ಇತ್ತೀಚಿನ ದಿನಗಳಲ್ಲಿ ಸುಮದಾಯದೊಂದಿಗೆ ನಿಕಟವಾಗಿ ಕೆಲಸ ಮಾಡುವುದು ಅತ್ಯಂತ ಅವಶ್ಯಕ ಮತ್ತು ಪ್ರಮುಖ ವಿಷಯವಾಗಿದ ಸಮುದಾಯವನ್ನು ಶಾಲೆಯ ನಿರ್ವಹಣೆಯಲ್ಲಿ ಮತ್ತು ಶಾಲಾ ಕಾರ್ಯಕ್ರಮಗಳಲ್ಲಿ ತೊಡಗಿಸಕೊಳ್ಳುವುದು ಪ್ರಮುಖ ಸವಾಲಾಗಿದೆ.
ಶಾಲೆ ಮತ್ತು ಸಮುದಾಯದ ನಡುವೆ ಒಂದು ಅರ್ಥಬದ್ಧವಾದ ಸಂವಹನ ಇರಬೇಕು. ಶಾಲೆಯ ಚಟುವಟಿಕೆ, ಮಕ್ಕಳ ಸಾಧನೆ, ಶಾಲೆಯಲ್ಲಿ ಮಕ್ಕಳ ಕಲಿಕೆ ಮತ್ತು ಶಾಲಾ ಕಾರ್ಯಕ್ರಮಗಳ ಕುರಿತು ಸಮುದಾಯದಲ್ಲಿ ಪೋಷಕರಲ್ಲಿ ಅರಿವು ಮೂಡಿಸುವುದು ಅತ್ಯಂತ ಪ್ರಮುಖ ಅಂಶವಾಗಿದೆ. ಶಿಕ್ಷಕರುಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯೊಂದಿಗೆ ಹಾಗೂ ಸಮುದಾಯದ ಇತರ ವ್ಯಕ್ತಿಯೊಂದಿಗೆ ಸೇರಿ ಮಕ್ಕಳ ಕಲಿಕೆಯಲ್ಲಿ ಪಾಲ್ಗೊಂಡು ಮಗುವಿನ ಕಲಿಕೆಯಲ್ಲಿ ಅವರ ಅವಶ್ಯಕತೆಯನ್ನು ಅರಿಯಬೇಕಾಗಿದೆ.
ಶಾಲೆ ಮತ್ತು ಸಮುದಾಯದ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು ಮೆಟ್ರಿಕ್ ಮೇಳದಲ್ಲಿ ಸಮುದಾಯದ ಪಾಲ್ಗೋಳ್ಳುವಿಕೆ ಅತಿ ಪ್ರಮುಖವಾದ ಕಾರ್ಯ ನಿರ್ವಹಿಸುತ್ತದೆ. ಸಮುದಾಯದ ಭಾಗವಹಿಸುವಿಕೆ ಶಾಲೆ ಮತ್ತು ಸಮುದಾಯದ ನಡುವೆ ದ್ವಿಮುಖ ಸಂವಹನವನ್ನು ಅನುಗೊಳಿಸುತ್ತದೆ.
ಮೆಟ್ರಿಕ್ ಮೇಳ ಶಾಲಾ ಮಟ್ಟದಲ್ಲಿ ಒಂದು ಮಧ್ಯವರ್ತನೆ ಪ್ರಯತ್ನವಾಗಿದ್ದು, ಮಕ್ಕಳು, ಶಿಕ್ಷಕರು, ಸಮುದಾಯ ಎಲ್ಲರ ಭಾಗವಹಿಸುವಿಕೆ ಮೇಳದ ಯಶಸ್ಸಿಗೆ ಕಾರಣವಾಗಿದೆ.
ಮೆಟ್ರಿಕ್ ಮೇಳದ ಯಶಸ್ಸಿನಲ್ಲಿ ಮತ್ತು ಮೇಳದಲ್ಲಿ ಮಕ್ಕಳ ಭಾಗವಹಿಸುವಿಕೆಯಲ್ಲಿ ಸಮುದಾಯ ಕ್ರಿಯಾವರ್ಧಕವಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಮೆಟ್ರಿಕ್ ಮೇಳದಲ್ಲಿ ಪೋಷಕರು ಮತ್ತು ಸಮುದಾಯದವರು ಉತ್ಸಾಹದಿಂದ ಭಾಗವಹಿಸಿ ಕಲಿಕೆಯನ್ನು ಪ್ರೇರೆಪಿಸುತ್ತಾರೆ.
