Thursday, 26 November 2020

ಕೃತಿ ಸಂಪುಟ

Admin       Thursday, 26 November 2020


ಮಕ್ಕಳ  ಪ್ರಗತಿ ವರದಿ ಮಾಡಲು ಪುಸ್ತಿಕೆಯ  (ಕೃತಿ  ಸಂಪುಟ) ನಿರ್ವಹಣೆ

ಮಕ್ಕಳ    ಕಲಿಕಾ   ಪ್ರಕ್ರಿಯೆಗಳನ್ನು    ವಿವಿಧ  ಆಯಾಮಗಳಲ್ಲಿ   ಅರ್ಥಮಾಡಿಕೊಳ್ಳಲು   ಅವರ   ಕೃತಿ ಸಂಪುಟವು  ಸಹಕಾರಿಯಾಗಿದೆ.   ಪುಸ್ತಿಕೆಯು    ಮಕ್ಕಳ   ಕಲಿಕೆಯ       ಪ್ರಯತ್ನಗಳನ್ನು ದಾಖಲಿಸುತ್ತವೆ. ಮಕ್ಕಳ     ಕೃತಿಗಳು     ಇಲ್ಲಿ ದಾಖಲಾಗುವಂತೆಯೇ       ಆ    ಪುಸ್ತಿಕೆಗಳ ಮೌಲ್ಯಮಾಪನ     ಕೂಡ  ಇಲ್ಲಿ ದಾಖಲಾಗುತ್ತದೆ.   ಅಂತೆಯೇ  ಮಕ್ಕಳು ತಮ್ಮ   ಕಲಿಕೆಯ     ಬಗೆಗೆ      ಮಾಡಿಕೊಂಡ  ಸ್ವಾವಲೋಕನವೂ ಇಲ್ಲಿ ದಾಖಲಾಗುತ್ತದೆ.     ಯಾವುದೇ  ಸಂದರ್ಭಧಲ್ಲಿ    ಮಕ್ಕಳ  ಕೃತಿ    ಸಂಪುಟಗಳನ್ನು       ಗಮನಿಸಿದರೆ ಮಕ್ಕಳ    ಕಲಿಕಾ  ಪ್ರಕ್ರಿಯೆಗಳಲ್ಲಿ ಯಾವ     ರೀತಿ  ತೊಡಗಿಕೊಂಡಿದ್ದರು, ಅವರ   ಕಲಿಕೆಯ  ಗುಣಮಟ್ಟ ಹೇಗಿದೆ, ಅವರಿಗೆ  ಯಾವ ರೀತಿಯ  ಮಾರ್ಗದರ್ಶನ ಬೇಕಾಗಿದೆ   ಎಂಬಿತ್ಯಾದಿ ಸಮಗ್ರ ವಿವರಗಳೂ ಇಲ್ಲಿ ದೊರಕುತ್ತವೆ.    ಈ ಎಲ್ಲ  ವಿವರಗಳನ್ನೊಳಗೊಂಡ    ದಾಖಲೆ,  ಫೈಲ್ನ್ನು    ಮಕ್ಕಳ  ವೈಯಕ್ತಿಕ ಪುಸ್ತಿಕೆ    ಎನ್ನಬಹುದು.

        ಪ್ರತಿ   ಮಗುವಿಗೂ ಅದರದೇ   ಆದ    ಪುಸ್ತಿಕೆಯಿರುತ್ತದೆ.     ನಮ್ಮ         ಸಂದರ್ಭದಲ್ಲಿ    ಪುಸ್ತಿಕೆಯು ಒಂದು  ಸರಳವಾದ ಫೈಲ್  ಆಗಿರಬಹುದು.  ಪುಸ್ತಿಕೆ   ಪರಿಕಲ್ಪನೆಯೇ    ನಮಗೆ ಹೊಸದು. ಆದುದರಿಂದ ಸೈದ್ಧಾಂತಿಕವಾಗಿ   ಅದರ  ಹರವು  ಹಾಗೂ   ಉಪಯುಕ್ತತೆಗಳನ್ನು   ಅರಿತರೂ  ಅನುಷ್ಠಾನದ  ದೃಷ್ಟಿಯಿಂದ ಈ ಕೆಳಗಿನ     ಅಂಶಗಳನ್ನು      ಮಕ್ಕಳ  ಪುಸ್ತಿಕೆಗಳು  ಒಳಗೊಳ್ಳಬಹುದು.

1.   ಮಕ್ಕಳ    ಬರೆವಣಿಗೆಯ   ಸ್ಯಾಂಪಲ್ಗಳು
2.   ಮಕ್ಕಳು  ಬರೆದ ಪರೀಕ್ಷೆ  ಪತ್ರಿಕೆಗಳು
3.    ಮೌಖಿಕ   ಪರೀಕ್ಷೆಗಳಲ್ಲಿ  ಮಕ್ಕಳ   ನಿರ್ವಹಣೆ   ಕುರಿತಾದ   ದಾಖಲೆಗಳು  ಹಾಗೂ   ಗಳಿಸಿದ   ಅಂಕಗಳು.
4.    ಮಕ್ಕಳು   ಮನೆಯಲ್ಲಿ  ಅಥವಾ ತರಗತಿ   ಹೊರಗೆ  ನಡೆಸುವ ಯಾವುದಾದರೂ   ಚಟುವಟಿಕೆಗಳ  ದಾಖಲೆಗಳು.
5.   ಮಕ್ಕಳ  ಕುರಿತಾಗಿ ಶಿಕ್ಷಕರ  ಅಭಿಪ್ರಾಯಗಳು, ಇತರ  ಯಾವುದೇ  ಅಭಿಪ್ರಾಯಗಳು
6.    ಮಕ್ಕಳು  ತಮ್ಮ    ಕಲಿಕೆಯ     ಬಗ್ಗೆ  ಮಾಡಿಕೊಂಡ    ಸ್ವಾವಲೋಕನಗಳು.
7.    ಮಕ್ಕಳಿಗೆ     ಶಿಕ್ಷಕರು   ನೀಡಿರುವ  ಹಿಮ್ಮಾಹಿತಿ
8.    ಮಕ್ಕಳು  ಪೋಷಕರು      ತಮ್ಮ    ಮಕ್ಕಳ  ಬಗ್ಗೆ   ದಾಖಲಿಸಬಹುದಾದ  ಅಂಶಗಳು.

