Sunday, 29 November 2020

ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ

Admin       Sunday, 29 November 2020

 ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ 

ಸರ್ಕಾರವು ಸಾರ್ವಜನಿಕ ಹಣಕಾಸನ್ನು ಕೋಶೀಯ ನೀತಿಯ ಮೂಲಕ ನಿರ್ವಹಿಸುತ್ತದೆ.

• ಆಯ-ವ್ಯಯದಲ್ಲಿ ಸರ್ಕಾರದ ಆದಾಯವು ಅದರ ವೆಚ್ಚಕ್ಕಿಂತ ಹೆಚ್ಚಾಗಿದ್ದರೆ ಅದನ್ನು ಉಳಿತಾಯ ಆಯ-ವ್ಯಯ ಎಂದು ಕರೆಯುತ್ತಾರೆ.

• ಕೇಂದ್ರ ಸರ್ಕಾರದಲ್ಲಿ ಆಯವ್ಯಯವನ್ನು ಲೋಕಸಭೆಯಲ್ಲಿ ಮಂಡಿಸುವವರು ಹಣಕಾಸು ಸಚಿವರು.

• ಸರ್ಕಾರವು ಆಂತರಿಕ ಹಾಗೂ ವಿದೇಶಿ ಸಾಲಗಳ ಮೂಲಕ ಸಂಗ್ರಹಿಸುವ ಆದಾಯವನ್ನು ಬಂಡವಾಳ ಆದಾಯ ಎನ್ನುತ್ತಾರೆ.

• ಸರ್ಕಾರದ ಆದಾಯ,  ಹಾಗೂ ಸಾಲಗಳ ನಿರ್ವಹಣೆಯನ್ನು ಕುರಿತು ಅಧ್ಯಯನ ಮಾಡುವುದೇ ಸಾರ್ವಜನಿಕ ಹಣಕಾಸು ಆಗಿದೆ.

• ಭಾರತದಲ್ಲಿ ಕೇಂದ್ರ ಸರ್ಕಾರದ ಆಯ-ವ್ಯಯವನ್ನು ಕೇಂದ್ರ ಹಣಕಾಸು ಸಚಿವರು ಹಣಕಾಸು ಇಲಾಖೆಯ ಸಹಕಾರದೊಂದಿಗೆ ತಯಾರಿಸುತ್ತಾರೆ.

• ಆಯ-ವ್ಯಯದಲ್ಲಿ ಸರ್ಕಾರದ ಆದಾಯಕ್ಕಿಂತ ಅದರ ವೆಚ್ಚವು ಹೆಚ್ಚಾಗಿದ್ದರೆ ಅದನ್ನು ಕೊರತೆಯ ಆಯ-ವ್ಯಯ ಎಂದು ಕರೆಯುತ್ತಾರೆ.

• ಸರ್ಕಾರವು ತನ್ನ ವೆಚ್ಚಗಳನ್ನು ಭರಿಸಲು ವಿವಿಧ ಮೂಲಗಳಿಂದ ಹಣವನ್ನು ಸಂಗ್ರಹಿಸುತ್ತದೆ. ಇದನ್ನು ಸಾರ್ವಜನಿಕ ಆದಾಯ ಎನ್ನುತ್ತಾರೆ.

• ಸರ್ಕಾರವು ವಿವಿಧ ತೆರಿಗೆಗಳು & ತೆರಿಗೆಯೇತರ ಮೂಲಗಳಿಂದ ಸಂಗ್ರಹಿಸುವ ಆದಾಯವನ್ನು

ಕಂದಾಯ ಆದಾಯ ಎಂದು ಕರೆಯುತ್ತಾರೆ.

• ಸರ್ಕಾರದ ಒಂದು ªಂμಂಜzಂ ಆದಾಯ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಗೆ ಆಯವ್ಯಯ ಎನ್ನತ್ತಾರೆ.

