Sunday, 29 November 2020

ಸ್ವಾತಂತ್ರ್ಯ ಹೋರಾಟ

Admin       Sunday, 29 November 2020

ಮುಖ್ಯಾಂಶಗಳು:

• ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ನ್ನು 1885 ರಲ್ಲಿ ಸ್ಥಾಪಿಸಲಾಯಿತು.

• ಸಂಪತ್ತಿನ ಸೋರುವಿಕೆ ಸಿದ್ದಾಂತವನ್ನು ಮಂಡಿಸಿದವರು ದಾದಾಬಾಯಿ ನವರೋಜಿ.

• ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು ಎಂದು ಬಾಲಗಂಗಾಧರ ತಿಲಕರು ಘೋಷಿಸಿದರು.

• ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನು ಮಹಮ್ಮದ್ ಅಲಿ ಜಿನ್ನಾರವರು ಮಂಡಿಸಿದರು.

• 1929 ರಲ್ಲಿ ಲಾಹೋರನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ನ ಅಧಿವೇಶನದ ಅಧ್ಯಕ್ಷರಾಗಿದ್ದವರು ಜವಾಹರಲಾಲ ನೆಹರು.

• ಮಹದ್ & ಕಾಲರಾಂ ದೇವಾಲಯ ಚಳುವಳಿಯನ್ನು ರೂಪಿಸಿದವರು ಡಾ. ಬಿ.ಆರ್. ಅಂಬೇಡ್ಕರ್ರವರು.

• ಭಾರತೀಯ ರಾಷ್ಟ್ರೀಯ ಸೇನೆಯ ಝಾನ್ಸಿ ರೆಜಿಮೆಂಟನ ನೇತೃತ್ವವನ್ನು ಕ್ಯಾಪ್ಟನ್ ಲಕ್ಷ್ಮೀರವರು ವಹಿಸಿದರು.

• ಉಪ್ಪಿನ ಸತ್ಯಾಗ್ರಹವನ್ನು ಗಾಂಧೀಜಿಯವರು 1930 ರಲ್ಲಿ ನಡೆಸಿದರು.

• ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪಕರು ಎ.ಓ.ಹ್ಯೂಮ್.

• ಮರಾಠ & ಕೇಸರಿ ಪತ್ರಿಕೆಯನ್ನು ಪ್ರಾರಂಭಿಸಿದವರು ಬಾಲಗಂಗಾಧರ ತಿಲಕರು.

• ಸ್ವರಾಜ್ಯ ಪಕ್ಷ ಸ್ಥಾಪಿಸಿದ ವರ್ಷ 1922.

• ಭಾರತೀಯ ರಾಷ್ಟ್ರೀಯ ಕಾಂಗ್ರೇಸನ ತ್ರಿಪುರ ಅಧಿವೇಶನದ ಅಧ್ಯಕ್ಷರಾಗಿದ್ದವರು ಸುಭಾಸ್ ಚಂದ್ರ ಭೋಸ್ರವರು.

• ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿದ್ದವರು ಸರ್ದಾರ್ ವಲ್ಲಭಭಾಯಿ ಪಟೇಲ್ರು.


ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿರಿ.

1. ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ನ ಸ್ಥಾಪನೆಗೆ ಮೊದಲು ಇದ್ದ ಸಂಘಟನೆಗಳು ಯಾವವು?

• ‘ದಿ ಹಿಂದೂ ಮೇಳ’, ‘ದಿ ಈಸ್ಟ್ ಇಂಡಿಯಾ ಅಸೋಸಿಯನ್

• ಪೂನಾ ಸಾರ್ವಜನಿಕ ಸಭಾ’,

• ಮತ್ತು ‘ ದಿ ಇಂಡಿಯನ್ ಅಸೋಸಿಯನ್’ï’ ಪ್ರಮುಖವಾಗಿದ್ದವು.


2. ಮಂದಗಾಮಿ ನಾಯಕರುಗಳು ಯಾರು? ಬ್ರಿಟಿಷ್ ಸರ್ಕಾರದ

ಮುಂದಿಟ್ಟ ಮಂದಗಾಮಿಗಳು ಇಟ್ಟ ಬೇಡಿಕೆಗಳು ಯಾವವು?

ಮಂದಗಾಮಿಗಳಲ್ಲಿ ಎಂ.ಜಿ.ರಾನಡೆ, ಸುರೇಂದ್ರನಾಥ ಬ್ಯಾನರ್ಜಿ, ದಾದಾಬಾಯಿ ನವರೋಜಿ, ಗೋಪಾಲಕೃಷ್ಣÀ ಗೋಖಲೆ ಪ್ರಮುಖರು.

ಮಂದಗಾಮಿಗಳ ಬೇಡಿಕೆಗಳು

• ದೇಶದ ಉನ್ನತ ಹುದ್ದೆಗಳಲ್ಲಿ ಭಾರತೀಯರಿಗೆ ಪ್ರಾತಿನಿಧ್ಯ ದೊರಕಿಸಿಕೊಡುವದು.

• ವಿದೇಶಿ ವಸ್ತುಗಳ ಮೇಲೆ ಆಮದು ತೆರಿಗೆಯನ್ನು ಹಾಕಿ ಭಾರತೀಯ ಕೃಷಿ ಮತ್ತು

• ಕೈಗಾರಿಕೆಯನ್ನು ಬಲಪಡಿಸುವದು.

• ಸೈನಿಕ ವೆಚ್ಚ ಕಡಿಮೆ ಮಾಡುವುದು.

• ಭಾರತೀಯರಿಗೆ ಉತ್ತಮ ಶಿಕ್ಷಣ ಕೊಡುವುದು.

• ಬಡತನದ ಬಗ್ಗೆ ಅಧ್ಯಯನ ನಡೆಸಲು ಬಿಚಿಟಿμi ಸರಕಾರವನ್ನು ಒತ್ತಾಯಿಸುವದು.


