Friday, 27 November 2020

ನಮ್ಮ ನಿತ್ಯ ಜೀವನದಲ್ಲಿ ರಾಸಾಯನಿಕ ವಸ್ತುಗಳು

Admin       Friday, 27 November 2020

ಪಾಠ : ನಮ್ಮ ನಿತ್ಯ ಜೀವನದಲ್ಲಿ ರಾಸಾಯನಿಕ ವಸ್ತುಗಳು

1) ಕಲಿಕಾಂಶಗಳು/ಪರಿಕಲ್ಪನೆಗಳು

* ಗೊಬ್ಬರದ ಅರ್ಥ ಮತ್ತು ಮಹತ್ವ
* ಗೊಬ್ಬರದ ವಿಧಗಳು ಮತ್ತು ಅವುಗಳ ವರ್ಗಿಕರಣ
* ಉತ್ತಮ ಗೊಬ್ಬರದ ಲಕ್ಷಣಗಳು
* ಗೊಬ್ಬರದ ಉಪಯೋಗಗಳು
* ಅಮೋನಿಯಾ ಸಂಶ್ಲೇಷಣೆ ವಿಧಾನ
* ಸೂಪರ್ ಫಾಸ್ಫೇಟ್ ತಯಾರಿಕ ವಿಧಾನ ತ ಕೃತಕ ಗೊಬ್ಬರಗಳ ಅನಾನೂಕೂಲಗಳು ತ ಗೊಬ್ಬರಗಳ ವಿವೇಚನಾಯುಕ್ತ ಬಳಕೆ ತ ಜೈವಿಕ ಗೊಬ್ಬರಗಳು, ಸಾವಯವ ಗೊಬ್ಬರಗಳು ಮತ್ತು ಕೃತಕ ಗೊಬ್ಬರಗಳ ಸಮಯೋಚಿತ ಬಳಕೆಯ ಮಹತ್ವ.

2) ಮನನ ಮಾಡಿಕೊಳ್ಳಬೇಕಾದ ಅಂಶಗಳು


* ಪೋಷಕಾಂಶಗಳು, ಅವುಗಳ ವಿಧಗಳು, ಬೃಹತ್ ಪೋಷಕಾಂಶಗಳು ಮತ್ತು ಸೂಕ್ಷ್ಮ ಪೋಷಕಾಂಶಗಳು.
* ಸಾವಯವ ಮತ್ತು ಕೃತಕ ಗೊಬ್ಬರಗಳಿಗಿರುವ ವ್ಯತ್ಯಾಸ
* ಕೃತಕ ಗೊಬ್ಬರದ ವಿಧಗಳು ಮತ್ತು ಮಹತ್ವ ತಿಳಿಯುವುದು
* ಉತ್ತಮ ಗೊಬ್ಬರದ ಲಕ್ಷಣಗಳನ್ನು ತಿಳಿಯುವುದು
* ಸಾವಯವ ಗೊಬ್ಬರದ ಮಹತ್ವ ಸ್ಮರಿಸುವುದು
* ಯುರಿಯಾ, ಅಮೋನಿಯಾ, ಸೂಪರ್ ಫಾಸ್ಫೇಟ್ಗಳ ತಯಾರಿಕ ವಿಧಾನ ತಿಳಿಯುವುದು
* ಕೃತಕ ಗೊಬ್ಬರಗಳಿಂದಾಗುವ ಅನಾನುಕೂಲಗಳು ಮತ್ತು ಪರಿಸರ ಸಂಬಂಧಿ ಸಮಸ್ಯೆಗಳನ್ನು ಗುರುತಿಸುವುದು
* ಕೃತಕ ಗೊಬ್ಬರಗಳ ವಿವೇಚನಾಯುಕ್ತ ಬಳಕೆಯನ್ನು ತಿಳಿಯುವುದು
* ಸಾವಯವ, ಕೃತಕ ಮತ್ತು ಜೈವಿಕ ಗೊಬ್ಬರಗಳ ಸಂಯೋಜಿತ ಬಳಕೆಯ ಮಹತ್ವ ತಿಳಿಯುವುದು