ಈ ಕೆಳಗಿನ ಪ್ರಶ್ನೆಗಳಿಗೆ ವಾಕ್ಯಗಳಲ್ಲಿ ಉತ್ತರಿಸಿರಿ.

1. ಸಾರ್ವಜನಿಕ ಹಣಕಾಸಿನ ಅರ್ಥ ತಿಳಿಸಿ.

ಸರ್ಕಾರದ ಆದಾಯ, ವೆಚ್ಚ ಹಾಗೂ ಸಾಲಗಳ ನಿರ್ವಹಣೆಯನ್ನು ಕುರಿತು ಅಧ್ಯಯನ ಮಾಡುವುದೇ ಸಾರ್ವಜನಿಕ ಹಣಕಾಸಿನ ಅರ್ಥವಾಗಿದೆ.

2. ಆಯ-ವ್ಯಯ ಎಂದರೇನು?

ಸರ್ಕಾರದ ಒಂದು ವರ್ಷದ ಆದಾಯ ಮತ್ತು ವೆಚ್ಚಗಳನ್ನು ಕುರಿತು ತಯಾರಿಸಿದ ಅಂದಾಜು ಪಟ್ಟಿಯನ್ನು ಆಯ-ವ್ಯಯ ಪತ್ರ ಅಥವಾ ಮುಂಗಡ ಪತ್ರ ಎಂದು ಕರೆಯುತ್ತಾರೆ.

3. ಕೊರತೆಯ ಆಯ-ವ್ಯಯದ ಅರ್ಥ ಬರೆಯಿರಿ.

ಆಯ-ವ್ಯಯ ಪತ್ರದಲ್ಲಿ ಸರ್ಕಾರದ ಆದಾಯಕ್ಕಿಂತ ವೆಚ್ಚವು ಹೆಚ್ಚಾಗಿದ್ದರೆ ಅದನ್ನು ಕೊರತೆಯ ಆಯ-ವ್ಯಯ ಎನ್ನುತ್ತಾರೆ.

4. ಯೋಜನೇತರ ವೆಚ್ಚ ಎಂದರೇನು?

ಅಭಿವೃದ್ಧಿ ಕಾರ್ಯಗಳನ್ನು ಹೊರತುಪಡಿಸಿ, ಆಡಳಿತ ನಿರ್ವಹಣೆ, gಂμಂಔಛಿgಂPಂeuಇ, ಬಡ್ಡಿ ಪಾವತಿ ಮುಂತಾದ ಬಾಬ್ತುಗಳಿಗೆ ಮಾಡಲಾಗುವ ವೆಚ್ಚವನ್ನು ಯೋಜನೇತರ ವೆಚ್ಚ ಎನ್ನುತ್ತೇವೆ.

5. ಪ್ರತ್ಯಕ್ಷ ತೆರಿಗೆ ಎಂದರೇನು?

ಸರ್ಕಾರವು ಯಾರ ಮೇಲೆ ತೆರಿಗೆಯನ್ನು ವಿಧಿಸುತ್ತದೆಯೋ ಅವರೇ ಆ ಹೊರೆಯನ್ನು ಹೊರುವಂತಿದ್ದರೆ, ಅಂತಹ ತೆರಿಗೆಯನ್ನು ಪ್ರತ್ಯಕ್ಷ ತೆರಿಗೆ ಎನ್ನುತ್ತಾರೆ. ಉದಾ : ವರಮಾನ ತೆರಿಗೆ, ಸ್ಟಾಂಪು ತೆರಿಗೆ ಇತ್ಯಾದಿ.

6. ವಿತ್ತೀಯ ಕೊರತೆಯನ್ನು ಸೂತ್ರ ರೂಪದಲ್ಲಿ ಬರೆಯಿರಿ.

ವಿತ್ತೀಯ ಕೊರತೆ = (ಕಂದಾಯ ಆದಾಯ + ಸಾಲೇತರ ಬಂಡವಾಳ ಆದಾಯ) – ಒಟ್ಟು ವೆಚ್ಚ.