    ಇವೆಲ್ಲವನ್ನೂ  ವ್ಯವಸ್ಥಿತವಾಗಿ  ಕೃತಿ   ಸಂಪುಟಗಳಲ್ಲಿ  ದಾಖಲಿಸಿಕೊಂಡರೆ ಮಕ್ಕಳ   ವ್ಯಕ್ತಿತ್ವದ   ಕುರಿತಂತೆ ಒಂದು  ಹಂತದವರೆಗಿನ  ಸಮಗ್ರ   ಹಿಮ್ಮಾಹಿತಿ ದೊರಕುತ್ತದೆ.   ಇದರ    ಹರವನ್ನು ಮುಂದಿನ  ದಿನಗಳಲ್ಲಿ ವಿಸ್ತರಿಸಬಹುದು.    ಅತ್ಯಂತ ಕಡಿಮೆಯೆಂದರೆ ಮಕ್ಕಳ  ಪರೀಕ್ಷೆ      ಪತ್ರಿಕೆಗಳ   ಸಂಗ್ರಹವಾಗಿ ಆರಂಭವಾಗಬಹುದಾದ    ಕೃತಿ      ಸಂಪುಟವು     ಈ ಮೇಲಿನವುಗಳಲ್ಲಿ     ಎಷ್ಟು   ಅಂಶಗಳನ್ನು ಒಳಗೊಳ್ಳುತ್ತದೆಯೋ      ಅಷ್ಟರ      ಮಟ್ಟಿಗೆ       ಹೆಚ್ಚು     ಸಮಗ್ರವಾಗುತ್ತದೆ        ಎಂಬುದನ್ನು   ಅರ್ಥಮಾಡಿ ಕೊಳ್ಳಬೇಕಾಗಿದೆ.

    ಶಾಲೆಯು  ಪೋಷಕರಿಗೆ   ಈ ಕೃತಿ  ಸಂಪುಟದ ಆಧಾರದಲ್ಲಿ    ಮಕ್ಕಳ   ವ್ಯಕ್ತಿಚಿತ್ರವನ್ನು   ಕಟ್ಟಿಕೊಡಬೇಕು. ಇದರಿಂದ   ಪೋಷಕರಿಗೆ    ತಮ್ಮ      ಮಕ್ಕಳ    ಕುರಿತಂತೆ,   ಅವರ     ಬೆಳವಣಿಗೆಯ ಕುರಿತಂತೆ,   ಅವರ ಸಾಮಥ್ರ್ಯಗಳ ಕುರಿತಂತೆ, ಅವರ   ಭವಿಷ್ಯದ  ಸಾಧ್ಯತೆಗಳ ಕುರಿತಂತೆ ಸಂಪೂರ್ಣವಾದ  ಅರಿವು ಉಂಟಾಗುತ್ತದೆ.     ಮಕ್ಕಳ   ಬೆಳವಣಿಗೆಯನ್ನು       ಅನುಕೂಲಿಸುವ ಎಲ್ಲರಿಗೂ     ಇಂತಹ    ಸಮಗ್ರ ಅರ್ಥೈಸಿಕೊಳ್ಳುವಿಕೆ    ಅತಿ ಮುಖ್ಯವಾಗಿದೆ.    ಮುಂದಿನ      ದಿನಗಳಲ್ಲಿ   ಮಕ್ಕಳ      ವೈಯಕ್ತಿಕ       ಪುಸ್ತಿಕೆ ನಿರ್ವಹಣೆಯೇ  ಮುಖ್ಯ ಮೌಲ್ಯಮಾಪನ ಸಾಧನವಾಗಲಿದೆ. 

    ಈ ಸಾಧನ   ಹಾಗೂ     ತಂತ್ರಗಳಂತೆಯೇ     ಇನ್ನೂ       ಕೆಲವು    ಆಧಾರಗಳನ್ನು ಇಲ್ಲಿ   ನೀಡಿದ್ದು ಅವುಗಳನ್ನೂ   ಸಹ  ಬಳಸಿಕೊಳ್ಳಬಹುದು. 

✯    ಪ್ರಬಂಧಗಳು  - ಮಕ್ಕಳ   ಎಲ್ಲ   ರೀತಿಯ ಬರಹಗಳನ್ನು   ಅವುಗಳ  ಅಭಿವ್ಯಕ್ತಿ    ಹಾಗೂ  ಮಕ್ಕಳು ಯೋಚಿಸುವ    ಧಾಟಿಯನ್ನು ಅರ್ಥೈಸಿಕೊಳ್ಳಲು    ಬಳಸಬಹುದು.    ಆದರೆ     ಪ್ರಬಂಧಗಳು
ಮಕ್ಕಳು     ಸ್ವತಃ    ಬರೆದುವೇ    ಆಗಿರಬೇಕು.

✯  ಸ್ವ-ಮೌಲ್ಯಮಾಪನ   ಸಾಧನಗಳು
    ಮಕ್ಕಳಿಗೆ      ತಮ್ಮ           ಪ್ರಗತಿಯನ್ನು     ತಾವೇ    ಅವಲೋಕಿಸಿಕೊಳ್ಳಲು  ಅವಕಾಶ    ನೀಡಬೇಕು. ಅಂತಹ  ಅವಲೋಕನಗಳ    ವಿವರಗಳು   ಪುಸ್ತಿಕೆಗೂ ಸೇರಬಹುದು.   ನಿರಂತರ  ಮತ್ತು   ವ್ಯಾಪಕ
ಮೌಲ್ಯಮಾಪನದ     ಒಂದು   ಉದ್ದೇಶ   ಸ್ವಾವಲೋಕನದ ಮೂಲಕ   ಮಕ್ಕಳೇ ತಮ್ಮ  ಕಲಿಕೆಗೆ
ಜವಾಬ್ದಾರರಾಗುವಂತೆ   ಮಾಡುವುದಾಗಿದೆ.