3) ಘಟಕಕ್ಕೆ ಮುನ್ನ ಪೂರ್ವ ಸಿದ್ಧತೆ


* ಶಾಲೆಯ ಹತ್ತಿರವಿರುವ ವಿದ್ಯಾರ್ಥಿಗಳು ಭೇಟಿ ನೀಡಬಹುದಾದ ಜಮೀನಿನ ಆಯ್ಕೆ, ಭೇಟಿ ನೀಡಿದಾಗ       ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಲು ಬೇಕಾದ ಪ್ರಶ್ನಾವಳಿಗಳನ್ನು ತಯಾರಿಸಿಕೊಳ್ಳುವುದು
* ಕೃಷಿ ಅಧಿಕಾರಿಗಳು, ತಜ್ಞರು, ಕೃಷಿ ಸಹಾಯಕರು ಮತ್ತು ಪ್ರಗತಿಪರ ರೈತರ ಪಟ್ಟಿ                                        ತಯಾರಿಸಿಕೊಳ್ಳುವುದು
* ಸಾವಯವ, ಕೃತಕ ಮತ್ತು ಜೈವಿಕ ಗೊಬ್ಬರಗಳ ಮಾದರಿಗಳನ್ನು (Samples) ಸಂಗ್ರಹಿಸಿಟ್ಟು ಕೊಳ್ಳುವುದು
* ವಿವಿಧ ಕೃತಕ ಗೊಬ್ಬರಗಳ ಖಾಲಿ ಚೀಲಗಳನ್ನು ಸಂಗ್ರಹಿಸುವುದು
* ಕರಗುವಿಕೆ (Solublity) ಪರೀಕ್ಷೆಗೆ ಅಗತ್ಯವಾದ ಉಪಕರಣಗಳನ್ನು ಸಂಗ್ರಹಿಸಿಟ್ಟು ಕೊಳ್ಳುವುದು -                 ಬೀಕರ್ ನೀರು, ಗಾಜಿನಕಡ್ಡಿ, ಆಲಿಕೆ ಲಿಟ್ಮಸ್ ಕಾಗದ ಇತ್ಯಾದಿ.
* ಮಣ್ಣಿನ ಪರೀಕ್ಷೆಗೆ ಬೇಕಾದ ಉಪಕರಣಗಳು, ಆಮ್ಲೀಯತೆ ಮತ್ತು ಪ್ರತ್ಯಾಮ್ಲೀಯತೆ ಪರೀಕ್ಷೆ - ಠಿಊ ಪೇಪರ್.

4) ಕಲಿಕಾ ಚಟುವಟಿಕೆಗಳು :

* ಶಾಲೆಯ ಸಮೀಪದಲ್ಲಿರುವ ಜಮೀನುಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವುದು.
* ರೈತರನ್ನು ಭೇಟಿ ಮಾಡಿ ಕೃಷಿ ವಿಧಾನ ಮತ್ತು ಗೊಬ್ಬರಗಳ ಬಳಕೆಯ ಬಗ್ಗೆ ವಿವರ ಪಡೆಯುವುದು
* ಶಾಲಾ ಕೈತೋಟದಲ್ಲಿ ತರಕಾರಿ ಬೆಳೆಗಳನ್ನು ಬೆಳೆಸುವುದು
* ವಿವಿಧ ಕೃತಕ ಗೊಬ್ಬರಗಳ ಖಾಲಿ ಚೀಲಗಳನ್ನು ಸಂಗ್ರಹಿಸಿ, ಅವುಗಳ ಸಹಾಯದಿಂದ ಯಾವ ಗೊಬ್ಬರದಲ್ಲಿ ಯಾವ ಪೋಷಕಾಂಶವಿದೆ ಎಂಬುದನ್ನು ಗುರುತಿಸಿ ಪಟ್ಟಿ ಮಾಡುವುದು.
* ವಿಜ್ಞಾನ ಸಂಘದ ಆಶ್ರಯದಲ್ಲಿ ಕೃಷಿ ತಜ್ಞರು/ಕೃಷಿ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸುವುದು.
* ಸಾವಯವ ಕೃಷಿಯ ಮಹತ್ವದ ಬಗ್ಗೆ ತಜ್ಞರಿಂದ ಉಪನ್ಯಾಸ ಏರ್ಪಡಿಸುವುದು.
* ಕರಗುವಿಕೆ, ಲಿಟ್ಮಸ್ ಮತ್ತು pH   ಪರೀಕ್ಷೆಗಳಿಂದ ಉತ್ತಮ ಗೊಬ್ಬರಗಳ ಲಕ್ಷಣಗಳನ್ನು ತಿಳಿಯುವಂತೆ ಮಾಡುವುದು.

5) ಕಲಿಕೆಗೆ ಅನುಕೂಲಿಸುವ ವಿಧಾನಗಳು


* ವಿದ್ಯಾರ್ಥಿಗಳು ಜಮೀನಿಗೆ ಭೇಟಿ ನೀಡಿದಾಗ ಪ್ರಶ್ನಾವಳಿಗಳು ಸಹಾಯದಿಂದ ಯಾವ ಬೆಳೆಗೆ ಯಾವ ಗೊಬ್ಬರವನ್ನು ಬಳಸುತ್ತಾರೆ. ಎಷ್ಟು ಪ್ರಮಾಣದಲ್ಲಿ ಬಳಸುತ್ತಾರೆ. ಬೆಳೆಯ ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆ ಗೊಬ್ಬರವನ್ನು ಬಳಸುತ್ತಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಲು ತಿಳಿಸಿ ಯಾವ ಬೆಳೆಗೆ ಯಾವ ಪೋಷಕಾಂಶ ಅಗತ್ಯ ಮತ್ತು ಎಷ್ಟು ಪ್ರಮಾಣ ಎಂಬುದರ ಬಗ್ಗೆ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ತೀರ್ಮಾನಕ್ಕೆ ಬರುವಂತೆ ಮಾಡುವುದು.

