ್ರ ಪಡೆದ ಸಂದರ್ಭದಲ್ಲಿ ಹೈದರಾಬಾದ ನಿಜಾಮನು ಸ್ವತಂತ್ರವಾಗಿ ಉಳಿಯುವ ಉದ್ದೇಶದಿಂದ ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಿದನು.
• ಇದರಿಂದ ಸಾಕಷ್ಟು ಹೋರಾಟಗಳು ನಡೆದವು.
• ಭಾರತ ಸರಕಾರ ನಿಜಾಮನೊಂದಿಗೆ ನಡೆಸಿದ ಮಾತುಕತೆಗಳು ಫಲಪ್ರದವಾಗಲಿಲ್ಲ.
• ನಿಜಾಮರು ಭಾರತದೊಂದಿಗೆ ಯುದ್ಧ ಮಾಡಲು ಯುದ್ಧ ಸಾಮಗ್ರಿಗಳನ್ನು ಆಮದು ಮಾಡಿಕೊಂಡನು.
• ಇದನ್ನರಿತ ಸರ್ಧಾರ ಪಟೇಲರು ಹೈದರಾಬಾದ ಮೇಲೆ ಸೈನ್ಯವನ್ನು ಕಳುಹಿಸಿ ನಿಜಾಮನನ್ನು ಸೋಲಿಸಿ 1948 ರಲ್ಲಿ ಭಾರತದೊಂದಿಗೆ ವಿಲೀನಗೊಳಿಸಿದರು.
8. ಜಮ್ಮು & ಕಾಶ್ಮೀರದ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
• ಜಮ್ಮು & ಕಾಶ್ಮೀರದ ಅರಸ ಹರಿಸಿಂಗ್ ಭಾರತದ ಒಕ್ಕೂಟ ಸೇರುವಲ್ಲಿ ವಿಳಂಬ ಮಾಡಿದ್ದು ಸಮಸ್ಯೆಗೆ ಕಾರಣವಾಯಿತು.
• ಪಾಕಿಸ್ತಾನವು ಕಾಶ್ಮೀರವನ್ನು ವಶಪಡಿಸಿಕೊಳ್ಳಲು ನಿರ್ಧರಿಸಿ ದಾಳಿ ಮಾಡಿತು. ಭಾರತದ ಸೇನೆ ಕಾಶ್ಮೀರದ ರಕ್ಷಣೆಗೆ ಧಾವಿಸಿ ಈ ದಾಳಿಯನ್ನು ಹಿಮ್ಮೆಟ್ಟಿಸಿತು.
• ಅಕ್ಟೋಬರ್ 26 1947 ರಂದು ಕಾಶ್ಮೀರದ ಮಹಾರಾಜ ಹರಿಸಿಂಗ್ & ನ್ಯಾಶನಲ್ ಕಾನ್ಫರೆನ್ಸ್ ಪಕ್ಷದ μಇಂPi ಅಬ್ದುಲ್ಲಾರ ಬೆಂಬಲದೊಂದಿಗೆ ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸಲು ಒಪ್ಪಿದರು.
• ಪಾಕಿಸ್ತಾನವು ಕಾಶ್ಮೀರದ ವಿಲೀನವನ್ನು ಪ್ರಶ್ನಿಸಿ ವಿಶ್ವಸಂಸ್ಥೆಯಲ್ಲಿ ದಾವೆ ಹೂಡಿತು.
• ಯುದ್ಧ ಸ್ಥಂಭನಕ್ಕೆ ವಿಶ್ವಸಂಸ್ಥೆ ಆದೇಶ ನೀಡಲು ಕೆಲವೊಂದು ಭಾಗ ಪಾಕಿಸ್ತಾನದ ವಶದಲ್ಲಿ ಉಳಿಯಿತು. ಇದನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆಯಲಾಗುತ್ತದೆ.
No comments:
Post a Comment