ಅಧ್ಯಾಯ-7
ಭಾರತದಲ್ಲಿ ಬ್ರಿಟಿಷ್ ಆಡಳಿತದ ಪರಿಣಾಮಗಳು
ಸೂಕ ಉತ್ತರವನ್ನು ಆರಿಸಿ ಬರೆಯಿರಿ.
1. 18ನೇ ಶತಮಾನದಲಿ ಉತ್ಪಾದನಾ ಕೇಂದ್ರವಾಗಿದ ಭಾರತ ಕೇವಲ ಕಚಾ ವಸ್ತುಗಳನ್ನು ರಫ್ತು ಮಾಡುವ ಸ್ಥಿತಿ ತಲುಪಿತು ಏಕೆಂದರೆ
ಉ. ಎ) ದೇಶೀ ಉತ್ಪನ್ನಗಳ ಗುಣಮಟ್ಟದ ಕುಸಿತ ಬಿ) ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿ
ಸಿ) ಕಚ್ಚಾ ವಸ್ತುಗಳ ಉತ್ಪಾದನೆಯಲ್ಲಾದ ಹೆಚ್ಚಳ ಡಿ) ಐರೋಪ್ಯ ಮಾರುಕಟ್ಟೆಯಲ್ಲಾದ ಅಸಮತೋಲನ
2. ಇವುಗಳ ಸರಿಯಾದ ಉತ್ತರದ ಗುಂಪು
ಎ ಬಿ
1) ಸಂವಾದ ಕೌಮುದಿ ಎ) ಸುರೇಂದ್ರನಾಥ ಬ್ಯಾನರ್ಜಿ
2) ಕಲ್ಕತಾ ಜನರಲ್ ಬಿ) ಈಶ್ವರ ಚಂದ ವಿದ್ಯಾಸಾಗರ್
3) ಸೋಮೆಪ್ರಕಾಶ ಸಿ) ರಾಮ್ ಮೋಹನ್ರಾಯ್
4) ದಿ ಬೆಂಗಾಲಿ ಡಿ) ಬಕ್ಕಿಂಗ್ ಹ್ಯಾಮ್
ಉ. ಎ) 1-ಸಿ, 2-ಬಿ, 3-ಡಿ, 4-ಎ ಬಿ) 1-ಸಿ, 2-ಡಿ, 3-ಬಿ, 4-ಎ
ಸಿ) 1-ಎ, 2-ಡಿ, 3-ಬಿ, 4-ಎ ಡಿ) 1-ಡಿ, 2-ಬಿ, 3-ಎ, 4-ಸಿ
ಒಂದು ವಾಕ್ಯದಲಿ ಉತ್ತರಿಸಿರಿ :-
1. ಮಹಲ್ ಪದದ ಅರ್ಥವೇನು?
ಮಹಲ್ ಎಂದರ ತಾಲ್ಲೂಕು ಎಂದರ್ಥ.
2. ರಾಮ್ ಮೋಹನ್ ರಾಯ್ ರವರ ಆರಂಭಿಸಿದ ಪತ್ರಿಕ ಯಾವುದು?
ಸಂವಾದ ಕೌಮುದಿ
3. ಈಶ್ವರ ಚಂದ ವಿದ್ಯಾಸಾಗರರು ನಡೆಸುತ್ತಿದ ಪತ್ರಿಕ ಯಾವುದು?
ಸೋಮೆ ಪ್ರಕಾಶ
4. ಭಾರತದಲಿ ಪ್ರಕಟಗೊಂಡ ಮೊದಲ ಪತ್ರಿಕ ಯಾವುದು?
ದಿ ಬೆಂಗಾಲ್ ಗೆಜೆಟ್
5. ಭಾರತದಲಿ ಆಂಘ ಶಿಕ್ಷಣವನ್ನು ಜಾರಿಗೊಳಿಸಿದವರಾರು?
ಲಾರ್ಡ್ ವಿಲಿಯಂ ಬೆಂಟಿಂಕ್
6. ಭಾರತದಲಿ ಪ್ರಥಮ ರೈಲು ಸಂಚಾರ ಯಾವ ನಗರಗಳ ನಡುವೆ ಆರಂಭವಾಯಿತು?
ಮುಂಬೈ ಮತ್ತು ಥಾಣಾ
7. ಬಂಗಾಳದಲಿ ನೀಲಿ ಕೃಷಿಕರ ಹೋರಾಟದಲಿ ಪ್ರಮುಖ ಪಾತ್ರ ವಹಿಸಿದ ಪತ್ರಿಕ ಯಾವುದು?
ಹಿಂದೂ ಪೇಟ್ರಿಯಾಟ್.
8. ಕನ್ನಡ ಮೊದಲ ವರ್ತಮಾನ ಪತ್ರಿಕೆ ಯಾವುದು?
ಉ. ಮಂಗಳೂರು ಸಮಾಚಾರ
9. ಕನ್ನಡದ ಮೊದಲ ಪತ್ರಿಕೆ 'ಮಂಗಳೂರು ಸಮಾಚಾರ' ಪತ್ರಿಕೆಯನ್ನು ಪಾರಂಭಿಸಿದವರು ಯಾರು?
