ಪಾಠ : ಆಹಾರ
1) ಕಲಿಕಾಂಶಗಳು/ಪರಿಕಲ್ಪನೆಗಳು
* ಆಹಾರ ಸಂರಕ್ಷಣೆ ಹಾಗೂ ಸಂಗ್ರಹಣೆಯ ಮಹತ್ವ
* ಆಹಾರದಲ್ಲಿರುವ ಘಟಕಗಳ ವರ್ಗಿಕರಣ ತ ನ್ಯೂನತಾ ಕಾಯಿಲೆ ಲಕ್ಷಣ ಮತ್ತು ಕಾರಣ ತ ಆಹಾರ ಸಂರಕ್ಷಣೆಯ ವಿಧಾನಗಳು
* ಆಹಾರ ಕಲಬೆರಕೆ ಅರ್ಥ
* ಆಹಾರ ಕಲಬೆರಕೆಯ ದುಷ್ಪರಿಣಾಮಗಳು ಮತ್ತು ದುಷ್ಪರಿಣಾಮಗಳನ್ನು ಪತ್ತೆ ಹಚ್ಚುವ ಪ್ರಯೋಗಗಳು
* ಆಹಾರ ಕಲಬೆರಕೆ ನಿಯಂತ್ರಣ ಸಂಸ್ಥೆ ಹಾಗೂ ನಿಯಂತ್ರಿಸುವಲ್ಲಿ ನಮ್ಮ ಪಾತ್ರ
2) ಮನನ ಮಾಡಿಕೊಳ್ಳಲೇ ಬೇಕಾದ ಅಂಶಗಳು
* ಆಹಾರವನ್ನು ಅವು ಹೊಂದಿರುವ ಘಟಕಗಳ ಆಧಾರದ ಮೇಲೆ ವರ್ಗಿಕರಿಸುವುದು
* ನ್ಯೂನತಾ ಕಾಯಿಲೆ ಲಕ್ಷಣ ಮತ್ತು ಕಾರಣವನ್ನು ಗುರುತಿಸುವುದು
* ಆಹಾರ ಸಂರಕ್ಷಣೆಯ ಹಾಗೂ ಸಂಗ್ರಹಣೆಯ ಮಹತ್ವವನ್ನು ವಿವರಿಸುವುದು ಮತ್ತು ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದು
* ಆಹಾರ ಕಲಬೆರಕೆಯ ಅರ್ಥ ತಿಳಿಯುವುದು
* ಆಹಾರ ಕಲಬೆರಕೆಯ ದುಷ್ಪರಿಣಾಮ ಪತ್ತೆ ಹಚ್ಚಲು ಇರುವ ಪ್ರಯೋಗಗಳನ್ನು ನಿರ್ವಹಿಸುವುದು
* ಆಹಾರ ಕಲಬೆರಕೆ ನಿಯಂತ್ರಣ ಸಂಸ್ಥೆ ಹಾಗೂ ಕಲಬೆರಕೆಯನ್ನು ನಿಯಂತ್ರಿಸುವಲ್ಲಿ ನಮ್ಮ ಪಾತ್ರ ಗುರುತಿಸಿ ಮನನ ಮಾಡಿಕೊಳ್ಳುವುದು. ಹಾಗೂ ಸಂಸ್ಥೆಗಳ ಬಗ್ಗೆ ಅರಿಯುವುದು.
* ಆಹಾರ ಕೆಡಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡುವುದು.
* ಮನೆಯಲ್ಲಿ ಆಹಾರ ಪರೀಕ್ಷೆ ಮಾಡುವ ಕೌಶಲ್ಯ ಬೆಳೆಸುವುದು.
3) ಘಟಕಕ್ಕೆ ಮುನ್ನ ಪೂರ್ವ ಸಿದ್ಧತೆಗಳು
* ವಿವಿಧ ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸುವುದು.
* ವಿದ್ಯಾರ್ಥಿಗಳಿಂದ, ಅವರು ತಮ್ಮ ಪರಿಸರದಲ್ಲಿ ಕಂಡು ಬಂದ ರೋಗಗಳ ಹೆಸರುಗಳನ್ನು ಮತ್ತು ಗಮನಿಸಿದ ಅಸಹಜ ದೇಹದ ಸ್ಥಿತಿಗಳನ್ನು ಪಟ್ಟಿ ಮಾಡಿ ಸಂಗ್ರಹಿಸಿಟ್ಟುಕೊಂಡಿರುವುದು.
* ನ್ಯೂನತಾ ಕಾಯಿಲೆಗಳು, ಅವುಗಳಿಗೆ ಕಾರಣಗಳು ಮತ್ತು ಲಕ್ಷಣಗಳುಳ್ಳ ಚಿತ್ರಪಟಗಳನ್ನು ಸಂಗ್ರಹಿಸುವುದು.
* ವಿವಿಧ ರೀತಿಯ ಕೊಳೆತ ಹಣ್ಣುಗಳು, ತರಕಾರಿಗಳು, ಮತ್ತು ಕೆಲವು ದಿನಗಳ ಹಿಂದೆ ಗಾಳಿಯಾಡದ ಮತ್ತು ಗಾಳಿಯಾಡುವ ಡಬ್ಬಗಳಲ್ಲಿ ತೇವಾಂಶ ಪ್ರದೇಶ ಹಾಗೂ ತೇವಾಂಶ ರಹಿತ ಜಾಗದಲ್ಲಿಟ್ಟ ದವಸ ಧಾನ್ಯಗಳು, ಚಪಾತಿ, ರೊಟ್ಟಿ/ಬ್ರೆಡ್ಡುಗಳನ್ನು ಸಂಗ್ರಹಿಸುವುದು.
* ವಿಧ ವಿಧದ ಕಾಳುಗಳನ್ನು, ದವಸ ಧಾನ್ಯಗಳನ್ನು, ಸಿಹಿ ತಿನಿಸುಗಳನ್ನು, ಮಧ್ಯಾಹ್ನದ ಬಿಸಿ ಊಟಕ್ಕೆ ಬಳಸುವ ಎಣ್ಣೆ, ಉಪ್ಪು, ಸಾಸಿವೆ, ಅರಿಶಿಣ ಪುಡಿ ಸಾಧ್ಯವಿದ್ದಲ್ಲಿ ತುಪ್ಪ,ಬೆಣ್ಣೆ, ಹಾಲುನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸುವುದು.
* ರಾಸಾಯನಿಕಗಳಾದ ಹೈಡ್ರೊಕ್ಲೋರಿಕ್ ಆಮ್ಲ, ನೈಟ್ರಿಕ್ ಆಮ್ಲ, ಸಕ್ಕರೆಯನ್ನು ಸಂಗ್ರಹಿಸುವುದು.
* ದುಗ್ಧಮಾಪಕ, ಪ್ರನಾಳ ಹಿಡಿ, ಜಾಡಿ, ಸ್ಪಿರಿಟ್ ದೀಪ, ಸೋಸುಕಾಗದ, ಗಾಜಿನ ತಟ್ಟೆ, ಇತ್ಯಾದಿ ಸಂಗ್ರಹಿಸುವುದು.
* ಸಮತೋಲನ ಆಹಾರ ಹೇಗಿರಬೇಕು? ಆಹಾರ ಸಂರಕ್ಷಣೆ ಅಗತ್ಯ ಮತ್ತು ಸಂಗ್ರಹಣೆ ಮಹತ್ವ ಕುರಿತಾದ ಪರಿಕಲ್ಪನೆ ಮಕ್ಕಳಲ್ಲಿ ಮೂಡಿಸಲು ಅನುಗಮನ ಪದ್ಧತಿಯಲ್ಲಿ ಪ್ರಶ್ನಾವಳಿಯನ್ನು ರಚಿಸಿಕೊಂಡಿರುವುದು.
* ಆಹಾರ ಸಂರಕ್ಷಣೆಯ ವಿಧಾನಗಳ ಚಿತ್ರಪಟ, ಆಹಾರ ಪದಾರ್ಥ ಮತ್ತು ಸಾಮಾನ್ಯ ಕಲಬೆರಕೆಗಳುಳ್ಳ ಚಿತ್ರಪಟಗಳನ್ನು ಸಂಗ್ರಹಿಸಿರುವುದು.
* ಆಹಾರ ವ್ಯರ್ಥವಾಗಲು ಕಾರಣವಾದ ಅಂಶಗಳನ್ನು ಗುರುತಿಸಿ ಪಟ್ಟಿ ಮಾಡಲು ವಿದ್ಯಾರ್ಥಿಗಳಿಗೆ ತಿಳಿಸುವುದು.
* ವಿದ್ಯಾರ್ಥಿಗಳಿಂದ ಅವರು ತಮ್ಮ ನಿತ್ಯ ಜೀವನದಲ್ಲಿ ಬಳಸುವ ಕಲಬೆರಕೆ ಪದಾರ್ಥಗಳ ಪಟ್ಟಿ ತಯಾರಿಸಲು ತಿಳಿಸುವುದು ಹಾಗೂ ಸಂಗ್ರಹಿಸುವುದು.
* ಆಹಾರ ಗುಣಮಟ್ಟವನ್ನು ಹತೋಟಿಯಲ್ಲಿಡುವ ಸಂಸ್ಥೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿರುವುದು.
* ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಉಣಬಡಿಸುವ ಆಹಾರ ಪದಾರ್ಥಗಳ ಹೆಸರುಗಳನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸುವುದು.
4) ಕಲಿಕಾ ಚಟುವಟಿಕೆಗಳು
* ಅನುಗಮನ ಪದ್ಧತಿಯಲ್ಲಿ ರಚಿಸಿರುವ ಪ್ರಶ್ನಾವಳಿಯ ಮೂಲಕ ಸಮತೋಲನ ಆಹಾರ ಸೇವನೆ, ಆಹಾರ ಸಂರಕ್ಷಣೆ ಅಗತ್ಯ ಮತ್ತು ಆಹಾರ ಸಂಗ್ರಹಣೆ ಮಹತ್ವವನ್ನು ಚರ್ಚಿಸಲು ತಿಳಿಸುವುದು.
* ಸಂಗ್ರಹಿಸಿರುವ ಆಹಾರ ಪದಾರ್ಥಗಳಲ್ಲಿರುವ ಪೋಷಕಾಂಶಗಳನ್ನು ಪಟ್ಟಿಮಾಡಲು ತಿಳಿಸುವುದು ಮತ್ತು ಅವುಗಳ ಕಾರ್ಯಗಳನ್ನು ಚರ್ಚಿಸುವುದು.
* ವಿದ್ಯಾರ್ಥಿಗಳು ಮೊದಲೇ ಪಟ್ಟಿಮಾಡಿದ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬಂದ ರೋಗಗಳು ಮತ್ತು ದೇಹದ ಅಸಹಜ ಸ್ಥಿತಿಗಳಿಗೆ ಕಾರಣಗಳನ್ನು ನ್ಯೂನತಾ ಕಾಯಿಲೆಗಳು. ಕಾರಣಗಳು - ಲಕ್ಷಣಗಳು ಕುರಿತಾದ ಚಿತ್ರಪಟದ ಮೂಲಕ ಚರ್ಚಿಸುವಂತೆ ತಿಳಿಸುವುದು.
* ಸಂಗ್ರಹಿಸಿದ ಕೊಳೆತ ತರಕಾರಿ, ಹಣ್ಣುಗಳು, ದವಸ ಧಾನ್ಯಗಳು, ಬೂಸ್ಟು ಬಂದ ರೊಟ್ಟಿ, ಬ್ರೆಡ್ಡುಗಳನ್ನು ಗಮನಿಸಲು ತಿಳಿಸುವುದು ಮತ್ತು ಆ ಆಹಾರ ವ್ಯರ್ಥವಾಗಲು ಕಾರಣವಾದ ಆಂತರಿಕ ಮತ್ತು ಬಾಹ್ಯ ಅಂಶಗಳನ್ನು ಚರ್ಚಿಸಲು ತಿಳಿಸುವುದು.
* ಒಣ ಪ್ರದೇಶ ಮತ್ತು ತೇವಾಂಶ ಪ್ರದೇಶಗಳಲ್ಲಿ ಹಾಗೂ ಗಾಳಿಯಾಡದ ಮತ್ತು ಗಾಳಿಯಾಡುವ ಡಬ್ಬಗಳಲ್ಲಿ ಶೇಖರಿಸಿಟ್ಟ ಆಹಾರ ಧಾನ್ಯಗಳಲ್ಲಾದ ಬದಲಾವಣೆಗೆ ಕಾರಣಗಳನ್ನು ಚರ್ಚಿಸಿ ಸಮರ್ಥನೆ ನೀಡುವಂತೆ ತಿಳಿಸುವುದು.
* ತರಗತಿ ವಿದ್ಯಾರ್ಥಿಗಳನ್ನು ತಂಡಗಳಾಗಿ ವಿಂಗಡಿಸಿ ಪ್ರತಿ ತಂಡಕ್ಕೂ ಸಂಗ್ರಹಿಸಿದ ಆಹಾರ ಪದಾರ್ಥಗಳನ್ನು ಒದಗಿಸಿ ಸಂಗ್ರಹಿಸಿದ ವೈಜ್ಞಾನಿಕ ಉಪಕರಣಗಳು, ರಾಸಾಯನಿಕಗಳ ಸಹಾಯದಿಂದ ತಿಳಿಸುವುದು.
* ಮಧ್ಯಾಹ್ನದ ಬಿಸಿ ಊಟ ಮಾಡುವಾಗ ಅನ್ನದಲ್ಲಿ ಸಿಕ್ಕ ಚಿಕ್ಕ ಚಿಕ್ಕ ಅನ್ನದ ಹಾಗೆ ಇರುವ ಕಲ್ಲಿನ ಚೂರುಗಳು ಕಾಣಿಸಿಕೊಳ್ಳಲು ಕಾರಣಗಳನ್ನು ಚರ್ಚಿಸಲು ತಿಳಿಸಬೇಕು ಮತ್ತು ಅವುಗಳನ್ನು ದವಸ ಧಾನ್ಯಗಳಿಂದ ಬೇರ್ಪಡಿಸುವ ವಿಧಾನಗಳನ್ನು ಪಟ್ಟಿ ಮಾಡುವಂತೆ ತಿಳಿಸುವುದು.
* ವಿದ್ಯಾರ್ಥಿಗಳು ತಾವು ಸಂಗ್ರಹಿಸಿದ ಆಹಾರ ಪದಾರ್ಥ ಮತ್ತು ಆಹಾರದಲ್ಲಿರುವ ಕಲಬೆರಕೆ ಪದಾರ್ಥಗಳನ್ನು ಪಟ್ಟಿಮಾಡಲು ತಿಳಿಸುವುದು ಹಾಗೂ ಪರಿಹಾರ ಸೂಚಿಸುವುದು.
* ಆಹಾರ ಪದಾರ್ಥ ಮತ್ತು ಸಾಮಾನ್ಯ ಕಲಬೆರಕೆಯ ಚಿತ್ರಪಟದ ಮೂಲಕ ಕಲಬೆರಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದು.
* ಸಂಗ್ರಹಿಸಿದ ಅಂಗನವಾಡಿ ಕೇಂದ್ರದ ಆಹಾರ ಪದಾರ್ಥಗಳ ಹೆಸರುಗಳ ಪಟ್ಟಿಯನ್ನು ಗಮನಿಸಿ, ಆ ಆಹಾರದಲ್ಲಿರುವ ಪೋಷಕಾಂಶಗಳನ್ನು ಪಟ್ಟಿಮಾಡಿ ಚರ್ಚಿಸಲು ತಿಳಿಸುವುದು.
* ನಮ್ಮ ದೇಶದಲ್ಲಿರುವ ವಿವಿಧ ಗುಣಮಟ್ಟ ಹತೋಟಿಯಲ್ಲಿಡುವ ಸಂಸ್ಥೆಗಳ ಹೆಸರುಗಳು ಮತ್ತು ಅವುಗಳ ಪಾತ್ರವನ್ನು ಚಚರ್ಿಸುವುದು. ಹಾಗೂ ಕಲಬೆರಕೆ ನಿಯಂತ್ರಿಸುವಲ್ಲಿ ನಮ್ಮ ಪಾತ್ರದ ಬಗ್ಗೆ ಅರಿವು ಮೂಡಿಸುವುದು.
5) ಕಲಿಕೆಗೆ ಅನುಕೂಲಿಸುವ ವಿಧಾನಗಳು
* ಸಾಧ್ಯವಾದಲ್ಲಿ ಗ್ರಂಥಾಲಯ ಪುಸ್ತಕಗಳನ್ನು ಸಂಗ್ರಹಿಸುವುದು.
(ಉದಾ : ಪುಸ್ತಕ : ಆಹಾರ ಕಲಬೆರಕೆ : ಲೇಖಕ ಪ್ರೊ|| ಸಿ.ಡಿ. ಪಾಟೀಲ by KRVP)
* ಕ್ವಿಜ್ ಏರ್ಪಡಿಸುವುದು
* ಪ್ರಬಂಧ ಬರಹ ಸ್ಪರ್ಧೆ ಏರ್ಪಡಿಸುವುದು
* ಆಹಾರ ಕಲಬೆರಕೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ಕೊಡುವುದು
* ವಿವಿಧ ಆಹಾರ ಗುಣಮಟ್ಟ ನಿಯಂತ್ರಣಾ ಸಂಸ್ಥೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಂತರ್ಜಾಲದಿಂದ ತಿಳಿಯುವುದು.
* ಸ್ಥಳೀಯ ಆಸ್ಪತ್ರೆಗಳಿಗೆ ಭೇಟಿಕೊಟ್ಟು ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿರುವ ಮತ್ತು ಕಲಬೆರಕೆಯ ಪರಿಣಾಮದಿಂದ ಆಸ್ಪತ್ರೆ ಸೇರಿ ಮತ್ತು ಅವುಗಳ ದುಷ್ಪರಿಣಾಮಗಳನ್ನು ಎದುರಿಸುತ್ತಿರುವ ರೋಗಿಗಳ ಅಂಕಿ ಅಂಶ ಸಂಗ್ರಹಿಸುವುದು ಮತ್ತು ಚರ್ಚಿಸುವುದು.
6) ಮೌಲ್ಯಮಾಪನ ಚಟುವಟಿಕೆಗಳು
* ಕಡಿಮೆ ಖರ್ಚಿನಲ್ಲಿ ನಾವು ಹೇಗೆ ಪೌಷ್ಟಿಕ ಆಹಾರವನ್ನು ಪಡೆಯಬಹುದು ಚರ್ಚಿಸಿ ಮತ್ತು ಪಟ್ಟಿಮಾಡಿ
(ಉದಾಹರಣೆಗೆ : ಮಾಂಸ, ಮೊಟ್ಟೆ ಬದಲಾಗಿ ಹುರುಳಿಕಾಳುಗಳನ್ನು ಬಳಸುವುದು; ಚಾಕಲೇಟ್ ಬದಲಾಗಿ ಚಿಕ್ಕಿ ತಿನ್ನುವುದು)
* ಸಾಮಾನ್ಯವಾಗಿ ರವೆಯನ್ನು ಮನೆಯಲ್ಲಿ ಹುರಿದು ಇಟ್ಟಿರುತ್ತಾರೆ ಏಕೆ?
* ಹಾಲಿನ ಪುಡಿ ಮಾಡುವುದು ಏಕೆ?
* ಉಪ್ಪಿನ ಕಾಯಿಯನ್ನು ತಯಾರುಮಾಡುವಾಗ ಹೆಚ್ಚಿನ ಪ್ರಮಾಣದ ಉಪ್ಪು ಬೆರೆಸುತ್ತಾರೆ ಏಕೆ? ಮತ್ತು ಉಪ್ಪಿನಕಾಯಿ ಜಾಡಿಯನ್ನು ಬಿಗಿಯಾಗಿ ಮುಚ್ಚಿರುತ್ತಾರೆ ಏಕೆ?
* ಹಣ್ಣುಗಳು ಬೇಗ ಕೊಳೆತು ಹೋಗಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿ.
* ಆಹಾರ ಕಲಬೆರಕೆ ನಿಯಂತ್ರಿಸುವಲ್ಲಿ ನಮ್ಮ ಪಾತ್ರ ಚರ್ಚಿಸಿ.
* ಹಾಲಿನ ಸಾಂದ್ರತೆ ಅಳೆಯುವ ಉಪಕರಣದ ಹೆಸರೇನು?
ಹೆಚ್ಚುವರಿ ಚಟುವಟಿಕೆಗಳು
* ಶಾಲಾ ಸಮೀಪದ ಆಹಾರ ಗೋದಾಮುಗಳಿಗೆ ಭೇಟಿಕೊಟ್ಟು ಅಲ್ಲಿ ಆಹಾರ ಪ್ಯಾಕ್ ಮಾಡುವ ಕ್ರಮವನ್ನು ವೀಕ್ಷಿಸಿ.
* ಸಾಧ್ಯವಾದಲ್ಲಿ ಮೈಸೂರಿನಲ್ಲಿರುವ ಆಈಖಐ ಮತ್ತು ಅಈಖಿಖ ಗೆ ಭೇಟಿ ನೀಡಿ. ನೈಸರ್ಗಿಕ ವಿಕೋಪ ಉಂಟಾದ ಸಂದರ್ಭದಲ್ಲಿ ಅವರು ಒದಗಿಸುವ ಆಹಾರ ಪೊಟ್ಟಣಗಳನ್ನು ಪ್ಯಾಕ್ ಮಾಡುವ ವಿಧಾನವನ್ನು ಗಮನಿಸಿ ಮತ್ತು ಹೆಚ್ಚಿನ ಮಾಹಿತಿ ಪಡೆಯಿರಿ.
No comments:
Post a Comment