ಮೆಟ್ರಿಕ್ ಮೇಳದಲ್ಲಿ ಮಕ್ಕಳ ಜೊತೆಗೆ ಪೋಷಕರು ಸಹ ಗಣಿತ ಪರಿಕಲ್ಪನೆಗಳನ್ನು ಅರ್ಥಮಾಡಿಕೊಂಡು ವಯಸ್ಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಾರೆ.
ಮೆಟ್ರಿಕ್ ಮೇಳದಲ್ಲಿ ಸಮುದಾಯ ಎಲ್ಲ ರೀತಿಯ ನೆರವು ನೀಡುವ ಭರವಸೆ ನೀಡುವುದರ ಮೂಲಕ ಮೇಳ ಯಶಸ್ಸಿಗೆ ಅನುಮಾಡಿಕೊಡುತ್ತದೆ.
ಅಷ್ಟೆ ಅಲ್ಲದೆ ಮೇಳದ ತಯಾರಿಕೆಯಲ್ಲಿ ಮಕ್ಕಳ ಮತ್ತು ಶಿಕ್ಷಕರ ವಿಶ್ವಾಸ ತುಂಬುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
1. ಮೇಳದ ತಯಾರಿ ಪ್ರಕ್ರಿಯೆಯಲ್ಲಿ ಸಮುದಾಯ: ಮೆಟ್ರಿಕ್ ಮೇಳದ ಪೂರ್ವ ಸಿದ್ಧತೆಗಳಾದ ಬ್ಯಾನರ್, ಹೆಸರಿನ ಪಟ್ಟಿ, ಸೂಚನಾ ಫಲಕಗಳನ್ನು ತಯಾರಿಸುವ ಕೆಲಸ, ಸಮುದಾಯದ ಕಾರ್ಯ ನಿರ್ವಹಿಸುವ ಸ್ಪೂರ್ತಿಯನ್ನು ಪ್ರದರ್ಶಿಸುತ್ತದೆ.
ಮೆಟ್ರಿಕ್ ಮೇಳದ ದಿನದಂದು ಜನರು ಮತ್ತು ಮನೆಯ ಅಂಗಳಗಳನ್ನು ಸ್ವಚ್ಛಗೊಳಿಸಿ, ರಂಗು ರಂಗಿನ ರಂಗೋಲಿಯ ಮೂಲಕ ಸಿಂಗರಿಸಿ, ಮೇಳಕ್ಕೆ ಹಬ್ಬದ ವಾತಾವರಣವನ್ನು ಸೃಷ್ಠಿಸುತ್ತಾರೆ.
ಮೆಟ್ರಿಕ್ ಮೇಳದಲ್ಲಿ ಆಯೋಜಿಸಲಾಗುವ ಪ್ರತಿಯೊಂದು ಚಟುವಟಿಕೆಯಲ್ಲಿ ಸಮುದಾಯವು ಭಾಗವಹಿಸಿ ಮಕ್ಕಳಲ್ಲಿ ಸ್ಪೂರ್ತಿ ತುಂಬುತ್ತದೆ. ಆದ್ದರಿಂದ ಮೇಳದ ತಯಾರಿ ಪ್ರಕ್ರಿಯೆಯಲ್ಲಿ ಸಮುದಾಯದ ಭಾಗವಹಿಸುವಿಕೆ ಅನಿವಾರ್ಯವಾಗಿದೆ.
ತಮ್ಮ ನೆರೆಹೊರೆಯ ಹಳ್ಳಿಯಿಂದ ಜನರು ಮತ್ತು ಮಕ್ಕಳು ಬಂದಾಗ ಅವರನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಸಮುದಾಯ ಹೊತ್ತಿಕೊಂಡಿರುತ್ತದೆ. ಸಮುದಾಯವು ಮಕ್ಕಳು ಶಾಲೆಯಲ್ಲಿ ಪಡೆದ ಶಿಕ್ಷಣದ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿ ಗರಿಷ್ಠ ಕಲಿಕೆ ಉಂಟಾಗುವ ವಾತಾವರಣವನ್ನು ಸೃಷ್ಠಿಸುತ್ತದೆ.