ಉ. ಮೋಗ್ಲಿಂಗ್ ಮಿಷನರಿ
10. ಚಾಲ್ಸ್ವುಡ್ ಆಯೋಗವು ನೀಡಿದ ಸಲಹ ಏನು?
ಉ. ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಸ್ಥಾಪಿಸಿ, ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡುವುದು.
ಈ ಎರಡು ಅಥವಾ ಮೂರು ವಾಕ್ಯಗಳಲ್ಲಿ ಉತ್ತರಿಸಿ:
1. ಕೈಗಾರಿಕಾ ಕ್ರಾಂತಿಯಿಂದ ಭಾರತದ ಮೇಲಾದ ಪರಿಣಾಮಗಳೇನು?
ಉ. * ಉತ್ಪಾದನಾ ಕೇಂದ್ರವಾಗಿದ ಭಾರತ ಕೇವಲ ಕಚ್ಚಾ ವಸ್ತುಗಳನ್ನು ರಫ್ತು ಮಾಡುವ ಸ್ಥಿತಿ ತಲತಲುಪಿತು.
* ಬ್ರಿಟಿಷರು ಸಿದ್ಧ ವಸ್ತುಗಳನ್ನು ಭಾರತಕ್ಕೆ ತಂದು ಕಡಿಮೆ ಬೆಲೆಗೆ ಮಾರಲು ಪ್ರಾರಂಭಿಸಿದರು.
* ಇಂಗ್ಲೆಂಡಿನ ಸರಕುಗಳೊಂದಿಗೆ ಭಾರತದ ಸರಕುಗಳು ಸ್ಪರ್ಧಿಸಲಾರದೆ ಸೋತವು.
* ಕೈಗಾರಿಕೆಗಳು ತೀವ ನಷ ಅನುಭವಿಸಿ, ಕಾರ್ಮಿಕರು ನಿರುದ್ಯೋಗಿಗಳಾದರು.
2. ಬ್ರಿಟಿಷರು ಶಿಕ್ಷಣ ಕ್ಷೇತ್ರದಲಿ ಕೈಗೊಂಡು ಸುಧಾರಣೆಗಳಾವುವು?
ಉ. * ವಿಲಿಯಂ ಬೆಂಟಿಂಕ್ ಮೆಕಾಲ ವರದಿಯಂತೆ ಇಂಗ್ಲೀಷ್ ಶಿಕ್ಷಣಕ ಬುನಾದಿ ಹಾಕಿದನು.
* ಈಸ್ಟ್ ಇಂಡಿಯಾ ಕಂಪನಿಯು ಬಂಗಾಳದ ಹಿಂದೂ ಕಾಲೇಜಿನಲಿ ಪಾಶ್ಚಿಮಾತ್ಯ ಸಾಹಿತ್ಯ,ಮಾನವಶಾಸ್ತ್ರ ಮತ್ತು ವಿಜ್ಞಾವನ್ನು ಬೋಧಿಸಲು ಪ್ರಾರಂಭಿಸಿತು.
* ಕಲ್ಕತ್ತಾ, ಮದ್ರಾಸ್ ಮತ್ತು ಮುಂಬೈಗಳಲ್ಲಿ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದರು.
* ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಸ್ಥಾಪಿಸಿದರು.
* ರೂಕ್ಕಿಯಲ್ಲಿ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಲಾಯಿತು.
* ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಲಾಯಿತು.
3. ರೈತವಾರಿ ಪದ್ಧತಿಯು ಮಹಲ್ವಾರಿ ಪದ್ಧತಿಗಿಂತ ಹೇಗ ಭಿನ್ನವಾಗಿದೆ?
ಉ. * ಮಹಲ್ವಾರಿ ಪದ್ಧತಿಯಲ್ಲಿ ಕಂದಾಯ ವಸೂಲಿಯನ್ನು ಮಹಲ್ದಾರರು ನಿರ್ವಹಿಸುತ್ತಿದ್ದರು.
* ಮಹಲ್ವಾರರು ನಿಗದಿತ ಕಂದಾಯವನ್ನು ಭೂ ಅಳತೆಯ ಆಧಾರದ ಮೇಲ ರೈತರಿಂದ ವಸೂಲಿ ಮಾಡಿ ಸರ್ಕಾರಕ್ಕೆ ಸಲ್ಲಿಸುತ್ತಿದ್ದರು.
* ರೈತವಾರಿ ಪದ್ಧತಿಯಲ್ಲಿ ಭೂ ಒಡೆತನದ ಹಕ್ಕನ್ನು ರೈತರು ಪಡೆದು ಕಂದಾಯವನ್ನು ಭೂ ಅಳತೆಯ ಆಧಾರದ ಮೇಲೆ ಪಾವತಿ ಮಾಡುತ್ತಿದ್ದರು.
* ರೈತವಾರಿ ಪದ್ಧತಿಯಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿರಲಿಲ್ಲ.