* ಕೃತಕ ಗೊಬ್ಬರಗಳ ಖಾಲಿ ಚೀಲಗಳ ಮೇಲಿರುವ ಮಾಹಿತಿಗಳ ಆಧಾರದಿಂದ ಯಾವ ಗೊಬ್ಬರದಲ್ಲಿ ಯಾವ ಪೋಷಕಾಂಶವಿದೆ ಎಂಬುದನ್ನು ಪಟ್ಟಿಮಾಡಿಸುವುದು ಹಾಗು ಇದರ ಆಧಾರದ ಮೇಲೆ ನೈಟ್ರೋಜನ್ಯುಕ್ತ, ರಂಜಕಯುಕ್ತ ಮತ್ತು ಪೋಟ್ಯಾಸಿಯಂ ಯುಕ್ತ ಗೊಬ್ಬರಗಳ ಪಟ್ಟಿ ತಯಾರಿಸುವುದು.

* ಶಾಲಾ ಕೈ ತೋಟದಲ್ಲಿ ಜೈವಿಕ, ಸಾವಯವ ಮತ್ತು ಕೃತಕ ಗೊಬ್ಬರಗಳನ್ನು ಸೂಕ್ತ ರೀತಿಯಲ್ಲಿ ಬಳಸುವುದರ ಮೂಲಕ ಗೊಬ್ಬರಗಳ ಸಂಯೋಜಿತ ಬಳಕೆಯ ಮಹತ್ವ ತಿಳಿಸುವುದು 

* ಗಾಜಿನ ಪ್ರನಾಳಗಳು/ಬೀಕರ್ಗಳನ್ನು ತೆಗೆದು ಕೊಂಡು ವಿವಿಧ ಕೃತಕ ಗೊಬ್ಬರಗಳು ನೀರಿನಲ್ಲಿ ವಿಲೀನವಾಗುವ ಪ್ರಮಾಣ ಕಂಡು ಹಿಡಿಯುವಂತೆ ತಿಳಿಸುವುದು.

* ಗೊಬ್ಬರಗಳು ನೀರಿನಲ್ಲಿ ವಿಲೀನಗೊಂಡ ದ್ರಾವಣಗಳನ್ನು ಲಿಟ್ಮಸ್ ಪರೀಕ್ಷೆ ಮತ್ತು ಠಿಊ ಪರೀಕ್ಷೆಗೆ ಒಳಪಡಿಸಿ, ಕೃತಕ ಗೊಬ್ಬರಗಳ ಅಸಮರ್ಪಕ ನಿರ್ವಹಣೆಯಿಂದ ನೈಸರ್ಗಿಕ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳು ತೀರ್ಮಾನಕ್ಕೆ ಬರುವಂತೆ ಮಾಡುವುದು.

* ಸಂವಾದ ಮತ್ತು ತಜ್ಞರ ಉಪನ್ಯಾಸದಿಂದ ಗೊಬ್ಬರದ ಮಹತ್ತ್ವ ಮತ್ತು ಸಮರ್ಪಕ ಬಳಕೆಯ ಬಗ್ಗೆ ತಿಳಿಯುವಂತೆ ಮಾಡುವುದು. ಕೃತಕ ಗೊಬ್ಬರಗಳ ಅಸಮರ್ಪಕ ನಿರ್ವಹಣೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು.

* ತಜ್ಞರಿಂದ ಎರೆಗೊಬ್ಬರ ತಯಾರಿಸುವ ಪ್ರತ್ಯಾಕ್ಷಿಕೆ ಏರ್ಪಡಿಸುವುದು.

6) ಮೌಲ್ಯಮಾಪನ ಚಟುವಟಿಕೆಗಳು


* ನ್ಯೂನ ಪೋಷಣೆ (ಪೋಷಕಾಂಶಗಳ ಕೊರತೆ)ಯಿಂದ ಬಳಲುತ್ತಿರುವ ಬೆಳೆ ಸಸ್ಯಗಳನ್ನು ಸಂಗ್ರಹಿಸಲು ತಿಳಿಸಿ, ಯಾವ ಪೋಷಕಾಂಶದ ಕೊರತೆಯಿದೆ ಎಂಬುದನ್ನು ಗುರುತಿಸಲು ತಿಳಿಸುವುದು. 

* ಶಾಲೆಯ ಆವರಣದಲ್ಲಿ ದೊರೆಯುವ ಸಾವಯವ ವಸ್ತುಗಳಿಂದ ಎರೆಗೊಬ್ಬರ ತಯಾರಿಸಲು ತಿಳಿಸುವುದು.

* ಬೆಳೆ ಸರದಿ, ಜೈವಿಕ ಗೊಬ್ಬರ, ಸಾವಯವ ಗೊಬ್ಬರ, ಕೃತಕ ಗೊಬ್ಬರ, ಮಣ್ಣಿನ ಪರೀಕ್ಷೆ ಮುಂತಾದ ವಿಷಯಗಳ ಬಗ್ಗೆ ಆಶುಭಾಷಣ ಸ್ಪರ್ಧೆ.

* ಕೃತಕ ಗೊಬ್ಬರಗಳ ಅತಿಯಾದ ಬಳಕೆ ಮತ್ತು ಅಸಮರ್ಪಕ ನಿರ್ವಹಣೆ ಪರಿಸರಕ್ಕೆ ಮಾರಕ. ಈ ವಿಷಯದ ಬಗ್ಗೆ ಪ್ರಬಂಧ ಅಥವ ಭಾಷಣ ಸ್ಪರ್ಧೆ ಏರ್ಪಡಿಸುವುದು.

* ಕೃತಕ ಗೊಬ್ಬರಗಳನ್ನು ಮಿತವಾಗಿ ಬಳಸಿ, ವಿದೇಶಿ ವಿನಿಮಯ ಉಳಿಸಿ - ಈ ಸಂಬಂಧದ ಬಗ್ಗೆ ಚರ್ಚೆ.
* ವಿವಿಧ ಜೈವಿಕ ಗೊಬ್ಬರಗಳು. ಅವುಗಳ ಬಳಕೆಯ ವಿಧಾನಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು.

ಶಿಕ್ಷಕರ ಗಮನಕ್ಕೆ :

* ಕಳೆದ ಒಂದೆರಡು ದಶಕದಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಿನ ಪ್ರಾಶ್ಯಸ್ತ ಸಿಕ್ಕಿದೆ. ಇದಕ್ಕೆ ಕಾರಣ ಅವು ಪೋಷಕಾಂಶಗಳನ್ನು ತ್ವರಿತವಾಗಿ ಬೆಳೆಗಳಿಗೆ ಪೂರೈಸುವುದು. ಆದರೆ ರಾಸಾಯನಿಕ ಗೊಬ್ಬರಗಳ ತಯಾರಿಕೆಗೆ ಬಳಸುವ ಮೂಲ ಇಂಧನಗಳ ಬೆಲೆ ಪ್ರತಿವರ್ಷವೂ ಹೆಚ್ಚುತ್ತಲಿದ್ದು, ಈ ದಿಸೆಯಲ್ಲಿ ನಮ್ಮ ಸಕರ್ಾರ ಸಾವಿರಾರು ಕೋಟಿಗಳಷ್ಟು ಹಣವನ್ನು ಕಚ್ಚಾ ವಸ್ತುಗಳ ಅಮದಿಗೆ ವಿದೇಶಿ ವಿನಿಮಯ ವೆಚ್ಚಮಾಡಬೇಕಾಗಿದೆ.

* 2007-08ರಲ್ಲಿ ಉತ್ಪಾದನೆಯಾದ ರಾಸಾಯನಿಕ ಗೊಬ್ಬರದ ಪ್ರಮಾಣ ಕೇವಲ 14 ಮಿಲಿಯನ್ ಟನ್ಗಳಾದರೆ ರಾಸಾಯನಿಕ ಗೊಬ್ಬರದ ಅಗತ್ಯತೆ 20 ಮಿಲಿಯನ್ ಟನ್ಗಿಂತ ಹೆಚ್ಚು. ತ ನಮ್ಮ ದೇಶದಲ್ಲಿ 2007-08ರ ಅವಧಿಯಲ್ಲಿ ಸರಾಸರಿ ಆಹಾರ ಉತ್ಪಾದನೆ 210 ಮಿಲಿಯನ್ ಟನ್.

* 2020ರ ವೇಳೆಗೆ ಆಹಾರ ಉತ್ಪಾದನ ಗುರಿ 250 ಮಿಲಿಯನ್ ಟನ್. 

logoblog

Thanks for reading ನಮ್ಮ ನಿತ್ಯ ಜೀವನದಲ್ಲಿ ರಾಸಾಯನಿಕ ವಸ್ತುಗಳು

Previous
« Prev Post

No comments:

Post a Comment