3. ಸ್ವಾತಂತ್ರ್ಯ ಚಳುವಳಿಯಲ್ಲಿ ಬಾಲಗಂಗಾಧರ ತಿಲಕರ ಪಾತ್ರವನ್ನು ವಿವರಿಸಿ.

• ತಿಲಕರು ‘ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು; ಅದನ್ನು ನಾನು ಪಡೆದೇ ತೀರುತ್ತೇನೆ’ ಎಂದು ಘೋಷಿಸಿದರು.

• ಇಂಗ್ಲಿಷರನ್ನು ಭಾರತದಿಂದ ಹೊರದೂಡಬೇಕು, ಇದಕ್ಕೆ ¸ಂಘರ್ಷ ದಾರಿ ಅನಿವಾರ್ಯ ಎಂದು ತಿಳಿಸಿದರು.

• ಜನರ ಧಾರ್ಮಿಕ ಭಾವನೆಗಳನ್ನು ಬಳಸಿ ಜನರಲ್ಲಿ ದೇಶಭಕ್ತಿ ಬೆಳೆಸಲು ಸಾರ್ವಜನಿಕವಾಗಿ ಗಣೇಶ ಹಬ್ಬ, ಶಿವಾಜಿ ಜಯಂತಿಯನ್ನು ಆಚರಿಸಲು ಕರೆ ನೀಡಿದರು.

• ತಿಲಕರು ತಮ್ಮ ವೃತ್ತ ಪತ್ರಿಕೆಗಳಾದ ಕೇಸರಿ ಹಾಗೂ ಮರಾಠ ಪತ್ರಿಕೆಗಳನ್ನು ಬಳಸಿ ಜನರಲ್ಲಿ ಇಂಗ್ಲಿಷರ ವಿರುದ್ದ ಹೋರಾಡಲು ಪ್ರಬಲ ರಾಷ್ಟ್ರೀಯತೆಯನ್ನು ಪ್ರತಿಪಾದಿಸಿದರು.

• ತಿಲಕರ ಕ್ರಾಂತಿಕಾರಿ ಬರವಣಿಗೆಗಳು ಜನರ ಉದ್ರೇಕಕ್ಕೆ ಕಾರಣವಾಯಿತು ಎಂಬ

• ಹಿನ್ನೆಲೆಯಲ್ಲಿ ಇಂಗ್ಲಿಷ್ ಸರ್ಕಾರವು ಇವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿತು.


4. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖವಾಗಿ ಕಂಡುಬರುವ

ತೀವ್ರಗಾಮಿಗಳ ಹೆಸರುಗಳನ್ನು ಬರೆಯಿರಿ.

ಅರಬಿಂದೋ ಘೋಷ್, ಬಿಪಿನ್ಚಂzಪ್ರ Áಲ್, ಲಾಲ ಲಜಪತರಾಯ್, ಬಾಲಗಂಗಾಧರ ತಿಲಕ್ ಜಯಪ್ರಕಾಶ ನಾರಾಯಣ & ಸುಭಾಸ್ಚಂದ್ರಬೋಸ್ ಇವರು ಪ್ರಮುಖ ತೀವ್ರಗಾಮಿ ನಾಯಕರುಗಳಾಗಿದ್ದಾರೆ.


5. ಬಂಗಾಳ ವಿಭಜನೆಯನ್ನು ಹಿಂಪಡೆಯಲು ಕಾರಣಗಳೇನು?

• ಇಂಗ್ಲಿಷರು ವೈಸರಾಯ ಲಾರ್ಡ ಕರ್ಜನ್ನು ಸ್ವಾತಂತ್ರ್ಯ ಹೋರಾಟದ ತೀವ್ರತೆಯನ್ನು ಕುಗ್ಗಿಸುವ ಉದ್ದೇಶದಿಂದ 1905ರಲ್ಲಿ ಬಂಗಾಳ ವಿಭಜನೆಯ ಯೋಜನೆಯನ್ನು ರೂಪಿಸಿದನು.

• ಬ್ರಿಟಿಷರ ಒಡೆದು ಆಳುವ ನೀತಿಯ ಪ್ರತೀಕವಾಗಿದ್ದ ಬಂಗಾಳ ವಿಭಜನೆಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ವಿರೋಧಿಸಿತು.

• ಬಂಗಾಳ ವಿಭಜನೆಯ ವಿರುದ್ಧ ದೇಶಾದ್ಯಂತ ಪ್ರತಿರೋಧಗಳು ವ್ಯಕ್ತವಾದವು.

• ದೇಶದಲ್ಲಿ ಸ್ವದೇಶಿ ಚಳುವಳಿಯನ್ನು ಪ್ರಾರಂಭಿಸಲಾಯಿತು.

• ಸ್ವದೇಶಿ ವಸ್ತುಗಳನ್ನು ಉಪಯೋಗಿಸುವಂತೆ ಭಾರತೀಯರನ್ನು ಪ್ರೇರೇಪಿಸಲಾಯಿತು.

• ಭಾರತೀಯರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ 1911 ರಲ್ಲಿ ಬಂಗಾಳ ವಿಭಜನೆಯನ್ನು ಬಿಚಿಟಿμi ಸರ್ಕಾರ ಹಿಂಪಡೆಯಿತು.


6. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ನ ಪಾತ್ರವೇನು?

• ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಭಾರತೀಯರಲ್ಲಿ ರಾಜಕೀಯ ಪ್ರಜ್ಞೆ ಮತ್ತು ರಾಷ್ಟ್ರೀಯತೆಯ ಮನೋಭಾವನೆಯನ್ನು ವೃದ್ಧಿಸಲು ಶ್ರಮಿಸಿತು.

