Friday, 27 November 2020

ಕೋಶ ವಿಭಜನೆ

Admin       Friday, 27 November 2020

    ಪಾಠ : ಕೋಶ ವಿಭಜನೆ

1) ಕಲಿಕಾಂಶಗಳು/ಪರಿಕಲ್ಪನೆಗಳು

* ಎಲ್ಲಾ ಜೀವಿಗಳ ಅಸ್ತಿತ್ವಕ್ಕೆ ಕಾರಣವಾದ ಕೋಶವಿಭಜನೆಯ ಮಹತ್ವ
* ನಿತ್ಯ ಜೀವನದಲ್ಲಿ ಕೋಶ ವಿಭಜನೆಯ ಗುರುತಿಸುವಿಕೆ
* ಕೋಶ ವಿಭಜನೆಯ 2 ವಿಧಗಳು

        ಚ ) ಮೈಟಾಸಿಸ್
        ಛ) ಮಿಯಾಸಿಸ್

* ಕಾಯಜ ಮತ್ತು ಸಂತಾನೋತ್ಪತ್ತಿ ಜೀವಕೋಶಗಳ ನಡುವಿನ ವ್ಯತ್ಯಾಸ
* ಮೈಟಾಸಿಸ್ ಮತ್ತು ಮಿಯಾಸಿಸ್ ಕೋಶ ವಿಭಜನೆಯ ವಿವಿಧ ಹಂತಗಳು
* ಜೀವಿಗಳಲ್ಲಿ ಮೈಟಾಸಿಸ್ನ ಪಾತ್ರ
* ಲೈಂಗಿಕ ಸಂತಾನೋತ್ಪತ್ತಿಯಲ್ಲಿ ಮಿಯಾಸಿಸ್ ಪಾತ್ರ
* ಮಿಯಾಸಿಸ್ ಮತ್ತು ಮಿಯಾಸಿಸ್ ಗಳ ನಡುವೆ ಇರುವ ವ್ಯತ್ಯಾಸಗಳು
* ಮೈಟಾಸಿಸ್ ಮತ್ತು ಮಿಯಾಸಿಸಗಳಿಗಿರುವ ಮುಖ್ಯ ವ್ಯತ್ಯಾಸಗಳು

2) ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು

* ಜೀವಿಗಳಲ್ಲಿ ಉಂಟಾಗುವ ಕೋಶ ವಿಭಜನೆಯನ್ನು ಗುರುತಿಸಿ ಅದರ ಅಗತ್ಯವನ್ನು ಮನಗಾಣುವುದು
* ಕಾಯಜ ಮತ್ತು ಸಂತಾನೋತ್ಪತ್ತಿ ಜೀವಕೋಶಗಳ ವ್ಯತ್ಯಾಸ ತಿಳಿಯುವುದು
* ಮೈಟಾಸಿಸ್ ಮತ್ತು ಮಿಯಾಸಿಸ್ನ ಪಾತ್ರಗಳನ್ನು ಪ್ರಶಂಸಿಸುವುದು
* ಮೈಟಾಸಿಸ್ ಮತ್ತು ಮಿಯಾಸಿಸ್ನ ವಿವಿಧ ಹಂತಗಳನ್ನು ಗುರುತಿಸುವುದು
* ಮಿಯಾಸಿಸ್ನಲ್ಲಿ ಉಂಟಾಗುವ ಜೀನ್ಗಳ ಅಡ್ಡಹಾಯುವಿಕೆಯಿಂದಾಗುವ ಅನುವಂಶೀಯ ಹೋಲಿಕೆ           ಹಾಗೂ ವ್ಯತ್ಯಾಸಗಳನ್ನು ಮೆಚ್ಚುವುದು
* ಮಿಯಾಸಿಸ್ ಮತ್ತು ಮಿಯಾಸಿಸ್ ಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸುವುದು.
* ಮೈಟಾಸಿಸ್ ಮತ್ತು ಮಿಯಾಸಿಸ್ ನಡುವಿನ ವ್ಯತ್ಯಾಸಗಳನ್ನು ತಿಳಿಯುವುದು

3) ಘಟಕಕ್ಕೆ ಮುನ್ನ ಪೂರ್ವ ಸಿದ್ಧತೆಗಳು

* ಸತತ 7 ದಿನಗಳ ಕಾಲಾವಧಿಯಲ್ಲಿ ಒಂದೇ ಬಗೆಯ ಬೀಜಗಳನ್ನು ಪ್ರತಿದಿನ ಬೇರೆ ಬೇರೆ ಪಾತ್ರೆಗಳಲ್ಲಿ ನೆನೆಯಿಟ್ಟು ಬೆಳವಣಿಗೆ ಹಂತದಲ್ಲಿರುವ ಮೊಳಕೆಗಳನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸುವುದು.  (ಪಾತ್ರೆಯ ಮೇಲೆ ಬೀಜ ನೆನೆಯಿಟ್ಟ ದಿನಾಂಕವನ್ನು ನಮೂದಿಸುವುದು)
* ಮೈಟಾಸಿಸ್, ಮಿಯಾಸಿಸ್ ಕೋಶ ವಿಭಜನೆಯ ವಿವಿಧ ಹಂತಗಳನ್ನು ತೋರಿಸಲು ಈ ಕೆಳಕಂಡ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿರುವುದು

a) ಮೈಕ್ರೊಸ್ಕೋಪ್/ (ಸೂಕ್ಷ್ಮದರ್ಶಕ ಯಂತ್ರ)
b) ಪರಮನೆಂಟ್ ಸ್ಲೈಡುಗಳು (ಮೈಟಾಸಿಸ್ ಮಿಯಾಸಿಸ್ ಕೋಶ ವಿಭಜನೆಯ ಹಂತಗಳುಳ್ಳ)
c) ಚಿತ್ರಪಟಗಳು
d) ಈರುಳ್ಳಿ ಬೇರಿನ ತುದಿಗಳು
e) ಈರುಳ್ಳಿಯ ಹೂವುಗಳು (ಸಾಧ್ಯವಾದಲ್ಲಿ ರಿಯೋ ಅಥವಾ Ocnothera ಸಸ್ಯದ ಹೂ                     ಸಂಗ್ರಹಣೆ)
f)Acetocarmine ದ್ರಾವಣ
g) ಪೆಟ್ರಿ ಡಿಶ್ಗಳು
h) ಖಾಲಿ ಇರುವ ಕಟಚಿಟಿ ಸೈಡುಗಳು
i) ಕವರ ಸ್ಲಿಪ್ಗಳು
j) Needle(ಸೂಜಿ)
k) ಬ್ಲೇಡ್

* ಮೈಟಾಸಿಸ್ ಮತ್ತು ಮಿಯಾಸಿಸ್ ಕೋಶ ವಿಭಜನೆಯ ಎಲ್ಲಾ ಹಂತಗಳನ್ನು ತೋರಿಸುವ ಚಿತ್ರವುಳ್ಳ ಮತ್ತು ಅವುಗಳ ಗುಣಲಕ್ಷಣಗಳುಳ್ಳ Flash Card   ಗಳನ್ನು ರಚಿಸಿಕೊಂಡಿರುವುದು
* ಮೈಟಾಸಿಸ್ ಮತ್ತು ಮಿಯಾಸಿಸ್ಗಳಿಗಿರುವ ಮುಖ್ಯ ವ್ಯತ್ಯಾಸಗಳುಳ್ಳ ಚಿತ್ರಪಟವನ್ನು                         ಸಂಗ್ರಹಿಸಿಡುವುದು
* ವಿವಿಧ ಬಗೆಯ ಹೂಗಳನ್ನು ಸಂಗ್ರಹಿಸಿಟ್ಟುಕೊಂಡಿರುವುದು