7. ಕೇಂದ್ರ ಸರ್ಕಾರದ ಯೋಜನಾ ವೆಚ್ಚಗಳನ್ನು ಪಟ್ಟಿಮಾಡಿರಿ.

ಕೇಂದ್ರ ಸರ್ಕಾರವು ಕೇಂದ್ರ ಯೋಜನಾ ವೆಚ್ಚದ ಅಡಿಯಲ್ಲಿ ಮೂರು ರೀತಿಯ ಸೇವೆಗಳ ನಿರ್ವಹಣೆ ಹಾಗೂ ಅಭಿವೃದ್ಧಿಗಾಗಿ ಹಣವನ್ನು ವೆಚ್ಚ ಮಾಡುತ್ತದೆ. ಅವುಗಳೆಂದರೆ –

• ಆರ್ಥಿಕ ಸೇವೆಗಳು : ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳು, ಕೈಗಾರಿಕೆ, ಸಾರಿಗೆ, ಸಂಪರ್ಕ, ಇಂಧನ, ವಿಜ್ಞಾನ ಮತ್ತು ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ ಇತ್ಯಾದಿ.

• ಸಾಮಾಜಿಕ ಸೇವೆಗಳು : ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಕುಟುಂಬ ಕಲ್ಯಾಣ, ಕುಡಿಯುವ ನೀರು ಪೂರೈಕೆ, ಗೃಹ ನಿರ್ಮಾಣ, ಸಾಮಾಜಿಕ ಕಲ್ಯಾಣ ಇತ್ಯಾದಿ.

• ಸಾಮಾನ್ಯ ಸೇವೆಗಳು : ದೇಶದಲ್ಲಿ ಶಾಂತಿ - ಸುವ್ಯವಸ್ಥೆ ಕಾಪಾಡಲು ಮಾಡುವ ವೆಚ್ಚಗಳು.

8. ಕೇಂದ್ರ ಸರ್ಕಾರದ ತೆರಿಗೆಯೇತರ ಆದಾಯದ ಮೂಲಗಳನ್ನು ತಿಳಿಸಿ.

• ಭಾರತೀಯ ರಿಜರ್ವ ಬ್ಯಾಂಕ್ ಗಳಿಸುವ ನಿವ್ವಳ ಲಾಭ.

• ಭಾರತೀಯ ರೈಲ್ವೆ ಗಳಿಸುವ ನಿವ್ವಳ ಲಾಭ.

• ಅಂಚೆ ಮತ್ತು ದೂರವಾಣಿ ಸೇವೆಗಳಿಂದ ಬರುವ ಆದಾಯ.

• ಸಾರ್ವಜನಿಕ ಉದ್ಯಮಗಳು ಗಳಿಸುವ ಆದಾಯ.

• ನಾಣ್ಯ ಮತ್ತು ಟಂಕಸಾಲೆಯಿಂದ ಬರುವ ಆದಾಯ.

• ವಿವಿಧ ರೀತಿಯ ಶುಲ್ಕಗಳು, ದಂಡಗಳು ಇತ್ಯಾದಿ.

9. ವಿತ್ತೀಯ ನೀತಿ ಎಂದರೇನು?

ಆರ್ಥಿಕ ಅಭಿವೃದ್ಧಿ ಮತ್ತು ಆರ್ಥಿಕ ಸ್ಥಿರತೆಯನ್ನು ಸಾಧಿಸುವ ಉದ್ದೇಶದಿಂದ ಸರ್ಕಾರವು ತನ್ನ ಆದಾಯ, ವೆಚ್ಚ ಮತ್ತು ಸಾಲಕ್ಕೆ ಸಂಬಂಧಿಸಿದಂತೆ ಕಾಲ ಕಾಲಕ್ಕೆ ಅನುಸರಿಸುವ ನೀತಿಗೆ ಕೋಶೀಯ ನೀತಿ ಅಥವಾ ವಿತ್ತೀಯ ನೀತಿ ಎನ್ನುತ್ತಾರೆ.