✯  ಸಹವರ್ತಿ   ಮೌಲ್ಯಮಾಪನ ಸಾಧನಗಳು
    ಮಕ್ಕಳ   ಗೆಳೆಯ/ಗೆಳತಿಯರು       ಅವರ     ಬಗ್ಗೆ    ಮಾಡುವ    ಅವಲೋಕನಗಳೂ ಮಕ್ಕಳ     ಬಗ್ಗೆ ಅನೇಕ    ವಿಷಯಗಳನ್ನು  ಹೇಳುತ್ತವೆ.  ಇವನ್ನೂ  ಪುಸ್ತಿಕೆಗೆ    ಸೇರಿಸಿಕೊಳ್ಳಬಹುದು.

ಈ ಮುಂದೆ ನೀಡಿರುವ ಸಾಧನಗಳು ಯಾವ ಮಾಹಿತಿ ನೀಡುತ್ತವೆ ಮತ್ತು ಅವುಗಳನ್ನು ಮೌಲ್ಯಮಾಪನದಲ್ಲಿ ಹೇಗೆ ಬಳಸಬಹುದು  ಎಂದು ಯೋಚಿಸಿ.

✯  ಹಿಮ್ಮಾಹಿತಿ  ನಮೂನೆಗಳು

✯  ಸಂಭಾಷಣೆಗಳು

✯  ಗಮನ ಕೇಂದ್ರಿತ        ಗುಂಪು    ಚರ್ಚೆಯ  ದತ್ತಾಂಶಗಳು

✯  ರಸಪ್ರಶ್ನೆ     ಮತ್ತಿತರ ಸ್ಪರ್ಧೆಗಳ  ದಾಖಲೆಗಳು

✯  ಪ್ಲಾನಲ್ ಬೋರ್ಡ್ ನಲ್ಲಿಯ  ಪ್ರದರ್ಶನಗಳು

✯  ಚಿತ್ರಗಳು,    ಪತ್ರಗಳು, ಸಂಗ್ರಹಗಳು  ಮತ್ತು  ಮಾದರಿಗಳು

✯  ಕಥನ ವರದಿಗಳು.


ಹಿಮ್ಮಾಹಿತಿ

    ನಿರಂತರ ಹಾಗೂ    ವ್ಯಾಪಕ ಮೌಲ್ಯಮಾಪನದ   ಜೊತೆ  ಜೊತೆಯಲ್ಲಿಯೇ    ಸಾಗುವುದು  ಹಿಮ್ಮಾಹಿತಿ. ಹಿಮ್ಮಾಹಿತಿ  ನೀಡುವುದು   ಮತ್ತು        ಹಿಮ್ಮಾಹಿತಿ  ನೀಡಲು  ಅಗತ್ಯ  ಸನ್ನಿವೇಶ     ಸೃಜಿಸುವುದನ್ನು  ಒಂದು ಕೌಶಲವನ್ನಾಗಿಯೇ     ನಾವು    ಕಲಿಯಬೇಕಿದೆ.    ಸಾಮಾನ್ಯವಾಗಿ   ನಾವು      ಪುಟ್ಟ    ಮಕ್ಕಳೆಂದು  ಅವರ ಹೃದಯಗಳನ್ನು    ಪರಿಗಣಿಸದೇ    ಹೇಳಬೇಕಾದ  ವಿಷಯವನ್ನು ಬೈದೋ,    ತಪ್ಪು     ಎಂದು   ನೇರವಾಗಿ ಹೇಳುವುದೋ, ಟೀಕಿಸುವುದೋ    ಅಥವಾ  ಕಡ್ಡಿ ಮುರಿದಂತೆ     ಹೇಳುವುದೋ ಮಾಡುತ್ತೇವೆ. ಆದರೆ ದೊಡ್ಡವರಿಗೆ  ಹೀಗೆ   ಹೇಳುವುದಿಲ್ಲ.

    ಹಿರಿಯೊಬ್ಬರ  ವರ್ತನೆಯ   ಬಗ್ಗೆ   ನಮಗೆ ಕಿರಿಕಿರಿ ಎನಿಸಿದೆ.  ಅದನ್ನು  ಬದಲಾಯಿಸಿಕೊಳ್ಳಲು ಅವರಿಗೆ ಹೇಳಬೇಕೆನಿಸಿದೆ.   ಹೀಗೆ  ಹೇಳಲು ನಾವು  ಮಾಡಿಕೊಳ್ಳುವ ಪೂರ್ವ ಸಿದ್ಧತೆಗಳೇನು  ಯೋಚಿಸಿ- ಅದೇ  ಕಿರಿಕಿರಿ ಮಕ್ಕಳು    ಮಾಡಿದಾಗ  ಅವರಿಗೆ  ಹೇಗೆ    ಹೇಳುತ್ತೇವೆ ಎಂದು ಯೋಚಿಸೋಣ.

    ಹಿರಿಯರು   ಮತ್ತು     ಮಕ್ಕಳೊಂದಿಗಿನ      ನಮ್ಮ  ವರ್ತನೆಗಳ  ವ್ಯತ್ಯಾಸ    ಗಮನಿಸೋಣ.     ಯಾರಿಗೆ ಹೆಚ್ಚು ಗಮನ  ಕೊಟ್ಟು    ಮಾಹಿತಿ ತಲುಪಿಸಬೇಕಿದೆ ಎಂದು   ಅಂತಾರಾವಲೋಕನ ಮಾಡಿಕೊಳ್ಳೋಣ.

    ಶಾಲೆ  ಮತ್ತು  ತರಗತಿಗಳಲ್ಲಿ      ಅಲ್ಲದೇ   ಇತರೆ  ಕಡೆ    ಮಕ್ಕಳು   ಮತ್ತು  ಇತರ  ಭಾಗೀದಾರರು   ವಿವಿಧ ರೀತಿ  ವರ್ತಿಸುತ್ತಾರೆ. ಅವರಿಗೆ     ಈ ವರ್ತನೆ,      ಅಭಿವ್ಯಕ್ತಿ   ಕುರಿತು  ಅವಲೋಕಿಸಿದವರು     ನೀಡುವ ವ್ಯವಸ್ಥಿತ ಮಾಹಿತಿಯೇ    ಹಿಮ್ಮಾಹಿತಿ.