4. ಜಮೀನ್ದಾರಿ ಪದ್ಧತಿಯ ಲಕ್ಷಣಗಳಾವುವು?
ಉ. * ಜಮೀನ್ದಾರರು ಉಳುವ ರೈತನಿಂದ ನಿಗದಿತ ಕಂದಾಯ ವಸೂಲಿ ಮಾಡಿ ಕಟ್ಟಬೇಕಿತ್ತು.
* ಈ ಪದ್ಧತಿಯಿಂದ ಸರ್ಕಾರದ ಬೊಕ್ಕಸಕ ಹೆಚ್ಚಿನ ಆದಾಯವು ದೊರಕಿತು.
* ಜಮೀನ್ದಾರರು ಕಂದಾಯವನ್ನು ಬೆಳೆಯ ಆಧಾರದ ಬದಲು ಜಮೀನಿನ ಪ್ರಮಾಣದಲಿ ಕಂದಾಯ ದರವನ್ನು ನಿಗದಿಪಡಿಸಿ, ಹೆಚ್ಚಿನ ಕಂದಾಯ ವಸೂಲಿ ಮಾಡಿದರು.
* ಈ ಪದ್ಧತಿಯಲ್ಲಿ ರೈತರು ಶೋಷಣೆಗ ಒಳಗಾದರು
5. ಇಂಗ್ಲೀಷ್ ಶಿಕ್ಷಣ ಪದ್ಧತಿಯಿಂದ ಭಾರತದ ಮೇಲೆ ಬೀರಿದ ಪರಿಣಾಮಗಳನ್ನು ತಿಳಿಸಿರಿ.
ಉ. * ಇಂಗ್ಲೀಷ್ ಶಿಕ್ಷಣ ಬೆಳವಣಿಗೆಯು ಸ್ವಾತಂತ್ರ್ಯಚಳುವಳಿಗ ಪ್ರರಣೆಯಾಯಿತು.
* ಪಾಶ್ಚಿಮಾತ್ಯ ವಿಚಾರಧಾರೆಗಳು ರಾಷ್ಟ್ರೀಯ ಜಾಗೃತಿಗ ಸಹಕಾರಿಯಾದವು.
* ನಾಯಕತ್ವ ಬೆಳವಣಿಗೆಯಾಯಿತು.
* ಆಂಗ್ಲಭಾಷೆ ಸಂಪರ್ಕ ಭಾಷೆಯಾಗಿ ಬೆಳೆದು ಏಕತೆಗೆ ಸಹಕಾರಿಯಾಯಿತು.
* ಸಾಹಿತ್ಯದ ಬೆಳವಣಿಗೆಯು ಅನೇಕ ಪ್ರಾಂತೀಯ ಭಾಷೆಗಳಲ್ಲಿಯು ಕಂಡಿತು.
* ಮಧ್ಯಮ ವರ್ಗದ ಶ್ರೀಸಾಮಾನ್ಯರು ಎಲ್ಲಾ ಚಟುವಟಿಕೆಗಳ ನಾಯಕತ್ವ ವಹಿಸುವಂತಾಯಿತು.
6. ಸಾರಿಗ ಮತ್ತು ಸಂಪರ್ಕ ಸ್ವತಂತ್ರ್ಯ ಚಳುವಳಿಯ ಮೂಲ ವಿವರಿಸಿರಿ.
ಉ. * ಬ್ರಿಟಿಷರು ಸಾರಿಗೆ ಮತ್ತು ಸಂಪರ್ಕವನ್ನು ತಮ್ಮ ಸ್ವಹಿತಾಸಕ್ತಿಯಾಗಿ ನಿರ್ಮಿಸಿಕೊಂಡರು.
* ಭಾರತದ ವುೂಲೆಮೂಲೆಗಳನ್ನು ಶೀಘ್ರವಾಗಿ ತಲುಪಲು ರಸ್ತೆ ಮತ್ತು ರೈಲು ವ್ಯವಸ್ತೆ ಕಲ್ಪಿಸಿದರು.
* ಕಚ್ಚಾ ವಸ್ತು ಮತ್ತು ಸಿದ ವಸ್ತುಗಳ ಸಾಗಾಣಿಕೆ ಮತ್ತು ಸೇನೆಯು ಸಂಚರಿಸಲು ನಿರ್ಮಿಸಲಾಯಿತು.
* ಪರೋಕ್ಷವಾಗಿ ಇದು ದೇಶಿಯರನ್ನು ಸಂಘಟಿಸಲು ಸಂಚರಿಸಲು ಸಹಾಯವಾಯಿತು.
* ಪರಸ್ಪರ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು ಪ್ರಚಾರಮಾಡಲು ಸಾಧ್ಯವಾಯಿತು.
* ಇದು ದೇಶಿಯರನ್ನು ಒಂದುಗೊಡಿಸಿ ರಾಷ್ಟ್ರೀಯ ಏಕತೆ ಕಾರಣವಾಯಿತು.
No comments:
Post a Comment