• ದೇಶೀ ಭಾಷೆಗಳಲ್ಲಿ ಪತ್ರಿಕೆಗಳನ್ನು ಪ್ರಕಟಿಸಿ ಆ ಮೂಲಕ ರಾಜಕೀಯ ಸಮಸ್ಯೆಗಳ ಚರ್ಚೆ ಆರಂಭಿಸಿತು.

• ರಾಜಕೀಯ ಸಮಸ್ಯೆಗಳು ಮತ್ತು ವಿಚಾರಗಳು ಜನರ ಮನಮುಟ್ಟಿದವು.

• ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ರಾಷ್ಟ್ರೀಯ ವಿಚಾರಗಳಿಗೆ ಸಂಬಂಧಪಟ್ಟಂತೆ ರಚನಾತ್ಮಕವಾದ ಕಾರ್ಯತಂತ್ರವನ್ನು ರೂಪಿಸಿತು.

• ಅಂತಿಮವಾಗಿ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಯಶಸ್ವಿಯಾಯಿತು.


7. ಚೌರಿ ಚೌರಾ ಘಟನೆಯನ್ನು ವಿವರಿಸಿ.

• ಗಾಂಧಿಜಿಯವರು 1920 ರಲ್ಲಿ ಅಸಹಕಾರ ಚಳುವಳಿಗೆ ಕರೆಯಿತ್ತರು.

• ದೇಶಾದ್ಯಂತ ತೀವ್ರ ಪ್ರತಿಭಟನೆಗಳು ಉಂಟಾದವು.

• ಅಸಹಕಾರ ಚಳುವಳಿಯ ಸ್ವರೂಪವನ್ನು ಮನಗಂಡ ಬ್ರಿಟಿಷ ಸರ್ಕಾರದಲ್ಲಿ ಆತಂಕದ ವಾತಾವರಣ ಉಂಟಾಯಿತು.

• 1922 ರಲ್ಲಿ ಶಾಂತಿಯುತವಾಗಿ ಚಳುವಳಿ ನಡೆಸುತ್ತಿದ್ದ ಚಳುವಳಿಗಾರರ ಮೇಲೆ ಪೋಲಿಸರು ಗೋಲಿಬಾರ್ ಮಾಡಿದರು.

• ಕುಪಿತರಾದ ಚಳುವಳಿಗಾರರು ಠಾಣೆಗೆ ಬೆಂಕಿ ಹಚ್ಚಿದರು.

• 22 ಜನ ಪೋಲಿಸರು ಸಜೀವ ದಹನವಾದರು.

• ಈ ಘಟನೆಯನ್ನು ಇತಿಹಾಸದಲ್ಲಿ ಚೌರಿಚೌರಾ ಘಟನೆ ಎನ್ನುತ್ತಾರೆ.


8. ಉಪ್ಪಿನ ಸತ್ಯಾಗ್ರಹವನ್ನು ವಿವರಿಸಿ.

• ಗಾಂಧೀಜಿಯವರು ಉಪ್ಪಿನ ಮೇಲಿನ ತೆರಿಗೆಯು ಸೇರಿದಂತೆ ಹನ್ನೊಂದು ಬೇಡಿಕೆಗಳನ್ನು ವೈಸರಾಯ ಇರ್ವಿನ್ ಮುಂದೆ ಇಟ್ಟರು.

• ಇರ್ವಿನ್ ಗಾಂಧೀಜಿಯವರ ಬೇಡಿಕೆಗಳನ್ನು ಪರಿಗಣಿಸಲಿಲ್ಲ.

• ಕ್ರಿ ಶ 1930 ರಲ್ಲಿ ಗಾಂಧೀಜಿಯವರು ಕಾನೂನು ಭಂಗ ಚಳುವಳಿಯನ್ನು ಉಪ್ಪಿನ ಸತ್ಯಾಗ್ರಹದೊಂದಿಗೆ ಆರಂಭಗೊಳಿಸಿದರು.

• ತಮ್ಮ ಅನುಯಾಯಿಗಳೊಂದಿಗೆ ಗಾಂಧೀಜಿಯವರು 1930 ರಂದು ಸಾಬರಮತಿ ಆಶ್ರಮದಿಂದ ಸೂರತ್ ಸಮೀಪದ ದಂಡಿಯವರೆಗೂ ಕಾಲ್ನಡಿಗೆಯಲ್ಲಿ ಸಾಗಿದರು.

• ಉಪ್ಪಿನ ಕಾಯ್ದೆಯನ್ನು ಮುರಿಯುವ ಸಂಕೇತವಾಗಿ ಸಮುದ್ರದ ದಡದಲ್ಲಿ ಹಿಡಿ ಉಪ್ಪನ್ನು ತಯಾರಿಸಿ ಜನರಿಗೆ ವಿತರಿಸಿದರು. ಈ ಘಟನೆಯನ್ನು ಇತಿಹಾಸದಲ್ಲಿ ದಂಡಿ ಸತ್ಯಾಗ್ರಹ ಎಂದು ಕರೆಯುತ್ತಾರೆ.

• ದೇಶದಲ್ಲಿ ಕಾನೂನು ಭಂಗ ಚಳುವಳಿಯಲ್ಲಿ ಭಾಗವಹಿಸಿದ ಸಾವಿರಾರು ಜನ ಗಾಂಧೀಜಿಯವರೊಂದಿಗೆ ಬಂಧಿತರಾದರು.


9. ನೆಹರುರವರು ಪ್ರಧಾನ ಮಂತ್ರಿಯಾದ ನಂತರ ರಾಷ್ಟ್ರಕ್ಕೆ ನೀಡಿದ ಪ್ರಮುಖ ಕೊಡುಗೆಗಳನ್ನು ವಿವರಿಸಿ.

• ಗೃಹ ಮಂತ್ರಿ ಸರ್ಧಾರ ವಲ್ಲಭಬಾಯಿ ಪಟೇಲ್ ನೇತೃತ್ವದಲ್ಲಿ ದೇಶಿ ಸಂಸ್ಥಾನಗಳ ವಿಲೀನಿಕರಣಕ್ಕೆ ನೆಹರು ಕಾರಣರಾದರು.