9. ಕೊರತೆಯ ಹಣಕಾಸು ಎಂದರೇನು? ಅದರ ನಾಲ್ಕು ವಿಧಗಳನ್ನು ತಿಳಿಸಿ.

ಸರ್ಕಾರವು ತನ್ನ ಆದಾಯಕ್ಕಿಂತಲೂ ವೆಚ್ಚವನ್ನು ಹೆಚ್ಚು ಮಾಡುವದನ್ನು ಕೊರತೆಯ ಹಣಕಾಸು ಎನ್ನುತ್ತಾರೆ.

ಕೊರತೆಯ ಹಣಕಾಸಿನ ನಾಲ್ಕು ವಿಧಗಳು

1. ವಿತ್ತೀಯ ಕೊರತೆ,

2. ಆಯವ್ಯಯ ಕೊರತೆ,

3. ಕಂದಾಯ ಕೊರತೆ,

4. ಪ್ರಾಥಮಿಕ ಕೊರತೆ.

10. ಸಾರ್ವಜನಿಕ ಹಣಕಾಸು ಮತ್ತು ವೈಯಕ್ತಿಕ ಹಣಕಾಸು

ಭಿನ್ನತೆಗಳನ್ನು ಗುರುತಿಸಿ.

ವೈಯಕ್ತಿಕ ಹಣಕಾಸು

• ವೈಯಕ್ತಿಕ ಹಣಕಾಸು ಅಥವಾ ಖಾಸಗೀ ಹಣಕಾಸು ಒಬ್ಬ ವ್ಯಕ್ತಿ ಅಥವಾ ಕುಟುಂಬದ ಆದಾಯ-ವೆಚ್ಚಗಳಿಗೆ ಸಂಬಂದಿ8/üಸಿದೆ.

• ಇಲ್ಲಿ ವ್ಯಕ್ತಿಗಳು ಮೊದಲು ತಮ್ಮ ಆದಾಯವನ್ನು ಅಂದಾಜುಮಾಡಿ, ನಂತರ ಅದಕ್ಕೆ ಅನುಗುಣವಾಗಿ ಖರ್ಚು ವೆಚ್ಚ ಮಾಡುತ್ತಾರೆ.

• ವೈಯಕ್ತಿಕ ಹಣಕಾಸಿನ ವ್ಯವಹಾರಗಳನ್ನು ಆದಷ್ಟು ಗೌಪ್ಯವಾಗಿಡಲಾಗುತ್ತದೆ.

• ವ್ಯಕ್ತಿ ಅಥವಾ ಕುಟುಂಬ ಉಳಿತಾಯ

ಮಾಡಿದರೆ ಅದು ಅವರ ಪ್ರಗತಿ ಪೂರಕವಾಗಿರುತ್ತದೆ.

ಸಾರ್ವಜನಿಕ ಹಣಕಾಸು

• ಸಾರ್ವಜನಿಕ ಹಣಕಾಸು ಸರ್ಕಾರದ ಆದಾಯ-ವೆಚ್ಚಗಳಿಗೆ ಸಂಬಂಧಿಸಿರುತ್ತದೆ.

• ಸರ್ಕಾರವು ಮೊದಲು ತನ್ನ ವೆಚ್ಚವನ್ನು ಅಂದಾಜು ಮಾಡಿ, ಅದಕ್ಕೆ ತಕ್ಕಂತೆ  ಆದಾಯವನ್ನು ಹೊಂದಿಸುತ್ತದೆ.

• ಸಾರ್ವಜನಿಕ ಹಣಕಾಸನ್ನು ಶಾಸನ ಸಭೆಗಳಲ್ಲಿ ಚರ್ಚಿಸಲಾಗುತ್ತದೆ.

• ಸರ್ಕಾರವು ಉಳಿತಾಯ ಮಾಡಿದರೆ ಅದು ಅಭಿವೃದ್ಧಿ ಹೊಂದುತ್ತಿರುವ ದೇಶದ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ.

11. ಭಾರತದ ಹಣಕಾಸು ವರ್ಷವು ಯಾವಾಗ ಪ್ರಾರಂಭವಾಗಿ

ಯಾವಾಗ ಮುಕ್ತಾಯವಾಗುತ್ತದೆ?

ಭಾರತದಲ್ಲಿ ಹಣಕಾಸು ವರ್ಷವು ಆ ವರ್ಷದ ಎಪ್ರಿಲ್ 1ರಂದು ಪ್ರಾರಂಭವಾಗಿ ಅದರ ಮುಂದಿನ ವರ್ಷದ ಮಾರ್ಚ 31ರಂದು ಮುಕ್ತಾಯವಾಗುತ್ತದೆ.

12. ಸರ್ಕಾರವು ತನ್ನ ಆದಾಯ ಮತ್ತು ವೆಚ್ಚಗಳ ನಡುವಿನ

ಅಂತರವನ್ನು ಹೇಗೆ ತುಂಬಿಕೊಳ್ಳುತ್ತದೆ?

• ಸರ್ಕಾರವು ತನ್ನ ಆದಾಯ ಮತ್ತು ವೆಚ್ಚದ ನಡುವಿನ ಅಂತರವನ್ನು ಭಾರತೀಯ ರಿಜರ್ವ ಬ್ಯಾಂಕಿನಲ್ಲಿ ತಾನು ಹೊಂದಿರುವ ನಗದು ಸಂಗ್ರಹವನ್ನು ಹಿಂಪಡೆಯುವದು.

• ಆಂತರಿಕ ಮತ್ತು ವಿದೇಶಿ ಮೂಲಗಳಿಂದ ಸಾಲ ಸಂಗ್ರಹಿಸುವುದು.

• ಭಾರತೀಯ ರಿಜರ್ವ ಬ್ಯಾಂಕಿನಿಂದ ಸಾಲ ಪಡೆಯುವುದು ಮುಂತಾದ ಕ್ರಮಗಳ ಮೂಲಕ ತುಂಬಿಕೊಳ್ಳುತ್ತದೆ.

14. ಯೋಜನಾ ವೆಚ್ಚ ಎಂದರೇನು?

ಸರ್ಕಾರವು ವಿವಿಧ ಆರ್ಥಿಕ ಮತ್ತು ಸಾಮಾಜಿಕ ಸೇವೆಗಳು, ರಸ್ತೆ ನಿರ್ಮಾಣ ಕಾರ್ಯಗಳು ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಮಾಡುವ ವೆಚ್ಚಗಳನ್ನು ಯೋಜನಾ ವೆಚ್ಚ ಎನ್ನುತ್ತಾರೆ.

15. ಸಾರ್ವಜನಿಕ ವೆಚ್ಚ ಎಂದರೇನು?

ಸರ್ಕಾರವು ರಾಷ್ಟ್ರದ ರಕ್ಷಣೆ, ಆಡಳಿತ ನಿರ್ವಹಣೆ, ಆರ್ಥಿಕ ಅಭಿವೃದ್ಧಿ ಹಾಗೂ ಜನರ ಯೋಗಕ್ಷೇಮದ ದೃಷ್ಟಿಯಿಂದ ವಿವಿಧ ಚಟುವಟಿಕೆಗಳಿಗೆ ಹಣವನ್ನು ವೆಚ್ಚ ಮಾಡುತ್ತದೆ. ಇದನ್ನು ಸಾರ್ವಜನಿಕ ವೆಚ್ಚ ಎನ್ನುತ್ತಾರೆ.

16. ಸಾರ್ವಜನಿಕ ಹಣಕಾಸಿನ ಮಹತ್ವವನ್ನು ಸಂಕ್ಷಿಪ್ತವಾಗಿ ವಿವರಿಸಿ.