    ಹಿಮ್ಮಾಹಿತಿ  ಒಬ್ಬ ವ್ಯಕ್ತಿ   ಇನ್ನೊಬ್ಬ  ವ್ಯಕ್ತಿಗೆ   ವಿಚಾರ ಮತ್ತು   ಚಟುವಟಿಕೆ  ಅಥವಾ ಕಾರ್ಯಮಾಡಿದ್ದರ ಪ್ರಭಾವ,   ಫಲಿತಾಂಶ  ಮತ್ತು        ಪರಿಣಾಮಗಳ  ಬಗ್ಗೆ   ನೀಡುವ   ವ್ಯವಸ್ಥಿತ ಮಾಹಿತಿ.  ಹಿಮ್ಮಾಹಿತಿಯು ಟೀಕೆಯಾಗಬಾರದು.  ಟೀಕೆಯೂ  ಒಂದು   ರೀತಿಯ    ಹಿಮ್ಮಾಹಿತಿಯೇ   ಆದರೂ  ಹಿಮ್ಮಾಹಿತಿಯನ್ನು ಅಲ್ಲಿ ಇನ್ನೂ  ವಿಶಾಲಾರ್ಥದಲ್ಲಿ  ಬಳಸಿದೆ.

ಟೀಕೆ ಮತ್ತು   ಹಿಮ್ಮಾಹಿತಿಗಿರುವ  ವ್ಯತ್ಯಾಸ

                ಟೀಕೆ                                                                                   ಹಿಮ್ಮಾಹಿತಿ

    ಸಮಸ್ಯಾ    ವಿಸ್ತರಣೆ                                                                ಪರಿಹಾರ    ಸೂಚನೆ

    ಪ್ರತಿಕ್ರಿಯಾತ್ಮಕ   / ಪ್ರತಿಗಾಮಿ                                                ರಚನಾತ್ಮಕ   ಪ್ರತಿಕ್ರಿಯೆ

    ಪೂರ್ವಗ್ರಹಪೀಡಿತವಾಗಿರಬಹುದು                                        ವಸ್ತು    ನಿಷ್ಠವಾಗಿರುತ್ತದೆ

    ತಪ್ಪುಗಳನ್ನು    ಹುಡುಕುವ   ಉದ್ದೇಶ                                     ತಪ್ಪುಗಳಿಂದ ಹೊರಬರಲು ಸಲ            

   ಆತ್ಮವಿಶ್ವಾಸ     ಕುಂದಿಸುತ್ತದೆ                                              ಆತ್ಮವಿಶ್ವಾಸ     ವೃದ್ಧಿಸುತ್ತದೆ.


ಹಿಮ್ಮಾಹಿತಿಯ  ಅಗತ್ಯತೆ

    ವ್ಯಕ್ತಿಯೊಬ್ಬರು ಅವರ    ಕಾರ್ಯಕ್ಷೇತ್ರದಲ್ಲಿ  ಬೆಳವಣಿಗೆ  ಕಂಡುಕೊಳ್ಳುವುದಕ್ಕಾಗಿ  ಅವರ  ಕಾರ್ಯಗಳ ಬಗ್ಗೆ    ಹಿಮ್ಮಾಹಿತಿ    ಪಡೆಯುವುದು    ಅಗತ್ಯ.    ಶಾಲಾ     ಸನ್ನಿವೇಶದಲ್ಲಿ ಶಿಕ್ಷಕರು     ಸಹ    ಶಿಕ್ಷಕರಿಂದ, ಮಕ್ಕಳಿಂದ,  ಸ್ನೇಹಿತರಿಂದ   ಹಾಗೂ   ಸಮುದಾಯದಿಂದ ಹಿಮ್ಮಾಹಿತಿ ಪಡೆಯುವ    ಸನ್ನಿವೇಶಗಳನ್ನು ಸೃಜಿಸಿಕೊಳ್ಳುತ್ತಿದ್ದರೆ ಅದು    ಅವರ    ವೃತ್ತಿಪರತೆಯನ್ನು  ಹೆಚ್ಚಿಸುತ್ತದೆ.      ಪಾಲಕರು   ಮತ್ತು   ಶಿಕ್ಷಕರು ಮಕ್ಕಳಿಗೆ      ರಚನಾತ್ಮಕವಾದ      ಹಿಮ್ಮಾಹಿತಿ  ನೀಡಿದಲ್ಲಿ  ಮಕ್ಕಳ     ಆತ್ಮಗೌರವ   ಕಾಪಾಡಿಯೇ    ಅವರ ಪ್ರಗತಿಗೆ  ಕಾರಣವಾಗಬಹುದು.  ಇವುಗಳಲ್ಲದೇ  ಈ ಕೆಳಗಿನ  ಅಂಶಗಳು    ಹಿಮ್ಮಾಹಿತಿಯು  ಅಗತ್ಯವೆಂದು ಹೇಳುತ್ತೇವೆ.

*  ಸಂಬಂಧಿಸಿದ   ವ್ಯಕ್ತಿಗೆ      ಅವರ    ಕಾರ್ಯದಲ್ಲಿ        ಪ್ರೇರಣೆ  ನೀಡಲು,     ವೃತ್ತಿಪರತೆ     ಬೆಳೆಸಲು
ಹಿಮ್ಮಾಹಿತಿ  ಅಗತ್ಯ.

*  ಕೆಲಸದ   ಗುಣಮಟ್ಟ     ಹೆಚ್ಚಿಸುವಲ್ಲಿ     ಸಂಬಂಧಗಳನ್ನು     ಕಟ್ಟಿ    ಬೆಳೆಸುವುದಕ್ಕಾಗಿ       ಹಿಮ್ಮಾಹಿತಿ ಅವಶ್ಯ.

*  ನಿರೀಕ್ಷೆಗಳನ್ನು   ಸ್ಪಷ್ಟಪಡಿಸಿ   ಊಹಾತ್ಮಕ  ಕೆಲಸಗಳನ್ನು    ತಡೆಯುತ್ತದೆ.