ಸಮುದಾಯ ಮೇಳದಲ್ಲಿ ವಿವಿಧ ಚಟುವಟಿಕೆಗೆ ಬೇಕಾಗಿರುವ ಸಂಪನ್ಮೂಲಗಳನ್ನು ಒದಗಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ.
2. ಮೇಳದಲ್ಲಿ ಪೋಷಕರ ಪಾತ್ರ:
ಮಕ್ಕಳ ಪೋಷಕರು ಸಹ ಮಕ್ಕಳೊಂದಿಗೆ ಚಟುವಟಿಕೆಯ ಕಲ್ಪನೆ ವಿನ್ಯಾಸ ಮತ್ತು ಅಭ್ಯಾಸ ಪಾಲ್ಗೊಂಡು ಮೇಳವನ್ನು ಯಶಸ್ವಿ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತಾರೆ.
ಮೇಳದಲ್ಲಿ ಮಕ್ಕಳೇ ಗಣಿತದ ವಿವಿಧ ಪರಿಕಲ್ಪನೆಗಳಾದ ಉದ್ದ, ಎತ್ತರ, ತೂಕ, ವ್ಯಾಪಾರ, ಅಂಗಡಿಗಳಲ್ಲಿ ಮಾರಾಟ ಇತ್ಯಾದಿ ಚಟುವಟಿಕೆಗಳನ್ನು ನಡೆಸುವುದರಿಂದ, ಮಕ್ಕಳಿಗೆ ಅಂಗಡಿಗಳನ್ನು ಇಡುವುದರಲ್ಲಿ ಮತ್ತು ಆಹಾರ ಪದಾರ್ಥಗಳನ್ನು ತಯಾರಿಸಿ ಅವುಗಳನ್ನು ಕಡಿಮೆ ಬೆಲೆಗೆ ಮಾರಾಟಕ್ಕೆ ಇಡುವಲ್ಲಿ ಸಹರಿಸುವುದರ ಮೂಲಕ ಪೋಷಕರು ಮೇಳದಲ್ಲಿ ಭಾಗವಹಿಸುತ್ತಾರೆ.
3. ಮೇಳದಲ್ಲಿ ವೈದ್ಯರ ಮತ್ತು ಅರೆವೈದ್ಯರ ಸಹಾಯ:
ಸಮುದಾಯದ ಅಂಗವಾಗಿರುವ ವೈದ್ಯರ ಮತ್ತು ಅರೆ ವೈದ್ಯರ ತಂಡವು ಮೇಳಕ್ಕೆ ಬರುವ ಜನರ ಎತ್ತರ, ತೂಕ, ಎದೆ ಸುತ್ತಳತೆ, ದೇಹದ ಉಷ್ಣತೆ, ರಕ್ತದ ಒತ್ತಡ ಇತ್ಯಾದಿ ಮಾಹಿತಿ ಸಂಗ್ರಹಣೆಯಲ್ಲಿ ಸಹಕರಿಸಿ ಮೇಳದ ಪ್ರಾರಂಭಿಕ ಪ್ರಕ್ರಿಯೆಯಾದ ನೋಂದಣಿಯ ಕಾರ್ಯದಲ್ಲಿ ಕಾರಣರಾಗುವುದುಂಟು.
4. ಮೇಳದಲ್ಲಿ ಸ್ಥಳೀಯ ಜನ ಪ್ರತಿನಿಧಿಗಳ ಪಾತ್ರ:
ಮೇಳದಲ್ಲಿ ಸ್ಥಳೀಯ ಜನ ಪ್ರತಿನಿಧಿಗಳ ಸಹಾಯ ಮೇಳದ ಯಶಸ್ಸಿಗೆ ಕಾರಣವಾಗಿದೆ. ಮೇಳದ ಪ್ರಚಾರವನ್ನು ಮೂಡಿಸುವುದರಲ್ಲಿ ಸ್ಥಳೀಯ ಜನ ಪ್ರತಿನಿಧಿಗಳ ಸಹಾಯ ಅತ್ಯಂತ ಅವಶ್ಯಕವಾಗಿದೆ. ಊಟದ ವ್ಯವಸ್ಥೆ ಇತರ ವ್ಯವಸ್ಥೆಗಳನ್ನು ಮಾಡಿ ಮೇಳದ ಸಿದ್ಧತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
5. ಮೇಳದಲ್ಲಿ ಇಲಾಖಾ ಅಧಿಕಾರಿಗಳ ಪಾತ್ರ:
ಮೇಳದಲ್ಲಿ ಪೂರ್ವ ತಯಾರಿಕೆಯ ಜವಾಬ್ದಾರಿ ಇಲಾಖಾ ಅಧಿಕಾರಿಗಳು ಹೊತ್ತಿಕೊಂಡಿರುತ್ತಾರೆ. ಕ್ಷೇತ್ರ ಸಿಬ್ಬಂದಿಗಳಿಗೆ ಮೇಳದ ಬಗ್ಗೆ ತರಬೇತಿ ನೀಡುವುದು ಮಾರ್ಗಸೂಚಿ ಮತ್ತು ಸುತೋಲೆಗಳ ಮೂಲಕ ಮೇಳದ ನಿರ್ವಹಣೆ ಬಗ್ಗೆ ತಿಳಿಸುವುದು. ಪೂರ್ವ ಭಾವಿ ಸಭೆಗಳನ್ನು ಆಯೋಜಿಸಿ ಮಾರ್ಗದರ್ಶನ ನೀಡುವುದು.
ಸಮುದಾಯದ, ಶಿಕ್ಷಕರು, ವಿದ್ಯಾಥರ್ಿಗಳ. ಎಸ್ಡಿಎಮ್ಸಿ, ಇಲಾಖಾ ಅಧಿಕಾರಿಗಳ ಸ್ಥಳೀಯ ಜನ ಪ್ರತಿನಿಧಿಗಳ ನೆರವಿಲ್ಲದೆ ಮೆಟ್ರಿಕ್ ಮೇಳದ ನಿರ್ವಹಣೆ ಆಗಲಾರದು. ಮೆಟ್ರಿಕ್ ಮೇಳದ ಯಶಸ್ಸು ಸಮುದಾಯದ ಉತ್ಸಾಹ, ಸ್ಪೂತರ್ಿ ಮತ್ತು ಸಮುದಾಯದ ಪಾಲ್ಗೋಳ್ಳುವಿಕೆಯನ್ನು ಅವಲಂಬಿಸಿದೆ. ಈ ಹಿನ್ನೆಲೆಯಲ್ಲಿ ಮೇಳದಲ್ಲಿ ಇವರೆಲ್ಲರ ಪಾತ್ರ ಬಹು ಪ್ರಾಮುಖ್ಯತೆಯನ್ನು ಪಡೆದಿದೆ
ಸಮುದಾಯದ ಪ್ರತಿಯೊಬ್ಬ ನಾಗರಿಕ ಮೇಳದಲ್ಲಿ ಪಾಲ್ಗೊಂಡು ಶಿಕ್ಷಣ ವ್ಯವಸ್ಥೆ ಮತ್ತು ಮಕ್ಕಳ ಕಲಿಕೆಯನ್ನು ಅರಿಯಬೇಕಾಗಿದ. ಆಗಲೇ ಮೆಟ್ರಿಕ್ ಮೇಳದ ಚಟುವಟಿಕೆಗಳು ಇನ್ನೂ ಚುರುಕಾಗುತ್ತದೆ.
ಸಮುದಾಯದ ಭಾಗವಹಿಸುವಿಕೆ ಶಾಲೆಗಳ ಉತ್ತದಾಯಿತ್ವವನ್ನು ಹೆಚ್ಚಿಸುತ್ತದೆ. ಶಿಕ್ಷಕರಲ್ಲಿ ನೈತಿಕ ಉತ್ಸಾಹ ತುಂಬುತ್ತದೆ. ಮಕ್ಕಳಿಗೆ ಕುಶಲ ತರಬೇತಿ ನೀಡುವ ಮೂಲಕ ಕೈಗೊಳ್ಳುವ ಚಟುವಟಿಕೆಗಳನ್ನು ಉತ್ತಮ ರೀತಿಯಲ್ಲಿ ವ್ಯಕ್ತಪಡಿಸಲು ಅನುಮಾಡಿಕೊಡುತ್ತದೆ.
No comments:
Post a Comment