• ಭಾಷಾವಾರು ಪ್ರಾಂತ್ಯಗಳ ರಚನೆಯ ಮೂಲಕ ಭಾರತಕ್ಕೆ ಪ್ರಜಾಪ್ರಭುತ್ವಕ್ಕೆ ತಳಹದಿಯನ್ನು ಹಾಕಿದರು.

• ಬಂಡವಾಳ & ಸಮಾಜವಾದಿ ತತ್ವಗಳನ್ನೊಳಗೊಂಡ ಮಿಶ್ರ ಆರ್ಥಿಕ ನೀತಿಯನ್ನು ನೆಹರುರವರು ಜಾರಿಗೆ ತಂದರು.

• ಸ್ವಾತಂತ್ರ್ಯಾನಂತರ ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿಯ ಕನಸನ್ನು ಕಂಡರು.

• ವಿದೇಶಾಂಗ ನೀತಿಗೆ ಸಂಬಂಧಿಸಿದಂತೆ ಅಲಿಪ್ತ ನೀತಿ & ಪಂಚಶೀಲತತ್ವಗಳನ್ನು ಅಳವಡಿಸಿ ವಿದೇಶಾಂಗ ನೀತಿಯ ಶಿಲ್ಪಿ ಎಂದು ನೆಹರು ಕರೆಸಿಕೊಂಡರು.


10. ಸಂಪತ್ತಿನ ಸೋರಿಕೆ ಸಿದ್ದಾಂತವನ್ನು ವಿವರಿಸಿ.

• ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ದಾದಾಬಾಯಿ ನವರೋಜಿಯವರು ಮಂಡಿಸಿದರು.

• ಆಮದನ್ನು ಹೆಚ್ಚಿಸಿ ರಪ್ತನ್ನು ಕಡಿಮೆ ಮಾಡಿದ್ದರಿಂದ ಪ್ರತಿಕೂಲ ಸಂದಾಯ ಉಂಟಾಗಿ ದೇಶದ ಸಂಪತ್ತು ಇಂಗ್ಲೆಂಡಿಗೆ ಹರಿಯಲು ಕಾರಣವಾಯಿತೆಂದು ಪ್ರತಿಪಾದಿಸಿದರು.

• ಬ್ರಿಟಿಷ ಅಧಿಕಾರಿಗಳಿಗೆ ನೀಡುತ್ತಿದ್ದ ವೇತನ, ನಿವೃತ್ತಿ ವೇತನ ಮತ್ತು ಆಡಳಿತಾತ್ಮಕ ವೆಚ್ಚವನ್ನು ಭಾರತವೇ ಭರಿಸಬೇಕಾದ ಹಿನ್ನೆಲೆಯಲ್ಲಿ ಅಪಾರವಾದ ಸಂಪತ್ತು ಬ್ರಿಟನ್ಗೆ ಹರಿದು ಹೋಗುತ್ತಿತ್ತು ಎಂಬುದನ್ನು ಅವರು ವಿವರವಾಗಿ ಜನರ ಮುಂದಿಟ್ಟರು.


11. ಭಾರತ ಸ್ವಾತಂತ್ರ್ಯ ಹೋರಾಟದಲ್ಲಿನ ಕ್ರಾಂತಿಕಾರಿಗಳನ್ನು ಹೆಸರಿಸಿ. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಕ್ರಾಂತಿಕಾರಿಗಳು ಅನುಸರಿಸಿದ ಮಾರ್ಗ ಯಾವುದು?

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿನ ಕ್ರಾಂತಿಕಾರಿಗಳು – ವಿ.ಡಿ.ಸಾವರ್ಕರ್, ಅರಬಿಂದೋ ಘೋಷ್, ಶ್ಯಾಮಾಜಿ ಕೃಷ್ಣವರ್ಮ, ರಾಸ್ ಬಿಹಾರಿ ಬೋಸ್, ಮ್ಯಾಡಮ್ ಕಾಮಾ, ಖುದಿರಾಮ್ ಬೋಸ್, ರಾಮ್ಪ್ರಸಾದ ಬಿಸ್ಮಿಲ್, ಭಗತ್ಸಿಂಗ್, ಚಂದ್ರಶೇಖರ್ ಅಜಾದ್ ಇವರುಗಳು ಕ್ರಾಂತಿಕಾರಿಗಳಲ್ಲಿ ಪ್ರಮುಖರಾಗಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಕ್ರಾಂತಿಕಾರಿಗಳು ಅನುಸರಿಸಿದ ಮಾರ್ಗ

• ಕ್ರಾಂತಿಕಾರಿಗಳು ಪೂರ್ಣ ಸ್ವಾತಂತ್ರ್ಯದ ಕನಸ್ಸನ್ನು ಕಂಡಿದ್ದರು.

• ಭಾರತೀಯರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಹಿಂಸಾತ್ಮಕ ಮಾರ್ಗದಿಂದ ಬ್ರಿಟಿಷರನ್ನು  ಮಾತ್ರ ಭಾರತದಿಂದ ಓಡಿಸಬಹುದೆಂದು ಅವರು ಬಲವಾಗಿ ನಂಬಿದ್ದರು.

• ಇವರುಗಳು ರಹಸ್ಯ ಸಂಘಗಳ ಮೂಲಕ ಭಾರತದಲ್ಲಿ ಮತ್ತು ವಿದೇಶಗಳಲ್ಲಿ ತಮ್ಮ ಶಾಖೆಗಳನ್ನು ಸ್ಥಾಪಿಸಿ ಕ್ರಾಂತಿಕಾರಿಗಳಿಗೆ ತರಬೇತಿ ನೀಡುವಲ್ಲಿ ನಿರತರಾಗಿದ್ದರು.