*  ವೈಯಕ್ತಿಕ    ಮತ್ತು   ಕಲಿಕೆಯ   ಕಾರ್ಯಕ್ಷೇತ್ರಗಳಲ್ಲಿ ನಿರಂತರ     ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು  ಕಾಯ್ದುಕೊಳ್ಳಲು      ಅಗತ್ಯವಾಗಿದೆ.

ಪರಿಣಾಮಕಾರಿ ಹಿಮ್ಮಾಹಿತಿಯು ಈ ಕೆಳಗಿನ   ಅಂಶಗಳನ್ನು  ಒಳಗೊಂಡಿರುತ್ತದೆ.
 

↠  ಸ್ಪಷ್ಟ,  ನೇರ     ಹಾಗೂ    ವಿವರಣಾತ್ಮಕವಾಗಿರುತ್ತದೆ.

↠ ನಿರ್ದಿಷ್ಟ  ಕಾರ್ಯದ        ಕಾರ್ಯಕ್ಷಮತೆ ಕೇಂದ್ರಿತವಾಗಿರುತ್ತದೆ.

↠  ಸಕಾಲಿಕ   ಮತ್ತು         ನಿಯಮಿತವಾಗಿ     ಪರಿಹಾರಗಳನ್ನು   ನೀಡುವುದಾಗಿರುತ್ತದೆ.

↠  ಉತ್ತಮ   ಅಂಶಗಳ ಬಗ್ಗೆ    ಮೆಚ್ಚುಗೆ    ಸೂಚಿಸಿ ಅವುಗಳ   ಬೆಳವಣಿಗೆಗೆ    ಕಾರಣವಾಗುತ್ತದೆ.

↠  ರಚನಾತ್ಮಕವಾಗಿದ್ದು     ಅಪೇಕ್ಷಣೀಯ    ಗುಣಗಳನ್ನು ಬೆಳೆಸುತ್ತದೆ. ಹಿಮ್ಮಾಹಿತಿ ನೀಡಲು  ಬೆಳೆಸಿಕೊಳ್ಳಬೇಕಾದ  ಕೌಶಲಗಳು

↠    ಹಿಮ್ಮಾಹಿತಿ   ನೀಡುವವರು    ಸರಿಯಾದ      ಮಾಹಿತಿಗಳನ್ನು  ಪಡೆದು   ಇಲ್ಲವೆ   ಸಕ್ರಿಯವಾಗಿ ಆಲಿಸಿ ಅವಲೋಕನ  ಮಾಡಿರಬೇಕು.   ಇದಕ್ಕೆ  ನಿರಂತರ ಹಾಗೂ    ವ್ಯಾಪಕ  ಮೌಲ್ಯಮಾಪನ ಅಗತ್ಯ  ಆಧಾರಗಳನ್ನು ಒದಗಿಸುತ್ತದೆ.

↠  ವಿಷಯವನ್ನು     ಯೋಚಿಸಿ   ಸಿದ್ಧತೆಯೊಂದಿಗೆ    ಸ್ಪಷ್ಟ        ಮಾತುಗಳಲ್ಲಿ  ತಿಳಿಸುವ      ಕೌಶಲ
ಹೊಂದಿರಬೇಕು.

↠  ಸ್ವ  ಜಾಗ್ರತಿಯೊಂದಿಗೆ ಸೂಕ್ತ ಸಮಯದಲ್ಲಿ    ಹಿಮ್ಮಾಹಿತಿ ನೀಡುವ ಕೌಶಲ  ಹೊಂದಿರಬೇಕು.

↠  ಬಿಚ್ಚು ಮನಸ್ಸಿನ     ಜೊತೆಗೆ    ಹಿಂಜರಿಕೆಯಿಲ್ಲದೆ ದೃಢ   ನಿಲುವು   ತಾಳುವ ವ್ಯಕ್ತಿತ್ವ   ಹೊಂದಿರಬೇಕು.

        ಹಿರಿಯರಿಗೆ ಹಿಮ್ಮಾಹಿತಿ  ನೀಡುವವರಿಗೆ  ಹಿಮ್ಮಾಹಿತಿ ನೀಡುವುದರಿಂದ,  ಹಿಮ್ಮಾಹಿತಿ ಸಂಗ್ರಹಿಸಿದ
ವ್ಯಕ್ತಿಯು    ನನ್ನನ್ನು    ಇಷ್ಟಪಡುವುದಿಲ್ಲ   ಎಂಬ  ಹೆದರಿಕೆ  ಇರಬಹುದು. ಒಬ್ಬ   ವ್ಯಕ್ತಿಯು    ಈಗಾಗಲೇ ನೀಡಿದ  ಹಿಮ್ಮಾಹಿತಿ  ಸಂದರ್ಭದಲ್ಲಿನ  ಕಹಿ   ಅನುಭವಗಳು      ಮತ್ತು      ಅಸಂತೃಪ್ತಿ     ಭಾವನೆಗಳು ಈ ನಂಬಿಕೆಗೆ     ಕಾರಣವಾಗಿರಬಹುದು.   ಆದಾಗ್ಯೂ ಹಿಮ್ಮಾಹಿತಿ ನೀಡುವ  ವ್ಯಕ್ತಿಯು   ಪಡೆದುಕೊಳ್ಳುವವರು ಮತ್ತು    ಅವರ   ಕಾರ್ಯದ  ಬಗ್ಗೆ  ಪೂವರ್ಾಗ್ರಹ ಪೀಡಿತವಾಗಿರದೇ   ನಯವಾಗಿ  ಹೇಳಬೇಕಾಗುತ್ತದೆ. ಆದರೆ   ಮಕ್ಕಳ   ಮಟ್ಟಿಗೆ       ನಾವು    ಇಷ್ಟೆಲ್ಲಾ   ಹೆದರಿಕೆಯನ್ನೇನೂ  ಹೊಂದಿರುವುದಿಲ್ಲ.    ಆದರೆ   ಪುಟ್ಟ ಯೋಜನೆಯಂತೂ       ನಮ್ಮಲ್ಲಿರಬೇಕು.  ಮಗುವಿನ   ಬೆಳವಣಿಗೆಗೆ  ಅನುಕೂಲವಾಗುವಂತೆ    ಹಿಮ್ಮಾಹಿತಿ ನೀಡಲು   ಬಳಸುವ ಭಾಷೆ,   ಭಾವ,    ಧ್ವನಿ     ಮತ್ತು  ಆಂಗಿಕ     ಭಾಷೆಯನ್ನು ನಾವು   ಗಮನಿಸಿಕೊಂಡು ಹಿಮ್ಮಾಹಿತಿ  ನೀಡಬೇಕು.   ಇದಕ್ಕಾಗಿ   ವಿವಿಧ    ಸಾಧನ ಮತ್ತು    ತಂತ್ರಗಳನ್ನು      `ನಿರಂತರ'   ಪುಸ್ತಕದಲ್ಲಿ ನೀಡಿದೆ.  ಅವುಗಳನ್ನು ಒಮ್ಮೆ    ಓದಿಕೊಂಡು   ಸ್ನೇಹಿತರೊಂದಿಗೆ  ಚರ್ಚಿಸಿರಿ.