• ಸರ್ಕಾರವು ತನ್ನ ಕೋಶಿಯ ನೀತಿಯ ಮೂಲಕ ದೇಶದಲ್ಲಿರುವ ನೈಸರ್ಗಿಕ ಸಂಪತ್ತು, ಶ್ರಮ ಮತ್ತು ಭೌತಿಕ ಬಂಡವಾಳವು ಉತ್ಪಾದಕರ ನಡುವೆ ಸಮರ್ಪವಾಗಿ ಹಂಚಿಕೆಯಾಗುವಂತೆ ಮಾಡುತ್ತದೆ.

• ದೇಶದಲ್ಲಿ ಉತ್ಪಾದನೆಯಾಗುವ ಆದಾಯವು ಎಲ್ಲಾ ಪ್ರಜೆಗಳಲ್ಲಿ ಆದಷ್ಟು ಸಮನಾಗಿ ಹಂಚಿಕೆಯಾಗುವಂತೆ ಮಾಡುತ್ತದೆ.

• ಸಮಾಜದ ಎಲ್ಲಾ ವರ್ಗದ ಜನರು ಶಾಂತಿ, ನೆಮ್ಮದಿಯಿಂದ ಬದುಕುವಂತೆ ಮಾಡಲು ಪ್ರಯತ್ನಿಸುತ್ತದೆ.

• ಅರ್ಥವ್ಯವಸ್ಥೆಯ ಎಲ್ಲಾ ಕ್ಷೇತ್ರಗಳು ಸಮತೋಲನವಾಗಿ ಅಭಿವೃದ್ಧಿ ಹೊಂದುವಂತೆ ಮಾಡುತ್ತದೆ.

17. ಬಂಡವಾಳ ವೆಚ್ಚ ಎಂದರೇನು?

ಕೃಷಿ, ಕೈಗಾರಿಕೆ, ಸಾರಿಗೆ, ವಿದ್ಯುತ್, ನೀರಾವರಿ ಯೋಜನೆಗಳು ಮುಂತಾದ ಕ್ಷೇತ್ರಗಳ ಅಭಿವೃದ್ಧಿಗಾಗಿ ಮತ್ತು ಹೊಸ ಆಸ್ತಿಗಳ ನಿರ್ಮಾಣಕ್ಕಾಗಿ ಸರ್ಕಾರವು ಹೊಸದಾಗಿ ಬಂಡವಾಳ ಹೂಡಲು ಮುಂದಾಗುತ್ತದೆ. ಇಂತಹ ವೆಚ್ಚಕ್ಕೆ ಬಂಡವಾಳ ವೆಚ್ಚ ಎನ್ನುತ್ತಾರೆ.

18. ಹೂಡಿಕೆ ಹಿಂತೆಗೆತ ಎಂದರೇನು?

ಸರ್ಕಾರವು ಸಾರ್ವಜನಿಕ ಉದ್ಯಮಗಳಲ್ಲಿ ಹೂಡಿರುವ ತನ್ನ ಬಂಡವಾಳವನ್ನು ಹಿಂದಕ್ಕೆ ಪಡೆಯುತ್ತದೆ. ಇದಕ್ಕೆ ಹೂಡಿಕೆ ಹಿಂತೆಗೆತ ಎನ್ನುತ್ತಾರೆ.

19. ವಿತ್ತೀಯ ಕೊರತೆ ಎಂದರೇನು?

ಆಯವ್ಯಯದಲ್ಲಿ ಕಂದಾಯ ಆದಾಯ ಮತ್ತು ಸಾಲೇತರ ಬಂಡವಾಳ ಆದಾಯಗಳಿಗಿಂತ ಸರ್ಕಾರದ ಒಟ್ಟು ವೆಚ್ಚ ಹೆಚ್ಚಾಗಿದ್ದರೆ, ಅದನ್ನು ವಿತ್ತೀಯ ಕೊರತೆ ಎನ್ನುತ್ತಾರೆ.


logoblog

Thanks for reading ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ

Previous
« Prev Post

No comments:

Post a Comment