• ಇವರು ತಮ್ಮ ಗುರಿ ಸಾಧನೆಗಾಗಿ ಬಾಂಬುಗಳು & ಬಂದೂಕಗಳ ಪ್ರಯೋಗ ಮಾಡಿದರು.


12. ಕ್ವಿಟ್ ಇಂಡಿಯಾ ಚಳುವಳಿಯು ನಡೆದ ರೀತಿಯನ್ನು ವಿವರಿಸಿರಿ.

ಕ್ವಿಟ್ ಇಂಡಿಯಾ ಚಳುವಳಿ ಕ್ರಿ ಶ 1942 ಅಗಷ್ಟ 8 ರಂದು ಮುಂಬಯಿ ಅಧಿವೇಶನದಲ್ಲಿ ಕಾಂಗ್ರೇಸ್ ‘ಬ್ರಿಟಿಷರೇ ಭಾರತಬಿಟ್ಟು ತೊಲಗಿ’ ನಿರ್ಣಯವನ್ನು ಅಂಗಿಕರಿಸಿತು.

• ದೇಶದ ಜನತೆಗೆ ಗಾಂಧೀಜಿಯವರು ‘ಮಾಡು ಇಲ್ಲವೆ ಮಡಿ’ ಎನ್ನವ ಸಂದೇಶವಿತ್ತರು.

• ಅಗಷ್ಟ 9 ರಂದು ಇಂಗಲಿಷ್ ಸರಕಾರ ಗಾಂಧೀಜಿ, ನೆಹರು, ವಲ್ಲಭಬಾಯಿ ಪಟೇಲ, ಮೌಲಾನ ಅಬ್ದುಲ್ ಕಲಾಂ ಅಜಾದ್ ಮುಂತಾದ ನಾಯಕರನ್ನು ಬಂಧಿಸಿ ಜೈಲಿನಲ್ಲಿಡಲಾಯಿತು.

• ಕಾಂಗ್ರೇಸ್ ಕಚೇರಿಗಳಿಗೆ ಪೋಲಿಸರು ಬೀಗ ಮುದ್ರೆ ಹಾಕಿದರು.

• ಈ ಸಂದರ್ಭದಲ್ಲಿ ಜಯಪ್ರಕಾಶ ನಾರಾಯಣರು ಚಳುವಳಿಯ ನೇತೃತ್ವ ವಹಿಸಿಕೊಂಡರು. ಚಳುವಳಿ ಹಿಂಸಾತ್ಮಕ ರೂಪ ತಾಳಿತು.

• ಚಳುವಳಿಗಾರರು ಸರ್ಕಾರಿ ಕಟ್ಟಡಗಳನ್ನು ಸುಟ್ಟರು. ರೈಲ್ವೆ ಹಳಿ & ಸೇತುವೆಗಳನ್ನು ಕಿತ್ತು ಹಾಕಿದರು.

• ಟೆಲಿಗ್ರಾಫ್ ತಂತಿ ಕಿತ್ತು ಹಾಕಿದರು. ಸರಾಯಿ ಅಂಗಡಿಗಳ ಮೇಲೆ ಲಗ್ಗೆ ಇಟ್ಟರು. ಬ್ರಿಟಿಷ ಸರ್ಕಾರ ನಡುಗಿತು. ಜೈಲುಗಳು ಸ್ವಾತಂತ್ರ್ಯ ಯೋಧರಿಂದ ತುಂಬಿ ಹೋದವು.


13. ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಸ್ಚಂದ್ರ ಬೋಸ್ರ ಸಾಧನೆಗಳನ್ನು ವಿವರಿಸಿ.

• ಸುಭಾಸ್ ಚಂದ್ರ ಬೋಸ್ರು ಗಾಂಧೀಜಿಯವರೊಂದಿಗಿನ ಭಿನ್ನಾಭಿಪ್ರಾಯದಿಂದ ಕಾಂಗ್ರೇಸ್ನಿಂದ ಹೊರಬಂದು ಫಾರ್ವರ್ಡ್ ಬ್ಲಾಕ್ ಎಂಬ ಹೊಸ ಪಕ್ಷ ಕಟ್ಟಿ ಸ್ವಾತಂತ್ರ್ಯ ಚಳುವಳಿಯನ್ನು ತೀವ್ರಗೊಳಿಸಿದರು.

• ಬ್ರಿಟಿಷ್ ಸರಕಾರ ಕಲ್ಕತ್ತಾದಲ್ಲಿ ಸುಭಾಸರನ್ನು ಗೃಹಬಂಧನದಲ್ಲಿಟ್ಟಾಗ ಜನವರಿ 26 1941 ರಂದು ಅಫಘಾನಿಸ್ತಾನದ ಮುಖಾಂತರ ಜರ್ಮನಿಗೆ ಹೋದರು.

• ಭಾರತ ಸ್ವಾತಂತ್ರ್ಯ ಗಳಿಸಲು ಹಿಟ್ಲರ ಮತ್ತು ಮುಸ್ಸಲೊನಿಯ ಸಹಾಯ ಕೇಳಿದರು.

• ಜರ್ಮನಿಯಿಂದ ನೇತಾಜಿ ಜಲಂತರ್ಗಾಮಿಯ ಮುಖಾಂತರ ಜಪಾನಿಗೆ ತೆರಳಿದರು.

• ಜಪಾನಿನಲ್ಲಿ ರಾಸ್ ಬಿಹಾರಿ ಬೋಸ್ ಎಂಬ ಕ್ರಾಂತಿಕಾರಿಯ ಸಹಾಯ ಪಡೆದು ಇಂಡಿಯನ್ ನ್ಯಾಶನಲ್ ಆರ್ಮಿ ಎಂಬ ಸೈನ್ಯವನ್ನು ಕಟ್ಟಿದರು.

• ಐ ಎನ್ ಎ ಸೈನಿಕರು ಕ್ರಿ ಶ 1943 ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ರಾಷ್ಟ್ರ ದ್ವಜ ಹಾರಿಸಿದರು.

• ಕ್ರಿ ಶ 1944 ರಲ್ಲಿ ಭಾರತದ ಗಡಿ ಪ್ರವೇಶಿಸಿ ಕೋಹಿಮಾ ಮತ್ತು ಇಂಫಾಲ್ಗಳನುಆಕ್ರಮಿಸಿ ಹತ್ತು ಸಾವಿರ ಚದುರ ಮೈಲುಗಳ ಮಣಿಪುರ ಪ್ರದೇಶವನ್ನು ಸ್ವತಂತ್ರಗೊಳಿಸಿದರು.

• ಕ್ರಿ ಶ 1945 ರಲ್ಲಿ 2 ನೇ ಜಾಗತಿಕ ಮಹಾಯುದ್ಧದಲ್ಲಿ ಜಪಾನ ಸೋತಾಗ ಐ ಎನ್ ಎ ಗೆ ಹಿನ್ನೆಡೆಯಾಯಿತು.

• ದೃತಿಗೆಡದ ಸುಭಾಸರು ಮುಂದಿನ ಕಾರ್ಯತಂತ್ರ ರೂಪಿಸಲು 1945 ರ ಅಗಷ್ಟನಲ್ಲಿ’Àಲ್ಲಿ ಮಂಚೂರಿಯಾಕ್ಕೆ ಪ್ರಯಾಣಿಸುತ್ತಿದ್ದಾಗ ವಿಮಾನ ಅಪಘಾತದಲ್ಲಿ ಹುತಾತ್ಮರಾದರು.


14. ಗಾಂಧಿಜಿಯವರು ಆರಂಭಿಸಿದ ಅಸಹಕಾರ ಚಳುವಳಿಯು

ಸ್ವಾತಂತ್ರ್ಯ ಚಳುವಳಿಯನ್ನು ತೀವ್ರಗೊಳಿಸಿದ ಬಗೆಯನ್ನು ವಿವರಿಸಿ.

• ಕ್ರಿ ಶ 1920 ರಲ್ಲಿ ಗಾಂಧೀಜಿಯವರು ಅಸಹಕಾರ ಚಳುವಳಿಗೆ ಕರೆಕೊಟ್ಟರು.

• ಭಾರತೀಯರು ಇಂಗ್ಲಿಷರು ನೀಡಿದ್ದ ಬಿರುದುಗಳನ್ನು & ಪುರಸ್ಕಾರಗಳನ್ನು ಸರ್ಕಾರಕ್ಕೆ ಹಿಂತಿರುಗಿಸಿದರು.

• ವಕೀಲರು ತಮ್ಮ ವಕೀಲಿ ವೃತ್ತಿ ತ್ಯಜಿಸಿ ಚಳುವಳಿಗೆ ದುಮುಕಿದರು.

• ಸಾವಿರಾರು ಶಾಲಾ ಕಾಲೇಜು ವಿದ್ಯಾರ್ಥಿಗಳು ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಹಿಸ್ಕರಿಸಿದರು.

• ದೇಶಾದ್ಯಂತ ರಾಷ್ಟ್ರೀಯ ಶಾಲೆಗಳು ಆರಂಭಗೊಂಡವು.

• ಗಾಂಧೀಜಿಯವರು ಸ್ವದೇಶಿ ವಸ್ತುಗಳ ಸ್ವೀಕಾರ & ವಿದೇಶಿ ವಸ್ತುಗಳ ಬಹಿಸ್ಕಾರಕ್ಕೆ ಕರೆಕೊಟ್ಟರು.

• ಚಳುವಳಿಗಾರರು ಸರಾಯಿ ಅಂಗಡಿಗಳ ಮುಂದೆ ಪಿಕೆಟಿಂಗ್ ನಡೆಸಿದರು.

• ಇಂತಹ ಸಂದರ್ಭದಲ್ಲಿ ಉತ್ತರಪ್ರದೇಶದ ಚೌರಿಚೌರಾ ಎಂಬಲ್ಲಿ ಚಳುವಳಿಗಾರರು ಮತ್ತು ಪೋಲಿಸರ ಮಧ್ಯೆ ಸಂಘರ್ಷವಾಯಿತು ಇದರಲ್ಲಿ 22 ಜನ ಪೋಲಿಸರು ಸಜೀವ ದಹನವಾದರು.

• ಇದರಿಂದ ಮನನೊಂದ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು.

15. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬುಡಕಟ್ಟುವರ್ಗಗಳ ಬಂಡಾಯವನ್ನು ವಿವರಿಸಿ.

• ಬಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯಲ್ಲಿ ಜಾರಿಗೆ ತಂದ ಕಂದಾಯ ಮತ್ತು ಅರಣ್ಯ ನೀತಿಗಳು ಬುಡಕಟ್ಟು ದಂಗೆಗೆ ನೇರವಾಗಿ ಪ್ರೇರಣೆಯಾದವು.

• ಬುಡಕಟ್ಟು ಬಂಡಾಯಗಳಲ್ಲಿ ಸಂತಾಲರ ದಂಗೆ, ಮುಂಡ ಚಳುವಳಿ ಪ್ರಮುಖವಾಗಿವೆ.

• ಕರ್ನಾಟಕದಲ್ಲಿ ಹಲಗಲಿಯ ಬೇಡರ ಬಂಡಾಯವು ಪ್ರಮುಖವಾದುದು.

• ಇಂಗ್ಲಿಷರು ಜಾರಿಗೆ ತಂದ ಖಾಯಂ ಜಮಿನ್ದಾರಿ ಪದ್ದತಿಯಿಂದ ಸಂತಾಲ ಬುಡಕಟ್ಟು ಜನರು ನಿರ್ಗತಿಕರಾದರು.

• ಬುಡಕಟ್ಟು ಜನರ ಜಮೀನು ಜಮಿನ್ದಾರರ ಕೈ ಸೇರಿತು. ಇದರಿಂದ ಅಸಮಧಾನಗೊಂಡ ಸಂತಾಲರು ರಹಸ್ಯ ಸಭೆಗಳನ್ನು ನಡೆಸಿ ಜಮೀನ್ದಾರರನ್ನು & ಮಹಾಜನರನ್ನು ಲೂಟಿ ಮಾಡಲು ನಿರ್ಧರಿಸಿದರು. ದಂಗೆಯು ತೀª್ರÀವಾಯಿತು.

• ಬುಡಕಟ್ಟು ಜನರು ಶತ್ರುಗಳನ್ನು ಹತ್ಯೆ ಮಾಡಿದರು.

• ಜಮೀನ್ದಾರರು, ಲೇವಾದೇವಿಗಾರರು ಪಲಾಯನ ಮಾಡಿದರು.

• ಸಂತಾಲರ ದಂಗೆಯನ್ನು ಬಿಚಿಟಿμಂgಂಂ ಸೈನ್ಯವನ್ನು ಬಳಸಿ ಹತ್ತಿಕ್ಕಿದರು.


16. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ರೈತರ & ಕಾರ್ಮಿಕರ ಪ್ರತಿಭಟನೆಗಳ ಪಾತ್ರವನ್ನು ವಿವರಿಸಿ.

• ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಜಮೀನ್ದಾರರು ವಸೂಲಿ ಮಾಡುತ್ತಿದ್ದ ಭೂಕಂದಾಯದ ವಿರುದ್ಧ ರೈತರು ದಂಗೆಯೆದ್ದರು.

• ತೆಲಂಗಾಣದ ರೈತ ಹೋರಾಟವು ಜಮೀನ್ದಾರರು ಹಾಗೂ ನಿಜಾಮನ ರಜಾಕಾರರ ವಿರುದ್ಧ ಪ್ರತಿಭಟಿಸಿತು.

• ಬಂಗಾಳದ ರೈತರು ಜಮೀನ್ದಾರರ ಶೋಷಣೆ ವಿರುದ್ಧ ದಂಗೆ ಎದ್ದರು.

• ಮಹಾರಾಷ್ಟ್ರದಲ್ಲಿ ರೈತರು ಕಡಿಮೆ ಕೂಲಿ ವಿರುದ್ಧ ಚಳುವಳಿ ನಡೆಸಿದರು.

• ರೈಲ್ವೆ ಕೂಲಿಗಳು ರೈಲು ನಿಲ್ದಾಣಗಳಲ್ಲಿ ªಂಂಂμಂIgಂ ನಡೆಸಿ ಹೆಚ್ಚಿನ ಕೂಲಿಗಾಗಿ ಇಂಗ್ಲಿಷ ಅಧಿಕಾರಿಗಳ ವಿರುದ್ಧ WಇಂಂμಂuಇUಂಳನ್ನು ಕೂಗಿದರು.

• ಕಲ್ಕತ್ತದಲ್ಲಿ ಪ್ರಿಂಟರ್ಸ್ ಯುನಿಯನ್ & ಬಾಂಬೆಯಲ್ಲಿ ಬಟ್ಟೆ ಗಿರಣಿ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಇಂಗ್ಲಿಷ್ ಸರ್ಕಾರದ ವಿರುದ್ಧ ಹೋರಾಟದ ಹಾದಿ ಹಿಡಿದರು.


17. ಹೋಲೊಕಾಸ್ಟ್ (ಹತ್ಯಾಕಾಂಡ) ಎಂದರೇನು?

ಜಲಿವಾಲಾಬಾಗನಲ್ಲಿ ಬ್ರಿಟಿಷರು ಯಾವ ಮುನ್ಸೂಚನೆ ನೀಡದೆ ಶಾಂತಿಯುತವಾಗಿ ಪ್ರತಿಭಟನಾ ಸಭೆ ಸೇರಿದ್ದ ಜನರ ಮೇಲೆ ಅಮಾನುಷವಾಗಿ ಗುಂಡಿನ ಮಳೆಗರೆದರು. ಈ ಘಟನೆಯನ್ನು ಹತ್ಯಾಕಾಂಡ ಎಂದು ಕರೆಯಲಾಗುತ್ತದೆ.



18. ಭಾರತದ ವಿಭಜನೆ ಅನಿವಾರ್ಯವಾಗಿತ್ತೇ? ವಿಮರ್ಶಿಸಿ.

• ಸ್ವಾತಂತ್ರ್ಯ ಚಳುವಳಿಯ ಉದ್ದಕ್ಕೂ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಖಂಡ ರಾಷ್ಟ್ರದ ಕಲ್ಪನೆಯನ್ನು ಹೊಂದಿತ್ತು.

• ಮಹಮ್ಮದ್ ಅಲಿ ಜಿನ್ನಾ ಅವರು ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮಂಡಿಸುತ್ತಲೇ ಇದ್ದರು.

• 1940 ರಲ್ಲಿ ನಡೆದ ಮುಸ್ಲಿಂ ಲೀಗ್ನ ಲಾಹೋರ್ ಅಧಿವೇಶನದಲ್ಲಿ ಜಿನ್ನಾ ಹಿಂದೂ ಮತ್ತು ಮುಸ್ಲಿಮರು ಒಂದು ದೇಶವಾಗಲು ಸಾಧ್ಯವೇ ಇಲ್ಲ ಎಂದು ಘೋಷಿಸಿದರು.

• ಎರಡನೇ ಮಹಾಯುದ್ದದ ನಂತರ ಬ್ರಿಟನ್ನಲ್ಲಿ ಅಧಿಕಾರಕ್ಕೆ ಬಂದ ಲೇಬರ್ ಪಕ್ಷವು ಕ್ಯಾಬಿನೇಟ್ ನಿಯೋಗವನ್ನು ಭಾರತಕ್ಕೆ ಸ್ವಯಂ ಅಧಿಕಾರವನ್ನು ನೀಡುವ ಕುರಿತು ಕಳುಹಿಸಿತು.

• ಈ ನಿಯೋಗವು ಅವಿಭಾಜ್ಯ ಭಾರತ ಮತ್ತು ಒಂದೇ ಶಾಸನ ಸಭೆಯು ಇರತಕ್ಕದೆಂದು ಶಿಫಾರಸ್ಸು ಮಾಡಿತು.

• ಕ್ಯಾಬಿನೆಟ್ ನಿಯೋಗದ ವರದಿಯನ್ನು ಜಿನ್ನಾ ತಿರಸ್ಕರಿಸಿ ಮುಸ್ಲಿಮರಿಗಾಗಿ ಪ್ರತ್ಯೇಕ ರಾಷ್ಟ್ರ ರಚಿಸಲು ಅಗಷ್ಟ 16 1946 ರಂದು ಎಲ್ಲಾ ಮುಸ್ಲಿಂರು ‘ನೇರ ಕಾರ್ಯಾಚರಣೆ ದಿನ’ವನ್ನುª Àಆಚರಿಸಬೇಕೆಂದು ಕರೆಕೊಟ್ಟರು.

• ದೇಶಾದಾಂದ್ಯಂತ ಕೋಮುಗಲಭೆಗಳು ನಡೆದು ಸಾವುನೋವುಗಳು ಉಂಟಾದವು.

• ಬ್ರಿಟನ್ ಸರ್ಕಾರವು 1946 ರ ಮಾರ್ಚನಲ್ಲಿ ಲಾರ್ಡ ಮೌಂಟ್ ಬ್ಯಾಟನ್ ಅವರನ್ನು ಭಾರತಕ್ಕೆ ವೈಸರಾಯ್ ಆಗಿ ಕಳುಹಿಸಿತು.

• ಬ್ಯಾಟನ್ರವರು ಗಾಂಧೀಜಿ, ಜಿನ್ನಾ ಮತ್ತಿತರ ನಾಯಕರೊಂದಿಗೆ ಮಾತುಕತೆ ನಡೆಸಿ ಭಾರತವನ್ನು ವಿಭಜಿಸುವ ಯೋಜನೆಯನ್ನು ರೂಪಿಸಿದರು.

• ಭಾರತ ಅಧಿಕೃತವಾಗಿ ಅಗಷ್ಟ 15 1947 ರಂದು ವಿಭಜನೆಯಾ¬ತು.


19. ಸಾಮಾಜಿಕ ಸಮಾನತೆ ತರುವಲ್ಲಿ ಬಿ.ಆರ್. ಅಂಬೇಡ್ಕರರು

ವಹಿಸಿದ ಪಾತ್ರ ಗಮನಾರ್ಹವಾದುದು. ಈ ಹೇಳಿಕೆಯನ್ನು 

ಸಮರ್ಥಿಸಿ.

• ಸಾಮಾಜಿಕ ಸ್ವಾತಂತ್ರ್ಯವಿಲ್ಲದ ರಾಜಕೀಯ ಸ್ವಾತಂತ್ರ್ಯವು ಅರ್ಥಹೀನ ಎಂದು ಡಾ. ಬಿ.ಆರ್. ಅಂಬೇಡ್ಕರರು ಬಲವಾಗಿ ನಂಬಿದ್ದರು.

• ಇವರು ಜಾತಿ ವ್ಯವಸ್ಥೆಯ ಬಗ್ಗೆ ಅಧ್ಯಯನ ನಡೆಸಿ ಅದರ ವಿನಾಶಕ್ಕೆ ಹೋರಾಟಗಳನ್ನು ರೂಪಿಸಿದರು.

• ಅಸ್ಪøಶ್ಯರು ಕನಿಷ್ಟ ಮಟ್ಟದ ಅವಕಾಶಗಳಿಂದ ವಂಚಿತವಾಗಿರುವದನ್ನು ನಿರೂಪಿಸಲು ‘ಮಹದ್’ ಮತ್ತು

• ‘ಕಾಲಾರಾಂ’ ದೇವಾಲಯ ಚಳುವಳಿಗಳನ್ನು ರೂಪಿಸಿದರು.

• ಅಸ್ಪøಶ್ಯರ ರಕ್ಷಣೆಗಾಗಿ ಪ್ರತ್ಯೇಕ ಮತಕ್ಷೇತ್ರಗಳನ್ನು ಬಯಸಿದ್ದು ಗಾಂಧಿ & ಅಂಬೇಡ್ಕರರ ನಡುವೆ ವಿವಾದಕ್ಕೂ ಕಾರಣವಾಯಿತು.

• ಇವರು ಪ್ರಭುದ್ಧ ಭಾರತ, ಜನತಾ, ಮೂಕನಾಯಕ & ಬಹಿಷ್ಕøತ ಭಾರತ ಪತ್ರಿಕೆಗಳನ್ನು ಹೊರಡಿಸಿದರು.

• ಭಾರತದ ಸಂವಿಧಾನದಲ್ಲಿ ಸಮಾನತೆಯನ್ನು ಪ್ರತಿಪಾದಿಸಿ ಅಸ್ಪøಶ್ಯತಾ ಆಚರಣೆಯ ವಿರುದ್ಧ ಕಾನೂನಿನ ರಕ್ಷಣೆಯನ್ನು ಒದಗಿಸಿದರು

logoblog

Thanks for reading ಸ್ವಾತಂತ್ರ್ಯ ಹೋರಾಟ

Previous
« Prev Post

1 comment:

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

    ReplyDelete