ಪದ  ವಿವರಣೆ

1.         ಮೌಲ್ಯಮಾಪನ (Evaluation)- ಲಭ್ಯವಿರುವ ಎಲ್ಲ     ದಾಖಲೆಗಳ  ಆಧಾರದಲ್ಲಿ  ಒಂದು ಪ್ರಕ್ರಿಯೆ   ಅಥವಾ  ಫಲಿತಾಂಶದ   ಯೋಗ್ಯತೆ   ನಿರ್ಣಯ,   ಅರ್ಹತೆ  ನಿರ್ಧಾರ ಮಾಡುವುದು.

2.    ಮೌಲ್ಯಾಂಕನ (Assessment) - ನಿರ್ದಿಷ್ಟ ಚಟುವಟಿಕೆಗಳಿಗೆ  ಸಂಬಂಧಿಸಿದಂತೆ ನಿರ್ವಹಣೆಯ ಅಳೆಯುವಿಕೆ,   ತೂಗುವಿಕೆ  ಅಥವಾ  ನಿರ್ಧಾರಣೆ. ಕಲಿಕೆಯ  ಸಾಮಥ್ರ್ಯಗಳ ಗಳಿಕೆಯ  ಮಟ್ಟದ ಕುರಿತಂತೆ  ಮೌಲ್ಯಾಂಕನ ಮಾಡಬಹುದು.   ನಿರ್ದಿಷ್ಟ   ಕಲಿಕೆಯ   ಕುರಿತಂತೆ ಮಾಹಿತಿ   ಸಂಗ್ರಹಿಸಿ, ಅರ್ಥೈಸಿ,    ವಿಶ್ಲೇಷಿಸಿ   ಕಲಿಕೆಯ     ಮಟ್ಟವನ್ನು      ನಿಗದಿತ   ಮಾನದಂಡಗಳಿಗನುಗುಣವಾಗಿ
ನಿರ್ಧರಿಸುವುದು.

3.    ಮಾಪನ  (Measurement)-  ನಿರ್ದಿಷ್ಟ    ಕಲಿಕೆಯ     ಮಟ್ಟವನ್ನು   ಪರಿಮಾಣಾತ್ಮಕವಾಗಿ ಗುರುತಿಸುವುದು.     ಉದಾ:  ಸಾಮಥ್ರ್ಯ   ಗಳಿಕೆಯ ಮಟ್ಟವನ್ನು   ಗಮನಿಸಿ  ಅಂಕ ಅಥವಾ  ಗ್ರೇಡ್ಗಳನ್ನು   ನೀಡುವುದು.

    ಮೌಲ್ಯಮಾಪನವು   ಮೌಲ್ಯಾಂಕನಕ್ಕಿಂತ   ಹೆಚ್ಚು   ವ್ಯಾಪಕ.   ಮೌಲ್ಯಾಂಕನವು  ಮೌಲ್ಯಮಾಪನದ ಒಂದು   ಸಾಧನ.   ಮಾಪನವು ಮೌಲ್ಯಾಂಕನದ  ಸಾಧನ.   ಮಾಪನವು ನಿರ್ದಿಷ್ಟ    ಕಲಿಕೆಗೆ ಸಂಬಂಧಿಸಿದಂತೆ  ವಸ್ತುನಿಷ್ಠವಾದ,  ಇತರರೊಂದಿಗೆ    ಹೋಲಿಸಬಹುದಾದ    ಪರಿಮಾಣಾತ್ಮಕ ಮಾಹಿತಿ ನೀಡುತ್ತದೆ. ಮೌಲ್ಯಾಂಕನವು    ನಿರ್ದಿಷ್ಟ  ಕಲಿಕೆಗೆ  ಸಂಬಂಧಿಸಿದಂತೆ  ಮಾಪನ  ಅಥವಾ  ಇನ್ಯಾವುದೇ   ರೀತಿಯಲ್ಲಿ    ಮಾಹಿತಿ    ಸಂಗ್ರಹಿಸಿ  ಅದನ್ನು    ವಿಶ್ಲೇಷಿಸಿ   ಕಲಿಕೆಯ  ಮಟ್ಟವನ್ನು ಅರ್ಥೈಸಿಕೊಳ್ಳುತ್ತದೆ.    ಮಾಪನದ     ಪರಿಮಾಣಾತ್ಮಕತೆಯಿಂದ      ಮೌಲ್ಯಾಂಕನವು  ಗುಣಾತ್ಮಕ ನಿರ್ಧಾರಣೆಯತ್ತ  ಸಾಗುತ್ತದೆ.  ಅಂತಿಮವಾಗಿ ಮೌಲ್ಯಮಾಪನವು  ಗುಣಾತ್ಮಕವಾದ  ನಿರ್ಧಾರಗಳನ್ನು ಮಾಡುತ್ತದೆ.