4) ಕಲಿಕಾ ಚಟುವಟಿಕೆಗಳು

* ತರಗತಿ ವಿದ್ಯಾಗಳನ್ನು ತಂಡಗಳಾಗಿ ವಿಂಗಡಿಸಿ ಒಂದೊಂದು ತಂಡಕ್ಕೂ ಸಂಗ್ರಹಿಸಿರುವ ಮೊಳಕೆಗಳ ಅಳತೆಯಲ್ಲಾದ ವ್ಯತ್ಯಾಸವನ್ನು ಗಮನಿಸಿ ಚರ್ಚಿಸಲು ತಿಳಿಸುವುದು.
* ಶಾಲೆಯ ಆವರಣದಲ್ಲಿರುವ ವಿಧ ವಿಧದ ಸಸ್ಯಗಳನ್ನು ಗಮನಿಸಿ, ಅವುಗಳ ಅಳತೆಯನ್ನು ದಾಖಲಿಸಿ (ಎತ್ತರವನ್ನು ಅಳತೆ ಪಟ್ಟಿಯ ಸಹಾಯದಿಂದ) ಅಳತೆಯಲ್ಲಿರುವ ವ್ಯತ್ಯಾಸಕ್ಕೆ ಕಾರಣ ನೀಡಲು ತಿಳಿಸುವುದು. ಹೀಗೆ ಇದೇ ರೀತಿಯಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಎತ್ತರದಲ್ಲಾದ ವ್ಯತ್ಯಾಸಗಳಿಗೆ ಸಮರ್ಥನೆ ನೀಡಲು ತಿಳಿಸುವುದು. 
* ಹೀಗೆ ಅನುಗಮನ ಪದ್ಧತಿಯಲ್ಲಿ ಪ್ರಶ್ನಾವಳಿಯನ್ನು ರಚಿಸುವುದು.
* ಚಿತ್ರಪಟ, ಶಾಶ್ವತ ಸ್ಲೈಡ್ಗಳ (Permanent Slide) ಸಹಾಯದಿಂದ ಮೈಟಾಸಿಸ್ ಮತ್ತು ಮಿಯಾಸಿಸ್ ಕೋಶ ವಿಭಜನೆಯ ಎಲ್ಲಾ ಹಂತಗಳು ಮತ್ತು ಪ್ರತಿ ಹಂತದಲ್ಲೂ ಕಂಡುಬಂದ ವಿಶಿಷ್ಟ ಗುಣಲಕ್ಷಣಗಳನ್ನು ಗಮನಿಸಿ ದಾಖಲು ಮಾಡಲು ತಿಳಿಸುವುದು.
* ಸಂಗ್ರಹಿಸಿರುವ ವಸ್ತುಗಳ ಸಹಾಯದಿಂದ ಮೈಟಾಸಿಸ್ ಮತ್ತು ಮಿಯಾಸಿಸ್ನ ತಾತ್ಕಾಲಿಕ ಸ್ಲೆ ಡ್ (Temporary Slide)ಗಳನ್ನು ತಯಾರಿಸಲು ತಿಳಿಸುವುದು.
Flash  Cardನಲ್ಲಿರುವ ಮೈಟಾಸಿಸ್ ಮತ್ತು ಮಿಯಾಸಿಸ್ನ ವಿವಿಧ ಹಂತಗಳ ಚಿತ್ರಗಳಿಗನುಗುಣವಾಗಿ ಅವುಗಳ ಗುಣಲಕ್ಷಣಗಳುಳ್ಳ ಈಟಚಿ ಅಚಿಡಿಜ ಗಳಿಗೆ ಹೊಂದಿಸುವಂತೆ ತಿಳಿಸುವುದು.
* ಮೈಟಾಸಿಸ್ ಮತ್ತು ಮಿಯಾಸಿಸ್ಗಳಿಗಿರುವ ವ್ಯತ್ಯಾಸಗಳನ್ನು ಪಟ್ಟಿಮಾಡುವಂತೆ ಸೂಚಿಸುವುದು.
* ಸಂಗ್ರಹಿಸಿರುವ ಹೂವಿನ ಹೆಣ್ಣು ಮತ್ತು ಗಂಡು ಸಂತಾನೋತ್ಪತ್ತಿ ಭಾಗಗಳನ್ನು ಗುರುತಿಸಲು ತಿಳಿಸುವುದು.
* ಮೈಟಾಸಿಸ್ ಮತ್ತು ಮಿಯಾಸಿಸ್ನ ಉಪಯೋಗಗಳನ್ನು ಚಚರ್ಿಸುವಂತೆ ತಿಳಿಸುವುದು.

5) ಕಲಿಕೆಗೆ ಅನುಕೂಲಿಸುವ ವಿಧಾನಗಳು


* ಸಾಧ್ಯವಿದ್ದಲ್ಲಿ ಅಂತಲ ಸಹಾಯದಿಂದ ಮೈಟಾಸಿಸ್ ಮತ್ತು ಮಿಯಾಸಿಸ್ನ Video ಗಳನ್ನು Downloaಮಾಡಿ PPT ರಚಿಸಿ, ಪ್ರಕ್ಷೇಪಕದ (Projector) ಮೂಲಕ ಮೈಟಾಸಿಸ್ ಮತ್ತು ಮಿಯಾಸಿಸ್ ಕೋಶ ವಿಭಜನೆಯಾಗುವಾಗ ಜರಗುವ ಕ್ರಿಯೆಗಳನ್ನು ತೋರಿಸುವುದು.
* ಕೋಶ ವಿಭಜನೆ ಹಂತಗಳು ಮತ್ತು ಅವುಗಳಿಗೆ ಸಂಬಂಧಿಸಿದ ಗುಣಲಕ್ಷಣಗಳಿಗೆ ಸಂಬಂಧಪಟ್ಟಂತೆ ರಸಪ್ರಶ್ನೆ ಏರ್ಪಡಿಸುವುದು. 
* ಅಂಗಾಂಶ ಕೃಷಿ, ಜೈವಿಕ ತಂತ್ರಜ್ಞಾನ ತಳಿ ಇಂಜಿನಿಯರಿಂಗ್ ಪ್ರಯೋಗಾಲಯಗಳಿಗೆ ಭೇಟಿ ಕೊಟ್ಟು ಕೋಶ ವಿಭಜನೆಯುಂಟಾಗುವುದನ್ನು ನೇರವಾಗಿ Electronic Microscope ಮೂಲಕ ವೀಕ್ಷಿಸುವಂತೆ ಅವಕಾಶ ಕಲ್ಪಿಸುವುದು.
* ಜೈವಿಕ ತಂತ್ರಜ್ಞಾನದಲ್ಲಿ ಕೋಶ ವಿಭಜನೆಯ ಮಹತ್ವದ ಪಾತ್ರದ ಬಗ್ಗೆ ಅಂತರ್ಜಾಲ, ಗ್ರಂಥಾಲಯ ಪುಸ್ತಕಗಳ ಮೂಲಕ ಮಾಹಿತಿ ಸಂಗ್ರಹಿಸುವುದು.
* ಕೋಶ ವಿಭಜನೆ ಮೀತಿ ಮೀರಿ ಉಂಟಾದರೆ ಅದರಿಂದ ಉಂಟಾಗುವ ತೊಂದರೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು.

6) ಮೌಲ್ಯಮಾಪನ ಚಟುವಟಿಕೆಗಳು

* ಕೋಶ ವಿಭಜನೆಯ ಹಂತಗಳನ್ನು ಹೊಂದಿರುವ ಕಾರ್ಡುಗಳನ್ನು ತೋರಿಸಿ ಅವುಗಳನ್ನು ಗುರುತಿಸಲು ತಿಳಿಸಿ ಅವರ ಸಾಮಥ್ರ್ಯ ಪರಿಶೀಲಿಸುವುದು (ಹಂತಗಳನ್ನು ಅನುಕ್ರಮವಾಗಿ ಪ್ರದರ್ಶಿಸಕೂಡದು) 
* ಜೀವಕೋಶಗಳ ವೃದ್ಧಿ ಇಡೀ ದೇಹದಲ್ಲಿ ಏಕರೂಪದಲ್ಲಿ ಆಗುವುದಿಲ್ಲ ಏಕೆ?
* ಮೈಟಾಸಿಸ್ನಲ್ಲಿ ಮೂಲ ಜೀವಕೋಶ ಉಳಿಸಿಕೊಂಡು ಅಂತಹದೇ ಇನ್ನೊಂದು ಜೀವಕೋಶ ಸೃಷ್ಟಿಯಾಗಲು ಕಾರಣವೇನು?
* ಕೋಶ ವಿಭಜನೆಯ ತುಂಬಾ ವಿಳಂಬವಾದ ಮತ್ತು ಅನಿಯಂತ್ರಿತ ಸಂದರ್ಭಗಳಲ್ಲಿ ಉಂಟಾಗುವ ಅಪಾಯಗಳೇನು?
* ಮೈಟಾಸಿಸ್ನ ಉಪಯೋಗಗಳನ್ನು ಪಟ್ಟಿಮಾಡಿ.
* ಮಿಯಾಸಿಸ್ ಕೋಶ ವಿಭಜನೆ ದೇಹದ ಯಾವ ಭಾಗದಲ್ಲಿ ನಡೆಯುತ್ತದೆ ಮತ್ತು ಏಕೆ?
* ಸಸ್ಯ ಮತ್ತು ಪ್ರಾಣಿಗಳಲ್ಲಿ ಉಂಟಾದ ಗಾಯಗಳು ಗುಣ ಹೊಂದುವುದು ಹೇಗೆ?
* ಮೈಟಾಸಿಸ್ ಮತ್ತು ಮಿಯಾಸಿಸ್ ಕೋಶ ವಿಭಜನೆಯ ಹಂತಗಳನ್ನು ಬರೆದು ಅವುಗಳ ಲಕ್ಷಣಗಳನ್ನು ಪಟ್ಟಿಮಾಡಿ.
* ಮಿಯಾಸಿಸ್ ಮತ್ತು ಮಿಯಾಸಿಸ್ ಗಳ ನಡುವೆ ಇರುವ ವ್ಯತ್ಯಾಸಗಳನ್ನು ಪಟ್ಟಿ ಮಾಡಿ. 
* ಮೈಟಾಸಿಸ್ ಮತ್ತು ಮಿಯಾಸಿಸ್ಗಳಿಗಿರುವ 4 ವ್ಯತ್ಯಾಸಗಳನ್ನು ಬರೆಯಿರಿ.
* ಮಿಯಾಸಿಸ್ ಕೋಶ ವಿಭಜನೆ ಇಲ್ಲವಾದಲ್ಲಿ ಸಂತಾನೋತ್ಪತ್ತಿ ಸಾಧ್ಯವೇ? ಹಾಗಾದರೆ ಹೇಗೆ? ಮತ್ತು ಜನಿಸಿದ ಜೀವಿಗಳ ರೂಪ ಲಕ್ಷಣಗಳು ಹೇಗಿರಬಹುದು? ಆಲೋಚಿಸಿ, ಚರ್ಚಿಸಿ.

logoblog

Thanks for reading ಕೋಶ ವಿಭಜನೆ

Previous
« Prev Post

No comments:

Post a Comment