4.     ಲಿಖಿತ ಪರೀಕ್ಷೆಗಳು - ವಿದ್ಯಾರ್ಥಿಗಳು  ಬರೆಯುವ  ಮೂಲಕ  ತಮ್ಮ   ಕಲಿಕೆಯನ್ನು ಅಭಿವ್ಯಕ್ತಿಸುವ ಸಾಧನಗಳು.        ನಿರ್ಧಿಷ್ಟ   ಕಾಲಘಟ್ಟದಲ್ಲಿ       ಮಕ್ಕಳ    ಕಲಿಯುವಿಕೆಯ      ಮಟ್ಟವನ್ನು     ಮಕ್ಕಳದೇ ಆದ    ಅಭಿವ್ಯಕ್ತಿಯಲ್ಲಿ  ಲಿಖಿತ ಪರೀಕ್ಷೆಗಳ    ಮೂಲಕ   ದಾಖಲಿಸಿಕೊಳ್ಳಲು  ಸಾಧ್ಯ.

5.    ಮೌಖಿಕ ಪರೀಕ್ಷೆಗಳು - ಲಿಖಿತ ಅಭಿವ್ಯಕ್ತಿಯೊಂದೇ  ಕಲಿಕೆಯ  ಮಾನದಂಡವಾದರೆ, ಮಗುವಿನ ಅರ್ಥೈಸಿಕೊಳ್ಳುವಿಕೆಯ  ಗುಣಾತ್ಮಕ  ಆಯಾಮಗಳನ್ನು    ಅನಾವರಣಗೊಳಿಸುವುದು  ಕಷ್ಟ. ಆದ್ದರಿಂದ  ಮಕ್ಕಳ   ಮೌಖಿಕ ಅಭಿವ್ಯಕ್ತಿಯನ್ನು  ತಿಳಿಯಲು  ಸಂದರ್ಶನ, ಚರ್ಚೆ,   ಮಾತುಕತೆ,  ಪ್ರಶ್ನೋತ್ತರಗಳ ಮೂಲಕ    ನಡೆಸುವ  ಪರೀಕ್ಷೆ.   ಇಲ್ಲಿ   ಪರೀಕ್ಷಕರು    ಸಾಂದರ್ಭಿಕ   ಪ್ರಶ್ನೆಗಳ    ಮೂಲಕ   ಮಕ್ಕಳ ನೈಜ     ಕಲಿಕೆಯನ್ನು ಗುರುತಿಸಲು  ಸಾಧ್ಯ.

6.    ಹಿಮ್ಮಾಹಿತಿ ನೀಡುವುದು  -  ಮೌಲ್ಯಮಾಪನದ    ಪ್ರಮುಖ    ಉದ್ದೇಶ  ಇದೇ  ಆಗಿದೆ.  ಕಲಿಕೆ ಯಾವ ರೀತಿ    ಸಾಗುತ್ತಿದೆ,   ಯಾವ     ಅಂಶಗಳಿಗೆ    ಹೆಚ್ಚು      ಒತ್ತು  ಕೊಡಬೇಕಾಗಿದೆ,    ಯಾವ ವಿಷಯಗಳ  ಅರ್ಥೈಸಿಕೊಳ್ಳುವಿಕೆ ಇನ್ನೂ  ಸ್ಪಷ್ಟವಾಗಬೇಕಾಗಿದೆ,  ಎಲ್ಲಿ ತಪ್ಪುಗಳಾಗುತ್ತಿದೆ   ಎಂಬಿತ್ಯಾದಿ  ವಿಷಯಗಳ ಕುರಿತಂತೆ   ಮೌಲ್ಯಮಾಪನ ನಡೆಸಿದ  ಬಳಿಕ ವಿದ್ಯಾರ್ಥಿಗಳಿಗೆ  ಮಾಹಿತಿ   ನೀಡುವ ಪ್ರಕ್ರಿಯೆ.  ವಿವಿಧ ಪರೀಕ್ಷೆ, ಚಟುವಟಿಕೆಗಳಲ್ಲಿ   ಮಕ್ಕಳ   ನಿರ್ವಹಣೆಯ  ವಿಶ್ಲೇಷಣೆಯೇ  ಹಿಮ್ಮಾಹಿತಿ ನೀಡಲು     ಮುಖ್ಯ    ಆಧಾರ.     ನಾವು    ನೀಡುವ    ಹಿಮ್ಮಾಹಿತಿ   ಎಷ್ಟು      ವಸ್ತುನಿಷ್ಟ    ಹಾಗೂ ವ್ಯಾಪಕವಾಗಿರುತ್ತದೆಯೋ   ಅಷ್ಟರಮಟ್ಟಿಗೆ   ಅದು   ಪರಿಣಾಮಕಾರಿಯಾಗುತ್ತದೆ.

7.    ಚಟುವಟಿಕೆ ಆಧಾರಿತ ಮೌಲ್ಯಾಂಕನ - ಮಕ್ಕಳ ಕಲಿಕೆಯನ್ನು     ಕಲಿತ  ಅಂಶಗಳ ಅಳವಡಿಕೆಯಲ್ಲಿ ಗಮನಿಸುವ ಸಾಧನ.  ಚಟುವಟಿಕೆಗಳಲ್ಲಿ   ಮಕ್ಕಳು   ತಾವು     ಕಲಿತ    ಅಂಶಗಳನ್ನು ಎಷ್ಟು ಯಶಸ್ವಿಯಾಗಿ ಅಳವಡಿಸಿಕೊಳ್ಳಬಲ್ಲರು  ಎನ್ನುವುದನ್ನು  ಅವರು     ವಿವಿಧ     ಚಟುವಟಿಕೆಗಳಲ್ಲಿ   ಯಾವ    ರೀತಿ ಪಾಲ್ಗೊಳ್ಳುತ್ತಾರೆ    ಎಂದು   ಗಮನಿಸಿ  ಮೌಲ್ಯಾಂಕನ   ಮಾಡುವುದು.  ಇದಕ್ಕಾಗಿಯೇ    ನಿರ್ದಿಷ್ಟ ಚಟುವಟಿಕೆಗಳನ್ನು  ವಿನ್ಯಾಸ   ಮಾಡಬಹುದು ಅಥವಾ ತರಗತಿಯ  ದೈನಂದಿನ  ಚಟುವಟಿಕೆಗಳ  ಪ್ರಕ್ರಿಯೆಯಲ್ಲಿಯೇ   ಮಕ್ಕಳ   ಭಾಗವಹಿಸುವಿಕೆಯನ್ನು   ಗಮನಿಸಿ   ಮೌಲ್ಯಾಂಕನ ಮಾಡಬಹುದು.

8.     ನಿರ್ಣಾಯಕಾಂಶಗಳನ್ನು   ಆಧರಿಸಿದ ಪರೀಕ್ಷೆಗಳು   (Criterion  Based Testing)    -
ನಿರ್ದಿಷ್ಟಪಡಿಸಿದ  ಕಲಿಕಾಂಶಗಳ  /ಸಾಮಥ್ರ್ಯಗಳ     ಕಲಿಕೆಯ  ಮಟ್ಟವನ್ನು   ತಿಳಿಯಲು     ಆಯಾ ಕಲಿಕಾಂಶ/ಸಾಮಥ್ರ್ಯಗಳನ್ನೇ   ಒರೆಗೆ     ಹಚ್ಚುವ   ಪರೀಕ್ಷೆಗಳು.  ಇಲ್ಲಿನ   ಮುಖ್ಯ  ಉದ್ದೇಶ  ಪ್ರತಿ ಮಗುವಿನ    ಕಲಿಕೆಯ  ಮಟ್ಟವನ್ನು    ವೈಯಕ್ತಿಕ    ನೆಲೆಯಲ್ಲಿ    ತಿಳಿಯುವುದೇ   ಆಗಿದೆ.  ಇದರಿಂದ ಪ್ರತಿ     ಮಗುವಿಗೂ   ಗುಣಾತ್ಮಕವಾದ   ಹಿಮ್ಮಾಹಿತಿ   ನೀಡಲು      ಸಾಧ್ಯವಾಗುತ್ತದೆ. ಇಲ್ಲಿ ಅಂಕ ಅಥವಾ ಗ್ರೇಡ್ಗಳನ್ನು   ನೀಡುವುದೇ    ಕೊನೆಯಲ್ಲ ಅಥವಾ ಅದು  ಅತ್ಯಂತ ಪ್ರಮುಖ ವಿಷಯವೂ ಅಲ್ಲ.     ನಿರೀಕ್ಷಿತ    ಮಟ್ಟಕ್ಕೂ ಮಗುವಿನ ಪ್ರಸ್ತುತ    ಕಲಿಕೆಯ ಮಟ್ಟಕ್ಕೂ  ಇರುವ    ವ್ಯತ್ಯಾಸವೇನು ಎಂಬುದನ್ನು  ಗುರುತಿಸಿ   ಮತ್ತು   ಕೊರತೆಗಳನ್ನು     ತುಂಬಿಕೊಳ್ಳುವ   ನಿಟ್ಟಿನಲ್ಲಿ  ಈ ಪರೀಕ್ಷೆಗಳು ಅತ್ಯಂತ   ಸಹಾಯಕಾರಿ.  ನಿರಂತರ ಹಾಗೂ    ವ್ಯಾಪಕ ಮೌಲ್ಯಮಾಪನದ   ಸಂದರ್ಭದಲ್ಲಿ   ಈ ರೀತಿಯ   ಪರೀಕ್ಷೆಗಳೇ    ಮುಖ್ಯವಾಗುತ್ತವೆ.

9.    ಗುಂಪಿನೊಡನೆ ಹೋಲಿಸಬಹುದಾದ ಸಾಮಾನ್ಯ ಅಂಶಗಳನ್ನು ಆಧರಿಸಿದ ಪರೀಕ್ಷೆಗಳು   (Norm Based Teasting) -   ನಿರ್ದಿಷ್ಟ    ಗುಣಲಕ್ಷಣಗಳು   (ಉದಾ: ತರಗತಿ)   ಗುಂಪಿನಲ್ಲಿರುವ ಎಲ್ಲ  ವಿದ್ಯಾರ್ಥಿಗಳ ಕಲಿಕೆಯನ್ನು ಪರಿಮಾಣಾತ್ಮಕವಾಗಿ  ಮಾಪನ   ಮಾಡುವುದು. ಇದರಿಂದ ಒಬ್ಬ  ವಿದ್ಯಾರ್ಥಿಯ   ಕಲಿಕೆಯ  ಮಟ್ಟವನ್ನು   ಒಟ್ಟಾರೆ   ಗುಂಪಿನ     ಕಲಿಕೆಯ      ಮಟ್ಟದೊಡನೆ ಅಥವಾ ಇತರ  ವಿದ್ಯಾರ್ಥಿಗಳ ಕಲಿಕೆಯ   ಮಟ್ಟದೊಡನೆ  ಹೋಲಿಸಬಹುದು.  ಈ ಪರೀಕ್ಷೆಗಳು ಕಲಿಕೆಯನ್ನು     ಕುರಿತಂತೆ  ತೀರ್ಪು ನೀಡುತ್ತವೆ.   ಪಬ್ಲಿಕ್   ಪರೀಕ್ಷೆಗಳು   ಈ ರೀತಿಯ  ಪರೀಕ್ಷೆಗಳಿಗೆ ಉತ್ತಮ  ಉದಾಹರಣೆ.  ಇಲ್ಲಿ  ಹಿಮ್ಮಾಹಿತಿ  ನೀಡುವುದು  ಪ್ರಮುಖ   ವಿಷಯವೇನಲ್ಲ. ಒಂದು ದೀರ್ಘ  ಕಲಿಕೆಯ   ಪ್ರಕ್ರಿಯೆಯ   ಕೊನೆಯಲ್ಲಿ     ಕಲಿಕೆಯ   ಮಟ್ಟದ   ಕುರಿತ  ದೃಢೀಕರಣ  ಪತ್ರ ನೀಡಲು  ಇಂತಹ   ಪರೀಕ್ಷೆಗಳನ್ನು    ನೀಡಲಾಗುತ್ತದೆ.

logoblog

Thanks for reading ಕೃತಿ ಸಂಪುಟ

1 comment: